ತಮ್ಮ ಲುಕ್‌ನಿಂದ ಮೊದಲ ಸಲವೇ ರಿಜೆಕ್ಟ್ ಆದ ಟಾಪ್ ನಟಿಯರಿವರು

Suvarna News   | Asianet News
Published : Mar 02, 2021, 03:11 PM ISTUpdated : Mar 20, 2021, 08:53 AM IST
ತಮ್ಮ ಲುಕ್‌ನಿಂದ ಮೊದಲ ಸಲವೇ ರಿಜೆಕ್ಟ್ ಆದ ಟಾಪ್ ನಟಿಯರಿವರು

ಸಾರಾಂಶ

ಬಾಲಿವುಡ್‌ನಲ್ಲಿ ಹೈಲೀ ಸಕ್ಸಸ್‌ಫುಲ್ ಆಗಿರೋ ಕೆಲವು ನಟಿಯರು, ತಮ್ಮ ಮೊದಲ ಆಡಿಷನ್‌ ಅಥವಾ ಮೊದಲ ಲುಕ್‌ನಲ್ಲಿ ಔಟ್‌ರೈಟ್ ರಿಜೆಕ್ಟ್ ಆಗಿದ್ರು ಅನ್ನೋದು ನಿಮಗೆ ಗೊತ್ತೆ?

ಬಾಲಿವುಡ್‌ ವಿಚಿತ್ರ ನೆಲ. ಇಲ್ಲಿ ಯಶಸ್ಸು ಹುಡುಕಿ ಬಂದೋರಲ್ಲಿ ಹಲವರು ಯಶಸ್ವಿಯಾಗ್ತಾರೆ. ಹಲವರು ಆಗೋಲ್ಲ. ಕೆಲವರು ಎಷ್ಟೇ ಸುಂದರ- ಸುಂದರಿಯಾಗಿದ್ರೂ ಬಾಲಿವುಡ್‌ ಅವರನ್ನು ರಿಜೆಕ್ಟ್ ಮಾಡುತ್ತೆ.

ಇನ್ನು ಕೆಲವರು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲದಿದ್ರೂ ಹೈಲೀ ಸಕ್ಸಸ್ ಅನ್ನಿಸಿಕೊಳ್ತಾರೆ. ಹಾಗೆ ಮೊದಲ ನೋಟಕ್ಕೆ ರಿಜೆಕ್ಟ್ ಆಗಿ ನಂತರ ಸಕ್ಸಸ್ ಅನ್ನಿಸಿಕೊಂಡವರ ಕತೆಯಿದು.

ಅನುಷ್ಕಾ ಶರ್ಮಾ
ನಿಮಗೆ ಗೊತ್ತಿರಲಿಕ್ಕಿಲ್ಲ. ಅನುಷ್ಕಾ ಶರ್ಮ ಅವರ ಹದಿನೈದನೇ ವಯಸ್ಸಿನಿಂದಲೂ ರಿಜೆಕ್ಷನ್ ಅಥವಾ ತಿರಸ್ಕಾರವನ್ನು ಎದುರಿಸುತ್ತಾ ಬೆಳೆದು ಬಂದಿದ್ದಾಳೆ. ಈಕೆಯ ಕಾಲೇಜು ದಿನಗಳಲ್ಲೂ ಈಕೆ ಅಂಥ ಸುಂದರಿ ಅಂತ ಖ್ಯಾತಳಾಗಿರಲಿಲ್ಲ. ಬಾಲಿವುಡ್‌ನಲ್ಲೂ ತಾನು ಎಡತಾಕಿದ ಹಲವು ಫಿಲಂಗಳಿಂದ ಈಕೆ ತಿರಸ್ಕೃತಳಾದಳು.

'ನಿನ್ನ ಲುಕ್ ಸರಿಯಿಲ್ಲ, ಈ ಪಾತ್ರಕ್ಕೆ ನಿನ್ನ ಲುಕ್ ಸರಿಯಿಲ್ಲ' ಎಂಬ ಮಾತುಗಳನ್ನು ಕೇಳುತ್ತಾ ಈಕೆ ಬೆಳೆದಳು. ನಂತರ ಅದನ್ನು ಸಮರ್ಥಿಸುವ ಮಾತುಗಳು ಬರುತ್ತಿದ್ದವು. ನೀನು ಸುಂದರಿಯಲ್ಲ ಎಂಬುದನ್ನು ಇನ್‌ಡೈರೆಕ್ಟ್ ಆಗಿ ಹೇಳಬೇಡಿ, ನೇರವಾಗಿಯೇ ಹೇಳಿ ಅಂತ ಆಕೆ ಹೇಳುತ್ತಿದ್ದಳು. ಇವಳು ಮೊದಲ ಬಾರಿಗೆ ಹೀರೋಯಿನ್ ಆಗಿ ಶಾರುಕ್ ಖಾನ್ ಜೊತೆಗೆ ನಟಿಸಿದ ರಬ್ ನೆ ಬನಾ ದೀ ಜೋಡಿ ಫಿಲಂನಲ್ಲಿ, ಈಕೆಯನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದ. ಅವನು ಹೇಳುತ್ತಿದ್ದನಂತೆ- ನೀನು ತುಂಬಾ ಸುಂದರಿ ಅಂತೇನೂ ಅಲ್ಲ. ನಾನು ನಿನ್ನನ್ನು ಹಾಕಿಕೊಂಡಿರೋದು ನಿನ್ನಲ್ಲಿರುವ ಪ್ರತಿಭೆಯ ಕಾರಣಕ್ಕಾಗಿ ಅಂತ.

ಹೆರಿಗೆ ನಂತರ ತನ್ನ ಮೊದಲ ಫೋಟೋ ಶೇರ್ ಮಾಡಿದ ಕರೀನಾ ...

ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ ಈಗಲೂ ಅಂಥ ಸುಂದರಿ ಏನಲ್ಲ. ಆದರೆ ಆಕೆಯ ಪ್ರತಿಭೆಯೇ ಆಕೆಯ ಸೌಂದರ್ಯದ ಕೊರತೆಯನ್ನು ಮುಚ್ಚಿ ಹಾಕುತ್ತದೆ. ಬಾಲಿವುಡ್‌ನಲ್ಲಿ ಮೊದಲ ಬಾರಿಗೆ ಈಕೆಗೆ ವಿಕ್ಕಿ ಡೋನರ್ ಫಿಲಂನಲ್ಲಿ ಯಾಮಿ ಗೌತಮ್ ಮಾಡಿದ ಪಾತ್ರವನ್ನು ಆಫರ್ ಮಾಡಲಾಗಿತ್ತು. ಆದರೆ ಆಗ, ಈಕೆಯನ್ನು ಬೇಕಾದುದಕ್ಕಿಂತ ಒಂದೆರಡು ಕಿಲೋ ಜಾಸ್ತಿ ತೂಕವಿದ್ದಾಳೆ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡಲಾಗಿತ್ತು.

ಸುಂದರ ವಧುವಾದ ಸನ್ನಿ: ನನ್ನ ಮದ್ವೆಯಾಗಿ ಎಂದ ಹಾಟ್ ನಟಿ ...

ಇದರಿಂದ ರಾಧಿಕಾಗೆ ತುಂಬಾ ಹರ್ಟ್ ಆಗಿತ್ತು. ಇದರಿಂದ ಕೋಪಗೊಂಡ ರಾಧಿಕಾ ಒಂದು ತಿಂಗಳು ರಜೆ ತಗೊಂಡು, ಸಾಕಷ್ಟು ಬಿಯರ್ ಕುಡಿದು, ತಿಂಡಿ ಸೇವಿಸಿ ಇನ್ನಷ್ಟು ತೂಕ ಹೆಚ್ಚಿಸಿಕೊಂಡಿದ್ದಳು. ನಂತರ ಅದನ್ನು ಇಳಿಸುವ ಶಪಥವನ್ನೂ ತೊಟ್ಟು, ಹಾಗೇ ಮಾಡಿದಳು. ಆದರೆ ಆ ಮೊದಲ ರಿಜೆಕ್ಷನ್‌ನ ನೋವು ಹೋಗಲಿಲ್ಲವಂತೆ.

ಕೊಂಕಣಾ ಸೇನ್ ಶರ್ಮಾ


ಈಕೆ ಸುಂದರ ಬಂಗಾಳಿ ಚೆಲುವೆ. ಆದರೆ ಈಕೆಯ ಮೈಬಣ್ಣ ಕಪ್ಪು. ಬಿಳಿ ಮೈಬಣ್ಣದ ಬಗ್ಗೆ ಒಬ್ಸೆಸಿವ್ ಆಗಿರುವ, ಗೀಳು ಹಚ್ಚಿಕೊಂಡಿರುವ ಬಾಲಿವುಡ್‌ನಲ್ಲಿ ಕೊಂಕಣಾ ಬದುಕುವುದು ಕಷ್ಟವೇ ಆಗಿತ್ತು. ಆರಂಭದಲ್ಲಿ ಅನೇಕ ನಿರ್ದೇಶಕರು ಈಕೆಯನ್ನು ನೋಡಿದ ಕೂಡಲೇ, ಈಕೆಯ ಅಭಿನಯ ಪ್ರತಿಭೆಯನ್ನು ನೋಡುವುದಕ್ಕೂ ಮೊದಲೇ ತಕ್ಷಣ ತಿರಸ್ಕರಿಸಿದರು. ಆ ನೋವು ಇನ್ನು ಕೊಂಕಣಾಳಲ್ಲಿ ಉಳಿದುಕೊಂಡಿದೆ. ಆದರೆ ವಸ್ತುಸ್ಥಿತಿ ನಿಧಾನವಾಗಿ ಬದಲಾಯಿತು. ಯಾವಾಗ ಹೇಗೆ ಬದಲಾಯಿತೋ ಹೇಳಲು ಸಾಧ್ಯವಿಲ್ಲ. ಆದರೆ ಈಕೆಯ ಪ್ರತಿಭೆಯನ್ನು ಬಾಲಿವುಡ್ ಗುರುತಿಸಿತು.

ಮಾಫಿಯಾ ಕ್ವೀನ್ ಮೇಲೆ 2 ಬಾರಿ ಗ್ಯಾಂಗ್ ರೇಪ್: ಇದು ಗಂಗೂಬಾಯಿ ಕಥೆ ...

ನಂದಿತಾ ದಾಸ್

ನಂದಿತಾ ದಾಸ್ ಕೂಡ ಬಂಗಾಳಿ ಚೆಲುವೆಯೇ. ಈಕೆಯ ಮೈಬಣ್ಣ ಕೂಡ ಕಪ್ಪು. ಈಕೆಯೂ ಕೊಂಕಣಾ ಸೇನ್ ಥರ ಸಾಕಷ್ಟು ತಿರಸ್ಕಾರ ಅನುಭವಿಸಿದಳು. ಅದರ ಬಗ್ಗೆ ಕಹಿಯನ್ನೂ ಮನಸ್ಸಿನಲ್ಲಿ ಉಳಿಸಿಕೊಂಡಿರುವ ನಂದಿತಾ, ಡಾರ್ಕ್ ಈಸ್ ಬ್ಯೂಟಿಫುಲ್ ಬ್ರಿಗೇಡ್‌ನಲ್ಲೂ ಗುರುತಿಸಿಕೊಂಡಿದ್ದಾಳೆ. ''ದಲಿತ ಹುಡುಗಿ, ಸ್ಲಮ್‌ನ ಹುಡುಗಿ, ಅಶಿಕ್ಷಿತ ಹೆಣ್ಣುಮಗಳ ಪಾತ್ರ ಇದ್ದಾಗ ನನ್ನ ಮೈಯ ಕಲರ್ ಇವರಿಗೆ ಓಕೆ. ಆದರೆ ಮೇಲ್ಜಾತಿಯ ಹೆಣ್ಣುಮಗಳ ಪಾತ್ರವಿದ್ದಾಗ ಯಾರಾದರೊಬ್ಬರು ಬಂದು, ನಿನ್ನ ಮೈಬಣ್ಣ ಇನ್ನೂ ಸ್ವಲ್ಪ ಬಿಳಿಯಾಗಿರಬೇಕಿತ್ತು ಎಂದು ಹೇಳುವುದನ್ನು ಪ್ರತಿಸಲವೂ ಅನುಭವಿಸಿದ್ದೇನೆ'' ಎನ್ನುತ್ತಾರೆ ನಂದಿತಾ.

ತಾಪ್ಸಿ ಪನ್ನು

ದಕ್ಷಿಣದ ಬೇಡಿಕೆಯ ನಟಿಯಾದ ತಾಪ್ಸಿ ಪನ್ನು ಕೂಡ ಬಾಲಿವುಡ್‌ನಲ್ಲಿ ಸಾಕಷ್ಟು ತಿರಸ್ಕಾರ ಅನುಭವಿಸಿದ್ದಾಳೆ. ಅದಕ್ಕೆ ಆಕೆ ಪಡೆದಿರುವ ಕಾರಣಗಳೂ ತುಂಬ ವಿಚಿತ್ರವಾಗಿವೆ. 'ನಿನಗೆ ಮಾರ್ಕೆಟೇಬಲ್ ಖ್ಯಾತಿ ಸಾಕಷ್ಟು ಇಲ್ಲ' 'ನೀನು ಈ ಪಾತ್ರಕ್ಕೆ ಸೂಟ್ ಆಗೋಲ್ಲ' 'ನೀನು ಉತ್ತರ ಭಾರತೀಯಳ ಥರ ಕಾಣೊಲ್ಲ' 'ನೀನು ಸಾಕಷ್ಟು ಗ್ಲಾಮರಸ್ ಇಲ್ಲ' 'ನಿನ್ನ ಮೂಗು ಸರಿಯಿಲ್ಲ' ಎನ್ನುವುದೆಲ್ಲ ಇಂಥ ಕಾರಣಗಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?