'ಸಾಲ ತೀರಿಸಲು ಆಗಿಲ್ಲ' ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕೊರಿಯೊಗ್ರಾಫರ್ ಚೈತನ್ಯ

By Shruthi KrishnaFirst Published May 1, 2023, 5:22 PM IST
Highlights

ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ತನ್ನ ಕೊನೆಯ ದಿನವೆಂದು ವಿಡಿಯೋ ಶೇರ್ ಮಾಡಿ ಚೈತನ್ಯ ಆತ್ಮಹತ್ಯೆಗೆ ಶರಣರಾಗಿದ್ದಾರೆ.

ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ತನ್ನ ಕೊನೆಯ ದಿನವೆಂದು ವಿಡಿಯೋ ಶೇರ್ ಮಾಡಿ ಚೈತನ್ಯ ಆತ್ಮಹತ್ಯೆಗೆ ಶರಣರಾಗಿದ್ದಾರೆ. ಡೀ ಡ್ಯಾನ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದ ಚೈತನ್ಯ  ಬಳಿಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಏಪ್ರಿಲ್ 30ರಂದು ಚೈತನ್ಯ ಕೊನೆಯುಸಿರೆಳೆದರು. ಸಾಯುವ ಮುನ್ನ ಕೊನೆಯದಾಗಿ ಚೈತನ್ಯ ಮಾಡಿದ ಭಾವನಾತ್ಮಕ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಮಾಡಿದ್ದ ಚೈತನ್ಯ ತೀರಿಸಲಾಗದೆ ಹಣಕಾಸಿನ ಸಮಸ್ಯೆಯಿಂದ ಸಾಯುವ ನಿರ್ಧಾರ ತೆಗೆದುಕೊಂಡಿರುವುದಾಗಿ ವಿಡಿಯೋದಲ್ಲಿ ಬಹಿರಂಗ ಪಡಿಸಿದ್ದಾರೆ. 

ಸದ್ಯ ವೈರಲ್ ಆಗಿರುವ ಚೈತನ್ಯ ಕೊನೆಯ ವಿಡಿಯೋದಲ್ಲಿ, 'ನನ್ನ ತಾಯಿ, ತಂದೆ ಮತ್ತು ಸಹೋದರಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಮತ್ತು ನಾನು ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಖಚಿತಪಡಿಸಿಕೊಂಡರು. ನನ್ನ ಎಲ್ಲಾ ಸ್ನೇಹಿತರಿಗೆ ನನ್ನ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ. ನಾನು ಅನೇಕ ಜನರಿಗೆ ತೊಂದರೆ ನೀಡಿದ್ದೇನೆ ಮತ್ತು ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ' ಎಂದು ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಇದೇ ವಿಡಿಯೋದಲ್ಲಿ ಹಣದ ಸಮಸ್ಯೆ ಬಗ್ಗೆಯೂ ವಿವರಿಸಿದ್ದಾರೆ. 

ಫುಟ್‌ಬಾಲ್ ಫೀಲ್ಡ್‌ನಲ್ಲೇ ಕುಸಿದು ಬಿದ್ದು ಮಲಯಾಳಂ ಖ್ಯಾತ ನಟ ಮಾಮುಕ್ಕೋಯ ನಿಧನ

Latest Videos

'ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ನಾನು ನನ್ನ ಒಳ್ಳೆಯತನವನ್ನು ಕಳೆದುಕೊಂಡೆ. ಕೇವಲ ಸಾಲ ತೆಗೆದುಕೊಳ್ಳುವುದಲ್ಲ, ಅದನ್ನು ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರಬೇಕು. ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಪ್ರಸ್ತುತ, ನಾನು ನೆಲ್ಲೂರಿನಲ್ಲಿ ಇದ್ದೇನೆ ಮತ್ತು ಇದು ನನ್ನ ಕೊನೆಯ ದಿನವಾಗಿದೆ. ನನ್ನ ಸಾಲಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾನು ಸಹಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

This is unexpected master, Suicide isn't a solution,u are such a talented soul yet couldn't understand how u could do this. It needs lot of guts to commit suicide,u could've used that courage to solve your problems,Super angry&sad on ur death pic.twitter.com/6CpAkNvCn4

— Vamc Krishna (@lyf_a_zindagi)

ನೃತ್ಯ ನಿರ್ದೇಶಕ ಚೈತನ್ಯ ವಿಡಿಯೋ ಶೇರ್ ಮಾಡಿ ನೆಟ್ಟಿಗರು, 'ಎಲ್ಲದಕ್ಕೂ ಆತ್ಮಹತ್ಯೆ ಒಂದೆ ಪರಿಹಾರವಿಲ್ಲ' ಎಂದು ಹೇಳುತ್ತಿದ್ದಾರೆ. 'ನಿಮ್ಮಂತ ಪ್ರತಿಭಾವಂತ ವ್ಯಕ್ತಿ ಹೀಗೆ ಹೇಗೆ ಮಾಡಿದ್ರಿ' ಎಂದು ಪ್ರಶ್ನೆ ಮಾಡುತ್ತಿದ್ದಾರೆ. 'ಆತ್ಮಹತ್ಯೆ ಮಾಡಿಕೊಳ್ಳಲು ಸಾಕಷ್ಟು ಧೈರ್ಯ ಬೇಕು, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನೀವು ಆ ಧೈರ್ಯವನ್ನು ಬಳಸಬಹುದಿತ್ತು' ಎಂದು ಹೇಳುತ್ತಿದ್ದಾರೆ. 'ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಅಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಲು ಸಾಧ್ಯವಿಲ್ಲ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
 

click me!