Amitabh Bachchan ಬೆಳ್ಳಂಬೆಳಗ್ಗೆ ಅಪ್ಪ ಟೇಬಲ್ಸ್‌ ಹೇಳ್ಕೊಡ್ತಿದ್ರು, ತಪ್ಪು ಮಾಡಿದ್ರೆ ಕಪಾಳಮೋಕ್ಷ ಗ್ಯಾರಂಟಿ!

Published : Oct 29, 2022, 11:06 AM IST
Amitabh Bachchan ಬೆಳ್ಳಂಬೆಳಗ್ಗೆ ಅಪ್ಪ ಟೇಬಲ್ಸ್‌ ಹೇಳ್ಕೊಡ್ತಿದ್ರು, ತಪ್ಪು ಮಾಡಿದ್ರೆ ಕಪಾಳಮೋಕ್ಷ ಗ್ಯಾರಂಟಿ!

ಸಾರಾಂಶ

ಕೌನ್ ಬನೇಗಾ ಕರೋಡ್ಪತಿ 14ರಲ್ಲಿ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡ ಬಿಗ್ ಬಿ. ಇಷ್ಟೊಂದು ಸ್ಟ್ರಿಟ್‌ ಇದ್ರಾ ಅಪ್ಪ ?

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನೇತೃತ್ವಸದಲ್ಲಿ ಮೂಡಿ ಬರುತ್ತಿರುವ ಕೌನ್ ಬನೇಗಾ ಕರೋಡ್ಪತಿ 14ನೇ ಸೀಸನ್‌ಗೆ ಕಾಲಿಟ್ಟಿದೆ. ದೇಶಾದ್ಯಂತ ವಿಭಿನ್ನ ಪ್ರತಿಭೆ ಬುದ್ಧಿವಂತರನ್ನು ಭೇಟಿ ಮಾಡಿದಾಗ ಅಮಿತಾಬ್ ತಮ್ಮ ಜೀವನದ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಈ ವಾರ ಬೆಂಗಳೂರಿನ ಸುಮಾ ನರಸ ಪ್ರಕಾಶ್ ಹಾಟ್‌ ಸ್ವೀಟ್ ಸ್ವೀಕರಿಸಿದ್ದರು. ಆಧಾರ್‌ ಕಾರ್ಡ್‌ಗಳ ಕೊನೆಯಲ್ಲಿ ಮುದ್ರಿಸಲಾಗಿರುವ ಬಾರ್‌ಕೋಡ್‌ಗೆ ಕೋಡ್ ಅನ್ನು ಕಂಡು ಹಿಡಿದವರು ಸುಮಾ ಅವರೇ. ಸುಮಾ ಸಾಧನೆ ಬಗ್ಗೆ ತಿಳಿದುಕೊಂಡ ನಂತರ ಬಚ್ಚನ್ ಪ್ರಭಾವಿತಾರಿ ಸಲಹೆ ಕೊಡುತ್ತಾರೆ, ವಕೀಲರನ್ನು ನೇಮಿಸಿಕೊಳ್ಳಿ ಯಾವ ಕಂಪನಿಗೂ ಪೇಟೆಂಟ್‌ ಹಕ್ಕುಗಳನ್ನು ಕೊಡಬೇಡಿ ಎನ್ನುತ್ತಾರೆ.

ಸುಮಾ ಮೊದಲು 1 ಸಾವರ ರೂಪಾಯಿ ಪ್ರಶ್ನೆಗೆ  ಉತ್ತರಿಸುತ್ತಾರೆ. ಸಾಮಾನ್ಯವಾಗಿ ಕುದುರೆಗಳು ಯಾವ ಸಾರಿಗೆ ವಿಧಾನಗಳೊಂದಿಗೆ ಸಂಬಂಧ ಹೊಂದಿದೆ? ಅದಕ್ಕೆ ಸರಿಯಾದ ಉತ್ತರ ಕೊಟ್ಟು ಸಿ ಟಾಂಗಾ ಎಂದ್ದರು. ಎರಡನೇ ಪ್ರಶ್ನೆ ಗಣಿತದ ಬಗ್ಗೆ ಇದ್ದು ಬಲು ಸುಲಭವಾಗಿ ಸುಮಾ ಉತ್ತರಿಸುತ್ತಾರೆ ಆಗ ತಮ್ಮ ಬಾಲ್ಯವನ್ನು ಬಿಗ್ ಬಿ ನೆನಪಿಸಿಕೊಳ್ಳುತ್ತಾರೆ. 

'ನಾನು ಬಾಲ್ಯದಲ್ಲಿ  ತಂದೆ ಶ್ರೀ ಹರಿವಂಶ ರೈ ಬಚ್ಚನ್ ಜೊತೆ ಬೆಳಗ್ಗೆ 4ರಿಂದ 5 ಗಂಟೆಗೆ ವಾಕಿಂಗ್ ಹೋಗುತ್ತಿದ್ದೆ ಆಗ ಅವರು ಟೇಬಲ್ಸ್ ಹೇಳಿಸುತ್ತಿದ್ದರು. ಓದು ಓದು ಎನ್ನುತ್ತಿದ್ದರು. ಟೇಬಲ್ಸ್ ಹೇಳುವಾಗ ಏನಾದ ತಪ್ಪು ಮಾಡಿದ್ದರೆ ಸರಿಯಾಗಿ ಬೈಯುತ್ತಿದ್ದರು ತಿದ್ದಿಕೊಳ್ಳಲಿಲ್ಲ ಅಂದ್ರೆ ಕಪ್ಪಾಳಕ್ಕೆ ಹೊಡೆಯುತ್ತಿದ್ದರು. ಇದೆಲ್ಲಾ ಜೀವನದಲ್ಲಿ ಮರೆಯಲು ಅಗುವುದಿಲ್ಲ' ಎಂದಿದ್ದಾರೆ ಅಮಿತಾಭ್.

ನನಗೂ ಮಾತಾಡ್ಬೇಕು ಅನಿಸುತ್ತೆ; ಬಾಯ್ಕಟ್ ಬಗ್ಗೆ ಅಮಿತಾಭ್ ಪರೋಕ್ಷ ಟ್ವೀಟ್ ವೈರಲ್

ಬಟ್ಟೆ ತೊಳಿತೀರಾ, ಅಡುಗೆ ಮಾಡ್ತೀರಾ ಬಚ್ಚನ್?

ಇತ್ತೀಚಿನ ಸಂಚಿಕೆಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಯೊಬ್ಬರು ಅಮಿತಾಭ್‌ಗೆ ಮನೆಯಲ್ಲಿ ಅಡುಗೆ ಮಾಡುತ್ತೀರಾ? ಬಟ್ಟೆ ತೊಳಿತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸ್ಪರ್ಧಿಯ ಪ್ರಶ್ನೆಗೆ ಬಿಗ್ ಬಿ ಅಚ್ಚರಿ ಪಟ್ಟರು. ಕೆಬಿಸಿಯಲ್ಲಿ ಹಾಟ್ ಸೀಟ್ ಏರಿದ್ದ ಪಿಂಕಿ ಜವರಾಣಿ ಅವರು ಅಮಿತಭ್‌ಗೆ ನೀವು ಮನೆಯಲ್ಲಿ ಅಡುಗೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಮಿತಾಭ್, 'ಖಂಡಿತವಾಯಿಗೂ ಹೌದು, ಏಕೆ ಮಾಡಲ್ಲ' ಎಂದು  ಹೇಳಿದರು. ಬಳಿಕ ಪಿಂಕಿ ಮತ್ತೊಂದು ಪ್ರಶ್ನೆ ಕೇಳಿದರು. ಸರ್ ನಿಮ್ಮ ಮನೆಯಲ್ಲಿ ನೀವು ನಿಮ್ಮ ಬಟ್ಟೆ ತೊಳೆಯುತ್ತೀರಾ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಬಿಗ್ ಬಿ, 'ಯಾಕೆ ಇಲ್ಲ, ನನ್ನ ಬಟ್ಟೆಗಳನ್ನು ನಾನೇ ತೊಳೆಯುತ್ತೇನೆ' ಎಂದು ಅಮಿತಭ್ ಹೇಳಿದರು. 

ವಯಸ್ಸಾಯ್ತು, ಇನ್ನೂ ಕೆಲ್ಸ ಮಾಡೋದೇತಕ್ಕೆ?: ಬಾಲಕನ ಪ್ರಶ್ನೆಗೆ ಬಿಗ್ ಬಿ ಶಾಕ್!

 

ಮೊಮ್ಮಗಳು ಕೋಪಗೊಂಡರೆ ಅಮಿತಾಭ್ ಹೇಗೆ ಸಮಾಧಾನ ಮಾಡ್ತಾರೆ?

 ಮೊಮ್ಮಗಳು ಆರಾಧ್ಯಾ ಜೊತೆ ಹೇಗೆ ಸಮಯ ಕಳೆಯುತ್ತೀರಿ ಎಂದು ಸ್ಪರ್ಧಿಯೊಬ್ಬರು ಪ್ರಶ್ನೆ ಮಾಡಿದ್ದರು ಆಗ ಕಾಮನ್ ಮ್ಯಾನ್ ರೀತಿ ಬಿಗ್ ಬಿ ಉತ್ತರ ಕೊಟ್ಟರು. 'ಬೆಳಗ್ಗೆ ಅವಳು ಶಾಲೆಗೆ ಹೋಗುತ್ತಾಳೆ. ನಾನು ಶೂಟಿಂಗ್ ಹೊರಡುತ್ತೇನೆ. ಅವಳು ಮಧ್ಯಾಹ್ನ ಮನೆಗೆ ಮರಳುತ್ತಾರೆ. ಬಳಿಕ ಆಕೆಗೆ ಅವಳ ತಾಯಿ (ಐಶ್ವರ್ಯಾ ರೈ) ಟಾಸ್ಕ್‌ಗಳನ್ನು ನೀಡುತ್ತಾಳೆ. ನಾನು ತುಂಬಾ ತಡವಾಗಿ ಮನೆಗೆ ಹೋಗುತ್ತೇನೆ. ಆದರೆ ತಂತ್ರಜ್ಞಾನಕ್ಕೆ ಧನ್ಯವಾದ ಹೇಳುತ್ತೇನೆ. ಯಾಕೆಂದರೆ ನಾವು ಫೇಸ್‌ಟೈಂ ಮಾತನಾಡಬಹುದು. ಕೆಲವು ಸರಿ ಆಕೆ ನನ್ನ ಜೊತೆ ಕೋಪಮಾಡಿಕೊಳ್ಳುತ್ತಾಳೆ. ಆಕೆಯ ನೆಚ್ಚಿನ ಬಣ್ಣ ಪಿಂಕ್. ಪಿಂಕ್ ಹೇರ್ ಬ್ಯಾಂಡ್, ಕ್ಲಿಪ್ಸ್ ಎಲ್ಲಾ ತುಂಬಾ ಇಷ್ಟ. ಅವಳು ಕೋಪಮಾಡಿಕೊಂಡಾಗ ಪಿಂಕ್ ಬ್ಯಾಂಡ್, ಕ್ಲಿಪ್ಸ್ ಗಿಫ್ಟ್ ಕೊಡುತ್ತೇನೆ. ಆಗ ಅವಳು ತುಂಬಾ ಸಂತೋಷ ಪಡುತ್ತಾಳೆ' ಎಂದು ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?