Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

Published : Feb 18, 2023, 01:41 PM ISTUpdated : Feb 18, 2023, 03:04 PM IST
Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

ಸಾರಾಂಶ

ನಟಿ ಶುಭಾ ಪೂಂಜಾ ಮತ್ತು ಆ್ಯಂಕರ್​ ಅನುಶ್ರೀ ಬಹಳ ಹಳೆಯ ಸ್ನೇಹಿತೆಯರಾಗಿದ್ದು, ಶುಭಾ ಅವರ ಮನೆಯ ನಾಯಿಗೆ ಇಟ್ಟ ಚಿಕನ್​ ತಿಂದದ್ದನ್ನು ಹೇಳಿಕೊಂಡಿದ್ದಾರೆ. ಏನಿದು ಘಟನೆ?   

ರಿಯಾಲಿಟಿ ಷೋಗಳಲ್ಲಿ (Reality show) ಆ್ಯಂಕರಿಂಗ್​ ಮಾಡುವ ಮೂಲಕ ಮನೆ ಮಾತಾಗಿರುವ ನಟಿ ಅನುಶ್ರೀ. ಇವರು ಆ್ಯಂಕರಿಂಗ್ (Anchoring) ಮೂಲಕ ಮಾತ್ರವಲ್ಲದೇ, ಸ್ವಂತ ಯೂಟ್ಯೂಬ್​ ಚಾನೆಲ್​ ಮೂಲಕವೂ ಭಾರಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಲವಾರು ನಟ-ನಟಿಯರ ಸಂದರ್ಶನಗಳನ್ನು ಮಾಡುತ್ತಿರುವ ಅನುಶ್ರೀ ಅವರ ಯೂಟ್ಯೂಬ್​ ಚಾನೆಲ್​ಗೆ 8.40 ಲಕ್ಷ ಮಂದಿ ಸಬ್​ಸ್ಕ್ರೈಬರ್ಸ್​ (subscriber) ಇದ್ದಾರೆ. ಈ ಚಾನೆಲ್​ ಮೂಲಕ ಕುತೂಹಲದ ಮಾಹಿತಿಗಳನ್ನೂ ಅವರು ಶೇರ್​ ಮಾಡಿಕೊಳ್ಳುತ್ತಾರೆ. ಜೊತೆಗೆ ಅವರ ಮಾತಿನ ಶೈಲಿಯಿಂದಲೂ ಜನರ ಮನಸ್ಸನ್ನು ರಂಜಿಸುತ್ತಾರೆ. ಇತ್ತೀಚೆಗೆ ಅವರು ತಮ್ಮ ಗೆಳತಿ, ನವವಿವಾಹಿತೆ ಶುಭಾ ಪೂಂಜಾ ದಂಪತಿ ಜೊತೆ ಚಿಟ್​ಚಾಟ್​ (chitchat)ನಡೆಸಿದ್ದು, ಅದರಲ್ಲಿ ತಮಾಷೆಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

 ಫೆಬ್ರವರಿ 14ರಂದು ಪ್ರೇಮಿಗಳ ದಿನದ (Valentines Day) ಪ್ರಯುಕ್ತ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ಅನುಶ್ರೀ (Anushree) ಹಿಂದಿನ ಒಂದು ಘಟನೆಯನ್ನು ನೆನೆಪಿಸಿಕೊಂಡಿದ್ದು, ಅದು ಕೇಳುಗರನ್ನು ಹಾಸ್ಯದ ಕಡಲಿನಲ್ಲಿ ತೇಲಿಸುವಂತಿದೆ. ಅದೇನೆಂದರೆ ಶುಭಾ (Shubha Poonja) ಅವರ ಮನೆಯಲ್ಲಿ ನಾಯಿಗೆ ಇಟ್ಟಿದ್ದ ಆಹಾರವನ್ನು ಅನುಶ್ರೀ ತಿಂದಿರಿರುವುದು! ನಿಜ. ನೀವು ಕೇಳುತ್ತಿರುವುದು ಸರಿಯಾಗಿದೆ. ಮಂಗಳೂರಿನ ಈ ಗೆಳತಿಯರ ಸ್ನೇಹ ಇಂದು, ನಿನ್ನೆಯದ್ದಲ್ಲ. ಬಹಳ ವರ್ಷಗಳದ್ದು. ಒಬ್ಬರ ಮನೆಗೆ ಒಬ್ಬರು ಹೋಗಿ ಬರುವಂಥ ಗೆಳೆತನ ಇವರದ್ದು. ಹೀಗೆಯೇ ಶುಭಾ ಪೂಂಜಾ ಅವರ ಮನೆಗೆ ಹೋಗಿದ್ದಾಗ ನಾಯಿಗೆ ಇಟ್ಟ ಆಹಾರವನ್ನು ಅನುಶ್ರೀ ತಿಂದಿದ್ದು, ಅದರ ಬಗ್ಗೆ ಮಾತುಕತೆಯಲ್ಲಿ ಬಹಿರಂಗಪಡಿಸಿದ್ದಾರೆ.

Swara Bhaskar ಮದುವೆ ಅಸಿಂಧು ಎಂದ ಧರ್ಮಗುರು: ರಕ್ಷಣೆಗೆ ಬಂದ ಆರ್​ಜೆ ಸಯೇಮಾ

ಅಷ್ಟಕ್ಕೂ ಆಗಿದ್ದೇನೆಂದರೆ, ಒಮ್ಮೆ  ಶುಭಾ ಪೂಂಜಾ ಅವರ ಮನೆಗೆ ಅನುಶ್ರೀ ಹೋಗಿದ್ದರು. ಆಗ ತುಂಬಾ ಹಸಿದಿದ್ದರಂತೆ. ತಿನ್ನಲು ಏನಾದರೂ ಕೊಡು ಎಂದು ಹೇಳಿದ್ದಾರೆ. ಆಗ ಶುಭಾ ಪೂಂಜಾ ಅವರು,  ಚಿಕನ್ (Chicken) ಮಾಡಿದ್ದೇನೆ. ಡೈನಿಂಗ್ ಟೇಬಲ್ ಮೇಲೆ ಇದೆ ನೋಡು ತಿನ್ನು ಎಂದು ಹೇಳಿದ್ದಾರೆ. ಅವರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರಿಂದ ಅನುಶ್ರೀಗೆ ಡೈನಿಂಗ್​ ಟೇಬಲ್​ ತೋರಿಸಿ ಸುಮ್ಮನಾಗಿದ್ದಾರೆ. ತುಂಬಾ ಹಸಿದಿದ್ದ ಅನುಶ್ರೀ,  ತಕ್ಷಣ ಡೈನಿಂಗ್​ ಟೇಬಲ್ (Dining Table) ಮೇಲಿದ್ದ ಅನ್ನ ಮತ್ತು ಚಿಕನ್​ ಸಾರನ್ನು ಬಡಿಸಿಕೊಂಡು, ತಿಂದಿದ್ದಾರೆ.

ಇದನ್ನು ತಿನ್ನುತ್ತಿದ್ದಂತೆಯೇ ಅನುಶ್ರೀ ಅವರಿಗೆ ಒಂದು ರೀತಿ ಆಗಿದೆಯಂತೆ. ಅದಕ್ಕೆ ಕಾರಣ,  ಆ ಸಾರಿನಲ್ಲಿ  ಉಪ್ಪು, ಖಾರಾ ಏನೂ ಇಲ್ಲವಾಗಿತ್ತಂತೆ. ಇದನ್ನು ಬಾಯಿಗೆ ಹಾಕಲು ಆಗದ ಅನುಶ್ರೀ ಇದೆಂಥ ಸಾರು ಮಾಡಿದ್ದಿ? ನಿಮ್ಮ ಮನೆಯಲ್ಲಿ ಹೀಗೆ ಮಾಡಲು ಯಾವಾಗ ಆರಂಭಿಸಿದ್ದಿ? ಹುಳಿ, ಉಪ್ಪು, ಖಾರ ಏನೂ ಇಲ್ಲವಲ್ಲ ಎಂದು ಪ್ರಶ್ನಿಸಿದ್ದಾರೆ. ತಕ್ಷಣ ಗಾಬರಿಗೊಂಡ ಪೂಜಾ, ಎಲ್ಲಿ ಇಟ್ಟಿದ್ದ ಅಡುಗೆ ಬಡಿಸಿಕೊಂಡಿ ಎಂದು ಕೇಳಿದ್ದಾರೆ. ಆಮೇಲೆ ಬಂದು ನೋಡಿದರೆ ತಿಳಿದದ್ದು ಏನೆಂದರೆ ಅನುಶ್ರೀ ಬಡಿಸಿಕೊಂಡದ್ದು ನಾಯಿಗೆ (Dog) ಇಟ್ಟಿದ್ದ ಚಿಕನ್​ ಸಾರು ಎಂದು! ಛೇ ಇದೆಂಥ ಕೆಲಸ ಮಾಡಿದೆ ನೀನು. ಇದು ನಾಯಿಗೆ ಹಾಕಲು ಮಾಡಿಟ್ಟ ಚಿಕನ್ ಎಂದಿದ್ದಾರೆ. 

ಮೊಟ್ಟೆಗಿಂತ ಧರ್ಮ ಮುಖ್ಯ; 25 ಲಕ್ಷ ಯಾವ ಲೆಕ್ಕ ಎಂದು ಮಾಸ್ಟರ್ ಶೆಫ್‌ನಿಂದ ಹೊರ ನಡೆದ ಅರುಣಾ!

ಈ ಬಗ್ಗೆ ಚರ್ಚೆಯಲ್ಲಿ ಅನುಶ್ರೀ ಹೇಳಿಕೊಂಡಿದ್ದು,  ಇದೊಂದು ನಮ್ಮ ಜೀವನದ ನೋವಿನ ಘಟನೆ ಎಂದು ನಕ್ಕಿದ್ದಾರೆ.  ನಾಯಿಗೆ ಹಾಕೋ ಆಹಾರವನ್ನು ಡೈನಿಂಗ್ ಮೇಲೆ ಯಾರಾದರೂ ಇಡ್ತಾರಾ ಎಂದು ಶುಭಾ ಅವರ ಕಾಲನ್ನೂ ಎಳೆದಿದ್ದಾರೆ. ಈ ವಿಷಯವನ್ನು ಕೇಳಿ ಶುಭಾ ಅವರ ಪತಿ ಸುಮಂತ್ (Sumanth) ಅವರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಅಂದಹಾಗೆ ನಟಿ ಶುಭಾ  ಮತ್ತು ಸುಮಂತ್ ಅವರ ಮದುವೆ  2020ರಲ್ಲಿ  ಮಂಗಳೂರಿನಲ್ಲಿ ಸರಳವಾಗಿ ನಡೆದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?