100 ಅಭಿಮಾನಿಗಳಿಗೆ ಉಚಿತ ಮನಾಲಿ ಟ್ರಿಪ್ ಕಳುಹಿಸಿದ ನಟ ವಿಜಯ್ ದೇವರಕೊಂಡ; ಅವಕಾಶ ಇನ್ನೂ ಇದ್ಯಾ?

Published : Feb 18, 2023, 12:36 PM IST
100 ಅಭಿಮಾನಿಗಳಿಗೆ ಉಚಿತ ಮನಾಲಿ ಟ್ರಿಪ್ ಕಳುಹಿಸಿದ ನಟ ವಿಜಯ್ ದೇವರಕೊಂಡ; ಅವಕಾಶ ಇನ್ನೂ ಇದ್ಯಾ?

ಸಾರಾಂಶ

ಅಭಿಮಾನಿಗಳ ಮನಾಲಿ ಟ್ರಿಪ್ ಸಂಪೂರ್ಣ ಚರ್ಚು ವೆಚ್ಚಿಗಳನ್ನು ನೋಡಿಕೊಂಡ ವಿಜಯ್ ದೇವರಕೊಂಡ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಟಾಲಿವುಡ್‌ ಹ್ಯಾಂಡ್ಸಮ್  ವಿಜಯ್ ದೇವರಕೊಂಡ ರೊಮ್ಯಾಂಟಿಕ್ ಡ್ರಾಮಾ ಖುಷಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್‌ ಮನಾಲಿ ಟ್ರಿಪ್ ವ್ಯವಸ್ಥೆ ಮಾಡಿದ್ದಾರೆ. ಸಂಪೂರ್ಣ ಖರ್ಚು ವೆಚ್ಚ ನೋಡಿಕೊಳ್ಳುತ್ತಿರುವ ವಿಜಯ್‌ಗೆ ಅಭಿಮಾನಿಗಳು ಥ್ಯಾಂಕ್ಸ್‌ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋವನ್ನು ದೇವರಕೊಂಡ ಅಪ್ಲೋಡ್ ಮಾಡಿದ್ದಾರೆ. 

ವಿಡಿಯೋದಲ್ಲಿ ಅಭಿಮಾನಿಗಳ ಸಂತಸದಲ್ಲಿ ಕುಣಿದು ವಿಜಯ್ ವಿಜಯ್ ಎಂದು ಕೂಗುತ್ತಿರುವುದನ್ನು ಕಾಣಬಹುದು. 'ಕ್ಯೂಟಿಸ್ಟ್‌ ...ಇಂದು ಬೆಳಗ್ಗೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ಸೆರೆ ಹಿಡಿದ ವಿಡಿಯೋವನ್ನು ನನಗೆ ಕಳುಹಿಸಿದ್ದಾರೆ. ಪರ್ವತಗಳ ಕಡೆ ತಮ್ಮ ಪ್ರಯಾಣ ಶುರು ಮಾಡಿದ್ದಾರೆ. ದೇಶಾದ್ಯಂತ 100 ಅಭಿಮಾನಿಗಳು ಸೇರಿಕೊಂಡಿದ್ದಾರೆ. ನನ್ನನ್ನು ಖುಷಿ ಪಡುಸುವವರಿಗೆ ಖುಷಿ ಪಡಿಸುವ ಸಣ್ಣ ಪ್ರಯತ್ನ. #Deverasanta' ಎಂದು ವಿಜಯ್ ಬರೆದುಕೊಂಡಿದ್ದಾರೆ.  ಫೆಬ್ರವರಿ 17ರಿಂದ 20ರವರೆಗೂ ಮನಾಲಿ ಟ್ರಿಪ್ ಎಂಜಾಯ್ ಮಾಡಲಿದ್ದಾರೆ ಫ್ಯಾನ್ಸ್‌.

ಸಾಮಾಜಿಕ ಜಾಲತಾಣದಲ್ಲಿ ಪೋಲ್ ಮಾಡುವ ಮೂಲಕ ಪ್ರಯಾಣ ಮಾಡಬೇಕಿರುವ ಜಾಗವನ್ನು ಸೆಲೆಕ್ಟ್‌ ಮಾಡಿದ್ದರು. ಬಹುತೇಕರು ಪರ್ವತ ಆಯ್ಕೆ ಮಾಡಿದರು ಹೀಗಾಗಿ ವಿಜಯ್ ಮನಾಲಿ ಟ್ರಿಪ್ ಪ್ಲ್ಯಾನ್ ಮಾಡಿದರು. ವರ್ಷ ಆರಂಭದಲ್ಲಿ ಮಸಾಬ್ ಟ್ಯಾಂಕ್‌ನಲ್ಲಿರುವ ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಮತ್ತು ಫೈನ್ ಆರ್ಟ್ಸ್ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಮಾಡಿ ಅಲ್ಲಿ ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುವ 50 ಅಭಿಮಾನಿಗಳನ್ನು ವಿಜಯ್ ಸೆಲೆಕ್ಟ್‌ ಮಾಡಿದರು. ಪ್ರತಿಯೊಬ್ಬರನ್ನು ವಿಜಯ್ ಮಾತನಾಡಿಸಿ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. 

ವಿಜಯ್ ದೇವರಕೊಂಡ ಜತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ!

ಕಳೆದ ವರ್ಷ ಕ್ರಿಸ್ಮಸ್‌ ಹಬ್ಬದ ದಿನ #Deverasanta ಎಂದು ಟ್ಯಾಗ್ ಬಳಸಿ ನಿಮ್ಮ ಆಪ್ತರಿಗೆ ವಿಶ್ ಮಾಡಿ. ನನ್ನ 9 ಅಥವಾ 10 ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್‌ ಅನೌನ್ಸ್‌ ಮಾಡುವುದಾಗಿ ಹೇಳಿದರು. 100 ಮಂದಿಯಲ್ಲಿ 10 ಜನರನ್ನು ಸೆಲೆಕ್ಟ್‌ ಮಾಡಿ ಪ್ರತಿಯೊಬ್ಬರಿಗೂ 10 ಸಾವಿರ ಹಣ ನೀಡಿದ್ದರು. 

12 ಗಂಟೆ EDಯಿಂದ ಡ್ರಿಲ್; ಪಾಪ್ಯುಲಾರಿಟಿ ಸೈಡ್‌ ಎಫೆಕ್ಟ್ಸ್‌ ಎಂದ ವಿಜಯ್ ದೇವರಕೊಂಡ

ವಿಜಯ್ ಸಿನಿಮಾ:

ಸದ್ಯ ಖುಷಿ ಸಿನಿಮಾದಲ್ಲಿ ವಿಜಯ್ ಅಭಿನಯಿಸುತ್ತಿದ್ದಾರೆ. 4ರಿಂದ 5 ಶೆಡ್ಯೂಲ್ ಚಿತ್ರೀಕರಣ ಉಳಿದಿದೆ ಎನ್ನಲಾಗಿದೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಸಿನಿಮಾ ಅಗಿದ್ದು ಸಮಂತಾ ರುತ್ ಪ್ರಭು ಕೂಡ ಅಭಿನಯಿಸಲಿದ್ದಾರೆ. ಈ ಮೂಲಕ ವಿಜಯ್ ಮತ್ತು ಸಮಂತಾ ಎರಡನೇ ಸಲ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಹಿಂದೆ ನಾಗ ಅಶ್ವಿನ್ ಅವರ ಮಹಾನಟಿ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು.  ಕೆಲವು ದಿನಗಳ ಹಿಂದೆ ಚಿತ್ರೀಕರಣ ಮಾಡುವಾಗ ವಿಜಯ್ ಮತ್ತು ಸಮಂತಾ ಪೆಟ್ಟು ಮಾಡಿಕೊಂಡಿದ್ದರಂತೆ. 'ಖುಷಿ ಸಿನಿಮಾ ಚಿತ್ರೀಕರಣ ಮಾಡುವಾಗ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್‌ ಅವರಿಗೆ ಗಾಯವಾಗಿದೆ ಎಂದು ಸುದ್ದಿ ಹರಿಡುತ್ತಿದೆ. ಇದರಲ್ಲಿ ಯಾವ ಸತ್ಯವೂ ಇಲ್ಲ. ಇಡೀ ಚಿತ್ರತಂಡ ಹೈದರಾಬಾದ್‌ನಿಂದ ಚಿತ್ರೀಕರಣ ಮುಗಿಸಿಕೊಂಡು ಸುರಕ್ಷಿತವಾಗಿ ಹಿಂತಿರುಗಿದ್ದಾರೆ. 30 ದಿನಗಳ ಕಾಲ ಕಾಶ್ಮೀರದಲ್ಲಿ ಖುಷಿಯಾಗಿ ಚಿತ್ರೀಕರಣ ಮಾಡಿದ್ದಾರೆ' ಎಂದು ಹೇಳಿಕೆ ಬಿಡುಗಡೆ ಮಾಡಲಾಗಿತ್ತು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?