
ಹಾಲಿವುಡ್‌ನ ಸೆಕ್ಸಿ ನಟಿ ಏಂಜೆಲಿನಾ ಜೋಲಿ ನಿಮಗೆ ಗೊತ್ತೇ ಇದ್ದಾಳೆ. ಈಕೆ ಹಾಲಿವುಡ್‌ನ ಬಲು ಬೇಡಿಕೆಯ ಹೀರೋ ಬ್ರಾಡ್ ಪಿಟ್ ಜೊತೆ ಮದುವೆಯಾದದ್ದು, ಸಂಸಾರ ನಡೆಸಿದ್ದು, ಐದಾರು ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸುತ್ತಿರುವುದು ಹಾಗೂ ಈಗ ಆ ಜೋಡಿ ಬೇರೆ ಬೇರೆಯಾಗಿ ವಾಸಿಸುತ್ತಿರುವುದು ನಿಮಗೆ ತಿಳಿದಿರಬಹುದು. ಈಕೆಯ ಬಗ್ಗೆ ನಿಮಗೆ ತಿಳಿದಿರದ ಒಂದು ವಿಷಯ ಹೇಳ್ತೀವಿ.
ಅದೇನು ಗೊತ್ತಾ? ಈಕೆ ಕೀಟಗಳನ್ನು ತಿನ್ನುತ್ತಾಳೆ!
ಹೌದು. ಜೋಲಿ ಮಾತ್ರವಲ್ಲ. ಇನ್ನೂ ಹಲವರು ಕೀಟಗಳನ್ನು ಸೇವಿಸುತ್ತಾರೆ. ಇದು ನಿಮಗೆ ಗೊತ್ತಿರಕ್ಕಿಲ್ಲ. ಜಗತ್ತಿನ ಒಂದಷ್ಟು ಜನರಿಗೆ ಮೀನು ಮೊಟ್ಟೆ ಇದ್ದಂತೆ ನಾನಾ ಬಗೆಯ ಕೀಟಗಳೂ ಆಹಾರದ ಒಂದು ಭಾಗ. ಇವರು ನೊಣ, ಪತಂಗ, ದುಂಬಿ, ಜೇನು, ಇತರ ನಾನಾ ಜಾತಿಯ ಕೀಟಗಳನು ಹಿಡಿದು, ಅವುಗಳನ್ನು ಫ್ರೈ ಮಾಡಿ ಭಕ್ಷಿಸುತ್ತಾರೆ. ಆಫ್ರಿಕಾದ ದೇಶಗಳು, ದಕ್ಷಿಣ ಅಮೆರಿಕದ ದೇಶಗಳು, ಹಲವು ದ್ವೀಪ ರಾಷ್ಟ್ರಗಳಲ್ಲಿ ಕೀಟಗಳನ್ನು ಸೇವಿಸುವುದು ಒಂದು ಆಹಾರ ಕ್ರಮವೇ ಆಗಿದೆ. ಯಾಕೆಂದರೆ ಇವುಗಳಲ್ಲಿ ಸಾಕಷ್ಟು ಪ್ರೊಟೀನ್ ಇದೆಯಂತೆ. ಇದು ಸೇವಿಸುವವರನ್ನು ಆರೋಗ್ಯವಾಗಿ ಇಡುತ್ತದೆ.
ಇನ್ನು ಏಂಜೆಲಿನಾ ಜೋಲಿ ವಿಷಯಕ್ಕೆ ಬರುವುದಾದರೆ, ಈಕೆಯೂ ಕೀಟಭಕ್ಷಕಿ, ಮಕ್ಕಳಿಗೂ ಕೀಟಭಕ್ಷಣೆ ಕಲಿಸಿದ್ದಾಳೆ. ಇವಳೂ ಈಕೆಯ ಮಕ್ಕಳೂ ನೊಣಗಳು, ಕೀಟಗಳು, ದುಂಬಿ, ಪತಂಗ, ಚೇಳು, ಜೇಡಗಳನ್ನು ಸಹ ಭಕ್ಷಿಸುತ್ತಾರೆ. ಹಲವೊಮ್ಮೆ ಫ್ರೈ ಮಾಡಿ, ಕೆಲವೊಮ್ಮೆ ಹಸಿ ಹಸಿಯಾಗಿಯೇ ಭಕ್ಷಿಸುತ್ತಾರೆ. ಇದನ್ನು ಜೋಲಿ ಕಲಿತದ್ದು ಕಾಂಬೋಡಿಯಾ ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದಾಗಲಂತೆ. ಮೊದಲು ಮಿಡತೆಗಳನ್ನು ತಿನ್ನಲು ಕಲಿಯಬೇಕು. ಸುಟ್ಟ ಮಿಡತೆಯ ಜೊತೆಗೆ ಬಿಯರ್ ಸೇವಿಸುವುದು ಮಜವಾಗಿರುತ್ತದೆ. ಆಮೇಲೆ ಜೇಡ ತಿನ್ನಲು ಕಲಿಯಬಹುದು ಅನ್ನುತ್ತಾಳೆ ಆಕೆ.
ರಶ್ಮಿಕಾ ಆದ್ಮೇಲೆ ಟಾಲಿವುಡ್‌ನಲ್ಲಿ ಶುರುವಾಯ್ತು ನಭಾ ನಟೇಶ್ ಹವಾ! ...
ಕೀಟಗಳ ರುಚಿ ಹೇಗೆ? ಇದನ್ನು ಆಕೆಯ ಮಕ್ಕಳಲ್ಲಿ ಕೇಳಬೇಕು. ಅವು ಹೇಳುತ್ವೆ- ಚಿಪ್ಸ್ ಇದ್ದ ಹಾಗೆ ಇರುತ್ವೆ. ಏನೂ ವ್ಯತ್ಯಾಸವಿಲ್ಲ. ಕೆಲವು ಮಾಮೂಲಿ ಚಿಪ್ಸ್ ಥರಾ, ಇನ್ನು ಕೆಲವು ಫ್ಲೇವರ್ಡ್ ಚಿಪ್ಸ್ ಥರಾ ಅಂತೆ. ಹಾಗಂತ ಜೋಲಿಯ ಕಿರಿಯ ಮಗ ನಾಕ್ಸ್ ಹೇಳುತ್ತಾನೆ.
ಜೋಲಿಗೀಗ ಆರು ಮಕ್ಕಳು, ಮ್ಯಾಡಾಕ್ಸ್, ಪ್ಯಾಕ್ಸ್, ಶಿಲಾ, ನಾಕ್ಸ್, ವಿವಿಯನ್, ಜಹಾರಾ. ಈ ಆರೂ ಮಕ್ಕಳೊಂದಿಗೆ ಇತ್ತೀಚೆಗೆ ಆಕೆ ನೆಟ್‌ಫಿಕ್ಸ್ ಫಿಲಂ 'ಫಸ್ಟ್ ದೇ ಕಿಲ್ಡ್ ಮೈ ಫಾದರ್' ಚಿತ್ರೀಕರಣಕ್ಕಾಗಿ ಕಾಂಬೋಡಿಯಾಗೆ ಆಗಮಿಸಿದ್ದಳು. ಆಗ ಮಕ್ಕಳಿಗೆ ಜೇಡ, ಮಿಡತೆಯನ್ನು ತಿನ್ನಿಸುತ್ತಿರುವುದನ್ನು ಬಿಬಿಸಿ ಚಿತ್ರೀಕರಿಸಿತ್ತು. ಜೋಲಿ ಟರಂಟುಲಾವನ್ನು ಕೂಡ ತಿನ್ನುತ್ತಾಳೆ. ಟರಂಟುಲಾ ಎಂದರೆ ಗೊತ್ತಲ್ಲ, ಆಫ್ರಿಕಾದ ವಿಷಕಾರಿ ಜೇಡ. ಇದರ ವಿಷದ ಅಂಶಗಳನು ಕಿತ್ತು ತೆಗೆದು ತಿನ್ನಲಾಗುತ್ತದೆ. ತನ್ನ ಮಕ್ಕಳು ಚಿಪ್ಸ್ ಬ್ಯಾಗ್ ಓಪನ್ ಮಾಡಿ ತಿಂದಷ್ಟೇ ಸಲೀಸಾಗಿ ಕೀಟಗಳನ್ನು ತಿನ್ನುತ್ತಾರೆ ಎಂಬುದು ಆಕೆ ಹೆಮ್ಮೆಯಿಂದ ಹೇಳುವ ಮಾತು.
ಹೌಸ್‌ವೈಫ್‌ಗೆ ಸಂಬಳ: ಕಮಲ್ ಹಾಸನ್ ವಿರುದ್ಧ ಕಂಗನಾ ಗರಂ ಆಗಿದ್ದೇಕೆ..? ...
ಕಾಂಬೋಡಿಯಾ ಮುಂತಾದ ಕಡೆ ಯುದ್ಧಗಳು, ಹಸಿವೆ ಹೆಚ್ಚು. ಜನತೆ ತಮ್ಮನ್ನು ಬದುಕಿ ಉಳಿಸಿಕೊಳ್ಳುವುದಕ್ಕಾಗಿ ಕೀಟಗಳನ್ನು ಸೇವಿಸುತ್ತಿದ್ದರು. ಇದರಲ್ಲಿ ಸಾಕಷ್ಟು ಪ್ರೊಟೀನ್ ಇರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಇವನ್ನು ಸೇವಿಸಿ ನೀವು ಬದುಕಿ ಉಳಿಯಬಹುದು. ನನ್ನ ಮಕ್ಕಳನ್ನು ಇವನ್ನು ಸೇವಿಸಲು ನಾನು ಪ್ರೋತ್ಸಾಹಿಸುತ್ತೇನೆ. ಆದರೆ ಒಂದು ಮಿತಿಗಿಂತ ಜಾಸ್ತಿ ಸೇವಿಸದಿರುವಂತೆ ನಿಯಂತ್ರಿಸಿದ್ದೇನೆ. ಹೆಚ್ಚು ಸೇವಿಸಿದರೆ ಕಾಯಿಲೆ ಬೀಳಬಹುದು ಎಂಬ ಭಯ- ಎನ್ನುತ್ತಾಳೆ ಜೋಲಿ.
ಜೋಲಿ ತನ್ನ ಮೊದಲ ಮಗ ಮ್ಯಾಡಾಕ್ಸ್‌ನನ್ನು ದತ್ತು ತಗೊಂಡಿರುವುದು ಕಾಂಬೋಡಿಯಾದಿಂದಲೇ, 2002ರಲ್ಲಿ. ಆದ್ದರಿಂದಲೇ ಆಕೆಗೆ ಕಾಂಬೋಡಿಯಾದ ನಂಟು.
ನಟಿಯಂತೆ ಕಾಣಬೇಕೆಂದು 50 ಪ್ಲಾಸ್ಟಿಕ್ ಸರ್ಜನಿ ಮಾಡಿಸಿಕೊಂಡ ಮಹಿಳೆ ಈಕೆ! ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.