ಖ್ಯಾತ ನಟ ಮಂಗಲ್ ಧಿಲ್ಲೋನ್ ಕ್ಯಾನ್ಸರ್ ನಿಂದ ನಿಧನ

By Shruthi KrishnaFirst Published Jun 11, 2023, 12:24 PM IST
Highlights

ಬಾಲಿವುಡ್ ಖ್ಯಾತ ನಟ ಮಂಗಲ್ ಧಿಲ್ಲೋನ್ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

ಬಾಲಿವುಡ್ ಖ್ಯಾತ ನಟ ಮಂಗಲ್ ಧಿಲ್ಲೋನ್ ಕ್ಯಾನ್ಸರ್ ನಿಂದ ನಿಧನಹೊಂದಿದ್ದಾರೆ. ಭಾನುವಾರ (ಜೂನ್ 11) ಬೆಳಗ್ಗೆ ನಟ ಮಂಗಲ್ ಧಿಲ್ಲೋನ್ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಂಗಲ್ ಧಿಲ್ಲೋನ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ ಬೆಡ್‌ಮೇಲೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟ ಮಂಗಲ್ ಧಿಲ್ಲೋನ್ ಇನ್ನೂ ನೆನಪು ಮಾತ್ರ. 

ಮಂಗಲ್ ನಿಧನಕ್ಕೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಮಂಗಲ್ ನಿಧನದ ಬಗ್ಗೆ ನಟ ಯಶಪಾಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.  'ಮಂಗಲ್ ಧಿಲ್ಲೋನ್ ಆತ್ಮಕ್ಕೆ ಶಾಂತಿ' ಎಂದು ಬರೆದುಕೊಂಡಿದ್ದಾರೆ. 

Latest Videos

ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. 'ಪ್ರಖ್ಯಾತ ನಟ, ಬರಹಗಾರ, ನಿರ್ದೇಶಕ ಮತ್ತು ಪಂಜಾಬಿ ಸಿನಿ ಉದ್ಯಮದ ನಿರ್ಮಾಪಕ ಶ್ರೀ ಮಂಗಲ್ ಧಿಲ್ಲೋನ್ ಅವರ ನಿಧನದ ಬಗ್ಗೆ ತಿಳಿದು ದುಃಖವಾಯಿತು. ಇದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಮನಮೋಹಕ ಧ್ವನಿ ಮತ್ತು ನಾಟಕಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ದುಃಖಿತ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ' ಎಂದು ಹೇಳಿದ್ದಾರೆ. 

ಮಂಗಲ್ ಧಿಲ್ಲೋನ್ ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಖ್ಯಾತಿಗಳಿಸಿದ್ದರು. ಸಿನಿಮಾ ಮತ್ತು ಕಿರುತೆರೆ ಎರಡನ್ನು ಸಮಾನವಾಗಿ ನಿಭಾಯಿಸಿಕೊಂಡು ಬಂದಿದ್ದರು. 1986 ರಲ್ಲಿ ಬುನಿಯಾದ್ ಶೋನಲ್ಲಿ ಲುಭಯಾ ರಾಮ್ ಪಾತ್ರವನ್ನು ನಿರ್ವಹಿಸಿದರು. 1988ರಲ್ಲಿ ಬಂದ ಸಿನಿಮಾ ಖೋನ್ ಭಾರಿ ಮಾಂಗ್‌ನಲ್ಲಿ ವಕೀಲರ ಪಾತ್ರದ ಮೂಲಕ ಸಿನಿಮಾದಲ್ಲಿ ಮೊದಲ ಬಾರಿಗೆ ಮಿಂಚಿದರು. ಜುನೂನನಲ್ಲಿ ಮಂಗಲ್ ಸುಮೇರ್ ರಾಜವಂಶ್ ಪಾತ್ರವನ್ನು ನಿರ್ವಹಿಸಿದರು. ಅವರು 2000 ರ ಟಿವಿ ಶೋ ನೂರ್ಜಹಾನ್‌ನಲ್ಲಿ ಅಕ್ಬರ್‌ನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

ಭೀಕರ ರಸ್ತೆ ಅಪಘಾತ: ಖ್ಯಾತ ಪೋಷಕ ನಟ, ಸಹಾಯಕ ನಿರ್ದೇಶಕ ಶರಣ್ ರಾಜ್ ನಿಧನ

ಸಿನಿಮಾಗಳು

ಪ್ಯಾರ್ ಕಾ ದೇವತಾ, ರಣಭೂಮಿ, ಸ್ವರ್ಗ ಯಹಾನ್ ನರಕ್ ಯಹಾನ್, ವಿಶ್ವಾತ್ಮ, ದಿಲ್ ತೇರಾ ಆಶಿಕ್, ಟ್ರೈನ್ ಟು ಪಾಕಿಸ್ತಾನ್ ಸೇರಿದಂತೆ ಅನೇಕರು ಸಿನಿಮಾಗಳಲ್ಲಿ ನಟಿಸಿದ್ದಾರೆ. 

click me!