ತಲೆಮೇಲೆ ವಿಚಿತ್ರ ಟ್ಯಾಟೂ ಹಾಕಿಸಿಕೊಂಡ ಅನುಪಮ್ ಖೇರ್: ವಿಡಿಯೋ ಶೇರ್ ಮಾಡಿ ಹೇಳಿದ್ದೇನು?

Published : Jul 17, 2023, 04:04 PM IST
ತಲೆಮೇಲೆ ವಿಚಿತ್ರ ಟ್ಯಾಟೂ ಹಾಕಿಸಿಕೊಂಡ ಅನುಪಮ್ ಖೇರ್: ವಿಡಿಯೋ ಶೇರ್ ಮಾಡಿ ಹೇಳಿದ್ದೇನು?

ಸಾರಾಂಶ

ಬೋಳು ತಲೆಮೇಲೆ ವಿಚಿತ್ರ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.    

ಬಾಲಿವುಡ್‌ನ ಖ್ಯಾತ ನಟರಲ್ಲಿ ಅನುಪಮ್ ಖೇರ್ ಕೂಡ ಒಬ್ಬರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಮತ್ತಷ್ಟು ಖ್ಯಾತಿ ಹೆಚ್ಚಿಸಿಕೊಂಡಿದ್ದ ಅನುಪಮ್ ಖೇರ್ ಇತ್ತೀಚಿಗಷ್ಟೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕಾಶ್ಮೀರಿ ಪಂಡಿತರಾಗಿ ಅಭಿಮಾನಿಗಳ ಹೃದಯ ಗೆದ್ದಿದ್ದ ಅನುಪಮ್ ಖೇರ್ ರವೀಂದ್ರನಾಥ್​ ಟ್ಯಾಗೋರ್ ಆಗಿ ಅಭಿಮಾನಿಗಳ ಮುಂದೆ ಬರಲು ತಯಾರಾಗುತ್ತಿದ್ದಾರೆ. 68 ವರ್ಷದ ನಟ ಅನುಪಮ್ ಖೇರ್, ರವೀಂದ್ರನಾಥ್​ ಟ್ಯಾಗೋರ್ ಲುಕ್ ಈಗಾಗಲೇ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಇದು ಅವರ 583ನೇ ಸಿನಿಮಾ ಆಗಿದೆ. ಈ ನಡುವೆ ಅನುಪಮ್ ಖೇರ್ ವಿಚಿತ್ರ ಲುಕ್ ವೈರಲ್ ಆಗಿದೆ. 

ಅನುಪಮ್ ಖೇರ್ ಶೇರ್ ಮಾಡಿರುವ ಹೊಸ ಸ್ಟೈಲ್‌ನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿರಿಯ ನಟ ತನ್ನ ಬೋಳು ತಲೆಯ ಮೇಲೆ ವಿಚಿತ್ರವಾದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅನುಪಮ್ ಖೇರ್ ಟ್ಯಾಟೂ ವಿಡಿಯೋ ವೈರಲ್ ಆಗಿದೆ. ಟ್ಯಾಟೂ ಹಾಕಿಸಿಕೊಂಡು ಕ್ಯಾಮರಾ ಮುಂದೆ ಪೋಸ್ ನೀಡಿದ್ದಾರೆ. ವಿಡಿಯೋ ಶೇರ್ ಮಾಡಿ, ಈ ಪೋಸ್ಟ್ ಅನ್ನು ವಿಶ್ವದ ಬೋಳುತಲೆಯ ವ್ಯಕ್ತಿಗಳಿಗೆ ಸಮರ್ಪಿಸಲಾಗಿದೆ ಎಂದು ಹೇಳಿದ್ದಾರೆ. ಕೂದಲು ಇದ್ದ ವ್ಯಕ್ತಿಗಳು ತಮ್ಮ ಕೀದಲಿನಿಂದ ಏನೆಲ್ಲ ಮಾಡಬಹುದು ಎಂದು ಹೆಮ್ಮೆ ಪಡುತ್ತಾರೆ. ಆದರೆ ಇದನ್ನು ಮಾಡಲೇ ಸಾಧ್ಯವೇ. ಖಂಡಿತ ಇಲ್ಲ' ಎಂದು ಹೇಳಿದ್ದಾರೆ. 

ಅನಪಮ್ ಖೇರ್ ತನ್ನ ಬೋಳು ತಲೆಯ ಬಗ್ಗೆ ಆಗಾಗ ಹಾಸ್ಯ ಮಾಡುತ್ತಾರೆ.  ಈ ಬಗ್ಗೆ ಮಾತನಾಡಿದ್ದ ಖೇರ್, ಪ್ರಾರಂಭದಲ್ಲಿ ನನ್ನ ತಲೆ ಬೋಳಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ನಾನು ಮಾಡುತ್ತಿದ್ದ ಮೊದಲ ಅಸ್ತ್ರವೆಂದರೆ ಹಾಸ್ಯ. 80ರ ದಶಕದಲ್ಲಿ ಬೋಳು ತಲೆಯ ನಟನೊಬ್ಬ ಸಿನಿಮಾದಲ್ಲಿ ನಟಿಸುವುದು ಅಸಾಧ್ಯವಾಗಿತ್ತು' ಎಂದು ಹೇಳಿದ್ದರು.

ಕಾಶ್ಮೀರ್‌ ಫೈಲ್ಸ್‌ ವಿರೋಧಿಸಿದವರಿಂದ ಕೇರಳ ಸ್ಟೋರಿಗೂ ವಿರೋಧ: ಅನುಪಮ್‌ ಖೇರ್‌ 

ಸಿನಿಮಾಗಳು 

ಅನುಪಮ್ ಖೇರ್ ಸದ್ಯ ರವೀಂದ್ರನಾಥ್​ ಟ್ಯಾಗೋರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಲುಕ್ ರಿಲೀಸ್ ಆಗಿದೆ. ಖ್ಯಾತ ಕವಿ, ಲೇಖಕ, ತತ್ವಜಾನಿ ರವೀಂದ್ರನಾಥ್​ ಟ್ಯಾಗೋರ್​ ಪಾತ್ರವನ್ನು ತೆರೆಮೇಲೆ ತರುವುದು ದೊಡ್ಡ ಸಾಹಸದ ಕೆಲಸ. ಅಂಥ ಪಾತ್ರವನ್ನು ತೆರೆಮೇಲೆ ಜೀವಿಸಲು ಅನುಪಮ್​ ಖೇರ್​ ರೆಡಿಯಾಗಿದ್ದಾರೆ. ರವೀಂದ್ರನಾಥ್​ ಟ್ಯಾಗೋರ್​ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅನುಪಮ್ ಖೇರ್ ಸಖತ್​ ಖುಷಿಯಾಗಿದ್ದಾರೆ. ಫಸ್ಟ್​ ಲುಕ್​ ಪೋಸ್ಟರ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕಾಶ್ಮೀರ್ ಫೈಲ್ಸ್' ನಟನ 538ನೇ ಸಿನಿಮಾ ಅನೌನ್ಸ್: ರವೀಂದ್ರನಾಥ​ ಟ್ಯಾಗೋರ್​ ಆಗಿ ಎಂಟ್ರಿ ಕೊಟ್ಟ ಅನುಪಮ್ ಖೇರ್

ಈ ಸಿನಿಮಾ ಜೊತೆಗೆ ಕಾಶ್ಮೀರ್ ಫೈಲ್ಸ್ ಬಳಿಕ ಅನುಪಮ್ ಖೇರ್ ಮತ್ತೆ ವಿವೇಕ್ ಅಗ್ನಿಹೋತ್ರಿ ಜೊತೆ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಂಗನಾ ರಣಾವತ್ ನಟನೆಯ ಎಮರ್ಜನ್ಸಿಯಲ್ಲಿ ಅನುಪಮೇ ಖೇರ್ ನಟಿಸುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?