ಅಮ್ಮನಿಗಿಂತ ಮಗ ಕೇವಲ 12 ವರ್ಷ ಚಿಕ್ಕವ! ಆಹಾ... ಇಲ್ಲಿ ಎಲ್ಲಾ ಸಾಧ್ಯ ಅಂತಿರೋ ನೆಟ್ಟಿಗರು

By Suchethana D  |  First Published Jun 19, 2024, 11:04 AM IST

ಅರ್ಬಾಜ್​ ಖಾನ್​ ಮತ್ತು ಮಲೈಕಾ ಅರೋರಾ ಅವರ ಮಗ ಅರ್ಹಾನ್​ ಖಾನ್​ ಮತ್ತು ಆತನ ಹೊಸ ಅಮ್ಮ ಶುರಾ ಖಾನ್​ ವಯಸ್ಸಿನ ಬಗ್ಗೆ ಸಾಕಷ್ಟು ಟ್ರೋಲ್​ ಆಗುತ್ತಿದೆ. ನೆಟ್ಟಿಗರು ಹೇಳ್ತಿರೋದೇನು?
 


 ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​  ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​ ಇತ್ತೀಚೆಗೆ  ಶುರಾ ಖಾನ್​ ಎನ್ನುವವರನ್ನು ಕಳೆದ ಡಿಸೆಂಬರ್​ನಲ್ಲಿ ಮದುವೆಯಾಗಿದ್ದು,  ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.  ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ 56 ವರ್ಷದ ಅರ್ಬಾಜ್​ ಖಾನ್​ ಅವರು ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್​ ಅವರ ಕೈಹಿಡಿದಿದ್ದರು.  ಶುರಾ ಖಾನ್​ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ.  ಶುರಾ ಖಾನ್ ಮತ್ತು  ಅರ್ಬಾಜ್​ ಖಾನ್​ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ  ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ.  ಶುರಾ ಖಾನ್​ ಅವರು,  ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. 

ಇವರ ಮದುವೆಯಾಗಿ ಆರು ತಿಂಗಳು ಕಳೆದರೂ ಇಂದಿಗೂ ವಯಸ್ಸಿನ ಅಂತರದ ಕಾರಣದಿಂದ ಟ್ರೋಲ್​ ಎದುರಿಸುತ್ತಲೇ ಇದ್ದಾರೆ. ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್​ ಟ್ರೋಲ್​​ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್​ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುತ್ತಲೇ ಇರುತ್ತಾರೆ. ಟ್ರೋಲ್​ ಆಗುವುದನ್ನು ತಪ್ಪಿಸಲು ಅವರು ಹಾಗೆ ಮಾಡುತ್ತಾರೆ ಎನ್ನುವ ಮಾತಿದೆ. ಮದುವೆಯಾದ ಮೇಲೆ ಹನಿಮೂನ್​ಗೆ ಹೋದಾಗ  ಏರ್​ಪೋರ್ಟ್​ನಲ್ಲಿ ಜೋಡಿ ಕಾಣಿಸಿಕೊಂಡಾಗಲೂ ಶುರಾ ಅವರು, ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಮುಖ ಮುಚ್ಚಿಕೊಂಡಿದ್ದರು. ಮುಖ ಕಾಣಿಸದಂತೆ  ಮಾಡಲು  ಕ್ಯಾಪ್​ ಧರಿಸಿ ಬಂದಿದ್ದರು.

Tap to resize

Latest Videos

ಅವನ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ... ಮಲೈಕಾ ಅರೋರಾ ಗರಂ
 
ಅದೇನೇ ಇದ್ದರೂ ದಂಪತಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ಟ್ರೋಲಿಗರು ಮಾತ್ರ ಇವರ ವಿಷಯವನ್ನು ಕೆದಕಿ ಕೆದಕಿ ಶೇರ್ ಮಾಡುತ್ತಿದ್ದಾರೆ. ಈಗ ವೈರಲ್​ ಆಗಿರುವ ಫೋಟೋದಲ್ಲಿ ಶುರಾ ಖಾನ್​ ಮತ್ತು ಅರ್ಬಾಜ್​ ಖಾನ್​ ಅವರ ಮೊದಲ ಪತ್ನಿ ಮಲೈಕಾ ಅರೋರಾ ಅವರಿಂದ ಹುಟ್ಟಿದ ಮಗ ಅರ್ಹಾನ್​ ಖಾನ್​ ವಯಸ್ಸಿನ ಬಗ್ಗೆ ಚರ್ಚೆ ಶುರುವಾಗಿದೆ. ಗೂಗಲ್​ ದಾಖಲೆಯ ಪ್ರಕಾರ ಶುರಾ ಖಾನ್​ ಹುಟ್ಟಿರುವುದು 1990ರಲ್ಲಿ. ಅರ್ಹಾನ್​ ಖಾನ್​ 2002ರಲ್ಲಿ. ಇದರ ಪ್ರಕಾರ, ಇವರಿಬ್ಬರ ವಯಸ್ಸಿನ ಅಂತರ ಕೇವಲ 12 ವರ್ಷ. ಸಂಬಂಧದಲ್ಲಿ ಶುರಾ ಖಾನ್​ ಅರ್ಹಾನ್​ಗೆ ಅಮ್ಮ ಆಗಬೇಕು. ಆದ್ದರಿಂದ ವಯಸ್ಸನ್ನು ಹಿಡಿದು ಈಗ ಟ್ರೋಲ್​ ಮಾಡಲಾಗುತ್ತಿದೆ. ಅಮ್ಮ-ಮಗನಿಗೆ ಕೇವಲ 12 ವರ್ಷ ಅಂತರ ಎಂದು ಟೀಕಿಸಲಾಗುತ್ತಿದೆ. ಅಷ್ಟಕ್ಕೂ ಅರ್ಬಾಜ್​ ಮೊದಲ ಪತ್ನಿ ಮಲೈಕಾ ಅವರಿಗೆ ಈಗ 50 ವರ್ಷ. 

ದುಡ್ಡಿದ್ದರೆ ಎಲ್ಲವೂ ಸಾಧ್ಯ ಎಂದು ಹಲವರು ಹೇಳಿದರೆ, ಬಾಲಿವುಡ್​ ಮಾತ್ರವಲ್ಲ ಇಲ್ಲಿ ಕೆಲವು ಕಡೆಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿವೆ. ಅಜ್ಜಂದಿರ ಅಪ್ರಾಪ್ತೆಯರನ್ನು ಮದುವೆಯಾಗುವುದು ನಡೆದೇ ಇದೆ. ಅಂಥ ಸಂದರ್ಭದಲ್ಲಿ ಇದೇನೂ ದೊಡ್ಡ ವಿಷಯವಲ್ಲ ಎನ್ನುತ್ತಿದ್ದಾರೆ. ಇತ್ತೀಚೆಗೆ 70ರ ವೃದ್ಧ 12 ವರ್ಷದ ಬಾಲಕಿಯನ್ನು ಮದುವೆಯಾಗಲು ಹೋದ ಸುದ್ದಿಯನ್ನೂ ಕೆಲವು ನೆಟ್ಟಿಗರು ಹೇಳುತ್ತಿದ್ದರೆ, ಅರ್ಬಾಜ್​-ಶುರಾ ದಾಂಪತ್ಯ ಚೆನ್ನಾಗಿರಲಿ ಎಂದು ಹಲವರು ಹಾರೈಸುತ್ತಿದ್ದಾರೆ. ಒಟ್ಟಿನಲ್ಲಿ ಈಗ ಅಮ್ಮ-ಮಗನ ವಯಸ್ಸಿನ ಬಗ್ಗೆ ಚರ್ಚೆ ಶುರುವಾಗಿದೆ. 

ನನ್ನ ಹಿಂಬದಿ ಊಟದ ಟೇಬಲ್​ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ?

click me!