
ಬಾಲಿವುಡ್ ಚಿತ್ರರಂಗದಲ್ಲಿರುವ ಮಾಸ್ಟರ್ ನಿರ್ದೇಶಕ ಅಂದ್ರೆ ಸಂಜಯ್ ಲೀಲಾ ಬನ್ಸಾಲಿ. ಅದ್ಭುತವಾಗಿ ಕಥೆ ಹೇಳುತ್ತಾ, ಸಿನಿಮಾ ಬಗ್ಗೆ ವೀಕ್ಷಕರಿಗೆ ಕೊನೆವರೆಗೂ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡುವ ಕಥೆಯೇ ಮಾಡುವ ಬನ್ಸಾಲಿ ಬಿ-ಟೌನ್ ಬಬ್ಲಿ ಗರ್ಲ್‌ನ ಆಯ್ಕೆ ಮಾಡಿಕೊಂಡು ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಮಾಡಿಸಿದ್ದಾರೆ. ಕ್ಯಾಮೆರಾ ನೋಡಿ ಓಡಿ ಹೋಗುತ್ತಿದ್ದ ಆಲಿಯಾ ಭಟ್ ಈಗ ಕೈ ಮುಗಿದು ನಮಸ್ಕಾರ ಮಾಡುವ ಫೋಸ್ ಮಿಸ್ ಮಾಡೋಲ್ಲ..
ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವನ್ನು ಫೆ.25ರಂದು ಬಿಡುಗಡೆ ಮಾಡಬಾರದು ಹಾಗೂ ಟೈಟಲ್ ಬದಲಾಯಿಸಬೇಕು ಎಂದು ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಕೂಡ ದಾಖಲು ಮಾಡಲಾಗಿತ್ತು. ಕಾಂಗ್ರೆಸ್ ಶಾಸಕ ಅಮಿನ್ ಪಟೇಲ್ ಅವರು ಅರ್ಜಿ ಸಲ್ಲಿಸಿ, ಕಾಮಾಠಿಪುರವನ್ನು ರೆಡ್ ಲೈಟ್ ಏರಿಯಾ ಎಂದು ತೋರಿಸುವುದಲ್ಲದೇ, ಕಾಠಿಯಾವಾಡಿ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಬರಹಗಾರ ಹುಸೇನ್ ಜೈದಿ ಬರೆದಿರುವ ಮಾಫಿಯಾ ಕ್ವೀನ್ ಆಫ್ ಮುಂಬೈ ಪುಸ್ತಕದಿಂದ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲಾಗಿದೆ. ಆದರೆ ರಿಲೀಸ್ ತಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಇಂದು ನಡೆದ ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ನಟ ,ನಟಿಯರು ಭಾಗಿಯಾಗಿ ಆಲಿ ನಟನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ, ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಸಂಜಯ್ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ಗಂಗೂಬಾಯಿಯ ವ್ಯಕ್ತಿತ್ವಕ್ಕೆ ಅವಮಾನ ಆಗುವಂತರ ದೃಶ್ಯಗಳಿವೆ ಎಂದು ಆರೋಪ ಮಾಡಿದ್ದಾರೆ. ಆ ದೃಶ್ಯಗಳನ್ನು ಕಟ್ ಮಾಡಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಆಲಿಯಾ ರಿಯಾಕ್ಷನ್:
'ಜನರ ಸೃಷ್ಟಿ ಮಾಡುತ್ತಿರುವ ಕಾಂಟ್ರೋವರ್ಸಿ ಅಥವಾ ಕಾಮೆಂಟ್‌ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜೀವನದಲ್ಲಿ ಒಂದು ಪಾಯಿಂಟ್ ಆದ ಮೇಲೆ ಇವೆಲ್ಲಾ ಮ್ಯಾಟರ್ ಆಗುವುದಿಲ್ಲ. ಸಿನಿಮಾ ಚೆನ್ನಾಗಿರಲಿ ,ಕೆಟ್ಟದಾಗಿರಲಿ ಅವೆಲ್ಲಾ ಮ್ಯಾಟರ್ ಆಗುವುದಿಲ್ಲ. ವೀಕ್ಷಕರು ಮಾಡುವ ನಿರ್ಧಾರವೇ ಕೊನೆ. ಸಿನಿಮಾ ನೋಡಿದ ಮೇಲೆ ಆ ನಿರ್ಧಾರಗಳು ಎಲ್ಲಾ ಟೀಕೆಗಳಿಗೆ ಉತ್ತರ ಕೊಡುತ್ತದೆ. ಹಿಂದೆ ಆಗಿರುವುದು ಹಾಗೂ ಮುಂದೆ ಆಗುವ ವಿಚಾರಗಳು ಘಟನೆಗಳು ನಮ್ಮ ಕೈಯಲ್ಲಿಲ್ಲ. ಇದು ಹಣೆಬರಹ,' ಎಂದು ಆಲಿಯಾ ಉತ್ತರಿಸಿದ್ದಾರೆ.
ಗಾರ್ಡಿಯನ್ ವೆಬ್‌ನಲ್ಲಿ Peter Bradshaw ಬರೆದಿರುವ ವಿಮರ್ಶೆ ವೈರಲ್ ಆಗುತ್ತಿದೆ. 'ಗಂಗೂಬಾಯಿ ಅಂತಿಮವಾಗಿ ಮಾಫಿಯಾ ರಾಣಿಯಿಂದ ಪೂಜ್ಯ ಭಾರತ ಮಾತೆಯಾಗಿ evolve ಆದಾಗ, ಮುಂಬೈನಾದ್ಯಂತ ನಗುತ್ತಿರುವ ಸೆಕ್ಸ್ ವರ್ಕರ್ಸ್‌ನಿಂದ ಆಶೀರ್ವಾದ ಪಡೆದಾಗ, ಇಡೀ ಸಿನಿಮಾ ಅದರ ವೋಲ್ಟೇಜ್‌ನ ಸ್ಪಲ್ಪ ಕಳೆದುಕೊಳ್ಳುತ್ತದೆ.ಆದರೆ ಈ ಚಿತ್ರದಲ್ಲಿ ಅದ್ಭುತವಾದ ಉತ್ಸಾಹ ಮತ್ತು ಧೈರ್ಯವಿದೆ ಮತ್ತು ಕೆಲವು ಅದ್ಭುತವಾದ ಫ್ಯಾಂಟಸಿ-ಸಂಗೀತದ ಸೆಟ್‌ಪೀಸ್‌ಗಳಿವೆ. In fact, it is the streak of schmaltz within the gruesomeness which gives the story its outrageous energy.ಈ ಸಿನಿಮಾದಲ್ಲಿ ಮನರಂಜನಾ ಲಜ್ಜೆಯ ಗುಣವಿದೆ,it has a storytelling killer instinct.' ಎಂದು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.