ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ಮಿಸಿದ ಗುಂಜಲ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಸಿನಿಮಾದ ಟ್ರೈಲರ್‌ನಲ್ಲಾಗಲಿ, ಪೋಸ್ಟರ್‌ನಲ್ಲಾಗಲಿ ಕರಣ್ ಫೋಟೋ ಇಲ್ಲ. ಬಾಲಿವುಡ್ ನೆಪೊಟಿಸಂ ವಿಚಾರವಾಗಿ ವಿಲನ್ ನಂತೆ ಬಿಂಬಿಸಲ್ಪಟ್ಟಿದ್ದ ಖ್ಯಾತ ನಟನಿಗೆ ಅಸಲಿ ಆಗಿದ್ದೇನು..?
ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ಮಿಸಿದ ಗುಂಜಲ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಸಿನಿಮಾದ ಟ್ರೈಲರ್‌ನಲ್ಲಾಗಲಿ, ಪೋಸ್ಟರ್‌ನಲ್ಲಾಗಲಿ ಕರಣ್ ಫೋಟೋ ಇಲ್ಲ.
ಸಿನಿಮಾಗಳ ಪ್ರಚಾರ ವಿಚಾರದಲ್ಲಿ ಭಾರೀ ಕಾಳಜಿ ವಹಿಸೋ ಬಾಲಿವುಡ್ ಕರಣ್ ಸದ್ಯ ನೆಗೆಟಿವ್ ಆಗಿ ಕಾಣಿಸುತ್ತಿರುವುದಕ್ಕೇ ಅವರ ಹೆಸರನ್ನು ಕೈ ಬಿಟ್ಟಿದೆ ಎಂಬ ಮಾತುಗಳೂ ಕೆಳಿ ಬರುತ್ತಿವೆ. ಈ ಬಗ್ಗೆ ಗುಂಜನ್ ಸಕ್ಸೇನಾ ಸಿನಿಮಾದಲ್ಲಿ ಜಾಹ್ನವಿ ಕಪೂರ್ ಸಹೋದರನ ಪಾತ್ರದಲ್ಲಿ ಕಾಣಿಸೋ ಅಂಗದ್ ಬೇಡಿ ಪ್ರತಿಕ್ರಿಯಿಸಿದ್ದಾರೆ.
ಬಿಗ್‌ಬಾಸ್ ಬ್ಯೂಟಿಯ ಬರ್ತ್‌ಡೇ ಫನ್..! ಇಲ್ಲಿವೆ ಚಂದದ ಫೋಟೋಸ್
ಬಾಲಿವುಡ್ ನೆಪೊಟಿಸಂನಲ್ಲಿ ಕೇಳಿ ಬಂದ ಮುಖ್ಯ ಹೆಸರು ಕರಣ್ ಜೋಹರ್. ಇದೀಗ ಅದೇ ನೆಪೊಟಿಸಂ ಬಾಣ ಕರಣ್‌ಗೆ ತಿರುಗಿ ಬಿದ್ದಂತಾಗಿದೆ ಸದ್ಯದ ಪರಿಸ್ಥಿತಿ. ಆದ್ರೆ ಇದನ್ನೆಲ್ಲ ಅಲ್ಲಗಳೆದಿದ್ದಾರೆ ನಟ ಅಂಗದ್.
ಎಲ್ಲರಿಗೂ ವೈಯಕ್ತಿಯ ಅಭಿಪ್ರಾಯ ವ್ಯಕ್ತಪಡಿಸೋ ಸ್ವಾತಂತ್ರ್ಯವಿದೆ. ಆದರೆ ಜನ ಬೇಕಾಬಿಟ್ಟಿಯಾಗಿ ಟೀಕಿಸುತ್ತಿದ್ದಾರೆ. ಒಂದು ಸಿನಿಮಾ ಬಗ್ಗೆ ಈ ರೀತಿ ಹೇಳೋದು ಸರಿ ಅಲ್ಲ ಎಂದವರು ಹೇಳಿದ್ದಾರೆ.
ತನ್ನದೇ ಸಿನಿಮಾ ಗುಂಜನ್ ಸಕ್ಸೇನಾ ಬ್ಯಾನರ್‌ನಲ್ಲಿ ಕರಣ್ ಹೆಸರಿಲ್ಲ, ತಿರುಗಿಬಿತ್ತಾ ನೆಪೊಟಿಸಂ ಬಾಣ..?
ಪ್ರತಿ ಕ್ಷೇತ್ರವೂ ಸ್ಪರ್ಧಾತ್ಮವೇ. ನಾನು ಸುಮಾರು 300 ಸಿನಿಮಾ ಆಡಿಷನ್‌ಗೆ ಹೋಗಿದ್ದೇನೆ. ಪ್ರತಿ ಬಾರಿ ತಿರಸ್ಕರಿಸಿದಾಗಲೂ ಅದೊಂದು ಹೊಸ ಅನುಭವ. ನಟನೆಯೂ ಸಂಭಾನೆಗಾಗಿ ದುಡಿವ ಇತರ ಉದ್ಯೋಗಗಳಂತೆ ಒಂದು ವೃತ್ತಿ ಎಂದು ಹೇಳಿದ್ದಾರೆ.
ಬಾಲಿವುಡ್‌ನ ಸ್ವಜನ ಪಕ್ಷಪಾತದ ವಿರುದ್ಧ ಮಾತನಾಡಿದ ಅವರು, ನಾನು ಇಲ್ಲಿ ನನ್ನ ಜೀವನ ಕಂಡು ಕೊಂಡಿದ್ದೇನೆ. ನಾನು ನನ್ನ ಕುಟುಂಬಕ್ಕಾಗಿ ಇಲ್ಲಿ ಕೆಲಸ ಮಾಡುತ್ತೇನೆ. ಇಲ್ಲಿ ಲಕ್ಷಾಂತರ ಜನರಿರುತ್ತಾರೆ. ಅವಕಾಶ ಸಿಕ್ಕಿದಾಗ ಬಳಸಬೇಕು ಎಂದಿದ್ದಾರೆ.