'ಅದ್ಭುತವಾದ ಗ್ರಂಥ..' ಒಪೆನ್ಹೈಮರ್ ಚಿತ್ರದ ಸಿದ್ಧತೆಗಾಗಿ ಭಗವದ್ಗೀತೆ ಓದಿದ್ದ ಹಾಲಿವುಡ್‌ ನಟ ಸಿಲಿಯನ್ ಮರ್ಫಿ

By Santosh Naik  |  First Published Jul 17, 2023, 3:15 PM IST

ಅಣುಬಾಂಬ್‌ನ ಪಿತಾಮಹ ರಾಬರ್ಟ್ ಒಪೆನ್ಹೈಮರ್ ಅವರ ಜೀವನಾಧಾರಿತ ಒಪೆನ್ಹೈಮರ್ ಚಿತ್ರ ಈ ವರ್ಷದ ಅತ್ಯಂತ ನಿರೀಕ್ಷಿತ ಹಾಲಿವುಡ್‌ ಚಿತ್ರ. ಇಂಟರ್‌ಸ್ಟೆಲ್ಲರ್‌, ಇನ್‌ಸೆಪ್ಷನ್‌, ಡುಂಕಿರ್ಕ್‌ ರೀತಿಯ ಮಹಾನ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಕ್ರಿಸ್ಟೋಫರ್‌ ನೋಲನ್‌ ಅವರ ಬಹು ಮಹತ್ವಾಕಾಂಕ್ಷೆಯ ಚಿತ್ರ.


ನವದೆಹಲಿ (ಜು.17): ಜೀವ ಜಗತ್ತಿನ ಅತ್ಯಂತ ಘಾತಕ ಬಾಂಬ್‌, 'ನ್ಯೂಕ್ಲಿಯರ್‌ ಬಾಂಬ್‌'ನ ಪಿತಾಮಹ ಅಮೆರಿಕದ ವಿಜ್ಞಾನಿ ರಾಬರ್ಟ್ ಒಪೆನ್ಹೈಮರ್ ಅವರ ಜೀವನಾಧಾರಿತ ಒಪೆನ್ಹೈಮರ್ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಇಂಟರ್‌ಸ್ಟೆಲ್ಲರ್‌ ಇನ್‌ಸೆಪ್ಷನ್‌, ಡುಂಕಿರ್ಕ್‌ನಂಥ ಮಹಾನ್‌ ಚಿತ್ರಗಳನ್ನು ನೀಡಿದ್ದ ಅಮೆರಿಕದ ಪ್ರಖ್ಯಾತ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರದ ಟ್ರೇಲರ್‌ ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಜುಲೈ 21 ರಂದು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ರಾಬರ್ಟ್ ಒಪೆನ್ಹೈಮರ್ ಪಾತ್ರವನ್ನು ನಿಭಾಯಿಸಿರುವುದು ಹಾಲಿವುಡ್‌ ನಟ ಸಿಲಿಯನ್‌ ಮರ್ಫಿ. ಒಪೆನ್ಹೈಮರ್ ಅವರ ಪಾತ್ರ ನಿಭಾಯಿಸುವ ಸಲುವಾಗಿ ಸ್ವತಃ ತಾನು ಕೂಡ ಶ್ರೀಮದ್‌ ಭಗವದ್ಗತೆಯನ್ನು ಓದಿದ್ದೆ ಎಂದು ಅವರು ಹೇಳಿರುವ ಮಾತುಗಳು ವೈರಲ್‌ ಆಗಿದೆ. ನಿಮಗೆ ನೆನಪಿರಲಿ, ಸ್ವತಃ ರಾಬರ್ಟ್ ಒಪೆನ್ಹೈಮರ್ ಅಣುಬಾಂಬ್‌ಅನ್ನು ಅನ್ವೇಷಣೆ ಮಾಡಿದ ಬಳಿಕ ಅದರ ಅತಿದೊಡ್ಡ ವಿರೋಧಿಯಾಗಿದ್ದರು. ಅದಕ್ಕೆ ಕಾರಣವಾಗಿದ್ದು ಕೂಡ ಶ್ರೀಮದ್‌ ಭಗವದ್ಗೀತೆ. ಜೀವಜಗತ್ತಿನ ಅತ್ಯಂತ ಶ್ರೇಷ್ಠ ಸಾಧನೆ ಮಾಡಿದ್ದರೂ, ರಾಬರ್ಟ್ ಒಪೆನ್ಹೈಮರ್‌ಗೆ ತಮ್ಮ ಸಾಧನೆಯ ಬಗ್ಗೆ ನೆಮ್ಮದಿ ಇದ್ದಿರಲಿಲ್ಲ. ಆದರೆ, ಭಗವದ್ಗೀತೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಉಪದೇಶಗಳು ಬದಲಾವಣೆ ತಂದವು ಎಂದು ಹೇಳಿಕೊಂಡಿದ್ದರು.

ಶ್ರೀಮದ್ ಭಗವದ್ಗೀತೆಯಿಂದ ಸ್ಫೂರ್ತಿ ಪಡೆದ ಅಮೇರಿಕನ್ ವಿಜ್ಞಾನಿ ರಾಬರ್ಟ್ ಒಪೆನ್ಹೈಮರ್ ಈ ದಿನಗಳಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಅವರು 'ಅಣುಬಾಂಬ್‌ನ ಪಿತಾಮಹ' ಎಂದು ಕರೆಯುತ್ತಾರೆ, ಅವರು ನಂತರ ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧದ ಅತಿದೊಡ್ಡ ದನಿಯಾಗಿದ್ದರು. ಭೌತಶಾಸ್ತ್ರಜ್ಞ ಜೆ ರಾಬರ್ಟ್ ಒಪೆನ್‌ಹೈಮರ್‌ನನ್ನು ಪಾತ್ರದಲ್ಲಿ ಸಿಲಿಯನ್‌ ಮರ್ಫಿ ನಟಿಸಿದ್ದಾರೆ.

ಈ ಚಿತ್ರದ ಸಿದ್ಧತೆಯ ವೇಳೆ ನಾನು ಭಗವದ್ಗೀತೆಯನ್ನು ಓದಿದ್ದೆ. ಇದೊಂದು ಅದ್ಭುತ ಹಾಗೂ ಸುಂದರವಾದ ಗ್ರಂಥ. ಇದು ಸ್ವತಃ ರಾಬರ್ಟ್ ಒಪೆನ್‌ಹೈಮರ್‌ ಅವರಿಗೂ ಸ್ಫೂರ್ತಿ ನೀಡಿತ್ತು. ಅಣುಬಾಂಬ್‌ ಕಂಡು ಹಿಡಿದ ಬಳಿಕ ಅವರಿಗೆ ಸಮಾಧಾನ ನೀಡಿತ್ತು. ಅವರ ಜೀವನದುದ್ದಕ್ಕೂ ಅವರಿಗೆ ಸಾಕಷ್ಟು ಸಾಂತ್ವನವನ್ನು ಈ ಗ್ರಂಥ ಒದಗಿಸಿತ್ತು' ಎಂದು ಮರ್ಫಿ ಹೇಳಿದ್ದಾರೆ.
ಪವಿತ್ರ ಪುಸ್ತಕದಿಂದ ನೀವು ಕಲಿತಿದ್ದು ಏನು ಎನ್ನುವ ಪ್ರಶ್ನೆಗೆ, ದಯವಿಟ್ಟು ಇಂಥ ಪ್ರಶ್ನೆಗಳಿಂದ ನನ್ನನ್ನು ವಿಚಾರಣೆ ಮಾಡಬೇಡಿ ಎಂದು ತಮಾಷೆಯಲ್ಲಿಯೇ ಹೇಳಿದ ಅವರು, ನನಗೆ ಇಡೀ ಪುಸ್ತಕ ಬಹಳ ಅದ್ಭುತ ಎನಿಸಿತು ಎಂದು ತಿಳಿಸಿದರು.

ಹಾರ್ವರ್ಡ್‌ ವಿಜ್ಞಾನಿಗಳ ಸಂಶೋಧನೆ ಯಶಸ್ವಿ, 'ಇನ್ನು ಮುಂದೆ ಜಗತ್ತಲ್ಲಿ ಅಜ್ಜ-ಅಜ್ಜಿ ಆಗೋರೇ ಇಲ್ಲ'!

ರಾಬರ್ಟ್ ಒಪೆನ್‌ಹೈಮರ್‌ ಜೀವನಾಧಾರಿತ ನೋಲನ್‌ ಅವರ ಚಿತ್ರದಲ್ಲಿ ಎಮಿಲಿ ಬ್ಲಂಟ್, ರಾಬರ್ಟ್ ಡೌನಿ ಜೂನಿಯರ್, ಮ್ಯಾಟ್ ಡ್ಯಾಮನ್ ಮತ್ತು ಫ್ಲಾರೆನ್ಸ್ ಪಗ್ ನಟಿಸಿದ್ದಾರೆ. ಇದು ಪುಲಿಟ್ಜರ್‌ ಪ್ರಶಸ್ತಿ ವಿಜೇತ ಕೈ ಬರ್ಡ್ ಮತ್ತು ದಿವಂಗತ ಮಾರ್ಟಿನ್ ಜೆ ಅವರು ಬರೆದ American Prometheus: The Triumph and Tragedy of J Robert Oppenheimer  ಪುಸ್ತಕವನ್ನು ಆಧರಿಸಿದೆ.

Tap to resize

Latest Videos

ಪರ್ಫೆಕ್ಟ್‌ ಫಿಗರ್‌ಗಾಗಿ ಫೋಟೋ ಎಡಿಟ್‌ ಮಾಡಿದ ಜಾನ್ವಿ ಕಪೂರ್‌ ಟ್ರೋಲ್‌!

ಈ ಚಿತ್ರ ಜುಲೈ 21 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇವರೊಂದಿಗೆ ಜೊತೆಗೆ ಗ್ರೇಟಾ ಗೆರ್ವಿಗ್ ಅವರ ಬಹುನಿರೀಕ್ಷಿತ ಚಲನಚಿತ್ರ ಬಾರ್ಬಿ, ಮಾರ್ಗಟ್ ರಾಬಿ ಮತ್ತು ರಿಯಾನ್ ಗೊಸ್ಲಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

click me!