ಐಶ್ವರ್ಯ ರೈ ಅಭಿಷೇಕ್ ಅವರನ್ನು ಮದ್ವೆಯಾಗಿರುವುದಕದ್ಕೆ ಅಮಿತಾಭ್ ಪುತ್ರಿ ಶ್ವೇತಾ ಅವರಿಗೆ ಸಿಟ್ಟು. ಈಗ ಅವರ ಪುತ್ರಿ ನವ್ಯಾ ನವೇಲಿನೂ ಇದೇ ಹಾದಿ ಹಿಡಿದ್ರಾ ಎನ್ನುವ ಸಂಶಯ ಎದುರಾಗಿದೆ.
ಐಶ್ವರ್ಯ ರೈ ಬಚ್ಚನ್, ಬಚ್ಚನ್ ಕುಟುಂಬದ ಮುದ್ದಿನ ಸೊಸೆ. ತಮ್ಮ ಸೊಸೆಯ ಬಗ್ಗೆ ಇದಾಗಲೇ ಅಮಿತಾಭ್ ಮತ್ತು ಜಯಾ ಅವರು ಹಾಡಿ ಹೊಗಳಿದ್ದಾರೆ. ಆದರೆ ಅಸಲಿಗೆ ಅವರ ಕುಟುಂಬದಲ್ಲಿ ಎಲ್ಲರಿಗೂ ಐಶ್ವರ್ಯ ಕಂಡ್ರೆ ಇಷ್ಟನಾ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರವೂ ಇದೆ. ಈ ಬಗ್ಗೆ ಬಹಳ ಹಿಂದಿನಿಂದಲೂ ಗುಸುಗುಸು ಸುದ್ದಿಯೇ ಇದೆ. ಅದೇನೆಂದರೆ, ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಅವರಿಗೆ ಐಶ್ವರ್ಯ ರೈ ಕಂಡರೆ ಹೊಟ್ಟೆ ಉರಿ ಎನ್ನುವುದು. ಅವರಿಬ್ಬರ ನಡುವೆ ಏನೋ ಸರಿಯಾಗಿಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇದೆ. ಅದ್ಯಾಕೆ ಎಂದರೆ, ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾರನ್ನು ಮದುವೆಯಾಗುವುದನ್ನು ಶ್ವೇತಾ ಬಯಸಿರಲಿಲ್ಲವಂತೆ. ಅಭಿಷೇಕ್ ಅವರು ತಮ್ಮ ಮಾಜಿ ಗೆಳತಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಬೇಕು ಎನ್ನುವುದು ಅವರ ಆಸೆಯಾಗಿತ್ತು. ಇವರಿಬ್ಬರ ಸಂಬಂಧ ಅವರಿಗೆ ಇಷ್ಟವಿತ್ತು. ಏಕೆಂದರೆ ಶ್ವೇತಾ ಯಾವಾಗಲೂ ಕರಿಷ್ಮಾ ಅವರನ್ನು ಪರಿಪೂರ್ಣ ಬಚ್ಚನ್ ಬಹು ಎಂದು ಪರಿಗಣಿಸುತ್ತಿದ್ದರು. ಅಭಿಷೇಕ್ ಕಪೂರ್ ಕುಟುಂಬದ ಅಳಿಯನಾಗಬೇಕೆಂದು ಅವರು ಬಯಸಿದ್ದರು. ಅಭಿಷೇಕ್ ಅವರು ಐಶ್ವರ್ಯರನ್ನು ಮದುವೆಯಾಗುವ ಪಟ್ಟು ಹಿಡಿದಾಗ, ಆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನೆಯವರ ಮೇಲೂ ಶ್ವೇತಾ ಸಾಕಷ್ಟು ಒತ್ತಡ ಹೇರಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಐಶ್ವರ್ಯರನ್ನು ಕಂಡರೆ ಅವರಿಗೆ ಆಗಿ ಬರುವುದಿಲ್ಲ ಎನ್ನುವ ಮಾತಿದೆ.
ಈ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬರಲು ಕಾರಣ, ಅಮಿತಾಭ್ ಬಚ್ಚನ್ ಮೊಮ್ಮಗಳು ಅಂದ್ರೆ ಶ್ವೇತಾ ಅವರ ಪುತ್ರಿ ನವ್ಯಾ ನವೇಲಿ ಕಾಸ್ಮೆಟಿಕ್ ಬ್ರಾಂಡ್ L'Oréal ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಅದರ ವಿಡಿಯೋಗಳನ್ನು ಐಶ್ವರ್ಯ ರೈ ಅವರನ್ನು ಬಿಟ್ಟು ಉಳಿದವರಿಗೆಲ್ಲಾ ಟ್ಯಾಗ್ ಮಾಡಿದ್ದಾರೆ! ಸದ್ಯ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು, ನವ್ಯಾ ನವೇಲಿ ನಂದಾ ಆಗಾಗ್ಗೆ ಮುಖ್ಯಾಂಶದಲ್ಲಿ ಇರುವ ಅತ್ಯಂತ ಪ್ರೀತಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. 25 ವರ್ಷದ ಈಕೆ ತಮ್ಮ ತಾಯಿ ಶ್ವೇತಾ ಬಚ್ಚನ್ ಅವರ ಹೆಜ್ಜೆಗಳನ್ನು ಅನುಸರಿಸಿ ಮುಂದೆ ಬರುತ್ತಿದ್ದಾರೆ. ತಮ್ಮದೇ ಆದ ಆರಾ ಹೆಲ್ತ್ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ಸಮಾಜದ ಒಳಿತಿಗಾಗಿ ಕೆಲಸ ಮಾಡಲು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ.
ಸ್ಮಾರ್ಟ್ಫೋನ್ ಕುರಿತು ಸುಳ್ಳು ಹೇಳಿ ಪೇಚಿಗೆ ಸಿಲುಕಿದ ನಟ ಅಮಿತಾಭ್: 10 ಲಕ್ಷ ದಂಡಕ್ಕೆ ಆಗ್ರಹ
ನವ್ಯಾ ಅವರು ಚಲನಚಿತ್ರ ಪ್ರಪಂಚದಿಂದ ದೂರವಿರಲು ನಿರ್ಧರಿಸಿದ್ದರೂ, ಅವರು ಇತ್ತೀಚೆಗೆ ಕಾಸ್ಮೆಟಿಕ್ ಬ್ರಾಂಡ್ L'Oréal ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈಗ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಜಾಹೀರಾತಿನ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ನವ್ಯಾ ಅವರು ಪೀಚ್-ಹ್ಯೂಡ್ ಕೋ-ಆರ್ಡ್ ಸೆಟ್‌ನಲ್ಲಿ ಸಂಪೂರ್ಣವಾಗಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ಇವರ ಈ ವಿಡಿಯೋ ಅನ್ನು ಕೆಲವರು ಚೆನ್ನಾಗಿದೆ ಎಂದು ಕಮೆಂಟ್ ಮಾಡುತ್ತಿದ್ದರೆ, ಇದು ಚೆನ್ನಾಗಿಲ್ಲ ಎಂದು ಇನ್ನು ಹಲವರು ಹೇಳುತ್ತಿದ್ದಾರೆ. ಇವರು ನಟಿ ಐಶ್ವರ್ಯ ರೈ ಅವರನ್ನು ನೋಡಿ ಕಲಿಯಬೇಕು, ಇಲ್ಲದಿದ್ದರೆ ಇಂಥದ್ದಕ್ಕೆ ಒಪ್ಪಿಕೊಳ್ಳಬಾರದು ಎನ್ನುತ್ತಿದ್ದಾರೆ ಹಲವರು.
ಆದರೆ ಈ ಎಲ್ಲ ಕಮೆಂಟ್ಗಳಿಗಿಂತಲೂ ಮುಖ್ಯವಾಗಿ ಗಮನ ಸೆಳೆದದ್ದು ಅವರು ಈ ವಿಡಿಯೋವನ್ನು ತಮ್ಮ ಮಾಮಿ ಐಶ್ವರ್ಯ ರೈ ಬಚ್ಚನ್ ಅವರಿಗೆ ಟ್ಯಾಗ್ ಮಾಡದ ಕಾರಣ, ಅವರು ವಿಡಿಯೋವನ್ನು ತಾಯಿ, ತಂದೆ, ಅಜ್ಜ, ಅಜ್ಜಿ ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿದ್ದಾರೆ, ಆದರೆ ನಟಿ ಐಶ್ವರ್ಯ ರೈ ಅವರನ್ನು ಮಾತ್ರ ಬಿಟ್ಟಿದ್ದಾರೆ. ಆದ್ದರಿಂದ ನವ್ಯಾ ನವೇಲಿ ಕೂಡ ಅಮ್ಮ ಶ್ವೇತಾರ ಹಾದಿ ಹಿಡಿದು ಮಾಮಿ ಐಶ್ವರ್ಯರನ್ನು ಕಡೆಗಣಿಸ್ತಾ ಇದ್ದಾರೆಯೇ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
ಶೇಕ್ಹ್ಯಾಂಡ್ ಮಾಡುತ್ತಾ ವೃದ್ಧನಿಂದ ಲೈಂಗಿಕ ಕಿರುಕುಳ: ಶಾಕಿಂಗ್ ಹೇಳಿಕೆ ರಿವೀಲ್ ಮಾಡಿದ ನಟಿ ಈಶಾ ಚೋಪ್ರಾ