ಡಿವೋರ್ಸಿಗಳನ್ನು ಸಮಾಜ ಹೇಗೆ ನೋಡುತ್ತದೆ ಎಂದು ಹಾಸ್ಯದ ರೂಪದಲ್ಲಿ ಗರಂ ಆಗಿಯೇ ಬಾಲಿವುಡ್ ಹಾಟ್ ಬ್ಯೂಟಿ ಮಲೈಕಾ ಅರೋರಾ ಹೇಳಿದ್ದೇನು?
ಬಾಲಿವುಡ್ ಹಸಿಬಿಸಿ ಲೇಡಿ ಮಲೈಕಾ ಅರೋರಾ ಮತ್ತು ಅವರಿಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಡೇಟಿಂಗ್ ವಿಷ್ಯ ಸಿನಿ ಪ್ರಿಯರಿಗೆ ತಿಳಿದಿರುವುದೇ. ಇವರಿಬ್ಬರೂ ಸದ್ಯ ಬ್ರೇಕಪ್ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು. ಇದೀಗ ಬ್ರೇಕಪ್ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಾನು ನನ್ನ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ ಎಂದು ಮಲೈಕಾ ಸುದ್ದಿ ಹರಡುವವರ ವಿರುದ್ಧ ಗರಂ ಆಗಿಯೇ ಉತ್ತರಿಸಿದ್ದಾರೆ. ಅದೇನೇ ಇದ್ದರೂ, 50 ವರ್ಷದ ಮಲೈಕಾ ಮತ್ತು ಅರ್ಜುನ್ ಕಪೂರ್ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್ ಟಾಪಿಕ್ಕೇ. ವಯಸ್ಸು 50 ಆದರೂ ಇಂದಿಗೂ ಮಲೈಕಾ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ವಯಸ್ಸು 50 ಆದರೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್ ಸೆನ್ಸ್ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.
ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್ ಕಪೂರ್ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
undefined
ಅವನ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...
ಇದೀಗ ಇಂಟರೆಸ್ಟಿಂಗ್ ವಿಷ್ಯವೊಂದನ್ನು ಮಲೈಕಾ ಕಾರ್ಯಕ್ರಮವೊಂದರಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದೇನೆಂದರೆ, ತಾವು ಅರ್ಬಾಜ್ ಖಾನ್ ಅವರನ್ನು ಡಿವೋರ್ಸ್ ಆಗಿರುವುದೇ ದೊಡ್ಡ ತಪ್ಪು ಎನ್ನುವ ಅರ್ಥದಲ್ಲಿ ಟ್ರೋಲಿಗಳು ಮಾತನಾಡುತ್ತಾರೆ ಎಂದಿರುವ ಮಲೈಕಾ, 'ನಾನು ನಟಿ, ಅಮ್ಮ, ಮಹಿಳೆ. ಇದ್ಯಾವುದೂ ಜನರಿಗೆ ಬೇಡ. ಎಲ್ಲರಿಗೂ ನನ್ನ ಡಿವೋರ್ಸ್ಗೆ ಚಿಂತೆ. ಬಹುಶಃ ನನ್ನ ಮನೆಯ ಎದುರಿಗಿರುವ ನೇಮ್ಪ್ಲೇಟ್ನಲ್ಲಿ ಕೂಡ ಮಲೈಕಾ ಅರೋರಾ- ವಿಚ್ಛೇದಿತೆ ಎಂದು ಬೋರ್ಡ್ ಹಾಕಿದ್ರೆ ಎಲ್ಲರಿಗೂ ಖುಷಿಯಾಗತ್ತೇನೋ. ನಾನೂ ಲೈಫ್ನಲ್ಲಿ ಸಾಕಷ್ಟು ಮುಂದುವರೆದಿದ್ದಾನೆ. ನನ್ನ ಮಾಜಿ ಪತಿ ಕೂಡ ಮುಂದುವರೆದಿದ್ದಾರೆ. ನೀವೂ ಸ್ವಲ್ಪ ಮುಂದುವರೆಯಿರಿ. ಬರೀ ಬೇರೆಯವರ ಡಿವೋರ್ಸ್ ಬಗ್ಗೆ ಹೇಳ್ತಾ ಇರೋದನ್ನು ನಿಲ್ಲಿಸಿ' ಎಂದು ನಟಿ ಗರಂ ಆಗಿಯೇ ಹೇಳಿದ್ದಾರೆ.
ತಮ್ಮ ಡಿವೋರ್ಸ್ ಬಗ್ಗೆ ಹೇಗೆಲ್ಲಾ ಜನ ಮಾತನಾಡುತ್ತಾರೆ ಎಂದು ತಮಾಷೆಯ ಧಾಟಿಯಲ್ಲಿ ಸಿಟ್ಟಿನಿಂದಲೇ ಹೇಳಿದ ನಟಿ, 'ಡಿವೋರ್ಸ್ ವಿಷಯದಲ್ಲಿ ನಾನು ಸಾಕಷ್ಟು ಸ್ಟಡಿ ಮಾಡಿಬಿಟ್ಟಿದ್ದೇನೆ. ನೋಡಿ... ನಾನು ಯೋಗ ಮಾಡುವಾಗ ಬಗ್ಗಿದೆ ಎಂದುಕೊಳ್ಳಿ. ನನ್ನ ಹಿಂಬದಿ ನೋಡಿ ಡಿವೋರ್ಸ್ ಕೊಟ್ರಾ ಕೇಳ್ತಾರೆ. ನಾನು ಏನೋ ಬ್ರೇಕ್ಫಾಸ್ಟ್ ತಿನ್ನುತ್ತಿರುತ್ತೇನೆ ಅಂದುಕೊಳ್ಳಿ. ಒಹೊ ನಿನಗೆ ಬ್ರೇಕ್ಫಾಸ್ಟ್ ತಿನ್ನುವುದು ಹೆಚ್ಚು ಅಭ್ಯಾಸ, ಅದಕ್ಕಾಗಿಯೇ ಡಿವೋರ್ಸ್ ಕೊಟ್ರಾ ಕೇಳ್ತಾರೆ. ನಾನು ನೀರು ಕುಡಿಯುತ್ತಿದ್ದೇನೆ ಅಂದುಕೊಳ್ಳಿ, ಒಹೊ ಡಿವೋರ್ಸ್ ಆಗಿರುವುದಕ್ಕೆ ಅತ್ತೂ ಅತ್ತೂ ಡೀಹೈಡ್ರೇಟ್ ಆಗಿ ಹೆಚ್ಚು ನೀರು ಕುಡಿಯುತ್ತಿದ್ದಾರಾ ಕೇಳುತ್ತಾರೆ. ನಾನು ಹಾಟ್ ಫೋಟೋ ಶೇರ್ ಮಾಡಿದರೆ, ನೋಡು ನೋಡಿ ಹಾಟ್ ಡಿವೋರ್ಸ್ ಲುಕ್ ಅಂತ ತಮಾಷೆ ಮಾಡ್ತಾರೆ' ಎಂದಿದ್ದಾರೆ ಮಲೈಕಾ. ಒಟ್ಟಿನಲ್ಲಿ ಡಿವೋರ್ಸ್ ಆದ ಮಹಿಳೆಯರಿಗೆ ಚುಚ್ಚಿ ಚುಚ್ಚಿ ಮಾತನಾಡುವ ಮೂಲಕ ಅವರು ವಿಚ್ಛೇದಿತರು ಎಂದು ನೆನಪು ಮಾಡಿಕೊಡುತ್ತಲೇ ಇರುತ್ತದೆ ಸಮಾಜ ಎಂದು ಬೇಸರದಿಂದಲೂ ನುಡಿದಿದ್ದಾರೆ. ಈ ಹಿಂದೆ ನಟಿ, ತಮ್ಮ ಮತ್ತು ಅರ್ಜುನ್ ಕಪೂರ್ ವಯಸ್ಸು, ಸಂಬಂಧದ ಕುರಿತು ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಗರಂ ಆಗಿದ್ದರು.
ನನ್ನ ಹಿಂಬದಿ ಊಟದ ಟೇಬಲ್ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ ಎಂದ ಮಲೈಕಾ ಅರೋರಾ