ವಿಶ್ವ ಕಪ್​ನಲ್ಲಿ ಭಾರತ ಗೆಲ್ಲಲು ಬಾಲಿವುಡ್​ ಸ್ಟಾರ್ ಅಮಿತಾಭ್​ ಬಚ್ಚನ್​ ಇದೆಂಥ 'ತ್ಯಾಗ' ಮಾಡಿದ್ರು?

By Suchethana D  |  First Published Jul 1, 2024, 5:13 PM IST

 ವಿಶ್ವ ಕಪ್​ನಲ್ಲಿ ಭಾರತ ಗೆಲ್ಲಲು  ಬಾಲಿವುಡ್​ ಸ್ಟಾರ್ ಅಮಿತಾಭ್​ ಬಚ್ಚನ್​ ಇದೆಂಥ 'ತ್ಯಾಗ' ಮಾಡಿದ್ರು ಗೊತ್ತಾ? 
 


ಭಾರತದಲ್ಲಿನ ಪ್ರತಿಯೊಬ್ಬ ಕ್ರಿಕೆಟ್​ ಪ್ರೇಮಿಯೂ ಮೊನ್ನೆ ವಿಶ್ವಕಪ್​ ವೀಕ್ಷಿಸುತ್ತಿದ್ದರು. ಟಿ.ವಿ, ಮೊಬೈಲ್​ ಏನಾದರೊಂದು ಆನ್​ ಇಟ್ಟುಕೊಂಡು ಭಾರತದ ಗೆಲುವಿಗಾಗಿ ಹಾರೈಸುತ್ತಿದ್ದರು. ಕೊನೆಗೂ ಭಾರತ ರೋಚಕವಾಗಿ ವಿಶ್ವಕಪ್​ ಗೆದ್ದುಗೊಂಡಿತು. ವಿಶ್ವಕಪ್​ ಗೆದ್ದ ಬಳಿಕ ಕುತೂಹಲದ ಪೋಸ್ಟ್​ ಒಂದನ್ನು ನಟ ಬಿಗ್​ ಬಿ ಅಮಿತಾಭ್​ ಬಚ್ಚನ್​ ಶೇರ್​ ಮಾಡಿಕೊಂಡಿದ್ದಾರೆ. ವಿಶ್ವಕಪ್​ ಗೆದ್ದ ಖುಷಿಯನ್ನು ಹಂಚಿಕೊಂಡ ಅವರು ಇದೇ ವೇಳೆ ತಾವು ಟಿ.ವಿ, ಮೊಬೈಲ್​ ಯಾವುದನ್ನೂ ನೋಡಿಲ್ಲ. ಟಿವಿಯ ಎದುರೇ ಎದ್ದರೂ, ಭಾರತದ ಪರವಾಗಿ ಪ್ರಾರ್ಥಿಸುತ್ತಿದ್ದರೂ ಮ್ಯಾಚ್​ ಮಾತ್ರ ನೋಡಲೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಭಾರತದ ಗೆಲುವಿಗೆ ಬಿಗ್​-ಬಿ ಆಟವನ್ನು ವೀಕ್ಷಿಸದೇ ಹೀಗೊಂದು ರೀತಿಯಲ್ಲಿ ತ್ಯಾಗ ಮಾಡಿದ್ದಾರೆ. 

ಅಷ್ಟಕ್ಕೂ ನಟ ಈ ರೀತಿಯ ತ್ಯಾಗ ಮಾಡುವ ಹಿಂದೆ ಕಾರಣವೂ ಇದೆ. ಇದು ತಮಾಷೆ ಎನ್ನಿಸಿದರೂ ನಿಜವು ಹೌದಂತೆ. ಅದೇನೆಂದರೆ, ಅಮಿತಾಭ್​ ಬಚ್ಚನ್​ ಭಾರತದ ಮ್ಯಾಚ್​ ನೋಡಿದಾಗಲೆಲ್ಲವೂ ಮ್ಯಾಚ್​ ಸೋಲುತ್ತದೆಯಂತೆ. ಈ ಬಗ್ಗೆ ಹಿಂದೊಮ್ಮೆ ಕೂಡ ಅಮಿತಾಭ್​ ಹೇಳಿಕೊಂಡಿದ್ದರು. ಕಳೆದ ನವೆಂಬರ್​ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಈ ಸೀಕ್ರೇಟ್​ ಅನ್ನು ನಟ ಬಿಚ್ಚಿಟ್ಟಿದ್ದರು.  ಅಮಿತಾಭ್‌ ಬಚ್ಚನ್‌ ಭಾರತದ ತಂಡವನ್ನು ಅಭಿನಂದಿಸಿ ಟ್ವೀಟ್​ ಮಾಡಿದ್ದ ಸಂದರ್ಭದಲ್ಲಿ  ‘ನಾನು ಯಾವಾಗ ಮ್ಯಾಚ್‌ ನೋಡುವುದಿಲ್ಲವೋ ಆ ದಿನವೇ ಭಾರತ ಪಂದ್ಯವನ್ನು ಗೆಲ್ಲುತ್ತದೆ ’ ಎಂದಿದ್ದರು. ಇದನ್ನು ನಟ ತಮಾಷೆಗೆ ಹೇಳಿದ್ದಂತೆ ಕಾಣುತ್ತಿತ್ತು. ಆದರೂ ಬಹುತೇಕ ಎಲ್ಲಾ ಸಮಯದಲ್ಲಿಯೂ ಇದು ನಿಜವಾಗಿದೆಯಂತೆ! 

Tap to resize

Latest Videos

ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು! ಮಗಳ ಗುಟ್ಟಾದ ಮದ್ವೆ, ಟೀಕೆಗಳಿಂದ ನೊಂದುಬಿಟ್ರಾ ನಟ? ಆಗಿದ್ದೇನು?

ನಟ ಆಗ ತಮಾಷೆಗೆ ಬರೆದಿದ್ದಾಗ,  ಕ್ರಿಕೆಟ್​ ಅಭಿಮಾನಿಗಳು  ಹಾಗಿದ್ದರೆ ದಯವಿಟ್ಟು ಅಂತಿಮ ಪಂದ್ಯ ನೋಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮಿತಾಭ್​ ಅವರನ್ನು ಕೇಳಿಕೊಂಡಿದ್ದರು. ಸರ್​​ ನಿಮ್ಮ ಮೇಲೆ ಅಪಾರ ಗೌರವ ಇದೆ. ಇದೀಗ ನೀವು ಫೈನಲ್ ಮ್ಯಾಚ್ ನೋಡಿದರೆ, ಸೋಲುವ ಭಯ ಶುರುವಾಗಿದೆ ಎಂದು ಮನವಿ ಮಾಡಿದ್ದರು.  ಇನ್ನೂ ಕೆಲವರು ತಮಾಷೆಯ ಸಲಹೆಗಳನ್ನೂ ನೀಡಿದ್ದರು. ಫೈನಲ್​ ಪಂದ್ಯದ ಮುಕ್ಯಾಯದ ನಂತರ ಹೈಲೆಟ್ಸ್​ ನೋಡಿ ಸಂಭ್ರಮಿಸಿ ಎಂದು ಹೇಳಿದ್ದರು.

ಆದರೆ ಕಾಕತಾಳೀಯ ಎಂದರೆ ಅಮಿತಾಭ್​ ಅವರು ಆಗ  ಗುಜರಾತಿನ ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಕಪ್​ ವೀಕ್ಷಿಸಿದ್ದರು. ಇದರಲ್ಲಿ  ಭಾರತ ಪರಾಭವಗೊಂಡಿತು. ಉಳಿದ 10 ಪಂದ್ಯಗಳನ್ನು ಗೆದ್ದರೂ ಫೈನಲ್​ನಲ್ಲಿ ಸೋತುದದ್ದಾಗಿ ಭಾರತ ಪ್ರೇಮಿಗಳು ದುಃಖ ಪಟ್ಟರು. 2003ರಲ್ಲಿ ಈ ಎರಡೂ ದೇಶಗಳು ಫೈನಲ್​ ಆಡಿದಾಗ ಅದರಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಆದ್ದರಿಂದ ಭಾರತಕ್ಕೆ ಇದು ಚಾಲೆಂಜಿಂಗ್​ ಆಟವಾಗಿತ್ತು. ಆದರೆ ಗೆಲುವು ಸಾಧಿಸದೇ ದೇಶ ಪ್ರೇಮಿಗಳು ನೋವು ಅನುಭವಿಸುವಂತಾಯಿತು.  ಆಗ ಅಮಿತಾಭ್​ ವಿರುದ್ಧವೂ ಕೆಲವು ಕ್ರಿಕೆಟ್​ ಪ್ರೇಮಿಗಳ ಅಪಸ್ವರವೂ ಕೇಳಿಬಂದಿತ್ತು. ತಮಾಷೆಗೆ ಟ್ವೀಟ್​ ಮಾಡಿದ್ದ ಅಮಿತಾಭ್​ ಸಂಕಷ್ಟಕ್ಕೆ ಸಿಲುಕಿದ್ದರು. ಆದ್ದರಿಂದ ಮತ್ತೆ ಅದು ಪುನರಾವರ್ತನೆಯಾಗಬಾರದು ಎನ್ನುವ ಕಾರಣಕ್ಕೆ ಈ ಸಲದ ವಿಶ್ವಕಪ್​ ಅನ್ನು ಅವರು ವೀಕ್ಷಣೆ ಮಾಡಿಲ್ಲವಂತೆ. ಭಾರತ ಗೆದ್ದಿದೆ!

ಮೇಘನಾ ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ನಮಗೆ ಬೇಸರವಾಗಿತ್ತು, ಆದ್ರೆ... ಅಪ್ಪ ಸುಂದರರಾಜ್​ ಮನದಾಳದ ಮಾತು
 

click me!