ಅತ್ತ ನಂತ್ರ ಫೋಟೋ ಕ್ಲಿಕ್ಕಿಸುವ ಅನನ್ಯಾ ಪಾಂಡೆ, ಪ್ರೈವೇಟ್ ವಿಡಿಯೋ ಲೀಕ್ ಮಾಡೋ ಬೆದರಿಕೆ ಹಾಕಿದ್ದ ಶಾರುಕ್ ಮಗ!

By Roopa Hegde  |  First Published Oct 14, 2024, 7:33 PM IST

ಬಾಲಿವುಡ್ ನಟಿ ಅನನ್ಯಾ ಪಾಂಡೆ ಸದ್ಯ ಸಿಟಿಆರ್ ಎಲ್ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಸಂದರ್ಶನದ ವೇಳೆ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅತ್ತು ಫೋಟೋ ಕ್ಲಿಕ್ಕಿಸಿಕೊಳ್ಳೋದು ಏಕೆ, ಶಾರುಕ್ ಖಾನ್ ಮಗ ಆರ್ಯನ್ ಖಾನ್ ಧಮಕಿ ಹಾಕಿದ್ದೇಕೆ ಎಂಬುದನ್ನು ತಿಳಿಸಿದ್ದಾರೆ. 
 


ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Bollywood beauty Ananya Pandey) ಫಿಟ್ನೆಸ್ ವಿಷ್ಯಕ್ಕೆ ಸುದ್ದಿಯಲ್ಲಿರ್ತಾರೆ. ಸದ್ಯ ವಿಕ್ರಮಾದಿತ್ಯ ಮೋಟ್ವಾನೆ ಅವರ ಸಿಟಿಆರ್ ಎಲ್ (CTR L) ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಟಿಆರ್ ಎಲ್, ನೆಟ್ಫ್ಲಿಕ್ಸ್ (Netflix) ನಲ್ಲಿ ಬಿಡುಗಡೆಯಾಗಿದ್ದು, ಅನನ್ಯಾ ಪಾಂಡೆ, ಅದ್ರ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಸ್ಟಾರ್ ಕಿಡ್ಸ್ ಪಟ್ಟಿಯಲ್ಲಿರುವ ಅನನ್ಯಾ, ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದಾರೆ. ಸುಂದರ ಫೋಟೋಗಳನ್ನು ಪೋಸ್ಟ್ ಮಾಡುವ ಅವರು, ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಯಾವುದೇ ಮೇಕಪ್ ಅಥವಾ ಮನೆ ಮದ್ದು, ಅನನ್ಯಾ ಪಾಂಡೆ ಬ್ಯೂಟಿಯನ್ನು ಡಬಲ್ ಮಾಡಲ್ಲ. ಅವರ ಅಳು (Cry), ಅವರ ಸೌಂದರ್ಯದ ಸಿಕ್ರೇಟ್. ಅಳುವನ್ನು ಆನಂದಿಸುವ ಅನನ್ಯಾ, ಅದು ತಮ್ಮ ಸೌಂದರ್ಯ ಹೆಚ್ಚಿಸಿದೆ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅನನ್ಯಾ ಪಾಂಡೆ, ಅಳೋದನ್ನು ಇಷ್ಟಪಡ್ತಾರೆ. ಅತ್ತ ನಂತ್ರ ನಾನು ಫೋಟೋ ಕ್ಲಿಕ್ಕಿಸುತ್ತೇನೆ. ಆ ಫೋಟೋಗಳು ತುಂಬಾ ಸುಂದರವಾಗಿ ಬರುತ್ತವೆ. ಅನೇಕ ಬಾರಿ ಅದೇ ಫೋಟೋವನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತೇನೆ ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ. ಅನನ್ಯಾ ಪಾಂಡೆ, ಅಳುವ ವಿಷ್ಯವನ್ನು ಇದೇ ಮೊದಲ ಬಾರಿ ಹಂಚಿಕೊಂಡಿಲ್ಲ. ಈ ಹಿಂದೆ ಕೂಡ ತಮ್ಮ ಸ್ವಭಾವ, ಅಳುವಿನ ಬಗ್ಗೆ ಮಾತನಾಡಿದ್ದಾರೆ.

Tap to resize

Latest Videos

ಧರ್ಮ‌ ಬೈಕ್ ಹಿಂದೆ ಅನುಷಾ, ಬಿಗ್ ಬಾಸ್ ಲವ್ ಕಪಲ್ ವಿಡಿಯೋ ವೈರಲ್

ಬಹುಬೇಗ ಜನರ ಜೊತೆ ನಾನು ಹೊಂದಿಕೊಳ್ಳುವುದಿಲ್ಲ. ಈ ಸಮಯದಲ್ಲಿ ನನಗೆ ಅಳು ಬರುತ್ತೆ. ಇದು ಬಹುತೇಕ ಬಾರಿ ಸಂಭವಿಸುತ್ತೆ. ಅತ್ತ ನಂತ್ರ ರಿಲ್ಯಾಕ್ಸ್ ಆಗುತ್ತೆ ಎಂದು ಅನನ್ಯಾ ಪಾಂಡೆ ಈ ಹಿಂದೆ ಹೇಳಿದ್ದರು. ಅನನ್ಯಾ ನಿಧಾನವಾಗಿ ತಮ್ಮ ಸ್ವಭಾವವನ್ನು ಸುಧಾರಿಸಿಕೊಳ್ತಿದ್ದಾರೆ. ಆರಂಭದ ದಿನಗಳಲ್ಲಿ ಸ್ಕ್ರೀನ್ ಮೇಲೆ ಅವರ ಮುಖವನ್ನು ಅವರೇ ನೋಡಿಕೊಳ್ಳಲು ಕಷ್ಟವಾಗ್ತಿತ್ತು. ಮೊಬೈಲ್ ನಲ್ಲಿ ಯಾರಾದ್ರೂ ಅನನ್ಯಾ ಪಾಂಡೆ ಸಿನಿಮಾ ನೋಡ್ತಿದ್ದರೆ ಅಲ್ಲಿಂದ ಹೊರಗೆ ಹೋಗ್ತಿದ್ದರಂತೆ ಅನನ್ಯಾ. ಆದ್ರೆ ಈಗೀಗ ಸ್ಕ್ರೀನ್ ಮೇಲೆ ನನ್ನನ್ನು ನಾನು ನೋಡಿಕೊಳ್ಳಲು ಹೆಚ್ಚು ಕಷ್ಟವಾಗ್ತಿಲ್ಲ ಎಂದಿದ್ದಾರೆ.

ಸಿಟಿಆರ್ ಎಲ್ ಪ್ರಚಾರದ ವೇಳೆ ಅನನ್ಯಾ ಪಾಂಡೆ, ಶಾರುಕ್ ಖಾನ್ (Shah Rukh Khan) ಮಗನ ಧಮಕಿ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಶಾರುಕ್ ಖಾನ್ ಮಗಳು ಸುಹಾನಾ ಖಾನ್ (Suhana Khan) ಮತ್ತು ಅನನ್ಯಾ ಪಾಂಡೆ ಬಾಲ್ಯದ ಸ್ನೇಹಿತರು. ಇಬ್ಬರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶಾರುಕ್ ಮಗ, ಆರ್ಯನ್ ಖಾನ್ (Aryan Khan), ಖಾಸಗಿ ವೀಡಿಯೊಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ನಟಿ ಹೇಳಿದ್ದಾರೆ.  

ಬಿಗ್‌ಬಾಸ್‌ ಮಿಡ್‌ ವೀಕ್ ಎಲಿಮಿನೇಶನ್ ಸೂಚನೆ ಕೊಟ್ರಾ ಕಿಚ್ಚ ಸುದೀಪ್‌!?

ಅನನ್ಯ ಮೊದಲು ಅನೇಕ ಬ್ಲಾಗ್‌ಗಳನ್ನು ಮಾಡುತ್ತಿದ್ದರು. ಇದರಲ್ಲಿ ಅವರು ದಿನವಿಡೀ ತಿನ್ನುವ, ಮಾಡುವ ಕೆಲಸವನ್ನು ರೆಕಾರ್ಡ್ ಮಾಡುತ್ತಿದ್ದರು. ಆದರೆ ಪೋಸ್ಟ್ ಮಾಡ್ತಿರಲಿಲ್ಲ. ಫೋಟೋಬೂತ್ ಈಗಷ್ಟೇ ಆಪಲ್‌ಗೆ ಬಂದಿತ್ತು. ಹಾಗಾಗಿ ನಾನು, ಸುಹಾನಾ ಮತ್ತು ಶನಯಾ ಇಂತಹ ವಿಷಯಗಳನ್ನು ರೆಕಾರ್ಡ್ ಮಾಡುತ್ತಿದ್ದೆವು ಎಂದಿದ್ದಾರೆ ಅನನ್ಯಾ.  ಒಮ್ಮೆ ಆರ್ಯನ್ ಖಾನ್, ತನ್ನ ಕೆಲಸ ಮಾಡಿಕೊಟ್ಟಿಲ್ಲವೆಂದಾದ್ರೆ ಖಾಸಗಿ ಬ್ಲಾಗ್ ಮತ್ತು ಎಲ್ಲಾ ವೀಡಿಯೊಗಳನ್ನು ಲೀಕ್ ಮಾಡೋದಾಗಿ ಬೆದರಿಸಿದ್ದ ಎಂದು ಅನನ್ಯಾ ಹೇಳಿದ್ದಾರೆ. ಆರ್ಯನ್ ಕೂಡ ಆಗ ಚಿಕ್ಕವನು. ತಮಾಷೆಗಾಗಿ ಆತ ಧಮಕಿ ಹಾಕಿದ್ದ ಎಂದು ಅನನ್ಯಾ ಹೇಳಿದ್ದಾರೆ. 

ಅನನ್ಯಾಗೆ ಅವರ ಧ್ವನಿ ಕೂಡ ಆರಂಭದಲ್ಲಿ ಪ್ರಿಯವಾಗ್ತಿರಲಿಲ್ಲ. ಅನನ್ಯಾ ಸದ್ಯ ಶಂಕರ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಆರ್ ಮಾಧವನ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕರಣ್ ಸಿಂಗ್ ತ್ಯಾಗಿ ನಿರ್ದೇಶಿಸಲಿದ್ದಾರೆ. 

click me!