ಈ ಸಿನಿಮಾಗೆ ನೀವೇ ನಾಯಕಿಯಾಗಬೇಕು. ನೀವಾದ ಕಾರಣ ಹೀರೋ ಜೊತೆಗೆ ಮಲಗಿ ಎಂದು ನಾನು ಹೇಳಲ್ಲ, ಆದರೆ ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಒಂದು ಸಾರಿ..ನಟಿ ಸಾಯಿ ಬಿಚ್ಚಿಟ್ಟ ಕಾಸ್ಟಿಂಗ್ ಕೌಚ್ ಘಟನೆ ಇದೀಗ ಸಿನಿ ಕ್ಷೇತ್ರದಲ್ಲಿ ಕೋಲಾಹಲ ಸೃಷ್ಟಿಸಿದೆ.
ಮುಂಬೈ(ಜು.01) ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಘಟನೆ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಭಾರತದ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳ ಮೂಲಕ ಹೆಸರು ಮಾಡಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಘಟನೆ ಬಿಚ್ಚಿಟ್ಟಿದ್ದಾರೆ. ಸಿನಿಮಾಗೆ ಆಫರ್ ನೀಡಿದ ಬಳಿಕ ನಿರ್ಮಾಪಕರು, ನಿರ್ದೇಶಕರ ಜೊತೆ ಮಲಗಲು ಹೇಳಿದ ಆ ಕರಾಳ ಘಟನೆ ಕುರಿತು ಸಾಯಿ ಹೇಳಿದ್ದಾರೆ.
ಮರಾಠಿ ಚಿತ್ರಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಸಾಯಿ ತಮ್ಹಂಕರ್ ತಮ್ಮ ಸಿನಿ ಕರಿಯರ್‌ನಲ್ಲಿ ನಡೆದ ಘಟನೆ ಹೇಳಿದ್ದಾರೆ. ಒಂದು ದಿನ ನನಗೆ ಫೋನ್ ಕರೆ ಬಂದಿತ್ತು. ನಿರ್ದೇಶಕ, ನಿರ್ಮಾಪಕರ ಜೊತೆಗೆ ಗುರುತಿಸಿಕೊಂಡಿದ್ದ ಆ ವ್ಯಕ್ತಿ, ಸಿನಿಮಾ ಕುರಿತು ಮಾತನಾಡಲು ಫೋನ್ ಮಾಡಿದ್ದರು. ಒಂದು ಉತ್ತಮ ಚಿತ್ರವಿದೆ. ನೀವೇ ನಾಯಕಿ ಎಂದು ನಿರ್ಮಾಪಕರು, ನಿರ್ದೇಶಕರು ಒಪ್ಪಿದ್ದಾರೆ. ಈ ಪಾತ್ರ ನೀವು ಮಾಡಿದರೆ ಮಾತ್ರ ತುಂಬಾ ಉತ್ತಮ ಎಂದಿದ್ದಾರೆ. ನಾನು ಸರಿ, ಕತೆ ಕುರಿತು ಏನು ಅನ್ನೋ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ, ವ್ಯಕ್ತಿ ಆದರೆ ಎಂದು ಮಾತು ಆರಂಭಿಸಿದರು.
ಒಬ್ಬಳೆ ಬರುವಂತೆ ಸ್ಟಾರ್ ಹೀರೋ ಸೂಚನೆ, ಕಾಸ್ಟಿಂಗ್ ಕೌಚ್ ಘಟನೆ ಬಿಚ್ಚಿಟ್ಟ ಸ್ಯಾಂಡಲ್‌ವುಡ್ ನಟಿ!
ಈ ಚಿತ್ರಕ್ಕೆ ನೀವು ನಾಯಕಿ, ಆದರೆ ನೀವು ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಮಲಗಬೇಕು. ನೀವಾಗಿರುವ ಕಾರಣ ನಾನು ಹೀರೋ ಜೊತೆ ಮಲಗಿ ಎಂದು ಹೇಳಲ್ಲ. ಸಾಮಾನ್ಯವಾಗಿ ಹೀರೋ ಜೊತೆಗೂ ಮಲಬೇಕು. ಆದರೆ ನೀವು ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಒಂದು ಸಾರಿ ಎಂದು ವ್ಯಕ್ತಿ ಹೇಳಿದ್ದಾನೆ.
ಆತನ ಮಾತುಗಳು ನನಗೆ ಆಘಾತ ತಂದಿತ್ತು. ಇಷ್ಟೇ ಅಲ್ಲ ನನ್ನನ್ನು ಕೆರಳಿಸಿತ್ತು. ನೀವು ಯಾಕೆ ನಿಮ್ಮ ತಾಯಿಯನ್ನು ಮಲಗಲು ಕಳುಹಿಸಬಾರದು ಎಂದು ನಾನು ಮರು ಪ್ರಶ್ನಿಸಿದೆ. ನನ್ನ ಮಾತಿಗೆ ಆತನ ಬಳಿ ಉತ್ತರ ಇರಲಿಲ್ಲ. ಮತ್ತೆ ಮಾತು ಆರಂಭಿಸುವ ಮೊದಲೇ ನಾನು ಹೇಳಿದೆ, ನನಗೆ ಯಾಕೆ ಕಾಲ್ ಮಾಡಿದೆ ಎಂದು ನಿನಗೆ ಅನಿಸುತ್ತಿರಬಹುದು, ಇನ್ನೊಂದು ಸಾರಿ ಈ ರೀತಿ ಹೇಳಿ ಕಾಲ್ ಮಾಡಿದರೆ ನೆಟ್ಟಗಿರಲ್ಲ ಎಂದು ಫೋನ ಕಟ್ ಮಾಡಿದೆ. ಬಳಿಕ ನನಗೆ ಫೋನ್ ಕಾಲ್ ಬರಲಿಲ್ಲ ಎಂದು ಸಾಯಿ ಹೇಳಿದ್ದಾರೆ.
ಬೆತ್ತಲಾಗಿ ಶೂಟ್, 2 ತಿಂಗಳು ಜೊತೆಗಿರಲು ನಿರ್ದೇಶಕನ ಷರತ್ತು; ಕರಾಳ ಘಟನೆ ವಿವರಿಸಿದ ನಟಿ ಮಿತಾ!
ನಾವು ವಿರೋಧಿಸಿದರೆ, ಗಟ್ಟಿಯಾಗಿ, ಧೈರ್ಯದಿಂದ ಮಾತನಾಡಿದರೆ ಇಂತಹ ಸಂದರ್ಭಗಳಿಂದ ದೂರವಿರಬಹುದು. ಆದರೆ ಹಲವು ಬಾರಿ ಅವಕಾಶಗಳೇ ಸಿಗುವುದಿಲ್ಲ. ಹೀಗಾಗಿ ಹಲವರು ಈ ಟ್ರಾಪ್‌ನಲ್ಲಿ ಬೀಳುತ್ತಾರೆ. ಬಳಿಕ ಹೊರಬರಲಾರದೆ ಚಡಪಡಿಸುತ್ತಾರೆ. ಹಲವರು ಇದೇ ಕಾರಣದಿಂದ ಅವಕಾಶ ಕಳೆದುಕೊಳ್ಳುತ್ತಾರೆ. ಇಂಡಸ್ಟ್ರಿ ಬಿಟ್ಟು ಹೋಗುತ್ತಾರೆ. ಮತ್ತೆ ಕೆಲವರು ಎಲ್ಲದಕ್ಕೂ ಒಗ್ಗಿಕೊಂಡು ಇರಬೇಕಾಗುತ್ತದೆ. ಇದರ ನಡುವೆ ಧೈರ್ಯದಿಂದ ಸಾಧನೆ ಮಾಡಿದರೂ ಇದ್ದಾರೆ ಎಂದು ಸಾಯಿ ಹೇಳಿದ್ದಾರೆ.