
ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ (Anushka Sharma) ಅವರು ನಿನ್ನೆ ಅಂದರೆ ಮೇ 1ರಂದು 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. 1 ಮೇ 1988 ರಂದು ಜನಿಸಿರುವ ಅನುಷ್ಕಾ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಜೊತೆಗೂಡಿ ವಿರುಷ್ಕಾ ಆಗಿದ್ದಾರೆ. ವಿರುಷ್ಕಾ ಎಂದೇ ಖ್ಯಾತಿ ಪಡೆದಿರುವ ಈ ಜೋಡಿ ಅವರ ಅಪರೂಪದ ಜೋಡಿ 2017 ರ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಸಿನಿಮಾದ ಉತ್ತುಂಗದಲ್ಲಿರುವಾಗಲೇ ಮದುವೆಯಾಗುವ ಮನಸ್ಸು ಮಾಡಿದ್ದರು ಅನುಷ್ಕಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಅವರ ಜೊತೆ ಇವರ ಮದುವೆಯಾಗಿದ್ದು, ಈ ರೊಮಾಂಟಿಕ್ ಜೋಡಿಗೆ 2021ರಲ್ಲಿ ವಾಮಿಕಾ ಎಂಬ ಮಗಳು ಜನಿಸಿದಳು.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆ, ಪತಿ ವಿರಾಟ್ ಕೊಹ್ಲಿ (Virat Kohli) ಪ್ರೀತಿಯ ವಿಶ್ ಮಾಡಿದ್ದರು. ಪತ್ನಿಯ ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದರು. ವಿರಾಟ್ ಕೊಹ್ಲಿ ಶೇರ್ ಮಾಡಿರುವ ಪತ್ನಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹುಟ್ಟುಹಬ್ಬ ಮುಗಿದು ದಿನವಾದರೂ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಹರಿದುಬರುತ್ತಿದೆ. 'ನಿನ್ನೆಲ್ಲ ಹುಚ್ಚುತನವನ್ನು ಪ್ರೀತಿಸುತ್ತೇನೆ. ನೀನು ನನಗೆ ಎಲ್ಲಾ. ಹುಟ್ಟುಹಬ್ಬ ಶುಭಾಶಯಗಳು' ಎಂದು ಶೀರ್ಷಿಕೆ ಕೊಟ್ಟು ವಿರಾಟ್ ಕೊಹ್ಲಿ ಫೋಟೋ ಶೇರ್ ಮಾಡಿದ್ದರು.
VIRUSHKA: ಮದ್ವೆಗೂ ಮುಂಚೆಯೇ ಬ್ರೇಕಪ್! ಇವರದ್ದು ಕುತೂಹಲದ Love Story
ಈ ಫೋಟೋಗಳಲ್ಲಿ ಒಂದು ಫೋಟೋ ಇದೀಗ ಪ್ರತ್ಯೇಕವಾಗಿ ವೈರಲ್ (Viral) ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಫೋಟೋದಲ್ಲಿ ಅನುಷ್ಕಾ ಕೆಂಪು ಬಣ್ಣದ ಬಟ್ಟೆ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಅವರ ಒಳ ಉಡುಪು ಕಾಣಿಸುತ್ತಿಲ್ಲ ಎನ್ನುವುದು ನೆಟ್ಟಿಗರ ಕಣ್ಣುಕುಕ್ಕಿದೆ. ದೀಪಿಕಾ ಪಡುಕೋಣೆಯ ಬೇಷರಂ ರಂಗ್ ಹಾಡಿನಲ್ಲಿ ಆಕೆ ಬಿಕಿನಿ ಧರಿಸಿದ್ದ ಫೋಟೋ ವೈರಲ್ ಆಗಿತ್ತು. ಅದನ್ನೂ ಅನುಷ್ಕಾ ಅವರ ಈ ಫೋಟೋಗೆ ಕಂಪೇರ್ ಮಾಡಲಾಗಿದೆ. ಹಣಕ್ಕಾಗಿ ಹೀಗೆಲ್ಲಾ ಮಾಡ್ತಾರೆ, ಆದರೆ ನೀವು ಕೂಡ ಹೀಗೆ ಮಾಡುವುದು ಸರಿಯಲ್ಲ, ಇಂಥ ಡ್ರೆಸ್ ಹಾಕಿಕೊಂಡು ಫೋಟೋಗೆ ಪೋಸ್ ಕೊಡುವುದು ಎಷ್ಟು ಸರಿ, ನಿಮ್ಮ ಅಭಿಮಾನಿಗಳಿಗೆ ಇದೆಂಥ ಸಂದೇಶ ಕೊಡುತ್ತಿದ್ದೀರಿ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ನಿಮ್ಮ ಪತ್ನಿಯ ಫೋಟೋಶೂಟ್ (Photoshoot) ಮಾಡಿರುವ ಮೊದಲು ಅವರಿಗೆ ಒಂದು ಚಡ್ಡಿ ಕೊಡಿಸಬಾರದಿತ್ತೆ ಎಂದು ಕೆಲವರು ವಿರಾಟ್ ಕೊಹ್ಲಿಯವರ ಕಾಲೆಳೆಯುತ್ತಿದ್ದಾರೆ. ಅನುಷ್ಕಾ ಚಡ್ಡಿ ಹಾಕದೆ ಫೋಟೋಗೆ ಪೋಟ್ ಕೊಟ್ಟಿದ್ದನ್ನು ನೀವು ನೋಡೇ ಇಲ್ವಾ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಛೇ ಛೇ ಇಂಥ ಕೆಟ್ಟ ಫೋಟೋ ಅದೂ ನಿಮ್ಮದೇ ಪತ್ನಿಯ ಅಂಗ ಸಾರ್ವಜನಿಕಗೊಳಿಸಲು ನಿಮಗೆ ಹೇಗೆ ಮನಸ್ಸು ಬರುತ್ತಿದೆ ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.
2013 ರಲ್ಲಿ ಶಾಂಪೂ ಒಂದರ ಜಾಹೀರಾತಿನ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಭೇಟಿಯಾದರು. ಅನುಷ್ಕಾ ಅವರನ್ನು ಮೊದಲ ಸಲ ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ ಎಂದು ವಿರಾಟ್ ಈಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು. ಈ ವೇಳೆ ವಿರಾಟ್ ನರ್ವಸ್ ಆಗಿರುವುದು ಅನುಷ್ಕಾಗೆ ಅರ್ಥವಾಗಿತ್ತು. ಹೀಗಿರುವಾಗ ಅಲ್ಲಿನ ವಾತಾವರಣ ತಿಳಿಗೊಳಿಸಲು ಅನುಷ್ಕಾ ಜೋಕ್ ಹೇಳಿದ್ದರು. ಅಲ್ಲಿಂದಲೇ ಲವ್ ಶುರುವಾಗಿತ್ತು. ನಂತರ ಅವರು 11 ಡಿಸೆಂಬರ್ 2017 ರಂದು ವಿವಾಹವಾದರು. ಇಟಲಿಯ (Italy) ಲೇಕ್ ಕೊಮೊದಲ್ಲಿ ಇಬ್ಬರೂ ಮದುವೆಯಾಗಿದ್ದರು. ಈಗ ವಿರಾಟ್ ಮತ್ತು ಅನುಷ್ಕಾಗೆ ವಾಮಿಕಾ ಎಂಬ ಮುದ್ದು ಮಗಳಿದ್ದಾಳೆ.
Birthday Special: ಅಯೋಧ್ಯೆಯ ರಾಮನಿಗೂ, ನಟಿ ಅನುಷ್ಕಾ ಶರ್ಮಾರಿಗೂ ಜನ್ಮ ಜನ್ಮದ ನಂಟು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.