ರಾನು ಹೊಸ ಅವತಾರಕ್ಕೆ ನೆಟ್ಟಿಗರು ಫೂಲ್ ಶಾಕ್! | ರಾನು ಓವರ್ ಮೇಕಪ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ |
ಅದೃಷ್ಟ ಹೇಗೆ ಬದಲಾಗುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ರೈಲ್ವೇ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡು ಹೇಳಿಕೊಂಡು ಇದ್ದ ರಾನು ಮಂಡಾಲ್ ರಿಯಾಲಿಟಿ ಶೋಗೆ ಗೆಸ್ಟ್ ಆಗಿ ಬಂದಿದ್ದೇ ಇದಕ್ಕೆ ತಾಜಾ ಉದಾಹರಣೆ. ಲತಾ ಮಂಗೇಶ್ಕರ್ 'ಏಕ್ ಪ್ಯಾರ್ ಕ ನಗ್ಮಾ ಹೇ' ಹಾಡು ಇವರ ಬದುಕಿನ ನಗ್ಮಾವನ್ನೇ ಬದಲಾಯಿಸಿತು. ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆದರು.
ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ರಾನು ಮೊಂಡಾಲ್ ಗರಂ; ಸೆಲಬ್ರಿಟಿ ತಲೆಗೇರಿದ್ಯಾ?
ಮೇಕಪ್ ಇಲ್ಲದ ಮುಖ, ಸಿಂಪಲ್ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಲುಕ್ ಬದಲಾಗಿ ಹೋಗಿದೆ. ರಾನು ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಾನು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಬಂಗಾರ ಬಣ್ಣದ ಲೆಹಂಗಾ ಧರಿಸಿ, ಓವರ್ ಮೇಕಪ್ ಮಾಡಿಕೊಂಡು ಹೋಗಿದ್ದರು. ನೋಡಲು ಅತೀ ಎನಿಸುವ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
oscar award 2020 for best make up artist goes to pic.twitter.com/0gVWf2ysmi
— Abhi sonne (@AbhiSonne)
Reality is often disappointing. pic.twitter.com/JjHT3C9osE
Money can Provide you Beauty Products, but can't Buy brain 🤣 pic.twitter.com/4aEqezel5k
— अकshy (@kshysatisfier)ರಾನು ಮೊಂಡಾಲ್ ಇತ್ತೀಚಿಗೆ ಹೊರಗೆ ಹೋಗಿದ್ದಾಗ ಅಭಿಮಾನಿಯೊಬ್ಬರು ಭುಜ ಮುಟ್ಟಿ ಮಾತನಾಡಿಸಿ ಸೆಲ್ಫಿ ತೆಗೆದುಕೊಳ್ಳೋಣ ಎಂದು ಕೇಳಿಕೊಂಡರು. ಇದರಿಂದ ಅಸಮಾಧಾನಗೊಂಡ ರಾನು ಸಿಟ್ಟಿನಿಂದ 'ಏನು'? ಎಂದು ಕೇಳುತ್ತಾರೆ. ಅಭಿಮಾನಿ ಮೈ ಮುಟ್ಟಿ ಮಾತಾಡಿದ್ದು ರಾನುಗೆ ಇಷ್ಟವಾದಂತೆ ಕಾಣಿಸಿಲ್ಲ. ಇದು ಚರ್ಚಾಸ್ಪದವಾಗಿತ್ತು.