ನಟಿಯಾಗೋಕೆ ಮನೆಬಿಟ್ಟು ಮುಂಬೈಗೆ ಬಂದಾಕೆ ಸಿಕ್ಕಿಹಾಕಿಕೊಂಡಿದ್ದು ಕಾಮಾಟಿಪುರದಲ್ಲಿ. ಪವರ್ಫುಲ್ ಮಾಫಿಯಾ ಕ್ವೀನ್ ಆಗಿ ಬೆಳೆಯೋ ಮುನ್ನ ಆಕೆಯ ಮೇಲೆ ಎರಡು ಬಾರಿ ಗ್ಯಾಂಗ್ರೇಪ್ ಆಗಿತ್ತು. ಕಥಿಯಾವಾಡ್ನಿಂದ ಬಂದ ಬಾಲೆ ಕಾಮಾಟಿಪುರದಲ್ಲಿ ಸಿಕ್ಕಿಹಾಕಿಕೊಂಡಿದ್ದಳು.

ಅಲ್ಲಿ ಭೂಗತಲೋಕದ ತಂಡವೊಂದರಿಂದ ಕ್ರೂರವಾಗಿ ಸಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು ಗಂಗೂಬಾಯಿ. ಇದರಿಂದ ಸಿಟ್ಟಿಗೆದ್ದ ಆಕೆ ತನ್ನ ಮೇಲೆ ರೇಪ್ ಮಾಡಿದ ತಂಡದ ಲೀಡರ್ನ ಬಾಸ್ನನ್ನು ಭೇಟಿಯಾಗಿದ್ದಳು.

ನಟಿಯಾಗೋಕೆ ಮನೆಬಿಟ್ಟು ಮುಂಬೈಗೆ ಬಂದವಳನ್ನು 500 ರೂಪಾಯಿಗೆ ಮಾರಿದ

ಬಾಸ್ ಕರೀಂಲಾಲ್ನನ್ನು ಭೇಟಿಯಾದ ಆಕೆ ತನ್ನ ಮೇಲೆ ಅತ್ಯಾಚಾರವಾಗಿರುವ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಳು. ಆತನನ್ನು ಸಹೋದರನಾಗಿ ಸ್ವೀಕರಿಸಿ ಆತನಿಗೆ ರಾಖಿ ಕಟ್ಟಿದ್ದಳು. ಅತ್ಯಾಚಾರ ಮಾಡಿದಾತನನ್ನು ಕ್ರೂರವಾಗಿ ದಂಡಿಸಿದ ಕರೀಂ ಲಾಲ್ ಗಂಗೂಬಾಯಿಯನ್ನು ಸಹೋದರಿಯಾಗಿ ಸ್ವೀಕರಿಸಿದ್ದನು. ಈ ಘಟನೆಯ ನಂತರ ಗಂಗೂಬಾಯಿಯ ರೇಂಜ್ ಬದಲಾಯಿತು.
ಕಾಮಾಟಿಪುರದ ಮ್ಯಾಡಮ್:

ಕಾಮಾಟಿಪುರದಲ್ಲಿ ವೇಶ್ಯೆಯಾಗಿ ಜೀವನ ಆರಂಭಿಸಿದಾಕೆಗೆ ನಂತರ ಆ ನಗರದಲ್ಲಿಯೇ ಹೆಚ್ಚು ಗೌರವ ಸಿಗಲಾರಂಭಿಸಿತು. ಭೂಗತ ಜಗತ್ತಿನೊಂದಿಗೆ ಬಹಳ ಗಟ್ಟಿ ಸಂಬಂಧವನ್ನಿಟ್ಟುಕೊಂಡಿದ್ದಳು ಈಕೆ.

ಅಲಿಯಾ ಭಟ್ ಗಂಗೂಬಾಯಿ ಅವತಾರಕ್ಕೆ ಬಿಟೌನ್ ಶಾಕ್!

ಅಕ್ರಮ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಿ, ಯಾವ ಯುವತಿಯನ್ನೂ ಆಕೆಯ ಇಚ್ಛೆಗೆ ವಿರುದ್ಧವಾಗಿ ವೇಶ್ಯಾವಾಟಿಗೆ ತಳ್ಳಲಿಲ್ಲ. ಉದ್ಯಮ ಮತ್ತು ಸಂಪತ್ತಿನಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವುದನ್ನೇ ಗಂಗೂಬಾಯಿ ನಂಬಿದ್ದಳು.

ಇದೀಗ ರಿಲೀಸ್ ಆಗಲಿರುವ ಸಿನಿಮಾ ಗಂಗೂಬಾಯಿ ಹಥಿಯಾವಾಡಿಯಲ್ಲಿ ಪ್ರಿಯಾಂಕ ಲೀಡ್ ರೋಲ್ ಮಾಡಬೇಕಿತ್ತು. ಸಿನಿಮಾ ಹೆಸರು ಹೀರಾ ಮಂಡಿ ಎಂದಿರಬೇಕಾಗಿತ್ತು. ಆದರೆ ನಂತರದಲ್ಲಿ ಪಾತ್ರ ಆಲಿಯಾ ಭಟ್ ತೆಕ್ಕೆ ಸೇರಿತು. ಸಿನಿಮಾ ಹೆಸರೂ ಬದಲಾಯಿತು.

ಗಂಗುಬಾಯಿ ಕಥಿಯಾವಾಡಿ - ಸೆಲಬ್ರೆಟಿಗಳಿಂದ ಆಲಿಯಾಗೆ ಮೆಚ್ಚುಗೆ ಸುರಿಮಳೆ!

ಸಿನಿಮಾ ಜುಲೈ 30ರಂದು ತೆರೆ ಕಾಣಲಿದ್ದು, ಇದರಲ್ಲಿ ವಿಜಯ್ ರಾಝ್, ಇಂದಿರಾ ತಿವಾರಿ, ಅಜಯ್ ದೇವಗನ್, ಇಮ್ರಾನ್ ಹಶ್ಮಿ ಕೂಡಾ ನಟಿಸಲಿದ್ದಾರೆ. ನಟಿ ಹುಮಾ ಖುರೇಷಿ ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.