ಸಂಕಷ್ಟಕ್ಕೆ ಸಿಲುಕಿದ್ರಾ ಅಕ್ಷಯ್ ಕುಮಾರ್? ಬೊರಿವಿಲಿ ಬಳಿಕ ವರ್ಲಿ ಮನೆ ₹80 ಕೋಟಿಗೆ ಮಾರಾಟ

Published : Feb 06, 2025, 06:53 PM IST
ಸಂಕಷ್ಟಕ್ಕೆ ಸಿಲುಕಿದ್ರಾ ಅಕ್ಷಯ್ ಕುಮಾರ್? ಬೊರಿವಿಲಿ ಬಳಿಕ ವರ್ಲಿ ಮನೆ ₹80 ಕೋಟಿಗೆ ಮಾರಾಟ

ಸಾರಾಂಶ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಸತತ ಸಿನಿಮಾ ಹಿನ್ನಡೆ ಬಳಿಕ ಸ್ಕೈ ಫೋರ್ಸ್ 100 ಕೋಟಿ ಕಲೆಕ್ಷನ್ ಮಾಡಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದರ ನಡುವೆ ಅಕ್ಷಯ್ ಕುಮಾರ್ ಇದೀಗ 2ನೇ ಮನೆ ಮಾರಾಟ ಮಾಡಿದ್ದಾರೆ. ಜನವರಿಯಲ್ಲಿ ಬೊರಿವಿಲಿ ಮನೆ ಮಾರಾಟ ಮಾಡಿದ್ದರೆ, ಇದೀಗ ವರ್ಲಿ ಮನೆ. ಅಷ್ಟಕ್ಕೂ ಅಕ್ಷಯ್ ಕುಮಾರ್ ಒಂದು ತಿಂಗಳಲ್ಲಿ 2 ಮನೆ ಮಾರಾಟ ಮಾಡಿದ್ದೇಕೆ?

ಮುಂಬೈ(ಫೆ.06) ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯತ ಸ್ಕೈ ಫೋರ್ಸ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆಕ್ಷಯ್ ಕುಮಾರ್ ನಟನೆ ಕಳೆದ ಹಲವು ಚಿತ್ರಗಳು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಆದರೆ ಸ್ಕೈ ಫೋರ್ಸ್ 100 ಕೋಟಿ ರೂಪಾಯಿ ಗಡಿ ದಾಟಿದೆ. ಈ ಬೆಳವಣಿಗೆಗಳ ನಡುವೆ ನಟ ಅಕ್ಷಯ್ ಕುಮಾರ್ ತಮ್ಮ ಮನೆ ಮಾರಾಟ ಮಾಡಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಜನವರಿಯಲ್ಲಿ ಅಕ್ಷಯ್ ಕುಮಾರ್ ಬೊರಿವಿಲಿ ಮನೆ ಮಾರಾಟ ಮಾಡಿದ್ದರು. ಇದೀಗ ಫೆಬ್ರವರಿಯಲ್ಲಿ ವರ್ಲಿಯಲ್ಲಿರುವ ಮನೆ ಮಾರಾಟ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್  ಸಂಕಷ್ಟಕ್ಕೆ ಸಿಲುಕಿದ್ದಾರಾ ಅನ್ನೋ ಮಾತುಗಳು ಕೇಳಿಬಂದಿದೆ. ಅಷ್ಟಕ್ಕೂ ಅಕ್ಷಯ್ ಕುಮಾರ್ ಮನೆ ಮಾರಾಟ ಮಾಡಿದ್ದೇಕೆ?

80 ಕೋಟಿ ರೂಪಾಯಿಗೆ ಮನೆ ಮಾರಾಟ
ಅಕ್ಷಯ್ ಕುಮಾರ್ ತಮ್ಮ ವರ್ಲಿಯಲ್ಲಿರುವ ಮನೆಯನ್ನು 80 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಈ ಮನೆ ಇದೆ. ಟವರ್ ಬಿನಲ್ಲಿರುವ ಈ ಮನೆ 39ನೇ ಮಹಡಿಯಲ್ಲಿದೆ. 6830 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆ ಇದಾಗಿದೆ. ಇಂಟಿರೀಯರ್ ಸೇರಿದಂತೆ ಎಲ್ಲವೂ ಅಚ್ಚಕಟ್ಟಾಗಿದೆ. ಇನ್ನು ನಾಲ್ಕು ಕಾರು ಪಾರ್ಕಿಂಗ್ ಸ್ಥಳವಕಾಶವೂ ಇದರಲ್ಲಿದೆ. 360 ವೆಸ್ಟ್ ಭಾಗದಲ್ಲಿರುವ ಈ ಮನೆ, ಮುಂಬೈ ನಗರದ ವಿಹಂಗಮ ನೋಟ ಸಿಗಲಿದೆ. ಸಮುದ್ರ ತೀರ, ಸಿಟಿಯ ಉತ್ತಮ ನೋಟ ಕಾಣಸಿಗಲಿದೆ. ಈ ಮನೆಯನ್ನು ಪಲ್ಲವಿ ಜೈನ್ ಹಾಗೂ ಇತರರು ಖರೀದಿಸಿದ್ದಾರೆ. 

ಸ್ಕೈ ಫೋರ್ಸ್ ಗೆಲುವಿನ ಹಾರಾಟ? ಅಕ್ಷಯ್ ಕುಮಾರ್ ಚಿತ್ರದ ಗಳಿಸಿದ್ದೆಷ್ಟು?

ಈ ಮನೆಯ ಮಾರಾಟ ಹಾಗೂ ಸ್ಟ್ಟಾಂಪ್ ಡ್ಯೂಟಿ ಪ್ರಕಿಕ್ರಿಯೆ ಅಂತ್ಯಗೊಂಡಿದೆ. ಇಂಡೆಕ್ಸ್ ಟಾಪ್.ಕಾಮ್ ಈ ಕುರಿತು ಮಾಹಿತಿ ನೀಡಿದೆ. ಜನವರಿ ತಿಂಗಳ ಎರಡನೇ ವಾರದಲ್ಲಿ ಅಕ್ಷಯ್ ಕುಮಾರ್ ಬೊರಿವಿಲಿಯಲ್ಲಿರುವ ಮನೆಯನ್ನು ಅಕ್ಷಯ್ ಕುಮಾರ್ ಮಾರಾಟ ಮಾಡಿದ್ದರು. ಬೊರಿವಿಲಿಯಲ್ಿ ಒಬೆರಾಯ್ ರಿಯಾಲ್ಟಿಯ ಅಪಾರ್ಟ್‌ಮೆಂಟ್‌ನಲ್ಲಿದ್ದ ಮನೆಯನ್ನು ಮಾರಾಟ ಮಾಡಲಾಗಿತ್ತು. ಇದು ನಾರ್ಮಲ್ ಮನೆಯಾಗಿತ್ತು. ಹೂಡಿಕೆ ಕಾರಣಕ್ಕಾಗಿ ಅಕ್ಷಯ್ ಕುಮಾರ್ ಈ ಮನೆ ಖರೀದಿಸಿದ್ದರು. 2017ರಲ್ಲಿ ಅಕ್ಷಯ್ ಕುಮಾರ್ 2.38 ಕೋಟಿ ರೂಪಾಯಿಗೆ ಈ ಮನೆ ಖರೀದಿಸಿದ್ದರು. ಆದರೆ 2025ರ ಜನವರಿಯಲ್ಲಿ ಈ ಮನೆಯನ್ನು 4.25 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಇದು 1,073 ಚದರ ಅಡಿಯ ಸಣ್ಣ ಮನೆಯಾಗಿತ್ತು. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಕಾರಣದಿಂದ ಈ ಮನೆಯನ್ನು ಅಕ್ಷಯ್ ಕುಮಾರ್ ಖರೀದಿಸಿದ್ದರು. ಇದೀಗ ಶೇಕಡಾ 80 ರಷ್ಟು ಲಾಭದ ಮೂಲಕ ಈ ಮನೆ ಮಾರಾಟ ಮಾಡಿದ್ದಾರೆ. ಈ ಮನೆ 3 ಬೆಡ್ ರೂಂ ಹೊಂದಿರುವ ಡೂಪ್ಲೆಕ್ಸ್ ಮನೆಯಾಗಿದೆ. ಇದಕ್ಕೆ ಎರಡು ಕಾರು ಪಾರ್ಕಿಂಗ್ ಸ್ಥಳವಕಾಶವಿದೆ.

ಮನೆ ಮಾರಾಟ ಮಾಡಿದ್ದೇಕೆ?
ಬೊರಿವಿಲಿ ಮನೆಯನ್ನು ಅಕ್ಷಯ್ ಕುಮಾರ್ ಮಾರಾಟ ಮಾಡಲು ಹೂಡಿಕೆ ಹಾಗೂ ಲಾಭವೇ ಕಾರಣ. ಶೇಕಡಾ 80 ರಷ್ಟು ಲಾಭದ ಕಾರಣದಿದಂ ಬೊರಿವಿಲಿ ಮನೆಯನ್ನು ಮಾರಾಟ ಮಾಡಿದ್ದಾರೆ. ಆದರೆ ವರ್ಲಿಯಲ್ಲಿರುವ ಅತ್ಯಂತ ಐಷಆರಾಮಿ ಮನೆ ಮಾರಾಟ ಯಾಕೆ ಅನ್ನೋ ಪ್ರಶ್ನೆಗಳು ಮೂಡಿದೆ. ಆದರೆ ಈ ಕುರಿತು ನಟ ಅಕ್ಷಯ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

 ವರ್ಲಿಯ 360 ವೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್, ಅಭಿಷೇಕ್ ಬಚ್ಚನ್, ಡಿಮಾರ್ಟ್ ಮಾಲೀಕ ರಾಧಾಕೃಷ್ಣ ಧಮಾನಿ, ಎವರೆಸ್ಟ್ ಮಸಾಲಾ ಗ್ರೂಪ್‌ನ ವೃತಿಕಾ ಗುಪ್ತಾ ಸೇರಿದಂತೆ ಹಲವು ಸೆಲೆಬ್ರೆಟಿಗಳು, ಉದ್ಯಮಿಗಳು ಮನೆ ಹೊಂದಿದ್ದಾರೆ. ಎಲ್ಲಾ ಮನೆಗಳು ಸಮುದ್ರಕ್ಕೆ ಮುಖಮಾಡಿದೆ. ಈ ಪೈಕಿ ಅಕ್ಷಯ್ ಕುಮಾರ್ 80 ಕೋಟಿ ರೂಪಾಯಿಗೆ ತಮ್ಮ ಮನೆ ಮಾರಾಟ ಮಾಡಿದ್ದಾರೆ.  2024ರಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆದಾರ ಹಾಗೂ ಷೇರುಮಾರುಕಟ್ಟೆ ಆರ್ಥಿಕ ಕಂಪನಿ ಹುಟ್ಟುಹಾಕಿರುವ ಜಗದೀಶ್ ನರೇಶ್ ಮಾಸ್ಟರ್ ಇದೇ 360 ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಿದ್ದಾರೆ. ಬರೋಬ್ಬರಿ 106 ಕೋಟಿ ರೂಪಾಯಿ ನೀಡಿ ಐಷಾರಾಮಿ ಮನೆ ಖರೀದಿಸಿದ್ದರು.

ಐಷಾರಾಮಿ ಮನೆ ಮಾರಿದ ನಟ ಅಕ್ಷಯ್ ಕುಮಾರ್, ಎಷ್ಟಕ್ಕೆ ಗೊತ್ತಾ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಆಗದೇ ಆ ಸ್ಟಾರ್ ನಟನಿಂದ ಮಗುವನ್ನು ಪಡೆಯಲು ಬಯಸಿದ್ದ ಆ ನಟಿಗೆ ಕೊನೆಗೆ ಆಗಿದ್ದೇನು?
ಈಗ್ಲೂ ಬ್ಯಾಚ್ಯುಲರ್ Salman Khan ಡಿಸೆಂಬರ್ 27ಕ್ಕೆ ಹುಟ್ಟಿದ್ದೇ ಒಂಟಿತನಕ್ಕೆ ಕಾರಣವಾಯ್ತಾ?