57ನೇ ವಯಸ್ಸಲ್ಲೂ ಶಾರುಖ್​ ಹ್ಯಾಂಡ್​ಸಮ್​ ಆಗಿರೋದ್ಯಾಕೆ? ಆನಂದ್​ ಮಹೀಂದ್ರಾ ಉತ್ತರ ಕೇಳಿ...

By Suvarna News  |  First Published Aug 2, 2023, 5:29 PM IST

57ನೇ ವಯಸ್ಸಲ್ಲೂ ಶಾರುಖ್​ ಹ್ಯಾಂಡ್​ಸಮ್​ ಆಗಿರೋದ್ಯಾಕೆ? ಜವಾನ್​ ಚಿತ್ರದ ಜಿಂದಾ ಬಂದಾ ನ್ಯತ್ಯವನ್ನು ನೋಡಿ ಫಿದಾ ಆಗಿರುವ ಉದ್ಯಮಿ ಆನಂದ್​  ಮಹೀಂದ್ರಾ ಹೇಳಿದ್ದೇನು?
 


ಎವರ್​ಗ್ರೀನ್​ ನಟ, ಬಾಲಿವುಡ್​ ಬಾದ್​ಶಾಹ್​ ಎಂದೆಲ್ಲಾ ಕರೆಸಿಕೊಳ್ತೀರೋ ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ ಈಗ 57 ವರ್ಷ ವಯಸ್ಸು. ವಯಸ್ಸು 50 ದಾಟುತ್ತಿದ್ದಂತೆಯೇ ಕೆಲಸದಲ್ಲಿ ಆಸಕ್ತಿ ಇಲ್ಲದೇ, ಅಥವಾ ಕಡಿಮೆ ಪ್ರಯಾಸದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಲು ಬಯಸುವವರು ಹಲವರು. ಇನ್ನು ಕೆಲವರು 40 ದಾಟುತ್ತಿದ್ದಂತೆಯೇ ವಯೋವೃದ್ಧರ ರೀತಿಯಲ್ಲಿ ವರ್ತಿಸುವುದೂ ಇದೆ. ಆದರೆ ವಯಸ್ಸು 60-70 ದಾಟಿದರೂ ಕೆಲ ಸಿನಿ ತಾರೆಯರು ಇಂದಿಗೂ ಫಿಟ್​ ಆ್ಯಂಡ್​ ಫೈನ್​ ಆಗಿ ಶೈನ್​ ಆಗುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ನಟ ಶಾರುಖ್​ ಖಾನ್​. ಅವರ ಎನರ್ಜಿಗೆ ಸಾಕ್ಷಿಯಾದದ್ದು ಪಠಾಣ್​ ಚಿತ್ರ ಹಾಗೂ ಇದೀಗ ಸದ್ದು ಮಾಡುತ್ತಿರುವ ಜವಾನ್​. ಜವಾನ್​ ಚಿತ್ರದ ಜಿಂದಾ ಬಂದಾ ಹಾಡು ಬಿಡುಗಡೆಯಾಗಿದ್ದು, ಸಕತ್​ ಸದ್ದು ಮಾಡುತ್ತಿದೆ. ಹೌದು. 57ರ ಹರೆಯದಲ್ಲಿಯೂ ಈ ಹಾಡಿನಲ್ಲಿ ಶಾರುಖ್​ 27ರ ಯುವಕರಂತೆ ಕುಣಿದು ಕುಪ್ಪಳಿಸಿದ್ದಾರೆ. ಅವರ ಎನರ್ಜಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಹಾಡು ಬಿಡುಗಡೆಯಾಗುತ್ತಲೇ ಕೇವಲ 24 ಗಂಟೆಯೊಳಗೆ 46 ಮಿಲಿಯನ್​ ವ್ಯೂಸ್​ ಅಂದರೆ 4.6 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಇದೊಂದು ದೊಡ್ಡ ದಾಖಲೆಯೇ ಎನ್ನಲಾಗುತ್ತಿದೆ.  

ಶಾರುಖ್​ ಅವರ ಎನರ್ಜಿಯನ್ನು ಕಂಡು ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ (Anand Mahindra) ಅವರು ಫಿದಾ ಆಗಿದ್ದಾರೆ. ಆಗಿಂದಾಗ್ಗೆ ಹಲವಾರು ಪೋಸ್ಟ್​ಗಳನ್ನು ಆನಂದ್​  ಮಹೀಂದ್ರಾ ಅವರು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಉತ್ಸಾಹಭರಿತ, ಸ್ಫೂರ್ತಿದಾಯಕ ಕಥೆಗಳನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟೀವ್​ ಇರುವವರಲ್ಲಿ ಒಬ್ಬರು ಆನಂದ್​ ಮಹೀಂದ್ರಾ. ಈಗ ಅವರು ನಟ ಶಾರುಖ್​ ಅವರ ಜಿಂದಾ ಬಂದಾ ಹಾಡನ್ನು ವೀಕ್ಷಿಸಿದ್ದು, ಶಾರುಖ್​ ಅವರ ಡ್ಯಾನ್ಸ್​, ಅವರ ಎನರ್ಜಿಯ ಬಗ್ಗೆ ಹಾಡಿ ಹೊಗಳಿದ್ದಾರೆ. ಈ ವೇಳೆ ಅವರು ಶಾರುಖ್ ಖಾನ್ ಅವರ ಫಿಟ್​ನೆಸ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

Tap to resize

Latest Videos

'ಜವಾನ್​'ನ ಜಿಂದಾಬಂದಾ ಹಾಡಿಗೆ ಹುಚ್ಚೆದ್ದು ಕುಣೀತಿದ್ದಾರೆ ಫ್ಯಾನ್ಸ್​- ಒಂದೇ ದಿನ 46 ಮಿಲಿಯನ್​ ವ್ಯೂಸ್​!

ಶಾರುಖ್ ಖಾನ್ ಅವರು ಫಿಟ್​ನೆಸ್​ಗೆ ಮನಸೋಲದ ಸಿನಿಪ್ರಿಯರು ಇಲ್ಲ ಎನ್ನಬಹುದೇನೋ.  ಜಿಮ್​ನಲ್ಲಿ ನಿತ್ಯ ವರ್ಕೌಟ್, ತಿನ್ನುವ ಆಹಾರದ ಬಗ್ಗೆ ಕಾಳಜಿ, ಡಯೆಟ್​ (Diet) ಫುಡ್​ ಇವೆಲ್ಲವೂ ಅವರನ್ನು ಫಿಟ್​ ಆಗಿರಿಸಿರುವುದು ಹೌದಾದರೂ   ಈ ವಯಸ್ಸಿನಲ್ಲಿ ಅವರು ಆ್ಯಕ್ಷನ್ ದೃಶ್ಯಗಳನ್ನು ಮಾಡುವ ಪರಿ, ಎನರ್ಜೆನಿಟಿಕ್​  ಡ್ಯಾನ್ಸ್ ಮಾಡುತ್ತಿದ್ದರೆ ಅದನ್ನು ಕಣ್​ ಕಣ್​ ಬಿಟ್ಟು ನೋಡುವ ದೊಡ್ಡ ವರ್ಗವೇ ಇವೆ. ಈ ಎನರ್ಜಿ ಜಿಂದಾ ಬಂದಾ ಹಾಡಿನಲ್ಲಿಯೂ ಕಾಣಿಸಿದ್ದು, ಅದರಲ್ಲಿ ಅವರು,  ‘ಈ ಹೀರೋಗೆ ನಿಜವಾಗಿಯೂ 57 ವರ್ಷ ವಯಸ್ಸಾಗಿದೆಯೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಈ ಫಿಟ್​ನೆಸ್​ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿರುವ ಆನಂದ್​ ಮಹೀಂದ್ರಾ ಅವರು, ಬಹುಶಃ ಶಾರುಖ್​ ಖಾನ್​ ಅವರ ದೇಹದಲ್ಲಿ ವಯಸ್ಸಾಗುವ ಪ್ರಕ್ರಿಯೆಯು ಗುರುತ್ವಾಕರ್ಷಣೆಯ ಬಲಗಳನ್ನು ವಿರೋಧಿಸುತ್ತದೆ. ಅರ್ಥಾತ್​ ಅವರ ವಯಸ್ಸು ಹಿಮ್ಮುಖದಲ್ಲಿ ಚಲಿಸುತ್ತಿದೆ. ಅದಕ್ಕಾಗಿಯೇ ಇಷ್ಟೊಂದು ಎನರ್ಜಿ ಅವರಿಗೆ ಬಂದಿದೆ ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ (Reply) ನೀಡಿರುವ ಶಾರುಖ್​ ಖಾನ್​, ಜೀವನವು ತುಂಬಾ ಚಿಕ್ಕದಾಗಿದೆ ಮತ್ತು ವೇಗವಾಗಿ ಓಡಿಹೋಗುತ್ತೆ ಸರ್​. ಅದಕ್ಕಾಗಿ ಸಾಧ್ಯವಾದಷ್ಟು ಮಟ್ಟಿಗೆ ಇರುವ ವಯಸ್ಸಿನಲ್ಲಿಯೇ ಏನೆಲ್ಲ ಬೇಕೋ ಅವುಗಳನ್ನು  ಪ್ರಯತ್ನಿಸುತ್ತೇನೆ.  ಮನರಂಜನೆ ನೀಡುವುದು ನನ್ನ ಉದ್ದೇಶ.  ನಗು.. ಅಳು... ಎಲ್ಲವುಗಳ ನಡುವೆ  ಆಶಾದಾಯಕ ಕೆಲಸ ಮಾಡುತ್ತಾ,  ಇರುವ ದಿನಗಳನ್ನು  ಸಂತೋಷಕ್ಕಾಗಿ ಮೀಸಲಿರಿಸಬೇಕಿದೆ ಎಂದಿದ್ದಾರೆ.  

ಅಂದಹಾಗೆ, ಜವಾನ್​ ಸೆಪ್ಟೆಂಬರ್​ 10ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ.  ನಟಿ ದೀಪಿಕಾ ಪಡುಕೋಣೆ (Deepika Padukone) ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.

Life is so short and fast sir, just trying to keep up with it. Try and entertain as many whatever it takes….laugh..cry…shake…or fly…hopefully make some to swim with the stars….dream for a few moments of joy. https://t.co/3bP8Xth1yG

— Shah Rukh Khan (@iamsrk)
click me!