'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ನಟ ಅಮಿತಾಭ್ ಬಚ್ಚನ್ ಆರೋಗ್ಯ ಈಗ ಹೇಗಿದೆ? ಖುದ್ದು ನಟ ಕೊಟ್ಟಿದ್ದಾರೆ ಮಾಹಿತಿ...
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಇದೇ 6ರಂದು ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಸದ್ಯ ಪ್ರಭಾಸ್ ಮತ್ತು ದೀಪಿಕಾ ನಟನೆಯ 'ಪ್ರಾಜೆಕ್ಟ್ ಕೆ' (Projeck K) ಸಿನಿಮಾದ ನಿಮಿತ್ತ ಹೈದರಾಬಾದ್ ನಲ್ಲಿ ಶೂಟಿಂಗ್ನಲ್ಲಿ ಅಮಿತಾಭ್ ಭಾಗಿಯಾಗಿದ್ದರು. ಚಿತ್ರೀಕಕಣದ ಆಕ್ಷನ್ ದೃಶ್ಯದ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಪಕ್ಕೆಲುಬಿಗೆ ಬಲವಾಗಿ ಏಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಮಿತಾಭ್ ಹೈದರಾಬಾದ್‌ನಿಂದ ಮುಂಬೈಗೆ ತೆರಳಿದ್ದು ಜಲ್ಸಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ, 'ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದಲ್ಲಿ, ಆಕ್ಷನ್ ಶಾಟ್ ಸಮಯದಲ್ಲಿ, ನಾನು ಗಾಯಗೊಂಡಿದ್ದೇನೆ, ಹೈದರಾಬಾದ್‌ನಲ್ಲಿ. ಮನೆಗೆ ಹಿಂತಿರುಗಿದ್ದೇನೆ. ಸ್ಟ್ರಾಪಿಂಗ್ ಮಾಡಲಾಗಿದೆ ಸದ್ಯ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ' ಎಂದು ಬರೆದುಕೊಂಡಿದ್ದರು.
ನಂತರ ಅವರು ತಮ್ಮ ಆರೋಗ್ಯದ ಕುರಿತು ಅಪ್‌ಡೇಟ್ (Update) ಕೊಟ್ಟಿದ್ದರು. ತಮ್ಮ ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದ ಅವರು, ಗಾಯದ ಬಗ್ಗೆ ತಿಳಿದ ನಂತರ ಅಭಿಮಾನಿಗಳು ತೋರಿಸಿದ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞರಾಗಿರುವುದಾಗಿ ಹೇಳಿದ್ದರು. "ನಾನು ಕ್ರಮೇಣ ಪ್ರಗತಿ ಹೊಂದುತ್ತಿದ್ದೇನೆ. ಯಾರೂ ಆತಂಕ ಪ ಡುವ ಅಗತ್ಯವಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವೈದ್ಯರು ಮಾಡಿರುವ ಶಿಫಾರಸುಗಳನ್ನು ನಾನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇನೆ. ಸದ್ಯ ಎಲ್ಲಾ ಕೆಲಸಗಳನ್ನೂ ಸ್ಥಗಿತಗೊಳಿಸಿದ್ದೇನೆ' ಎಂದಿದ್ದರು.
ಅಮಿತಾಭ್ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!
ಈಗ ಪುನಃ ಅವರು ಪುನಃ ಅಪ್‌ಡೇಟ್ ನೀಡಿದ್ದಾರೆ. ಅವರು ತಮ್ಮ ಹೊಸ ಬ್ಲಾಕ್‌ನಲ್ಲಿ ತಮ್ಮ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿದ್ದಾರೆ. ಪಕ್ಕೆಲುಬಿನ ಕಾರ್ಟಿಲೆಜ್ ಮುರಿದುಹೋಗಿದೆ ಮತ್ತು ಇದು ತುಂಬಾ ನೋವಿನಿಂದ ಕೂಡಿದೆ ಎಂದು ಅವರು ಬರೆದಿದ್ದಾರೆ. ಆರೋಗ್ಯ ಮೊದಲಿಗಿಂತಲೂ ಸುಧಾರಿಸುತ್ತಿದೆ. ಆದರೆ ತುಂಬಾ ನೋವು ಇದೆ. ಪಕ್ಕೆಲುಬಿನ ಕಾರ್ಟಿಲೆಜ್ ಬಳಿ ವಿಪರೀತ ನೋವು ಕಾಣಿಸಿಕೊಂಡಿದೆ ಎಂದಿದ್ದಾರೆ. 'ಕಳೆದುಹೋದ ಅವಕಾಶದ ಬಗ್ಗೆ ಒಬ್ಬರು ಹಿಂದೆ ಕುಳಿತು ಅಳಬಹುದು ಅಥವಾ ಎದ್ದೇಳಬಹುದು, ಅದನ್ನು ಪುನಃ ಪಡೆದುಕೊಳ್ಳಬಹುದು ಮತ್ತು ಸೋಲಿಸಬಹುದು. ಆದರೆ ದೇಹ ನೋವಿನಿಂದ ಕೂಡಿದಾಗ ಇದು ಕಷ್ಟವಾಗುತ್ತದೆ ಎಂದಿದ್ದಾರೆ.
ಶಾಂತಿ ಮತ್ತು ನೆಮ್ಮದಿಯ ಬಗ್ಗೆಯೂ ಇದೇ ವೇಳೆ ಬಿಗ್ ಬಿ (Big B) ಮಾಹಿತಿ ನೀಡಿದ್ದಾರೆ. ನಾನು ಶಾಂತಿ ಮತ್ತು ನೆಮ್ಮದಿ ಎಂದರೇನು ಎಂದು ತಿಳಿದುಕೊಂಡೆ. ಒಳಗೆ ಕೆಲವು ಕೊರತೆಗಳಿವೆ, ಕೆಲವು ಹೊರಗಡೆ ಇದೆ. ಆದರೆ ನಾನು ನ್ಯೂನತೆಗಳೆರಡನ್ನೂ ಹೋಗಲಾಡಿಸಲು ನಿರ್ಧರಿಸಿದ್ದೇನೆ, ಶಾಂತಿ ಮತ್ತು ನೆಮ್ಮದಿಯನ್ನು ಬಿಡಲಿಲ್ಲ. ಹೀಗೆ ಮಾಡಬಲ್ಲೆ, ಹಾಗೆ ಮಾಡಬಲ್ಲೆ ಎನ್ನುವ ಘೋಷಣೆಗಳು ನಿಷ್ಪ್ರಯೋಜಕವಾಗಿವೆ. ಅದು ಆಗದ ಕಾರಣ ಘೋಷಿಸಿ ಸೋಲನುಭವಿಸುವುದು ಒಂದು ರೀತಿಯಲ್ಲಿ ನಾಚಿಕೆಗೇಡಿನ ಸಂಗತಿ. ನಾನು ಅಭಿವೃದ್ಧಿ ಹೊಂದುತ್ತೇನೆ, ನೀವು ಶಾಶ್ವತವಾಗಿ ನನ್ನೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ ನಟ.
ನಿಂಗೇನಾದ್ರೂ ಹುಚ್ಚು ಹಿಡಿದಿದ್ಯಾ?; ಅಮಿತಾಭ್ - ಅಭಿಷೇಕ್ ಬಗ್ಗೆ ಮಾಧ್ಯಮಗಳಿಗೆ ಜಯಾ ಬಚ್ಚನ್ ಖಡಕ್ ಉತ್ತರ
ಇನ್ನು 'ಪ್ರಾಜೆಕ್ಟ್ ಕೆ' ಕುರಿತು ಹೇಳುವುದಾದರೆ, ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಭ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ದೀಪಿಕಾ ಮತ್ತು ಬಿಗ್ ಬಿ ಜೊತೆ ಪ್ರಭಾಸ್ (Prabhas) ಅವರ ಮೊದಲ ಚಿತ್ರವಾಗಿದೆ. ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ 'ಪ್ರಾಜೆಕ್ಟ್ ಕೆ', ದೀಪಿಕಾ ಅವರ ತೆಲುಗು ಚಲನಚಿತ್ರ ಚೊಚ್ಚಲ ಮತ್ತು ಪ್ರಭಾಸ್ ಅವರ ಮೊದಲ ಚಲನಚಿತ್ರವಾಗಿದೆ. ಈ ಸಿನಿಮಾದಿಂದ ಒಂದು ಪೋಸ್ಟರ್ ಬಿಟ್ಟರೇ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ಚಿತ್ರವು ಜನವರಿ 12, 2024 ರಂದು ಥಿಯೇಟರ್‌ಗಳಿಗೆ ಬರಲಿದೆ. ನಾಗ್ ಅಶ್ವಿನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಮಿತಾಭ್ ಕಳೆದ 5 ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಅಮಿತಾಭ್ ಅವರಿಗೆ ಅನೇಕರು ಟ್ವೀಟ್ ಮಾಡಿ ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ.