ಮಗಳ ವಯಸ್ಸಿನವಳ ಜೊತೆ 3ನೇ ಬಾರಿ ಅರ್ಬಾಜ್​ ಖಾನ್​ ಮದುಮಗ! ಡೇಟ್​ ಫಿಕ್ಸ್​: ಹೊಟ್ಟೆ ಉರಿಸಿಕೊಳ್ತಿರೋ ಅವಿವಾಹಿತರು!

Published : Dec 22, 2023, 01:17 PM IST
ಮಗಳ ವಯಸ್ಸಿನವಳ ಜೊತೆ 3ನೇ ಬಾರಿ ಅರ್ಬಾಜ್​ ಖಾನ್​ ಮದುಮಗ! ಡೇಟ್​ ಫಿಕ್ಸ್​: ಹೊಟ್ಟೆ ಉರಿಸಿಕೊಳ್ತಿರೋ ಅವಿವಾಹಿತರು!

ಸಾರಾಂಶ

ತಮಗಿಂತ 22 ವರ್ಷ ಚಿಕ್ಕ ವಯಸ್ಸಿನ ಯುವತಿ ಜೊತೆ ನಟ ಅರ್ಬಾಜ್​ ಖಾನ್​ ಮದುವೆ ಫಿಕ್ಸ್​ ಆಗಿದೆ. ಯಾರೀಕೆ?  

ನಟ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್​ ಖಾನ್​ ಈಗ ಮೂರನೆಯ ಬಾರಿ ಮದುಮಗನಾಗಲು ರೆಡಿಯಾಗಿದ್ದಾರೆ. 56 ವಯಸ್ಸಿನ ಅರ್ಬಾಜ್​ ಖಾನ್​ಗೆ ಇದಾಗಲೇ ಎರಡು ಮದ್ವೆಯಾಗಿದ್ದು, ಇದು ಮೂರನೆಯ ಮದುವೆ. ಕುತೂಹಲದ ಸಂಗತಿ ಎಂದರೆ, ಈಗ ಮದ್ವೆಯಾಗುತ್ತಿರುವ ಯುವತಿ ಅರ್ಬಾಜ್​ ಖಾನ್​ ಅವರಿಗಿಂತ 22 ವರ್ಷ ಚಿಕ್ಕವರು! ಅಂದಹಾಗೆ ಈ ಯುವತಿಯ ಹೆಸರು,  ಶುರಾ ಖಾನ್​. ಇವರು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ನಾಡಿದ್ದೇ ಅಂದರೆ ಇದೇ 24ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದೆ.   ಶುರಾ ಖಾನ್ ಮತ್ತು  ಅರ್ಬಾಜ್​ ಖಾನ್​ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ  ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ.  ಶುರಾ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್  ನೋಡಿದಾಗ, ಅವರು ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಾರೆ ಎನ್ನುವುದು ತಿಳಿಯುತ್ತದೆ. 
 
ಅಂದಹಾಗೆ ಇದು ಅರ್ಬಾಜ್​ ಖಾನ್​ ಅವರಿಗೆ ಮೂರನೆಯ ಮದ್ವೆ. ಮೊದಲ ಮದುವೆ ನಡೆದದ್ದು ಹಾಟೆಸ್ಟ್​ ನಟಿ ಮಲೈಕಾ ಅರೋರಾ ಜೊತೆ. ಈ ಜೋಡಿಗೆ 21 ವರ್ಷದ ಮಗ ಅರ್ಹಾನ್​ ಖಾನ್​ ಇದ್ದಾನೆ.  2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದೆ.  

ಮಗಳ ಜೊತೆ ಶಿಲ್ಪಾ ಪತಿಯ ಮುದ್ದು ತುಂಟಾಟ: ಕ್ಯೂಟ್​ ಅನ್ನೋ ಬದ್ಲು ಪೋರ್ನ್​ ವಿಷ್ಯನೇ ಕೆದಕೋದಾ ನೆಟ್ಟಿಗರು?

ಇದು ಒಂದೆಡೆಯಾದರೆ, ಇತ್ತ ಅರ್ಬಾಜ್​ ಖಾನ್​, ಕೆಲ ವರ್ಷಗಳಿಂದ ಇಟಲಿಯ ನಟಿ ಮತ್ತು ರೂಪದರ್ಶಿಯಾಗಿದ್ದು ಜಾರ್ಜಿಯಾ ಆಂಡ್ರಿಯಾನಿ ಜೊತೆ ಸಂಬಂಧದಲ್ಲಿದ್ದರು. ಅಧಿಕೃತವಾಗಿ ಮದ್ವೆಯಾಗದಿದ್ದರೂ ಪತಿ-ಪತ್ನಿಯಂತೆ ಬಾಳುತ್ತಿದ್ದರು.  2019 ರಲ್ಲಿ ಜಾರ್ಜಿಯಾ ಆಂಡ್ರಿಯಾನಿ ಅವರೊಂದಿಗಿನ ಸಂಬಂಧವನ್ನು ಅರ್ಬಾಜ್​ ಖಾನ್​ ದೃಢಪಡಿಸಿದ್ದರು.  ಸಂಬಂಧ ಮುರಿದ ಬಳಿಕ ಈ ಕುರಿತು ಮಾತನಾಡಿದ್ದ  ಜಾರ್ಜಿಯಾ ಆಂಡ್ರಿಯಾನಿ,  ಈ ಸಂಬಂಧ  ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಮೊದಲಿನಿಂದಲೂ ನಮಗಿಬ್ಬರಿಗೂ ಗೊತ್ತಿತ್ತು. ಏಕೆಂದರೆ ನಾವು ತುಂಬಾ ಭಿನ್ನರು. ಅದು ಇಬ್ಬರಿಗೂ ಗೊತ್ತಿತ್ತು ಆದರೆ ಅದನ್ನು ಒಪ್ಪಿಕೊಳ್ಳುವ ಧೈರ್ಯ ನಮ್ಮಿಬ್ಬರಿಗೂ ಇರಲಿಲ್ಲ ಎಂದಿದ್ದರು. ನಾಲ್ಕು ವರ್ಷಗಳ ಅವಧಿಯಲ್ಲಿ  ನಾವು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ, ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿರುತ್ತೇವೆ. ಆ ಸಮಯದಲ್ಲಿ ನಾವು ಸ್ನೇಹಿತರಿಗಿಂತ ಹೆಚ್ಚಾಗಿದ್ದೆವು. ನಾವು ಯಾವಾಗಲೂ ತುಂಬಾ ಹತ್ತಿರವಾಗಿದ್ದೇವೆ.  ಒಟ್ಟಿಗೆ ಮೋಜು ಮಾಡಿ, ಸ್ನೇಹಿತರಿಂದ ಸ್ನೇಹಿತರಾಗಲು ಕಷ್ಟವಾಗಲು ಇದು ಕೂಡ ಒಂದು ಕಾರಣ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.

ಇದೀಗ ತಮಗಿಂತ 22 ವರ್ಷ ಚಿಕ್ಕವರಾಗಿರುವ ಕಲಾವಿದೆ ಜೊತೆ ಮದ್ವೆಗೆ ರೆಡಿಯಾಗಿದ್ದಾರೆ ಅರ್ಬಾಜ್​ ಖಾನ್​. ಇದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲ ಎಂದು ಗೋಳೋ ಎನ್ನುತ್ತಿರುವ ಯುವಕರು ಥಹರೇವಾರಿ ಕಮೆಂಟ್ ಹಾಕುತ್ತಿದ್ದಾರೆ. ಇಂಥವರಿಗೆ ಏಕೆ ಇಷ್ಟೆಲ್ಲಾ ಮಂದಿ ಗಂಟು ಬೀಳುತ್ತಾರೆ. ಆಕೆಗೂ ದುಡ್ಡಿಗೇನು ಬರವಿಲ್ಲ. ಆದರೂ ಇಷ್ಟು ಚಿಕ್ಕವರಿಗೂ ಮತ್ತಷ್ಟು ದುಡ್ಡಿದ್ದವರೇ ಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. ಹೀಗೆ ಎಲ್ಲರೂ ಮೂರ್ನಾಲ್ಕು ಮದ್ವೆಯಾದರೆ ಅವಿವಾಹಿತರ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ. 

ಐಶ್ವರ್ಯ ಎಕ್ಸ್​ ಸಲ್ಮಾನ್​ರನ್ನು ಹೀಗೆ ತಬ್ಬಿಕೊಳ್ಳೋದಾ ಅಭಿಷೇಕ್​? ಏನಿದರ ಅರ್ಥ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾನ್ಸ್ ಅಂದ್ರೆ ಇದು, 71ನೇ ವಯಸ್ಸಿನಲ್ಲೂ ಯುವಕರನ್ನು ನಾಚಿಸಿದ ರೇಖಾ
ಸೌಂದರ್ಯ ಸಿನಿಮಾ ನೋಡಿ ಕೈ ಸುಟ್ಟುಕೊಂಡ ಚಿರಂಜೀವಿ, ತಲೆಕೆಡಿಸಿಕೊಂಡ ಆ ನಿರ್ದೇಶಕ: ಆಗಿದ್ದೇನು?