ಮಳೆಗಾಲದಲ್ಲಿ ಡೆಲಿವರಿ ಬಾಯ್ನ ನೆನೆದ ನಟಿ ಪರಿಣಿತಿ ಚೋಪ್ರಾ! ನೆಟ್ಟಿಗರು ನಟಿಯ ಮೇಲೆ ಮುನಿಸಿಕೊಂಡು ತರಾಟೆಗೆ ತೆಗೆದುಕೊಂಡಿದ್ಯಾಕೆ?
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಮದುವೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಕಳೆದ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಈ ಜೋಡಿಯ ಮದುವೆಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರು. ಎಂಗೇಜ್ಮೆಂಟ್ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. ಇದೀಗ ಮದುವೆಯನ್ನೂ ಆಗಿದ್ದು, ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
ಇದೀಗ ನಟಿ ಮಳೆಗಾಲದಲ್ಲಿ ನಟಿ ಡೆಲಿವರಿ ಬಾಯ್ ಅನ್ನು ನೆನೆಪಿಸಿಕೊಂಡು ಸಕತ್ ಟ್ರೋಲ್ ಆಗುತ್ತಿದ್ದಾರೆ. ಸೋಫಾದ ಮೇಲೆ ಕುಳಿತು ತಿಂಡಿಯನ್ನು ಆರ್ಡರ್ ಮಾಡಿಕೊಂಡಿರೋ ಪರಿಣಿತಿ, ಈ ಮಳೆಯಲ್ಲಿ ಡೆಲವರಿ ಬಾಯ್ಗಳು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎನ್ನುವುದನ್ನು ಹೇಳಿದ್ದಾರೆ. ನಾವು ಆರಾಮಾಗಿ ಸೋಫಾದ ಮೇಲೆ ಕುಳಿತು ಆರ್ಡರ್ ಮಾಡುತ್ತೇವೆ. ಅವರು ಮಳೆ, ಚಳಿಯೆನ್ನದೇ ಬಿಸಿಬಿಸಿ ಆಹಾರ ತಂದುಕೊಡಲು ಎಷ್ಟೆಲ್ಲಾ ಕಷ್ಟಪಡುತ್ತಾರೆ. ಅವರನ್ನು ನೆನಪಿಸಿಕೊಂಡರೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದಿದ್ದಾರೆ.
ನೂರು ಚಿತ್ರಗಳಲ್ಲಿ ಕಾಣಿಸಿಕೊಂಡ್ರೂ ನೂರು ರೂ. ಸಿಗಲ್ಲ... 10 ನಿಮಿಷ ಬೆತ್ತಲಾದ್ರೆ ಹತ್ತಾರು ಕೋಟಿ!
ಇದಕ್ಕಾಗಿ ನಟಿಯರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಲು ಏನು ನಿಮಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಅಷ್ಟೆಲ್ಲಾ ದುಡ್ಡು ಇಟ್ಟುಕೊಂಡು ಕೈಗೊಂದು, ಕಾಲಿಗೊಂದು ಆಳು ಇದ್ದರೂ ಹೊರಗಡೆಯ ರುಚಿ ಹೋಗಲ್ಲಾ ಅಲ್ವಾ? ನಾಚಿಕೆಯಾಗಬೇಕು ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಹೆಣ್ಣಾದ ಮೇಲೆ ಸ್ವಲ್ಪನಾದ್ರೂ ಅಡುಗೆ ಮನೆ ಕಡೆ ಹೋಗಿ ಎಂದು ಕೆಲವರು ಸಲಹೆ ಇತ್ತಿದ್ದಾರೆ. ಇವೆಲ್ಲಾ ನಾಟಕ ಮಾಡಿ ಯಾರನ್ನು ಮೆಚ್ಚಿಸಲು ಹೋಗಿರುವಿ ಎಂದು ಹಲವರು ಪ್ರಶ್ನಿಸಿದರೆ, ಈ ನೌಟಂಕಿಯೆಲ್ಲಾ ನಿನ್ನ ಗಂಡನ ಬಳಿ ಇಟ್ಟುಕೋ ಎಂದು ಇನ್ನು ಕೆಲವರು ಹೇಳಿದ್ದಾರೆ. ಅಷ್ಟಕ್ಕೂ ನಟಿ ಹೇಳಬಾರದ್ದು ಏನು ಹೇಳಿದರು, ಅವರು ಡೆಲಿವರಿ ಬಾಯ್ಗೆ ಧನ್ಯವಾದ ಹೇಳಿದ್ದಾರೆ ತಾನೆ, ಅದ್ಯಾಕೆ ಅಷ್ಟು ಕೆಟ್ಟದ್ದಾಗಿ ಕಮೆಂಟ್ ಮಾಡುತ್ತೀರಿ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಟಿಯ ವಿಶೇಷ ವರದಿಯೊಂದು ಸದ್ದು ಮಾಡಿತ್ತು. ಅದೇನೆಂದರೆ ನಟಿ ಪರಿಣಿತಿ ಮದುವೆಯಾದ ಐದು ತಿಂಗಳಿಗೆ ಗುಡ್ ನ್ಯೂಸ್ ಕೊಡುತ್ತಿದ್ದಾರೆ ಎನ್ನುವುದು. ಅಷ್ಟಕ್ಕೂ ನಟಿ ಈ ರೀತಿ ಸುದ್ದಿಯಾಗಲು ಕಾರಣ, ವಿಮಾನ ನಿಲ್ದಾಣದಿಂದ ಅವರು ಬರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಪರಿಣಿತಿ ಗರ್ಭಿಣಿಯಂತೆ ಕಾಣುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಅಭಿಮತ. ಈ ಹಿಂದೆ ಡಿಸೆಂಬರ್ನಲ್ಲಿ ಕೂಡ ಪರಿಣಿತಿ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಆ ಸುದ್ದಿಯನ್ನು ನಟಿ ತಳ್ಳಿಹಾಕಿದ್ದರು. ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಲೇ ಪರಿಣಿತಿಯ ಬಗ್ಗೆ ಅವರ ಫ್ಯಾನ್ಸ್ ತಲೆಕೆಡಿಸಿಕೊಳ್ಳುತ್ತಿದ್ದು, ಇದರ ನಡುವೆ ಈ ವಿಡಿಯೋ ಸಕತ್ ಸದ್ದು ಮಾಡುತ್ತಿದೆ.
ಕೆಲ ತಿಂಗಳ ಹಿಂದೆ ನಟಿ ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದರು. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದರು. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದರು. ಇದರ ಮಧ್ಯೆ ಗರ್ಭಿಣಿ ವಿಷ್ಯ ಸಕತ್ ಸದ್ದು ಮಾಡಿತು.
ನಿಗೂಢವಾಗಿ ನಾಪತ್ತೆಯಾದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ಬರೆದ ಪತ್ರ ವೈರಲ್? ಏನಿದೆ ಇದರಲ್ಲಿ?