ಅಣ್ಣ-ತಂಗಿ ಧಾರಾವಾಹಿಯಿಂದ ಹೊರ ನಡೆದ ನಟಿ ಮಾನ್ಸಿ ಜೋಶಿ; ಕಾರಣವೇನು?

By Shruiti G Krishna  |  First Published May 30, 2022, 6:25 PM IST

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಅಣ್ಣ-ತಂಗಿ(Anna Thangi) ಕೂಡ ಒಂದು. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಮಾನ್ಸಿ ಜೋಶಿ(Mansi Joshi) ಈ ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಮಾನ್ಸಿ ಇತ್ತೀಚಿಗಷ್ಟೆ ಅಣ್ಣ-ತಂಗಿ ಧಾರಾವಾಹಿ ಸೇರಿದ್ದರು.


ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಅಣ್ಣ-ತಂಗಿ(Anna Thangi) ಕೂಡ ಒಂದು. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಮಾನ್ಸಿ ಜೋಶಿ(Mansi Joshi) ಈ ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಮಾನ್ಸಿ ಇತ್ತೀಚಿಗಷ್ಟೆ ಅಣ್ಣ-ತಂಗಿ ಧಾರಾವಾಹಿ ಸೇರಿದ್ದರು. ಆದರೀಗ ದಿಢೀರ್ ಹೊರಬಂದಿರುವುದು ಅಚ್ಚರಿ ಮೂಡಿಸಿದೆ. ಧಾರಾವಾಹಿ ಮಧ್ಯದಲ್ಲೇ ತೊರೆದು ಹೊರಬಂದಿರುವ ಬಗ್ಗೆ ಅನೇಕ ವದಂತಿ ಹರಡುತ್ತಿದೆ. ಆದರೆ ವೈಯಕ್ತಿಕ ಕಾರಣದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಈ ಧಾರಾವಾಹಿಯಲ್ಲಿ ಮಾನ್ಸಿ ಸಂಧ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಧ್ಯಾ ತುಂಬಾ ಸರಳ ಹುಡುಗಿಯಾಗಿದ್ದಳು. ಇದೀಗ ನಟಿ ಮಾನ್ಸಿ ಜಾಗಕ್ಕೆ ಮತ್ತೋರ್ವ ನಟಿ ಜೆಸ್ಸಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಧಾರಾವಾಹಿ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

Tap to resize

Latest Videos

undefined

ಅಣ್ಣ-ತಂಗಿ ಧಾರಾವಾಹಿ ಹೆಸರೇ ಹೇಳುವ ಹಾಗೆ ಒಡಹುಟ್ಟಿದ ತುಳಸಿ ಮತ್ತು ಶಿವರಾಜು ಅವರ ಸುತ್ತು ಸುತ್ತುತ್ತದೆ. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಳ್ಳುವುದರಿಂದ ಶಿವರಾಜು ತಂಗಿಯನ್ನು ಪ್ರೀತಿ, ಕಾಳಜಿಯಿಂದ ಸಾಕುತ್ತಾನೆ. ಅವಳು ದೊಡ್ಡ ಕುಟುಂಬದ ಸೊಸೆಯಾಗಲು ಬಯಸಿದ್ದಳು. ಅಲ್ಲಿ ಅವಳು ಮಾವ, ಅತ್ತೆ, ಅತ್ತಿಗೆ ಸೋದರ ಮಾವ ಹೀಗೆ ಎಲ್ಲರನ್ನು ಪಡೆಯುವ ಆಸೆ ಇದೆ. ಆದರೆ ಆಕೆಯ ಸಹೋದರ ಒಂಟಿಯಾಗಿ ಇರಲು ಇಷ್ಟಪಟ್ಟ ಕಾರಣ ತುಳಸಿ ಕೂಡ ಮದುವೆಯಾಗದೆ ಇರಲು ನಿರ್ಧರಿಸಿದ್ದಾರೆ. 

ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನೆಮಾದಲ್ಲಿ ಅಂಕಿತಾ ಅಮರ್‌ ನಾಯಕಿ!

ಅಂದಹಾಗೆ ಅಣ್ಣ-ತಂಗಿ ತೆಲುಗಿನ ಆಕಾಸಮಂತ ಧಾರಾವಾಹಿಯ ಕನ್ನಡ ರಿಮೇಕ್. ಬಾಳೆ ಕುಮಾರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಮಧು ಸಾಗರ್, ಅಖಿಲಾ, ರಾಜೇಶ್ ಧ್ರುವ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಎರಡು ವರ್ಷಗಳ ನಂತರ ನನ್ನರಸಿ ರಾಧೆಯಲ್ಲಿ ಕಾಣಿಸಿಕೊಂಡ ಅಮೂಲ್ಯ ಗೌಡ!

ಮಾನ್ಸಿ ಜೋಶಿ ಬಗ್ಗೆ

ಮಾನ್ಸಿ ಜೋಶಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಾಧಾ ರಮಣ ಧಾರಾವಾಹಿಯಲ್ಲಿ ರಮಣನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡರು. ತುಂಬಾ ಮುಗ್ಧೆ ಪಾತ್ರದಲ್ಲಿ ನಟಿಸಿದ ಮಾನ್ಸಿ ನಂತರ ಪಾರು ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ, ನಾಯಕಿ ಎಂಬ ಧಾರಾವಾಹಿಯಲ್ಲೂ ಮಾನ್ಸಿ ಜೋಶಿ ನಟಿಸಿದ್ದರು. ಬಳಿಕ ಕನ್ನಡದ ಕಸ್ತೂರಿ ನಿವಾಸ ಧಾರಾವಾಹಿಯ ತೆಲುಗು ರಿಮೇಕ್‌ನಲ್ಲಿ ಮಾನ್ಸಿ ಕಾಣಿಸಿಕೊಂಡಿದ್ದರು. ಇನ್ನು ತಮಿಳಿನ 'ಅಮೃತವರ್ಷಿಣಿ' ಧಾರಾವಾಹಿಯಲ್ಲೂ ನಟಿಸಿದ್ದಾರೆ. ಕೊರೊನಾ ಕಾರಣದಿಂದ ಈ ಧಾರಾವಾಹಿಯಿಂದ ಅರ್ಧಕ್ಕೆ ಕೈ ಬಿಡಬೇಕಾಯ್ತು. ಹೆಚ್ಚಾಗಿ ನೆಗೆಟಿವ್ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದ ಮಾನ್ಸಿ ಅಣ್ಣ-ತಂಗಿಯಲ್ಲಿ ಪಾಸಿಟಿವ್ ಪಾತ್ರದಲ್ಲಿ ಮಿಂಚಿದ್ದರು. ಆದರೀಗ ಈ ಧಾರಾವಾಹಿಯಿಂದನು ಹೊರಬಂದಿದ್ದಾರೆ.

ಕಾರು ಖರೀದಿಸಿ ಸುದ್ದಿಯಾಗಿದ್ದ ನಟಿ

ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಯಲ್ಲೂ ನಟಿಸಿರುವ ಮಾನ್ಸಿ ಸದ್ಯ ಅಣ್ಣ-ತಂಗಿಯಿಂದ ಹೊರಹೋಗಿದ್ದಾರೆ ಮುಂದಿನ ಧಾರಾವಾಹಿ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಅಂದಹಾಗೆ ಇತ್ತೀಚಿಗಷ್ಟೆ ನಟಿ ಮಾನ್ಸಿ ಹುಟ್ಟುಹಬ್ಬದ ಪ್ರಯುಕ್ತ ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದರು. ಆಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಮಾನ್ಸಿ 'ಹುಟ್ಟುಹಬ್ಬದ ಪ್ರಯುಕ್ತ ಹೊಸ ಕಾರು ಖರೀದಿಸಿದ್ದೇನೆ. ನನ್ನ ಪರಿಶ್ರಮಕ್ಕೆ ಸಿಕ್ಕಿರುವ ಪ್ರತಿಫಲ ಇದು. ಅಪ್ಪ ಅಮ್ಮನ ಆಶೀರ್ವಾದಕ್ಕೆ ಧನ್ಯವಾದಗಳು’ ಎಂದು ಹೇಳಿದ್ದರು.

 

click me!