ಐಶ್ವರ್ಯ ರೈಗಾಗಿ ಶಾರುಖ್​-ಸಲ್ಮಾನ್​ 5 ವರ್ಷಗಳ ಭಯಂಕರ ಶತ್ರುತ್ವ; ಬಿರಿಯಾನಿ ಮೂಲಕ ಪ್ಯಾಚಪ್​!

By Suvarna News  |  First Published Jul 17, 2023, 2:52 PM IST

ಬಾಲಿವುಡ್​ ಆಳುತ್ತಿರುವ ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಐದು ವರ್ಷ ಬದ್ಧ ವೈರಿಗಳಾಗಿದ್ದರು. ಇದಕ್ಕೆ ಕಾರಣ ಐಶ್ವರ್ಯ ರೈ. ಆಗಿದ್ದೇನು? 
 


ಕೆಲ ದಶಕಗಳಿಂದ ಬಾಲಿವುಡ್​ ಆಳುತ್ತಿರುವ ನಟರಲ್ಲಿ ಖಾನ್​ ತ್ರಯರದ್ದು ಟಾಪ್​ನಲ್ಲಿದೆ ಹೆಸರು. ಶಾರುಖ್​ ಖಾನ್ (Shah Rukh Khan)​, ಸಲ್ಮಾನ್​ ಖಾನ್​ ಮತ್ತು ಆಮೀರ್​ ಖಾನ್​ ನಟರು ಬಾಲಿವುಡ್​ನಲ್ಲಿ ಕಿಂಗ್​ ಮೇಕರ್ಸ್​ ಆಗಿದ್ದಾರೆ. ಈ ಪೈಕಿ ಸಲ್ಮಾನ್​ ಮತ್ತು ಆಮೀರ್​ ಅವರ ಚಿತ್ರಗಳು ಒಂದರ ಮೇಲೊಂದು ಸೋಲನ್ನು ಅನುಭವಿಸುತ್ತಿದ್ದರೂ, ಪಠಾಣ್​ ಚಿತ್ರದ ಮೂಲಕ ಶಾರುಖ್​ ಮತ್ತೆ ಚಿಗುರಿಕೊಂಡಿದ್ದಾರೆ. ಈ ಖಾನ್​ ತ್ರಯ ನಟರು ಸ್ನೇಹದಲ್ಲಿಯೂ ಮುಂದು ಎಂಬ ಮಾತಿಗೆ. ಆದರೆ ಕೆಲ ವರ್ಷಗಳ ಹಿಂದೆ ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಐದಾರು ವರ್ಷ ಬದ್ಧ ವೈರಿಗಳಾಗಿದ್ದರು ಎನ್ನುವುದು ನಿಮಗೆ ತಿಳಿದಿದೆಯೆ? ಹೌದು. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವಿನ ಜಗಳ ಕೂಡ ತುಂಬಾ ಹಳೆಯದು. 2008 ರಲ್ಲಿ, ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಶಾರುಖ್ ಖಾನ್​ ಮತ್ತು ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಐಶ್ವರ್ಯ ರೈ ಬಗ್ಗೆ ಹೇಳಿದ್ದರು. ಇದಾದ ಬಳಿಕ ಇಬ್ಬರು ತಾರೆಯರ ನಡುವೆ ಜಟಾಪಟಿ ಏರ್ಪಟ್ಟಿತ್ತು. ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಶಾರುಖ್ ಈ ವಿಚಾರವನ್ನು ಚರ್ಚಿಸಿದ್ದರು. 

ಇದೀಗ ಈ ವಿಷಯವನ್ನು ಬಾಲಿವುಡ್​ನ ಖ್ಯಾತ ಗಾಯಕ, ರ‍್ಯಾಪರ್​ ಬಾದ್ ಶಾ (Badshah) ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.  ರ‍್ಯಾಪರ್​  ಬಾದ್‌ಶಾಹ್ ಅವರು 'ಜುಗ್ನು', 'ಅಭಿ ತೋ ಪಾರ್ಟಿ ಶುರು ಹುಯಿ ಹೈ', 'ಡಿಜೆ ವಾಲೆ ಬಾಬು' ಮತ್ತು ಇನ್ನೂ ಅನೇಕ ಹಾಡುಗಳಿಂದ ಸಕತ್​ ಫೇಮಸ್​ ಆಗಿದ್ದಾರೆ. ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ ಎನ್ನುವ ಮೂಲ ಹೆಸರು ಹೊಂದಿರುವ ರ‍್ಯಾಪರ್​ ಬಾಲಿವುಡ್​ನಲ್ಲಿ ಬಾದ್​ ಶಾ ಎಂದೇ ಖ್ಯಾತಿ ಪಡೆದಿದ್ದಾರೆ. ಈಗ ಅವರು ಸಲ್ಮಾನ್​ (Salman Khan) ಮತ್ತು ಶಾರುಖ್​ ಅವರ ಆ ಹಳೆಯ ವೈಮನಸ್ಸಿನ ವಿಷಯದ ಕುರಿತು ಮಾತನಾಡಿದ್ದಾರೆ. 2008 ರಲ್ಲಿ ನಟಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರೂ ಜಗಳವಾಡಿದ ನಂತರ ಇಬ್ಬರೂ ಮಾತನಾಡುವುದನ್ನು ನಿಲ್ಲಿಸಿದ್ದರು. ಐಶ್ವರ್ಯ ರೈ ಅವರ ವಿಷಯದಲ್ಲಿ ಈ ಗಲಾಟೆ ಶುರುವಾಗಿತ್ತು. ಆದರೆ, ನಂತರ 2013ರಲ್ಲಿ ಇಬ್ಬರ ನಡುವೆ ಒಪ್ಪಂದ ಏರ್ಪಟ್ಟಿತ್ತು ಎಂಬ ವಿಷಯವನ್ನು ಬಾದ್​ ಶಾ ಹೇಳಿದ್ದಾರೆ. 

Tap to resize

Latest Videos

'ಶಾರುಖ್​ ಮತ್ತು ಸಲ್ಮಾನ್​ ಖಾನ್​ 1990ರಿಂದಲೂ ತೀವ್ರ ಆಪ್ತರು. ಕರಣ್-ಅರ್ಜುನ್ ಮತ್ತು ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಜೋಡಿ ಸಕತ್​ ಫೇಮಸ್​ ಕೂಡ ಆಗಿತ್ತು. ಆದರೆ  2008 ರಲ್ಲಿ ನಟಿ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರೂ ಜಗಳವಾಯಿತು.  ನಂತರ ಇಬ್ಬರೂ ಮಾತನಾಡುವುದನ್ನು ನಿಲ್ಲಿಸಿದ್ದರು. ಇಬ್ಬರು ಕಲಾವಿದರ ನಡುವೆ ಭಿನ್ನಾಭಿಪ್ರಾಯವಿತ್ತು, ಅದು ಹಲವಾರು ವರ್ಷಗಳ ಕಾಲ ನಡೆಯಿತು. ಇದರಿಂದ ಬಾಲಿವುಡ್​​ ಇಂಡಸ್ಟ್ರಿಗೂ ತೊಂದರೆಯಾಗಿತ್ತು. ಆದರೆ, ನಂತರ 2013ರಲ್ಲಿ ಇಬ್ಬರ ನಡುವೆ ಒಪ್ಪಂದ ಏರ್ಪಟ್ಟಿತ್ತು. ಈ ಜೋಡಿ ಪುನಃ ಪ್ಯಾಚಪ್​ ಆಗಿದ್ದು ಬಿರಿಯಾನಿ (Biriyani) ಊಟದಲ್ಲಿ ನನಗೆ ತಿಳಿದುಬಂತು. ನನಗೂ ಇಬ್ಬರು ಸೇರಿ ಬಿರಿಯಾನಿ ತಿನ್ನಿಸಿದರು. ಅದಾದ ಬಳಿಕ ಅದೇ ವರ್ಷ  ಇಬ್ಬರೂ ಖಾನ್‌ಗಳು ಬಾಬಾ ಸಿದ್ದಿಕಿ ಅವರ ಇಫ್ತಾರ್ ಕೂಟದಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಾಗ ಅಲ್ಲಿಯೂ ಒಟ್ಟಿಗೇ ಖುಷಿಯಿಂದ ಬಿರಿಯಾನಿ ಸೇವಿಸುತ್ತಿದ್ದರು ಎಂದು ಗಾಯಕ ಬಾದ್ ಶಾ ಹೇಳಿದ್ದಾರೆ. 

ಪಠಾಣ್ ಗಳಿಕೆಗೆ ಕಾಜೋಲ್​ ವ್ಯಂಗ್ಯ: ಶಾರುಖ್​ ಫ್ಯಾನ್ಸ್​ ಗರಂ- ನಟಿ ಹೇಳಿದ್ದಾದ್ರೂ ಏನು?

 ಬಾಲಿವುಡ್‌ನ ಇಬ್ಬರು ದೊಡ್ಡ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರನ್ನು ಭೇಟಿಯಾದ ಸಮಯವನ್ನು ಇತ್ತೀಚೆಗೆ ನೆನಪಿಸಿಕೊಂಡರು. ಆ ಸಮಯದಲ್ಲಿ, ಇಬ್ಬರು ನಟರ ನಡುವಿನ ಐದು ವರ್ಷಗಳ ವಿವಾದವು ಆಗಷ್ಟೇ ಕೊನೆಗೊಂಡಿತ್ತು. ಶಾರುಖ್ ತಮ್ಮನ್ನು  ಭೇಟಿಯಾಗಲು ಬಯಸಿರುವುದಾಗಿ ಅವರ ಮ್ಯಾನೇಜರ್​ ಹೇಳಿದ್ದರು. ಆ ಸಮಯದಲ್ಲಿ ಅಲ್ಲಿಗೆ ಹೋದಾಗ ಶಾರುಖ್​ ಮತ್ತು ಸಲ್ಮಾನ್​ ಬಿರಿಯಾನಿ ಸೇವಿಸುತ್ತಿದ್ದರು. ಈ ಬಿರಿಯಾನಿಯಿಂದಾಗಿ ಅವರು ಪ್ಯಾಚಪ್​ ಆಗಿದ್ದಾರೆ ಎನ್ನುವ ವಿಷಯ ನನಗೆ ತಿಳಿಯಿತು ಎಂದಿದ್ದಾರೆ.

ಇದಾದ ಬಳಿಕ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇತ್ತೀಚೆಗೆ ಸಿದ್ಧಾರ್ಥ್ ಆನಂದ್ ಅವರ 'ಪಠಾಣ್' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಸಲ್ಮಾನ್ ಟೈಗರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,  ಅತಿಥಿ ಪಾತ್ರ ಮಾಡಿದ್ದಾರೆ.  ವರ್ಷಗಳ ನಂತರ ಶಾರುಖ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಮುಂಬರುವ ಟೈಗರ್ 3 ನಲ್ಲಿ ಅವರು ಸಲ್ಮಾನ್ ಖಾನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಟೈಗರ್ 3 ನಲ್ಲಿ  ಅತಿಥಿ ಪಾತ್ರವನ್ನು ಈಗಾಗಲೇ ಅವರು ಖಚಿತಪಡಿಸಿದ್ದಾರೆ.

ಅಮ್ಮನಾಗೋದು ಹೇಗೆ ಅಂತ ನಟಿಗೆ ಸಲ್ಮಾನ್ ಖಾನ್ ಸಲಹೆ ಕೊಟ್ರಂತೆ, ಏನಪ್ಪಾ ಅದು?

click me!