ಸುಶಾಂತ್ ಸಿಂಗ್ ರಜಪೂತ್ ಆತ್ಮ ಇನ್ನೂ ಮನೆಯಲ್ಲಿದ್ಯಾ? ಅನುಭವ ಬಿಚ್ಚಿಟ್ಟ ಅದಾ ಶರ್ಮಾ

By Roopa Hegde  |  First Published Oct 15, 2024, 1:48 PM IST

ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡ್ಕೊಂಡು ನಾಲ್ಕು ವರ್ಷವಾಗಿದೆ. ಅವರು ವಾಸವಿದ್ದ ಮನೆಗೆ ಅದಾ ಶರ್ಮಾ ಬಾಡಿಗೆಗೆ ಬಂದಿದ್ದಾರೆ. ಕುಟುಂಬದ ಜೊತೆ ವಾಸವಾಗಿರುವ ಅದಾ ಶರ್ಮಾ, ಸುಶಾಂತ್ ಇರುವಿಕೆ ಬಗ್ಗೆ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. 
 


ಬಾಲಿವುಡ್ ನ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ (Bollywood famous actor Sushant Singh Rajput) ನಮ್ಮನ್ನಗಲಿ ನಾಲ್ಕು ವರ್ಷಗಳಾಗಿದೆ. ತಮ್ಮ ಅಭಿನಯ ಹಾಗೂ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಈ ಮಧ್ಯೆ, ಅವರ ಮನೆಯಲ್ಲಿ ವಾಸ ಶುರು ಮಾಡಿರುವ ನಟಿ ಅದಾ ಶರ್ಮಾ (Adah Sharma), ಅವರ ಇರುವಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಮೃತದೇಹ (dead body) ಸಿಕ್ಕ ಅಪಾರ್ಟ್ಮೆಂಟ್ (apartment) ಕಳೆದ ನಾಲ್ಕು ವರ್ಷಗಳಿಂದ ಖಾಲಿ ಇತ್ತು. ಅಲ್ಲಿ ವಾಸಿಸಲು ಯಾರೂ ಮನಸ್ಸು ಮಾಡಿರಲಿಲ್ಲ. ಆದ್ರೆ ದಿ ಕೇರಳ ಸ್ಟೋರಿ ಖ್ಯಾತಿಯ ಅದಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್ ವಾಸವಾಗಿದ್ದ ಪ್ಲಾಟ್ ಗೆ ಕೆಲ ದಿನಗಳ ಹಿಂದಷ್ಟೆ ಶಿಫ್ಟ್ ಆಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್, ಈ ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆಗೆ ಇದ್ದರು. ಅಲ್ಲಿಗೆ ಅದಾ ಶಿಫ್ಟ್ ಆದ ವಿಷ್ಯ ಟ್ರೋಲರ್ ಬಾಯಿಗೆ ಆಹಾರವಾಗಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸುಶಾಂತ್ ವಾಸವಿದ್ದ ಮನೆಯಲ್ಲಿ ಆರಾಮವಾಗಿ ಕಾಳ ಕಳೆಯುತ್ತಿರುವ ಅದಾ, ಖುಷಿಯಾಗಿದ್ದಾರೆ. ಮನೆಯನ್ನು ಬಾಡಿಗೆ ಪಡೆದಿರುವ ಅದಾ, ತಮ್ಮ ಕುಟುಂಬದ ಜೊತೆ ವಾಸವಾಗಿದ್ದಾರೆ. ಸಂದರ್ಶನದಲ್ಲಿ ಅದಾ ಶರ್ಮಾ, ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

Tap to resize

Latest Videos

ಬಿಗ್ ಬಾಸ್ ಮನೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿದು ಅನ್ಫಿಟ್ ಅಂತ ಕಣ್ಣೀರಿಟ್ಟ ಧನರಾಜ್!

ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅದಾ ಶರ್ಮಾ, ಮನೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಇರುವಿಕೆ ಭಾಸವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಂದರ್ಶನದಲ್ಲಿ ನಿರೂಪಕರು, ಸುಶಾಂತ್ ಅವರ ಉಪಸ್ಥಿತಿಯನ್ನು ಅನುಭವಿಸಿದ್ದೀರಾ? ಆ ಮನೆಯಲ್ಲಿ ನಿಮಗೆ ಹೆದರಿಕೆಯಾಗುತ್ತಾ? ನೀವು ಭಯಪಡುವ ಏನಾದ್ರೂ ಘಟನೆ ನಡೆದಿದೆಯಾ ಎಂಬೆಲ್ಲ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅದಾ ಶರ್ಮಾ, ನನಗೆ ಅನ್ನಿಸಿದೆ ಆದ್ರೆ… ಎನ್ನುತ್ತಲೇ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿದ್ದಾರೆ.

ನಾನು ಹೋದಲ್ಲೆಲ್ಲ ನನಗೆ ಇಂಥ ಪ್ರಶ್ನೆಗಳು ಸಾಮಾನ್ಯ. ಸುಶಾಂತ್ ಮನೆಯಲ್ಲಿ ನಿಮಗೆ ಭಯವಾಗುವುದಿಲ್ಲವೇ ಎಂದು ಕೇಳ್ತಾರೆ. ನನಗೆ ಅನ್ನಿಸಿದೆ, ಆದ್ರೆ ನನ್ನ ಪ್ರಕಾರ ಭಯದ ಬಗ್ಗೆ ಪ್ರಶ್ನೆ ಕೇಳುವುದು ಸರಿಯಲ್ಲ. ನನಗೆ ಹೆದರಿಕೆಯಾಗುವುದಿಲ್ಲ. ನೀವು ಒಳ್ಳೆಯವರಾಗಿದ್ದರೆ ಜೀವನದಲ್ಲಿ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ ಅದಾ ಶರ್ಮಾ.

ಸುಶಾಂತ್ ಸಿಂಗ್ ರಜಪೂತ್ ಅವರ ಕೆಲಸ ಮತ್ತು ಅವರ ಅದ್ಭುತ ಅಭಿನಯಕ್ಕಾಗಿ ಅವರನ್ನು ನೆನಪಿಸಿಕೊಳ್ಳಬೇಕು. ಸುಶಾಂತ್ ಪ್ರತಿಭಾವಂತ ನಟ. ಅವರ ಕೆಲಸ ಮತ್ತು ಪಾತ್ರಗಳಿಗಾಗಿ ಅವರನ್ನು ಗುರುತಿಸಬೇಕು. ಯಾರ ಬಗ್ಗೆಯೂ ಕಾಮೆಂಟ್ ಮಾಡುವ ವ್ಯಕ್ತಿಯಾಗಲು ನಾನು ಬಯಸುವುದಿಲ್ಲ ಎಂದು ಅದಾ ಶರ್ಮಾ ಹೇಳಿದ್ದಾರೆ. 

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿ ಇರುವ ಅದಾ ಶರ್ಮಾ, ಸದ್ಯ ರೀನಾ ಸನ್ಯಾಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಇದ್ರ ಪ್ರಚಾರದಲ್ಲಿ ಅದಾ ಶರ್ಮಾ, ಸುಶಾಂತ್ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. 

ರೈಲಲ್ಲಿ ಜೈ ಶ್ರೀರಾಮ್‌ ಘೋಷಣೆ ಪ್ರಶ್ನಿಸಿದ ನಟಿ ಪೂಜಾ ಭಟ್‌ಗೆ ನೆಟ್ಟಿಗರ ಕ್ಲಾಸ್

ಸುಶಾಂತ್ ಸಿಂಗ್ ರಜಪೂತ್ 34ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಮೃತದೇಹ ಜೂನ್ 14, 2020 ರಂದು  ಮುಂಬೈನ ಬಾಂದ್ರಾದಲ್ಲಿರುವ ಪ್ಲಾಟ್ ನ ಬೆಡ್ ರೂಮಿನಲ್ಲಿ ಸಿಕ್ಕಿತ್ತು. ಸಾವಿಗೆ ಕಾರಣ ಆತ್ಮಹತ್ಯೆ ಎಂದು ವರದಿಯಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲ ದಿನಗಳಿಂದ ಒತ್ತಡದಲ್ಲಿದ್ದ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ. ಅವರ ಸಾವಿನ ನಂತ್ರ ತನಿಖೆ ನಡೆದಿದೆ. ಆದ್ರೆ ಹತ್ಯೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.  

click me!