13ನೇ ವಯಸ್ಸಿಗೇ ರಜನಿಕಾಂತ್‌ ತಾಯಿ ಪಾತ್ರ ಮಾಡಿದ್ರು ಶ್ರೀದೇವಿ!

By Suvarna NewsFirst Published Aug 2, 2023, 4:02 PM IST
Highlights

ಬಾಲಿವುಡ್‌ನ ದಂತಕತೆ ಶ್ರೀದೇವಿ ಬಾಲನಟಿಯಾಗಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದು ನಿಮಗೆಲ್ಲ ಗೊತ್ತು. ಆದರೆ ಈ ನಟಿ ರಜನೀಕಾಂತ್‌ ಅವರಿಗೆ ಮಲತಾಯಿ ಪಾತ್ರ ಮಾಡಿದ್ದು ಗೊತ್ತಾ?

ಅತಿಲೋಕ ಸುಂದರಿ ಶ್ರೀದೇವಿ ಅಂದರೆ ಇವತ್ತಿಗೂ ಸಿನಿಮಾ ಪ್ರಿಯರು ಭಾವುಕರಾಗುತ್ತಾರೆ. ಅಂಥಾ ಪ್ರತಿಭಾವಂತ ನಟಿಗೆ ಅಂಥಾ ಸಾವು ಬರಬಾರದಿತ್ತು ಅಂತ ನೊಂದು ನುಡಿಯುತ್ತಾರೆ. ಜೊತೆಗೆ ಶ್ರೀದೇವಿ ನಟನೆಯ ಸಿನಿಮಾಗಳನ್ನು, ಆಕೆಯ ನಟನಾ ಕೌಶಲವನ್ನು, ಸೌಂದರ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ಶ್ರೀದೇವಿ ಬಹುಭಾಷಾ ನಟಿಯಾಗಿ ಚಿತ್ರರಂಗ ಆಳಿದವರು. ಭಾರತೀಯ ಸಿನಿರಂಗದ ಮೊತ್ತ ಮೊದಲ ಮಹಿಳಾ ಸೂಪರಸ್ಟಾರ್ ಎಂದು ಇವರನ್ನು ಕರೆಯುತ್ತಾರೆ. ತಮಿಳು ಹಿಂದಿ, ತೆಲಗು, ಮಲಯಾಳಂ ಮತ್ತು ಕನ್ನಡ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ರಾಷ್ಟೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ. 1963 ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿಯ ತಂದೆ ಅಯ್ಯಪ್ಪನ್ ವಕೀಲರಾದರೆ ತಾಯಿ ರಾಜೇಶ್ವರಿ ಗೃಹಿಣಿ.

ಶ್ರೀದೇವಿ ಅವರದು ಸುಮಾರು 50 ವರ್ಷಗಳ ಸಿನಿಮಾ ಜರ್ನಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿ ಶ್ರೀದೇವಿ ಅವರು ತಮ್ಮ ಚಿತ್ರ ಜೀವನದಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಂದು ತನ್ನ 50 ವರ್ಷದ ಜರ್ನಿಯಲ್ಲಿ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದ್ದಾರೆ. ಇನ್ನೊಂದು ಅಚ್ಚರಿಯ ವಿಚಾರ ಅನೇಕರಿಗೆ ಗೊತ್ತಿಲ್ಲ. ಶ್ರೀದೇವಿ ಅವರು ಸೂಪರ್‌ಸ್ಟಾರ್ ರಜನೀಕಾಂತ್‌ ಜೊತೆಗೆ ನಟಿಸಿದ್ದರು. ಅದು ತನ್ನ ೧೩ನೇ ವಯಸ್ಸಿನಲ್ಲಿ. ಇನ್ನೊಂದು ನಂಬಲಾಗದ ಸಂಗತಿ ಏನು ಗೊತ್ತಾ? ಅಷ್ಟು ಎಳೆಯ ಹುಡುಗಿ ರಜನಿಕಾಂತ್‌ ಜೊತೆಗೆ ಕಾಣಿಸಿಕೊಂಡಿದ್ದು ಅವರ ಮಗಳ ಪಾತ್ರದಲ್ಲಿ ಅಲ್ಲ, ಬದಲಿಗೆ ಅಮ್ಮನ ಪಾತ್ರದಲ್ಲಿ. ಎಸ್. ಆ ಸಿನಿಮಾದ ಹೆಸರು 'ಮೂಂದ್ರು ಮುಡಿಚು' ಅಂತ. 1976ರಲ್ಲಿ ತೆರೆಕಂಡ ಚಿತ್ರವಿದು. ತನಗೆ ಮಲತಾಯಿ ಪಾತ್ರವಾದರೂ ಅದನ್ನು ಬಹಳ ಶ್ರದ್ಧೆಯಿಂದ ನಟಿಸಿದ ಶ್ರೀದೇವಿಗೆ ರಜನಿಕಾಂತ್‌ ಸೇರಿದಂತೆ ಹಲವು ದೊಡ್ಡವರು ಭೇಷ್ ಅಂದರಂತೆ.

Latest Videos

ಧರ್ವವನ್ನೇ ಬದಲಿಸಿಕೊಂಡು ಹೇಮ ಮಾಲಿನಿಯನ್ನು ವರಿಸಿದ ಧರ್ಮೇಂದ್ರ ಜೊತೆಗೇಕಿಲ್ಲ?

ಶ್ರೀಅಮ್ಮಯಂಗರ್ ಅಯ್ಯಪ್ಪನ್ ಹೆಸರಿನಿಂದ ಜನಿಸಿದ ಶ್ರೀದೇವಿ ನಾಲ್ಕು ವರ್ಷದ ಮಗುವಿದ್ದಾಗಲೇ ಸಿನಿಮಾ ರಂಗಕ್ಕೆ ಬಾಲನಟಿಯಾಗಿ ಎಂಟ್ರಿಕೊಟ್ಟ ಶ್ರೀದೇವಿ ಮೊದಲ ಸಿನಿಮಾದಲ್ಲಿ ಮುರುಗನ್ ದೇವರ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಈ ಮಹಾನ್‌ ನಟಿಯ ಬಗ್ಗೆ ಸಾಕಷ್ಟು ದಂತಕತೆಗಳಿವೆ. ನೂರ ಮೂರು ಡಿಗ್ರಿ ಜ್ವರದಲ್ಲೂ ಈಕೆ ನಟಿಸಿದ್ದು. ಹಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಸ್ಟೀವನ್‌ ಸ್ಟಿಲ್‌ಬರ್ಗ್ ತನ್ನ ಜುರಾಸಿಕ್‌ ಪಾರ್ಕ್ ಸಿನಿಮಾದಲ್ಲಿ ನಟಿಸುವಂತೆ ಈಕೆಯನ್ನು ಕೇಳಿದ್ದು. ಆದರೆ ಆಗ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಈ ನಟಿ ಈ ಅವಕಾಶವನ್ನು ತಿರಸ್ಕರಿಸಿದ್ದು ಹೀಗೆ. ಈಕೆಯ ಇಡೀ ಬದುಕೇ ಸಿನಿಮಾದ ಹಾಗಿತ್ತು. 1967 ರಲ್ಲಿ ತೆರೆಕಂಡ ತಮಿಳು ಕಂದನ್ ಕರುಣಯೈ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶ್ರೀದೇವಿ 1976 ರಲ್ಲಿ ಕೆ.ಬಾಲಚಂದರ್ ಚಿತ್ರದ ಮೂಲಕ ನಾಯಕಿಯಾದರು.

ನಂತರ ಕೆಲ ಕಾಲ ದಕ್ಷಿಣ ಚಿತ್ರರಂಗದ ನಾಲ್ಕು ಭಾಷೆಗಳಲ್ಲಿ ನಟಿಸಿದ ಇವರು 1979 ರಲ್ಲಿ ಹಿಂದಿ ಚಿತ್ರರಂಗ (bollywood) ಪ್ರವೇಶಿಸಿದರು. ಬಾಲಿವುಡ್ ನಲ್ಲಿ ಶ್ರೀದೇವಿ- ಜಿತೇಂದ್ರ ಜೋಡಿ ತುಂಬಾ ಪ್ರಸಿದ್ಧಿಯಾಯಿತು, ಈ ಜೋಡಿ ಒಟ್ಟಾಗಿ ನಟಿಸಿದ 16 ಚಿತ್ರಗಳಲ್ಲಿ 13 ಚಿತ್ರಗಳು ಹಿಟ್ ಆದವು. ಹಾಗೇ ತಮಿಳಿನ ಸದ್ಮಾ ಚಿತ್ರ ಕೂಡ ಶ್ರೀದೇವಿಗೆ ತುಂಬಾ ಖ್ಯಾತಿ ತಂದು ಕೊಟ್ಟಿತು. ನಂತರ ಬಂದ ನಾಗಿನಾ, ಮಿ, ಇಂಡಿಯಾ ಚಿತ್ರಗಳು ಕೂಡ ಶ್ರೀದೇವಿಯನ್ನು ಭಾರತದ ಬಹುದೊಡ್ಡ ಸೂಪರ್ ಸ್ಟಾರ್(super star) ನಟಿಯನ್ನಾಗಿ ಮಾಡಿದವು.

100 ರೂ. ಇಟ್ಕೊಂಡು ಮುಂಬೈಗೆ ಬಂದು 11 ಸಾವಿರ ಕೋಟಿ ದುಡಿದ ಶಾರುಖ್ ಖಾನ್ ಪಕ್ಕದ ಮನೆ ವ್ಯಕ್ತಿ!

1996ರಲ್ಲಿ ಬೋನಿ ಕಪೂರ್ ಅವರನ್ನ ಶ್ರೀದೇವಿ ಅವರು ಮದುವೆಯಾದರು (marriage). ಬಳಿಕ 2006ರಲ್ಲಿ `ಇಂಗ್ಲೀಷ್ ವಿಂಗ್ಲೀಷ್’ ಸಿನಿಮಾ (cinema)  ಮೂಲಕ ನಟಿ ಮತ್ತೆ ಕಮ್ ಬ್ಯಾಕ್ ಆಗಿ ಸಕ್ಸಸ್ ಕಂಡರು. 2018ರಲ್ಲಿ ಶ್ರೀದೇವಿ ಅವರು ನಿಧನರಾದರು. ಅವರ ಅನಿರೀಕ್ಷಿತ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಆದರೆ ಶ್ರೀದೇವಿ ಹದಿಮೂರನೇ ವಯಸ್ಸಿನಲ್ಲಿ ಮಲತಾಯಿ ಪಾತ್ರ ಮಾಡಿದ್ದಾಗ ತಾನು ಮುಂದೊಂದು ದಿನ ಭಾರತೀಯ ಚಿತ್ರರಂಗದ ಅನಭಿಷಿಕ್ತ ರಾಣಿಯಾಗಿ ಮಿಂಚುತ್ತೇನೆ ಅಂತ ಕನಸಲ್ಲೂ ಅಂದುಕೊಂಡಿರಲಿಕ್ಕಿಲ್ಲ ಅನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಆಪ್ತರು.

click me!