ಐಶ್ವರ್ಯ ರೈ ಮಾಜಿ ಬಾಯ್ಫ್ರೆಂಡ್ ಸಲ್ಮಾನ್ ಖಾನ್ರನ್ನು ಅಭಿಷೇಕ್ ಬಚ್ಚನ್ ತಬ್ಬಿಕೊಂಡಿದ್ದು ಇದರ ವಿಡಿಯೋ ಸಕತ್ ಸದ್ದು ಮಾಡುತ್ತಿದೆ.
ಸದ್ಯ ಬಿ-ಟೌನ್ನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಡಿವೋರ್ಸ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದಾಗಿನಿಂದ ಒಂದರ ಮೇಲೊಂದು ಘಟನೆಗಳು ಇವರಿಬ್ಬರೂ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವತ್ತಲೇ ಬೆರಳು ಮಾಡಿ ತೋರಿಸುತ್ತಿದೆ.
ಇದಾಗಲೇ ಸಿನಿ ಪ್ರಿಯರಿಗೆ ತಿಳಿದಿರುವಂತೆ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಹಿಂದೊಮ್ಮೆ ಸಕತ್ ಸದ್ದು ಮಾಡಿದ್ದ ಜೋಡಿ. ಇವರಿಬ್ಬರೂ ಬಹಳ ವರ್ಷ ಒಟ್ಟಿಗೇ ಇದ್ದರು, ಡೇಟಿಂಗ್ ಮಾಡುತ್ತಿದ್ದರು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದೇ ಸುದ್ದಿಯಾಗಿತ್ತು. ಆದರೆ ಅದೇನಾಯಿತೋ, ಇಬ್ಬರೂ ಬೇರ್ಪಟ್ಟರು. ಈ ಬಗ್ಗೆ ಸಲ್ಮಾನ್ ಖಾನ್ಗೆ ಇಂದಿನವರೆಗೂ ಐಶ್ವರ್ಯ ಮೇಲೆ ಕೋಪವಿದೆ. ಪದೇ ಪದೇ ಇದೇ ವಿಷಯವಾಗಿ ಅವರು ಐಶ್ವರ್ಯ ರೈ ಅವರನ್ನು ಕೆದಕುತ್ತಲೇ ಇರುತ್ತಾರೆ. ಲವ್ ವಿಷಯ ಬಂದಾಗಲೆಲ್ಲಾ ಸಾಧ್ಯವಾದಷ್ಟು ಮಟ್ಟಿಗೆ ತಾವು ಮೋಸ ಹೋಗಿದ್ದನ್ನು ಹೇಳುತ್ತಲೇ ಇರುತ್ತಾರೆ.
ಕರಣ್ ಷೋನಲ್ಲಿ ಅಮಿತಾಭ್ ಪುತ್ರಿ ಶ್ವೇತಾ, ಐಶ್ವರ್ಯ ಬಗ್ಗೆ ಹೇಳಿದ್ದೇನು? ಕುತೂಹಲದ ವಿಡಿಯೋ ವೈರಲ್
ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ, ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್ರನ್ನು ತಬ್ಬಿಕೊಂಡಿರುವ ವಿಡಿಯೋ ಸಕತ್ ಸದ್ದು ಮಾಡುತ್ತಿದೆ. ಇದರ ವಿಡಿಯೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇವರಿಬ್ಬರೂ ಏಕೆ ಭೇಟಿಯಾಗಿದ್ದಾರೆ ಎನ್ನುವುದು ಕೂಡ ಕುತೂಹಲ ತಣಿಸುತ್ತಿದೆ. ಇದೇ 21 ರಂದು ನಿರ್ಮಾಪಕ ಆನಂದ್ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಲವು ಬಾಲಿವುಡ್ ನಟ-ನಟಿಯರು ಭಾಗವಹಿಸಿದ್ದರು. ಆದರೆ ಐಶ್ವರ್ಯ ಮಾವ ಅಮಿತಾಭ್ ಬಚ್ಚನ್ ಮಾತ್ರವಲ್ಲದೇ ಸಲ್ಮಾನ್ ಖಾನ್ ಮತ್ತು ಅಭಿಷೇಕ್ ಒಟ್ಟಿಗೇ ಕಾಣಿಸಿಕೊಂಡರು. ಇಷ್ಟೇ ಆದರೆ ಅದು ದೊಡ್ಡ ವಿಷಯವೇ ಆಗುತ್ತಿರಲಿಲ್ಲ. ಸಲ್ಮಾನ್ ಖಾನ್ ಅಮಿತಾಭ್ ಜೊತೆ ಅಭಿಷೇಕ್ ಬಚ್ಚನ್ ತಬ್ಬಿಕೊಂಡಿದ್ದಾರೆ. ಸಾಮಾನ್ಯವಾಗಿ ಇವರಿಬ್ಬರೂ ಈ ರೀತಿಯಾಗಿ ಆತ್ಮೀಯವಾಗಿ ತಬ್ಬಿಕೊಂಡಿದ್ದು ಇದೇ ಮೊದಲು ಎಂದೂ ಹೇಳಲಾಗುತ್ತಿದ್ದು, ಐಶ್ವರ್ಯ-ಅಭಿಷೇಕ್ ಡಿವೋರ್ಸ್ ಸುದ್ದಿ ಜೋರಾಗಿರುವ ಈ ಹೊತ್ತಿನಲ್ಲಿ ಈ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಇದಕ್ಕೆ ಥಹರೇವಾರಿ ಕಮೆಂಟ್ಗಳು ಬರುತ್ತಿದ್ದು, ಬಹುತೇಕ ಮಂದಿ ತಮಾಷೆಯಾಗಿ ಬರೆಯುತ್ತಿದ್ದಾರೆ. ನಾನೂ- ನೀನೂ ಒಂದೇ ಬ್ರೋ ಎಂದು ಅಭಿಷೇಕ್ ಸಲ್ಮಾನ್ಗೆ ಹೇಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದರೆ, ಮೊದಲೇ ಗೊತ್ತಿದ್ದರೆ ನಾನೂ ನಿನ್ನ ಹಾಗೆ ದೂರವೇ ಉಳಿಯುತ್ತಿದ್ದೆ ಎಂದು ಅಭಿಷೇಕ್ ಹೇಳಿರಬಹುದು ಎಂದು ಮತ್ತೆ ಕೆಲವರು ಕೆಣಕುತ್ತಿದ್ದಾರೆ. ಮತ್ತೆ ಕೆಲವರು ವಿಚ್ಛೇದನದ ಬಗ್ಗೆ ಅಭಿಷೇಕ್, ಸಲ್ಮಾನ್ ಖಾನ್ ಅವರಿಂದ ಸಲಹೆ ಪಡೆಯುತ್ತಿದ್ದಾರೆ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಇದು ಸಕತ್ ಸದ್ದು ಮಾಡುತ್ತಿದೆ.
ಐಶ್ವರ್ಯ ರೈಯನ್ನು ಅಭಿಷೇಕ್ ಬಚ್ಚನ್ ಮದ್ವೆಯಾಗಿದ್ದೇಕೆ? ಕಾಫಿ ವಿತ್ ಕರಣ್ನಲ್ಲಿ ನಟ ಹೇಳಿದ್ದೇನು?