
ಬಾಲಿವುಡ್ ಬಿಗ್- ಬಿ ಅಮಿತಾಭ್ ಕುಟುಂಬದವರ ಜೊತೆಗಿನ ಬಾಂಧವ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಕಳೆದ ಅಮೂಲ್ಯ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.
ಬಾಲಿವುಡ್‌ನಲ್ಲಿ ಬಾದ್ ಷಾ 50 ನಾಟೌಟ್, ಇನ್ನೂ ಚಿರಯುವಕ .
ಅಮಿತಾಭ್ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದಾಗ ಪುತ್ರ ಅಭಿಪೇಶ್ ಬರೆದ ಪತ್ರವನ್ನು ಟ್ಟಿಟರ್‌ನಲ್ಲಿ 'ಅಭಿಷೇಕ್ ಪ್ರೀತಿಯಿಂದ ನನಗೆ ಬರೆದ ಪತ್ರವಿದು' ಎಂದು ಶೇರ್ ಮಾಡಿಕೊಂಡಿದ್ದಾರೆ.
'ಡಾರ್ಲಿಂಗ್ ಪಪ್ಪಾ, ಹೇಗಿದ್ದೀರಾ? ನಾನು ಕ್ಷೇಮವಾಗಿದ್ದೀನಿ. ಐ ಮಿಸ್ ಯೂ ವೆರಿ ಮಚ್. ನೀವು ಬೇಗ ಮನೆಗೆ ಬರುತ್ತೀರಾ? ದೇವರಲ್ಲಿ ನಿಮ್ಮ ನಗುವಿಗಾಗಿ ಸದಾ ಬೇಡುವೆ. ದೇವರು ನನ್ನ ಪಾರ್ಥನೆ ಕೇಳಿಸಿಕೊಳ್ಳುತ್ತಿದ್ದಾನೆ. ಅಮ್ಮ ಹಾಗೂ ಅಕ್ಕ ಶ್ವೇತಾ ಅಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಾನು ಒಮ್ಮೊಮ್ಮೆ ಮಾತ್ರ ನಾಟಿ ಅಷ್ಟೇ. ನಿಮ್ಮ ಡಾರ್ಲಿಂಗ್ ಮಗ ಅಭಿಷೇಕ್ ' ಎಂದು ಬರೆದಿದ್ದಾರೆ.
ಅಮಿತಾಬ್ ಅಣ್ಣನ ಜೊತೆ ನವರಾತ್ರಿ ಆಚರಿಸಿದ ಶಿವಣ್ಣ!
ಲಿಟಲ್ ಶ್ವೇತಾ ಹಾಗೂ ಅಭಿಷೇಕ್ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋವನ್ನು ಶೇರ್ ಮಾಡಿಕೊಂಡು 'ಮಕ್ಕಳಲ್ಲಿ ಇರುವ ಮುಗ್ಧತೆಯೇ ಅವರನ್ನು ಒಳ್ಳೆಯ ರೀತಿಯಲ್ಲಿ ರೂಪಿಸಲು ಸಾಧ್ಯವಾಗುತ್ತದೆ' ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.