ಆಸ್ಕರ್​ ರೇಸ್​ನಲ್ಲಿ ದಿ ಕಾಶ್ಮೀರ್ ಫೈಲ್ಸ್: 'Propaganda' ಎಂದವರಿಗೆ ಕಪಾಳಮೋಕ್ಷ

By Suvarna NewsFirst Published Jan 15, 2023, 5:56 PM IST
Highlights

ಕಾಶ್ಮೀರ್​ ಫೈಲ್ಸ್ ಆಸ್ಕರ್​ ಅಂಗಳದಲ್ಲಿ ಕಾಲಿಟ್ಟ ಬೆನ್ನಲ್ಲೇ ಈ ಚಿತ್ರವನ್ನು ವಿರೋಧಿಸಿದವರಿಗೆ ನಟ ಅನುಪಮ್​ ಖೇರ್​ ಹೇಳಿದ್ದೇನು?
 

ಕಳೆದ ವರ್ಷ ಮಾರ್ಚ್​ನಲ್ಲಿ ಬಿಡುಗಡೆಯಾದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಇನ್ನೂ ಕೆಲವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನರಮೇಧ ಹೇಗೆ ನಡೆದಿತ್ತು ಎಂದು ಎಳೆಎಳೆಯಾಗಿ ಕ್ರೌರ್ಯದ ಮುಖ ಬಿಚ್ಚಿಟ್ಟ ಈ ಚಿತ್ರದಲ್ಲಿ ತೋರಿಸಿರುವುದೆಲ್ಲಾ ಸುಳ್ಳು ಎಂದು ಒಂದು ವರ್ಗ ಇಂದಿಗೂ ಹೇಳುತ್ತಲೇ ಬಂದಿದೆ. ಇದರ ಬೆನ್ನಲ್ಲೇ ಇತ್ತೀಚೆಗೆ ಭಾರತದಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ (International Film Festival) ಇಸ್ರೇಲಿ ಫಿಲಂ ಮೇಕರ್ ನಡಾವ್ ಲ್ಯಾಪಿಡ್ ಅವರು 'ಈ ಚಿತ್ರ ಅಶ್ಲೀಲ ಹಾಗೂ ಪ್ರಚಾರ ಪ್ರಿಯ (Propoganda) ಸಿನಿಮಾ' ಎಂದಿದ್ದರು. 'ಇಷ್ಟೊಂದು ಘನತೆಯುಳ್ಳ ಫಿಲಂ ಫೆಸ್ಟಿವಲ್‌ನಲ್ಲಿ ಕಲೆ ಹಾಗೂ ಬದುಕಿನ ಬಗ್ಗೆ ವಿಮರ್ಶಾತ್ಮಕ ಚರ್ಚೆ ನಡೆಯಬೇಕು. ಆದರೆ ಸ್ಪರ್ಧಾತ್ಮಕ ಹಿನ್ನೆಲೆಯಿರುವ ಈ ಫೆಸ್ಟಿವಲ್‌ನಲ್ಲಿ ಇಂಥ ಚಿತ್ರಗಳು ಪ್ರದರ್ಶನವಾಗುವದು ಶೋಭೆಯಲ್ಲ' ಎಂದಿದ್ದರು. ಈ ಮಾತು ದೊಡ್ಡ ಕೋಲಾಹಲ ಎಬ್ಬಿಸಿತ್ತು. ಇದರ ಬಗ್ಗೆ ಸಾಕಷ್ಟು ಟೀಕೆ-ಟಿಪ್ಪಣೆಗಳು ಕೇಳಿಬಂದವು. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಈ ಮಾತು  ಇಸ್ರೇಲ್ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಕಿರಿಕಿರಿಗೂ ಕಾರಣವಾಗಿ, ಇಸ್ರೇಲಿ ರಾಯಭಾರಿ ಭಾರತೀಯರ ಕ್ಷಮೆಯಾಚಿಸಿದ್ದರು.

ಇದರ ಬೆನ್ನಲ್ಲೇ ಈಗ ಕಾಶ್ಮೀರ್​ ಫೈಲ್ಸ್​ ಆಸ್ಕರ್​ ಅಂಗಳಕ್ಕೆ ಹೋಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರವು ಆಸ್ಕರ್​ನ ‘ವಿದೇಶಿ ಭಾಷಾ ಚಿತ್ರ’ ವಿಭಾಗಕ್ಕೆ ಸ್ಪರ್ಧೆ ನೀಡಲು ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಬಹುದು ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾದಿಂದ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಯ್ಕೆ ಆಗಿದ್ದರಿಂದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ಅವಕಾಶ ಮಿಸ್​ ಆಗಿತ್ತು. ಆದರೆ ಈ ಚಿತ್ರ ಈಗ ನೇರವಾಗಿ ಆಸ್ಕರ್​ ಕಣದಲ್ಲಿ ಸ್ಪರ್ಧೆ ಮಾಡುತ್ತಿದೆ. ಜೊತೆಗೆ ಚಿತ್ರದ ನಾಯಕ ನಟರಾದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಆಸ್ಕರ್ 2023 ರಲ್ಲಿ ಎರಡು ವಿಭಾಗಗಳಲ್ಲಿ ಆಯ್ಕೆಯಾಗಿದ್ದಾರೆ.

ಕಾಶ್ಮೀರ್ ಫೈಲ್ಸ್ 'ವಲ್ಗರ್'- 'Propaganda' ಮೂವಿಯಾ? ಕಾಶ್ಮೀರಿ ಪಂಡಿತರು ಏನಂತಾರೆ?

ಈ ಬೆಳವಣಿಗೆಯ ನಂತರ ಚಿತ್ರದ ಇದೊಂದು ಪ್ರಚಾರ ಪ್ರಿಯ, ಅಶ್ಲೀಲ ಚಿತ್ರ ಎಂದವರ ಕಪಾಳಕ್ಕೆ ಬಾರಿಸುವಂತೆ ನಟ ಅನುಪಮ್​ ಖೇರ್​ ಹೇಳಿಕೆ ನೀಡಿದ್ದಾರೆ. ' ಆಸ್ಕರ್​ ಅಂಗಳಕ್ಕೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಹೋಗಿದೆ. ಈ ಚಿತ್ರವನ್ನು ಪ್ರಚಾರ ಪ್ರಿಯ ಚಿತ್ರ ಎಂದವರಿಗೆ  ಬಿಗಿಯಾದ ಕಪಾಳಮೋಕ್ಷವಾಗಿದೆ ಎಂದು ಅಂದುಕೊಳ್ಳುತ್ತೇನೆ ಎಂದಿದ್ದಾರೆ. ‘ಮೊದಲ ಹೆಜ್ಜೆ ಇಟ್ಟರೆ ಸಾವಿರ ಮೈಲುಗಳ ಪಯಣ’ ಅನ್ನಿಸುತ್ತದೆ. ಆಸ್ಕರ್​ ಅಂಗಳಕ್ಕೆ ಹೋಗಿ ಮೊದಲ ಹೆಜ್ಜೆ ಇಟ್ಟಿದೆ ಚಿತ್ರ. ಮುಂದೆ ಏನಾಗುತ್ತದೆಯೋ ಕಾದು ನೋಡೋಣ. ಆದರೆ ಈ ಚಿತ್ರದ ಬಗ್ಗೆ ಮಾತನಾಡಿದವರಿಗೆ ಇದು ಪಾಠವಾಗಿದೆ ಎಂದಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್ ಕೇವಲ ಚಲನಚಿತ್ರವಲ್ಲ. ಇದು ನರಮೇಧದಿಂದ ಬಳಲುತ್ತಿರುವ ಎಲ್ಲ ಜನರನ್ನು ಪ್ರತಿನಿಧಿಸುವ ಚಿತ್ರವಅಗಿದೆ.  ಚಿತ್ರವು ಯಾವಾಗಲೂ ಜನರ ಹೃದಯಕ್ಕೆ ಹತ್ತಿರವಾಗಿರಬೇಕು. ಅಂತೆಯೇ  ವಿವೇಕ್ ಅಗ್ನಿಹೋತ್ರಿ ಮತ್ತು ಚಿತ್ರದೊಂದಿಗೆ ಭಾಗಿಯಾಗಿರುವ ಎಲ್ಲ ಜನರು ಈ ಚಿತ್ರದಲ್ಲಿ ಇದನ್ನೇ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗಿನಿಂದ ಇದು ಒಂದು ವರ್ಗವನ್ನು ಬಹಳ ನೋಯಿಸುತ್ತಿದೆ. ಇವೆಲ್ಲಾ ಕಟ್ಟುಕಥೆ, ಇಂಥ ಘಟನೆ ಸಂಭವಿಸಿಯೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಅದನ್ನು ಸಾಬೀತು ಪಡಿಸಲೂ ನೋಡಿದರು. ಆದರೆ ಅದು ಸಾಧ್ಯವಾಗಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಇದು ಚಿಂದಿ ಉಡಾಯಿಸಿದಾಗ ಅದು ಕೂಡ ಕೆಲವರ ಅಸಮಾಧಾನಕ್ಕೆ ಕಾರಣವಾಯಿತು. ಚಿತ್ರದ  ನೈಜತೆಯನ್ನು ಅವಮಾನಿಸುವ ಪ್ರಯತ್ನವೂ ನಡೆಯಿತು. ಆದರೆ ಈಗ ಆಸ್ಕರ್​ ಅಂಗಳಕ್ಕೆ ಕಾಲಿಟ್ಟಿದ್ದರಿಂದ ಹೀಗೆಲ್ಲಾ ಹೇಳಿದವರಿಗೆ ಕಪಾಳಮೋಕ್ಷವಾಗಿದೆ' ಎಂದು ಅನುಪಮ್ ಖೇರ್​ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
 
'ಈ ಚಿತ್ರ ಕಾಶ್ಮೀರದಲ್ಲಿ ತಮ್ಮ ಮನೆಗಳಿಂದ ಹೊರಹಾಕಲ್ಪಟ್ಟ ಜನರನ್ನು ಮಾತ್ರವಲ್ಲದೆ 1.4 ಶತಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಜನ ಇದನ್ನು ಮೆಚ್ಚಿದ್ದಾರೆ. ಮರೆಮಾಚಲಾದ ಸತ್ಯವನ್ನು ಜನರ ಎದುರಿಗೆ ಇಟ್ಟಿದ್ದು, ಜನ ಈ ನೈಜ ಘಟನೆಗಳನ್ನು ಅರಿತಿದಿದ್ದಾರೆ. ಕಾಶ್ಮೀರಿ ಪಂಡಿತರ ಮೇಲೆ ಒಂದು ವರ್ಗ ಮಾಡಿದ್ದ ಘೋರ ಅನ್ಯಾಯ ಈಗ ಜಗಜ್ಜಾಹೀರವಾಗಿದೆ. ಆಸ್ಕರ್​ನ ಪಯಣ ಈಗ ಆರಂಭವಾಗಿದೆ. ದೀರ್ಘವಾದ ಹಾದಿಯು ಮುಂದಿದೆ. ದಯವಿಟ್ಟು ಅವರೆಲ್ಲರನ್ನು ಆಶೀರ್ವದಿಸಿ' ಎಂದು ನಟ ಹೇಳಿದ್ದಾರೆ. 

'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್​ನ ಭಯಾನಕ ಭವಿಷ್ಯ!

'ದಿ ಕಾಶ್ಮೀರ್ ಫೈಲ್ಸ್' ಹೊರತುಪಡಿಸಿ, ಆಸ್ಕರ್ ನಾಮನಿರ್ದೇಶನಕ್ಕೆ ಅರ್ಹವಾದ 301 ಚಲನಚಿತ್ರಗಳ ಪಟ್ಟಿಯಲ್ಲಿ ಹೆಸರಿಸಲಾದ ಇತರ ಚಲನಚಿತ್ರಗಳೆಂದರೆ 'ಆರ್‌ಆರ್‌ಆರ್', 'ಗಂಗೂಬಾಯಿ ಕಥಿವಾಡಿ', 'ಕಾಂತಾರ' ಮತ್ತು 'ಚೆಲೋ ಶೋ' 

click me!