ಸಮಂತಾಳನ್ನು ಮೊದಲು ಪ್ರೀತಿಸಿದ್ದು ನಾನು: ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ

Published : Oct 28, 2022, 02:53 PM IST
ಸಮಂತಾಳನ್ನು ಮೊದಲು ಪ್ರೀತಿಸಿದ್ದು ನಾನು: ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ

ಸಾರಾಂಶ

ಕಾಲೇಜ್‌ ದಿನಗಳಿಂದ ವಿಜಯ್ ಅತಿ ಹೆಚ್ಚಾಗಿ ಪ್ರೀತಿಸುತ್ತಿದ್ದ ನಟಿ ಯಾರೆಂದು ಟ್ವೀಟ್‌ ಮೂಲಕ ರಿವೀಲ್ ಮಾಡಿದ್ದಾರೆ....  

ಟಾಲಿವುಡ್‌ ದಿ ಮೋಸ್ಟ್‌ ಎಲಿಜಿಬಲ್ ಬ್ಯಾಚುಲರ್‌ ವಿಜಯ್ ದೇವರಕೊಂಡ ಇದೇ ಮೊದಲ ಬಾರಿಗೆ ಕಾಲೇಜ್‌ ಕ್ರಶ್‌ ಆಂಡ್ ಲವ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಿ ನೋಡಿದ್ದರೂ ವಿಜಯ್‌ ಆಂಡ್ ರಶ್ಮಿಕಾ ಎಂದು ಹೇಳುತ್ತಿದ್ದ ಜನರು ಇದೀಗ ವಿಜಯ್ ಆಂಡ್ ಸ್ಯಾಮ್ ಅಂತ ಹೇಳಲು ಶುರು ಮಾಡಿದ್ದಾರೆ. ಇದು ಅವರ ಫ್ಯಾಮಿಲಿ ಮಾತ್ರವಲ್ಲ ಅಭಿಮಾನಿಗಳಿಗೂ ಬಿಗ್ ಶಾಕ್....

ಸಮಂತಾ ಅಭಿನಯಿಸಿರುವ ಯಶೋಧ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಟ್ರೈಲರ್‌ನ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ವಿಜಯ್ 'ಕಾಲೇಜ್‌ ದಿನಗಳಲ್ಲಿ ಸಮಂತಾ ಅವರ ಸಿನಿಮಾಗಳನ್ನು ನೋಡುತ್ತಿದ್ದೆ, ದೊಡ್ಡ ಪರದೆ ಮೇಲೆ ಅವರನ್ನು ನೋಡಿ ಪ್ರೀತಿಯಲ್ಲಿ ಬಿದ್ದೆ. ಇವತ್ತಿಗೆ ಆಕೆ ಏನು ಆಗಿದ್ದಾರೆ, ಸಂಪೂರ್ಣವಾಗಿ ಮೆಚ್ಚಿಕೊಳ್ಳಿ ಮತ್ತು ಆರಾಧಿಸುವೆ. ಖುಷಿಯಿಂದ ಟ್ರೈಲರ್‌ ಹಂಚಿಕೊಳ್ಳುತ್ತಿರುವ ವೀಕ್ಷಿಸಿ' ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.

ವಿಜಯ್ ದೇವರಕೊಂಡ ಶರ್ಟ್ ಕದ್ರಾ ನ್ಯಾಷನಲ್ ಕ್ರಶ್?: ರಶ್ಮಿಕಾಗೆ ಫ್ಯಾನ್ಸ್ ಏನಂದ್ರು ಗೊತ್ತಾ?

ಸಮಂತಾ 'ಯಶೋಧ' ಸಿನಿಮಾ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಚಿತ್ರೀಕರಣ ಆಗಿದ್ದು ಹಿಂದಿ,ಕನ್ನಡ ಮತ್ತು ಮಲಯಾಳಂನಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ಕೃಷ್ಣ ಪ್ರಸಾದ್ ನಿರ್ಮಾಣ ಮಾಡಿರುವ ಈ ಚಿತ್ರ ಇದಾಗಿದ್ದು ಪ್ರಚಾರಕ್ಕೆ ಸಹಾಯ ಮಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. 'ವಿಜಯ್ ದೇವರಕೊಂಡ, ಸೂರ್ಯ, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್ ಮತ್ತು ವರುಣ್ ಧವನ್ ಟ್ರೈಲರ್ ರಿಲೀಸ್ ಮಾಡಿರುವುದಕ್ಕೆ. ತೆಲುಗು, ತಮಿಳು, ಹಿಂದಿ,ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಸಖತ್ ವೈರಲ್ ಆಗಿತ್ತು. ಸಮಂತಾ ಅಭಿನಯ ಮತ್ತು ಮಣಿಶ್ರಮ ಬಿಜಿಎಮ್‌ನ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಚಿತ್ರದ ಕಥೆಯನ್ನು ರಿವೀಲ್ ಮಾಡಿದ್ದರೂ ಸಿನಿಮಾ ನೋಡಲು ಅಭಿಮಾನಿಗಳು ಹಿಂದೇಟು ಹಾಕುವುದಿಲ್ಲ. ಶ್ರೀದೇವಿ ಮೂವಿಸ್‌ ಮೂಲಕ ಪ್ರಚಾರ ಶುರು ಮಾಡಿದ್ದು ನವೆಂಬರ್ 11ರಂದು 5 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ' ಎಂದು ಮಾತನಾಡಿದ್ದಾರೆ.

ಸಮಂತಾ ಮತ್ತು ವಿಜಯ್ ದೇವರಕೊಂಡು ಶಿವ ನಿರ್ವಾಣ ಅವರ ರೊಮ್ಯಾಂಟಿಕ್ ಕಾಮಿಡಿ ಖುಷಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು 2023ರ ಡಿಸೆಂಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿದೆ.

 

ಗರ್ಭಿಣಿ ಸಮಂತಾ ನೋಡಿ ಫ್ಯಾನ್ಸ್ ಫುಲ್ ಖುಷ್:

 ಯಶೋಧ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.  ವಿಶೇಷ ಎಂದರೆ ಸಮಂತಾ ಈ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಸಮಂತಾಗೆ ಗರ್ಭಿಣಿ ಎಂದು ಹೇಳುವ ಮೂಲಕ ಪ್ರಾರಂಭವಾಗುವ ಟೀಸರ್ ಭಾರಿ ಕುತೂಹಲ ಸೃಷ್ಟಿಮಾಡಿದೆ. 

ಏರ್ಪೋಟ್‌ನಲ್ಲಿ ವಿಜಯ್ ಜೊತೆ ರಶ್ಮಿಕಾ; ಮಾಲ್ಡೀವ್ಸ್‌ಗೆ ಹಾರಿದ್ರಾ ಸೆನ್ಸೇಷನ್ ಜೋಡಿ?

ವೈದ್ಯರು ಸಮಂತಾಗೆ ತನ್ನನ್ನು ತಾನು ಸರಿಯಾಗಿ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು ಸಹ ಸ್ಯಾಮ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಹೈ ಆಕ್ಷನ್ ಸ್ಟಂಟ್ ಗಳನ್ನು ಮಾಡಿದ್ದಾರೆ. ಓಡುವುದು, ವೈಟ್ ಎತ್ತುವುದು ಸೇರಿದಂತೆ ಸಿಕ್ಕಾಪಟ್ಟೆ ಸ್ಟಂಟ್ ಗಳನ್ನು ಮಾಡಿದ್ದಾರೆ. ಸಮಂತಾ ನಟನೆಯ ಅಭಿಮಾನಿಗಳ ಹೃದಯಗೆದ್ದಿದೆ. 

ಸಮಂತಾ ಯಶೋಧ ಸಿನಿಮಾ ಜೊತೆಗೆ ಶಾಕುಂತಲಂ, ಖುಷಿ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವಕೊಂಡ ಜೊತೆ ಖುಷಿ ಸಿನಿಮಾ ಮಾಡಿದ್ರೆ ಶಾಕುಂತಂ ನಲ್ಲಿ ಶಾಂಕುಂತಲೆ ಪಾತ್ರ ಮಾಡಿದ್ದಾರೆ. ಇನ್ನು ಹಿಂದಿಯಲ್ಲಿ ಮತ್ತೊಂದು ವೆಬ್ ಸರಣಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಸಮಂತಾ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಸಮಂತಾ ಜೊತೆ ವರುಣ್ ಧವನ್ ನಟಿಸುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!