ಮುಸ್ಲಿಂ ಪ್ರಿಯಕರನ ಬಿಟ್ಟು ಸ್ನೇಹಿತೆಯ ಮುಸ್ಲಿಂ ಪತಿಯನ್ನೇ ಮದ್ವೆಯಾದವರು ಬಾಲಿವುಡ್ ನಟಿ ಅಮೃತಾ ಅರೋರಾ. ಇವರ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ ಇಲ್ಲಿದೆ.
ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನು ಮದ್ವೆಯಾಗುತ್ತಿರುವುದು ಈಗ ಲವ್ ಜಿಹಾದ್ (Love Jihad) ಎನಿಸಿಕೊಂಡಿದೆ. ಆದರೆ ಹಿಂದೂ ನಟಿಯರು ಮುಸ್ಲಿಂ ನಟರನ್ನೋ ಇಲ್ಲವೇ ಇನ್ನಾವುದೋ ಕ್ಷೇತ್ರದ ಶ್ರೀಮಂತರನ್ನು ಮದ್ವೆಯಾಗಿರುವ ದೊಡ್ಡ ಗುಂಪೇ ಇದೆ. ಮುಸ್ಲಿಂ ಯುವಕರಿಗೆ ಎರಡನೆಯ ಪತ್ನಿಯಾಗಿ ಹೋಗಿದ್ದೂ ಇದೆ, 2-3 ಮಕ್ಕಳನ್ನು ತಂದೆಯನ್ನೂ ಮದ್ವೆಯಾಗಿದ್ದಾರೆ. ಹಣಕ್ಕಾಗಿ, ಅಧಿಕಾರಕ್ಕಾಗಿ, ಸಿನಿ ರಂಗದಲ್ಲಿ ನೆಲೆಯೂರುವುದಕ್ಕಾಗಿ, ಆಗರ್ಭ ಶ್ರೀಮಂತಿಕೆಗೆ ಮರುಳಾಗಿ... ಹೀಗೆ ಹಲವಾರು ರೀತಿಯಲ್ಲಿ ಹಿಂದೂ ನಟಿಯರನ್ನು ವ್ಯಾಖ್ಯಾನಿಸಿರುವುದು ಇದ್ದರೂ ಅದಾವುದಕ್ಕೂ ಕ್ಯಾರೇ ಮಾಡದೇ ಹೀಗೆ ಮದುವೆಯಾದ ಕೆಲವು ನಟಿಯರು ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಇನ್ನು ಕೆಲವರು ತಪ್ಪು ಮಾಡಿರುವುದಾಗಿ ಹೇಳಿಕೊಂಡು ವಿಚ್ಛೇದನ ಪಡೆದು ತಾವು ಅನುಭವಿಸಿರುವ ಕರಾಳ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದೀಗ ಅಂಥದ್ದೇ ಒಂದು ಇಂಟರೆಸ್ಟಿಂಗ್ ಲವ್ ಸ್ಟೋರಿಯ ವಿಷಯ ಹೊರಬಂದಿದೆ.
ಇದು, ಖ್ಯಾತ ನಟಿ, ಹಾಲಿಯಲ್ಲಿ ಸದಾ ಹಾಟ್ ಟಾಪಿಕ್ ಆಗಿರುವ ನಟಿ ಮಲೈಕಾ ಅರೋರಾ ಅವರ ತಂಗಿ ಅಮೃತಾ ಅರೋರಾ (Amrutha Arora) ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಶಕೀಲ್ ಲಡಾಕ್ ನಡುವಿನ ಪ್ರೇಮ್ ಕಹಾನಿ ಇದು. ಇವರು ಮದುವೆಯಾಗಿ 14 ವರ್ಷಗಳ ಬಳಿಕ ಮತ್ತೊಮ್ಮೆ ಇವರ ಲವ್ ಸ್ಟೋರಿ ವೈರಲ್ ಆಗಿದೆ. ಅಷ್ಟಕ್ಕೂ ಇವರ ಪ್ರೇಮ್ ಕಹಾನಿಯೇ ಕುತೂಹಲವಾಗಿದೆ. ಕಾಮನ್ ಫ್ರೆಂಡ್ಸ್ ಮೂಲಕ ಪ್ರೇಮಿಗಳು ಹೆಚ್ಚಾಗಿ ಪರಿಚಯವಾಗುವ ಬಗ್ಗೆ ಚಿತ್ರಗಳಲ್ಲಿ ನೋಡಿರುತ್ತೇವೆ. ಅಸಲಿಗೆ ಇವರ ಲವ್ ಸ್ಟೋರಿ ಶುರುವಾಗಿದ್ದು ಹಾಗೆನೇ. ಆದರೆ, ಅಮೃತಾ ತನ್ನ ಸ್ನೇಹಿತೆಯ ಪತಿಯನ್ನೇ ವರಿಸಿರುವುದು ಮಾತ್ರ ಕುತೂಹಲವಾಗಿದೆ. ಅದೂ ತನ್ನ ಮುಸ್ಲಿಂ ಸ್ನೇಹಿತನನ್ನು ಬಿಟ್ಟು, ಪತಿಯ ಮುಸ್ಲಿಂ ಪತಿಯನ್ನು ಮದುವೆಯಾಗುವ ಮೂಲಕ ಸಕತ್ ಸುದ್ದಿಯಾಗಿದ್ದಾರೆ.
Hrithik Roshan: ಡಿವೋರ್ಸ್ ಬಳಿಕ 'ಚಳಿಗಾಲದ ಪ್ರೇಯಸಿ' ಜೊತೆ ಕಂಗನಾ ಎಕ್ಸ್! ಜ್ಯೋತಿಷಿ ಮಾತು ನಿಜವಾಗತ್ತಾ?
ಅಸಲಿಗೆ ಈ ಕಥೆ ಶುರುವಾಗುವುದು ಹೀಗೆ: ಶಕೀಲ್ (Shakeel Ladakh) ಅವರು ಅಮೃತಾ ಅವರ ಸ್ನೇಹಿತೆ ನಿಶಾ ರಾಣಾ ಎಂಬ ಯುವತಿಯನ್ನು 2006ರಲ್ಲಿ ಮದುವೆಯಾಗಿದ್ದರು. ಆ ಸಮಯದಲ್ಲಿ ಅಮೃತಾ ಖ್ಯಾತ ಕ್ರಿಕೆಟಿಗ ಉಸ್ಮಾನ್ ಅಫ್ಜಾಲ್ ಜೊತೆ ಸಂಬಂಧದಲ್ಲಿದ್ದರು. ಶಕೀಲ್ ಅವರು ಸ್ನೇಹಿತೆಯ ಪತಿಯಾಗಿರುವ ಕಾರಣ, ಅವರ ಭೇಟಿಯೂ ಆಗುತ್ತಿತ್ತು. ಎರಡು ವರ್ಷ ಈ ಎರಡೂ ಜೋಡಿ ಚೆನ್ನಾಗಿಯೇ ತಂತಮ್ಮ ಲೋಕದಲ್ಲಿ ತೇಲಾಡುತ್ತಿದ್ದರು. ಈ ನಡುವೆ ಶಕೀಲ್ ಮತ್ತು ಅಮೃತಾ ಅವರ ಭೇಟಿಯಾಗಿರಲಿಲ್ಲ. ಆದರೆ 2008ರಲ್ಲಿ ಆಕಸ್ಮಿಕವಾಗಿ ಈ ಇಬ್ಬರ ಭೇಟಿಯಾಯಿತು. ಈ ಬಾರಿ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿತ್ತು, ಏಕೆಂದರೆ ಶಕೀಲ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದರೆ, ಅಮೃತಾ ಅವರು ತಮ್ಮ ಲಿವ್ ಇನ್ ಪಾರ್ಟನರ್ ಕ್ರಿಕೆಟಿಗ ಉಸ್ಮಾನ್ ಅಫ್ಜಾಲ್ ಜೊತೆ ಸಂಬಂಧ ಕಳಚಿಕೊಂಡಿದ್ದರು. ಆದ್ದರಿಂದ ಇಬ್ಬರೂ ಒಂಟಿಯಾಗಿ ಬದುಕುತ್ತಿದ್ದರು. ಇಬ್ಬರೂ ತಮ್ಮ ತಮ್ಮ ಕಥೆಯನ್ನು ಹಂಚಿಕೊಂಡಾಗ ಇಬ್ಬರ ಮನಸ್ಸೂ ಒಂದಾಯಿತು. ಪ್ರೀತಿಯಲ್ಲಿ ಬಿದ್ದರು.
ಇಷ್ಟೊತ್ತಿಗಾಗಲೇ ಈ ವಿಷಯ ಶಕೀಲ್ ಅವರ ವಿಚ್ಛೇದಿತ (Divorce) ಪತ್ನಿ ಅರ್ಥಾತ್ ಅಮೃತಾ ಅವರ ಆತ್ಮೀಯ ಸ್ನೇಹಿತೆ ನಿಶಾ ಅವರ ಕಿವಿಗೆ ಬಿತ್ತು. ಅವರು ಕೆಂಡಾಮಂಡಲವಾದರು. ತಮ್ಮ ಪತಿ ಆಕೆಗಾಗಿಯೇ ತಮ್ಮನ್ನು ತೊರೆದಿದ್ದಾರೆ ಎಂದು ಅವರು ಕೋಪಗೊಂಡರು. ಇಬ್ಬರಿಗೂ ಮೊದಲೇ ಸಂಬಂಧವಿತ್ತು ಎನ್ನುವುದು ಅವರ ವಾದ. ತಮ್ಮ ಸ್ನೇಹಿತೆ ತಮಗೆ ಮೋಸ ಮಾಡಿರುವುದಾಗಿ ದೊಡ್ಡ ರಾದ್ಧಾಂತ ಮಾಡಿದರು. ತಡ ಮಾಡದ ಅವರು, ಪತ್ರಕರ್ತರನ್ನು ಕರೆಸಿ ಈ ವಿಷಯವನ್ನು ಜಗಜ್ಜಾಹೀರಗೊಳಿಸಿದರು.
ಪಾಕ್ನ 'ನಿಗೂಢ ಲೇಡಿ' ಸೀಮಾ ಹೈದರ್ಗೆ ಬಾಲಿವುಡ್ಗೆ ಆಫರ್? ಆರು ಲಕ್ಷ ರೂ. ಸಂಬಳ !
ಈ ಸಂದರ್ಭದಲ್ಲಿ ಅಮೃತಾ ಅವರ ತಾಯಿ ಜಾಯ್ಸ್ ಅರೋರಾ (Joys Arora) ಅವರು ಮಗಳ ನೆರವಿಗೆ ಬಂದರು. ಪತ್ನಿಗೆ ವಿಚ್ಛೇದನ ಕೊಟ್ಟ ಬಳಿಕವಷ್ಟೇ ಮಗಳನ್ನು ಶಕೀಲ್ ಮದುವೆಯಾಗಿವುದುಅಗಿ ಹೇಳಿದರು. ಅಷ್ಟಕ್ಕೂ ಇಲ್ಲೊಂದು ಕುತೂಹಲದ ವಿಷಯವಿದೆ. ಅದೇನೆಂದರೆ ಅಮೃತಾ ಅವರ ತಾಯಿ ಕ್ರೈಸ್ತರಾಗಿದ್ದು, ತಂದೆ ಹಿಂದೂವಾಗಿದ್ದಾರೆ. ಈಗ ಮಗಳು ಮುಸ್ಲಿಂನನ್ನು ವರಿಸಿ ಮದುವೆಯಾದರು. ಇವರ ಮದುವೆ ಅದ್ಧೂರಿಯಾಗಿ ನಡೆಯಿತು. 2009ರಲ್ಲಿ ಮುಂಬೈನ ಪ್ರಸಿದ್ಧ ಆಲಿವ್ಸ್ ರೆಸ್ಟೋರೆಂಟ್‌ನಲ್ಲಿ ಮದುವೆ ನಡೆಯಿತು. ಸುಖಿ ಸಂಸಾರ ನಡೆಸುತ್ತಿರುವ ಈ ಜೋಡಿಗೆ ಈಗ ಇಬ್ಬರು ಮಕ್ಕಳು.