ಉದ್ಯಮಿ ಆನಂದ್ ಮಹೀಂದ್ರ ಗಮನಸೆಳೆದ ಕಿಲಾಡಿ ಅಕ್ಷಯ್ ಕುಮಾರ್ ನಡೆ!

Suvarna News   | Asianet News
Published : Mar 02, 2020, 06:26 PM ISTUpdated : Mar 02, 2020, 06:40 PM IST
ಉದ್ಯಮಿ ಆನಂದ್ ಮಹೀಂದ್ರ ಗಮನಸೆಳೆದ ಕಿಲಾಡಿ ಅಕ್ಷಯ್ ಕುಮಾರ್ ನಡೆ!

ಸಾರಾಂಶ

ನಟ ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ಎಷ್ಟು ಯಶಸ್ವಿಯಾಗಿದ್ದಾರೋ, ಸಾಮಾಜಿಕ ಕಾರ್ಯದಲ್ಲಿ ಸೈ ಎನಿಸಿಕೊಂಡಿದ್ದಾರೆ. ನಿರ್ಗತಿಕರಿಗೆ, ಹುತಾತ್ಮ ಸೈನಿಕರ ಕುಟುಬಕ್ಕೆ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ರೀತಿಯಲ್ಲಿ ಅಕ್ಷಯ್ ಕುಮಾರ್ ನೆರವಾಗುತ್ತಿದ್ದಾರೆ. ಇದೀಗ ಅಕ್ಷಯ್ ಕುಮಾರ್ ಕಾರ್ಯಕ್ಕೆ, ಭಾರತೀಯ ಆಟೋಮೊಬೈಲ್ ದಿಗ್ಗಜ ಅನಂದ್ ಮಹೀಂದ್ರ ಶ್ಲಾಘಿಸಿದ್ದಾರೆ. 

ಮುಂಬೈ(ಫೆ.02): ಆಟೋಮೊಬೈಲ್ ದಿಗ್ಗಜ ಆನಂದ್ ಮಹೀಂದ್ರ ಉತ್ತಮ ಕಾರ್ಯವನ್ನು ತಕ್ಷಣವೇ ಶ್ಲಾಘಿಸುತ್ತಾರೆ. ತಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಿದ್ದಾರೆ. ಇನ್ನು ಹಲವರಿಗೆ ನೆರವಾಗಿದ್ದಾರೆ. ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೆಲಸ ಆನಂದ್ ಮಹೀಂದ್ರ ಮೋಡಿ ಮಾಡಿದೆ. 

ಇದನ್ನೂ ಓದಿ: JNU ಹಿಂಸಾಚಾರ: ವೈರಲ್ ಆಯ್ತು ಆನಂದ್ ಮಹೀಂದ್ರಾ ಟ್ವೀಟ್!

ಆನಂದ್ ಮಹೀಂದ್ರ ಟ್ವೀಟ್ ಮೂಲಕ ಅಕ್ಷಯ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಅಕ್ಷಯ್ ಕುಮಾರ್ ಇತ್ತೀಚೆಗೆ ಚೆನ್ನೈಗೆ ಭೇಟಿ ನೀಡಿ ಮಂಗಳಮುಖಿಯರಿಗಾಗಿ ಮನ ನಿರ್ಮಾಣಕ್ಕೆ 1.5 ಕೋಟಿ ರೂಪಾಯಿ ನೀಡಿದ್ದಾರೆ. ಚೆನ್ನೈನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿರುವ ನಟ ಲಾರೆನ್ಸ್ ಅವರ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್‌ಗೆ ಹಣ ನೀಡಿದ್ದಾರೆ. 

 

ಇದನ್ನೂ ಓದಿ: ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ವಿಶೇಷ ಚೇತನ ಮಕ್ಕಳಿಗಾಗಿ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದೆ. ಇದೀಗ ಲಾರೆನ್ಸ್ ಟ್ರಸ್ಟ್ ಮಂಗಳಮುಖಿಯರಿಗಾಗಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಈ ವಿಚಾರ ಅರಿತ ಅಕ್ಷಯ್ ಕುಮಾರ್ ನೇರವಾಗಿ 1.5 ಕೋಟಿ ರೂಪಾಯಿ ನೀಡಿದ್ದಾರೆ. 

ಅಳು ತಡೆಯಲಾಗಲಿಲ್ಲ, ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ!

ಅಕ್ಷಯ್ ಕುಮಾರ್ ಈ ಕಾರ್ಯ ಆನಂದ್ ಮಹೀಂದ್ರ ಗಮನ ಸೆಳೆದಿದೆ. ಸೋಮವಾರ ಬೆಳಗ್ಗೆ ನನ್ನನ್ನು ಹುರಿದುಂಬಿಸುವ ವಿಚಾರ ಇದು ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. 


 

ಅಕ್ಷಯ್ ಕುಮಾರ್ ಮುಂದಿನ ಚಿತ್ರದಲ್ಲಿ ಮಂಗಳಮುಖಿಯಾಗಿ ನಟನೆ ಮಾಡುತ್ತಿದ್ದಾರೆ. ಈಗಾಗಲೇ ಮಂಗಳಮುಖಿಯರ ಅಧ್ಯಯನದಲ್ಲಿ ತೊಡಗಿರುವ ಅಕ್ಷಯ್ ಕುಮಾರ್, ಇದೀಗ ಮನೆ ನಿರ್ಮಾಣಕ್ಕೆ ಕೋಟಿ ರೂಪಾಯಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?