ನಟಿ ಅಮೃತಾಗೆ ನಿನ್ನ ಪಿರಿಯಡ್ಸ್ ದಿನಾಂಕವೇನು ಎಂದು ಕೇಳಿದ್ದ ಅನುರಾಗ್ ಕಶ್ಯಪ್!

Published : Oct 06, 2024, 01:44 PM ISTUpdated : Oct 06, 2024, 02:55 PM IST
ನಟಿ ಅಮೃತಾಗೆ ನಿನ್ನ ಪಿರಿಯಡ್ಸ್ ದಿನಾಂಕವೇನು ಎಂದು ಕೇಳಿದ್ದ ಅನುರಾಗ್ ಕಶ್ಯಪ್!

ಸಾರಾಂಶ

ಬಾಲಿವುಡ್‌ನ ಪ್ರಸಿದ್ಧ ವೆಬ್ ಸರಣಿ ‘ಸೇಕ್ರೆಡ್ ಗೇಮ್ಸ್’ ಚಿತ್ರೀಕರಣದ ವೇಳೆ ಅನುರಾಗ್ ಕಶ್ಯಪ್ ನಟಿ ಅಮೃತಾ ಸುಭಾಷ್ ಅವರ ಪೀರಿಯಡ್ಸ್ ದಿನಾಂಕವನ್ನು ಕೇಳಿದ್ದರು.   

ಮುಂಬೈ (ಅ.06): ಬಾಲಿವುಡ್‌ನ ಪ್ರಸಿದ್ಧ ನಟ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ಅವರು, ನಟಿ ಅಮೃತಾ ಸುಭಾಷ್ ಅವರಿಗೆ ಚಿತ್ರೀಕರಣದ ವೇಳೆ ನಿನ್ನ ಪಿರಿಯರಡ್ಸ್ ದಿನಾಂಕವೇನು ಎಂದು ಕೇಳಿದ್ದರು. 

ಬಾಲಿವುಡ್ ಪ್ರಸಿದ್ಧ ನಟಿ ಅಮೃತಾ ಸುಭಾಷ್ ಅವರು ಹಲವಾರು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳ ಮೂಲಕ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಒಂದು ಸ್ಥಾನ ಸೃಷ್ಟಿಸಿಕೊಂಡಿದ್ದಾರೆ. ವೆಬ್ ಸರಣಿಗಳಾದ 'ಲಸ್ಟ್ ಸ್ಟೋರೀಸ್ 2', 'ಸೇಕ್ರೆಡ್ ಗೇಮ್ಸ್' ಮುಂತಾದವುಗಳಿಂದ ಅವರಿಗೆ ಹೆಚ್ಚಿನ ಜನಪ್ರಿಯತೆ ದೊರೆಯಿತು. ಇದನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದರು. 'ಸೇಕ್ರೆಡ್ ಗೇಮ್ಸ್' ಚಿತ್ರೀಕರಣದ ವೇಳೆ ಅನುರಾಗ್ ತಮಗೆ ತುಂಬಾ ಕಂಫರ್ಟೇಬಲ್ ಆಗಿ ಇರಲು ಸಹಾಯ ಮಾಡಿದ್ದರು ಎಂದು ಅಮೃತಾ ಒಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ವೆಬ್ ಸರಣಿ ಶೂಟಿಂಗ್ ವೇಳೆ ಅನುರಾಗ್ ಕಶ್ಯಪ್ ಅವರು ನನಗೆ ನಿನ್ನ ಪೀರಿಯಡ್ಸ್ ದಿನಾಂಕ ಏನು ಎಂದೆಲ್ಲಾ ಕೇಳುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಪೀರಿಯಡ್ಸ್ ದಿನಾಂಕ ಕೇಳಿದ್ಯಾಕೆ ಗೊತ್ತಾ?
ನಟಿ ಅಮೃತಾ ಅವರು ತಮಗೆ ಗಂಡನನ್ನು ಬಿಟ್ಟು ಬೇರೊಬ್ಬ ಗಂಡಸು ಪಿರಿಯಡ್ಸ್ ದಿನಾಂಕವನ್ನು ಕೇಳಿದ್ದ ವಿಚಾರವನ್ನು ಬಹಿರಂಗಪಡಿಸುತ್ತಾ, 'ನನ್ನ ಮೊದಲ ಸೆಕ್ಸ್ ದೃಶ್ಯವನ್ನು ಸೇಕ್ರೆಡ್ ಗೇಮ್ಸ್ 2 ರಲ್ಲಿ ಅನುರಾಗ್ ಅವರೊಂದಿಗೆ ಚಿತ್ರೀಕರಿಸಿದ್ದೆನು. ಅನುರಾಗ್ ಕಶ್ಯಪ್ ಅವರು ವೆಬ್ ಸರಣಿಯಲ್ಲಿ ನಟಿಸುತ್ತಿದ್ದ ಎಲ್ಲರ ಬಗ್ಗೆಯೂ ತುಂಬಾ ಕಾಳಜಿ ವಹಿಸುತ್ತಿದ್ದು. ಜೊತೆಗೆ, ಎಲ್ಲ ದೃಶ್ಯಗಳ ಚಿತ್ರೀಕರಣದಲ್ಲಿಯೂ ತುಂಬಾ ಸೂಕ್ಷ್ಮವಾಗಿರುತ್ತಾರೆ. ಚಿತ್ರೀಕರಣದ ವೇಳೆ ಅವರು ನನ್ನ ಬಳಿ ಬಂದು ನಿಮ್ಮ ಪೀರಿಯಡ್ಸ್ ದಿನಾಂಕ ಯಾವಾಗ ಎಂದು ಕೇಳಿದರು? ಎಂದು ಕೇಳಿದ್ದರು ಎಂಬುದನ್ನು ತಿಳಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ವಿಚಾರ: ಕಲರ್ಸ್ ಕನ್ನಡ ವಾಹಿನಿಗೆ ಎಚ್ಚರಿಕೆ ಕೊಟ್ಟ ವಕೀಲರ ಸಂಘ!

ಇನ್ನು ಒಂದು ವೆಬ್ ಸರಣಿ ನಿರ್ದೇಶಕರಾಗಿ ನಟಿಗೆ ಹೀಗೆ ಯಾಕೆ ಕೇಳಿದರು ಎಂದು ಕೆಲಹೊತ್ತು ನಾನು ಸುಮ್ಮನಿದ್ದೆ. ಆಗ ಅವರು ವೆಬ್ ಸರಣಿಯಲ್ಲಿ ಸೆಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡುವಾಗ ನಿಮ್ಮ ಪಿರಿಯಡ್ಸ್ ಸಮಯದ ಹಿಂದೆ ಹಾಗೂ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ. ಆದ್ದರಿಂದ ನಿಮ್ಮ ಪಿರಿಯಡ್ಸ್ ದಿನಾಂಕ ಮತ್ತು ಅದರ ಹಿಂದೆ, ಮುಂದಿನ ದಿನಾಂಕಗಳನ್ನು ಇಂತಹ ದೃಶ್ಯಗಳ ಚಿತ್ರೀಕರಣ ನಿಗದಿಪಡಿಸುವುದಿಲ್ಲ ಎಂದು ಹೇಳಿದ್ದರು. ಮುಂದುವರೆದು, ನೀವು ನಿಮ್ಮ ಪೀರಿಯಡ್ಸ್ ಸಮಯದಲ್ಲಿ ಇದನ್ನು ಮಾಡುತ್ತೀರಾ ಎಂದೂ ಕೇಳಿದರು? ಎಂದು ತಿಳಿಸಿದರು. ಆದರೆ, ನಟಿ ಅಮೃತಾ ಅವರು ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಳ್ಳಲು ಲಿಂಗ ಸಂಬಂಧವಿಲ್ಲ. ಇದು ಒಬ್ಬ ಮಹಿಳೆ ಅಥವಾ ಪುರುಷನಾಗಿರುವುದಕ್ಕಿಂತ ಮುಖ್ಯವಾಗು ಅನುರಾಗ್ ತುಂಬಾ ಸೂಕ್ಷ್ಮ ವ್ಯಕ್ತಿ ಎಂದು ಹೇಳಿದರು.

ಇದನ್ನೂ ಓದಿ: ಕಿಚ್ಚ ಸುದೀಪ್‌ ಕ್ಲಾಸ್ ಗೆ ಲಾಯರ್ ಜಗದೀಶ್‌ ಗಪ್‌ಚುಪ್‌, ತುಟಿಕ್‌ ಪಿಟಿಕ್ ಅಂದಿಲ್ಲ!

ಅಮೃತಾ ಪತಿಯೇ ಸಹನಟನಿಗೆ ಸೆಕ್ಸ್ ದೃಶ್ಯ ಮಾಡಲು ಮನವೊಲಿಕೆ:  ನಟಿ ಅಮೃತಾ ಸುಭಾಷ್ 'ಲಸ್ಟ್ ಸ್ಟೋರೀಸ್ 2' ನಲ್ಲಿ ಅತ್ಯಂತ ಆಪ್ತ ಮತ್ತು ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ, ಅವರ ಸಹನಟ ಶ್ರೀಕಾಂತ್ ಯಾದವ್ ಅವರೊಂದಿಗೆ ನಿಕಟ ದೃಶ್ಯಗಳನ್ನು ಚಿತ್ರೀಕರಿಸಬೇಕಾಗಿತ್ತು. ಆದರೆ, ನನ್ನೊಂದಿಗೆ ಇಂತಹ ದೃಶ್ಯಗಳನ್ನು ಮಾಡುವುದಕ್ಕೆ ನಟ ಶ್ರೀಕಾಂತ್ ಯಾದವ್ ಕಂಫರ್ಟೇಬಲ್ ಆಗಿರಲಿಲ್ಲ. ಈ ವೇಳೆ ನನ್ನ ಪತಿಯೇ ನಟ ಶ್ರೀಕಾಂತ್ ಅವರಿಗೆ ಇದೆಲ್ಲವೂ ಒಂದು ದೃಶ್ಯ ಮಾತ್ರ ಎಂದು ಸಲಹೆ ನೀಡಲು ಹೋಗಿದ್ದರು. ನನ್ನ ಪತಿ ಹಾಗೂ ಶ್ರೀಕಾಂತ್ ಯಾದವು ಇಬ್ಬರೂ ಸ್ನೇಹಿತರಿದ್ದಾರೆ. ಆ ಸಮಯದಲ್ಲಿ ಅವರು ಶ್ರೀಕಾಂತ್ ಅವರಿಗೆ ನೀನು ಈ ದೃಶ್ಯಗಳನ್ನು ಮಾಡಬಹುದು. ಚೆನ್ನಾಗಿ ಮಾಡಬಹುದು ಎಂದು ಹೇಳಿದ್ದರು. ಅದಾದ ನಂತರ ಅವರು ಇಡೀ ದೃಶ್ಯವನ್ನು ಚೆನ್ನಾಗಿ ಚಿತ್ರೀಕರಿಸಿದರು' ಎಂದು ನಟಿ ಅಮೃತಾ ಸುಭಾಷ್ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!