ಪವರ್‌ಫುಲ್ ಸ್ಟಾರ್ ಜೋಡಿಗಳಲ್ಲಿ ರಾಮ್ ಚರಣ್-ಉಪಾಸನಾ; ನೆಟ್ ವರ್ತ್ ನೋಡಿದ್ರೆ ಅಚ್ಚರಿ ಪಡ್ತೀರಾ!

Published : Mar 11, 2023, 05:11 PM ISTUpdated : Mar 11, 2023, 05:18 PM IST
ಪವರ್‌ಫುಲ್ ಸ್ಟಾರ್ ಜೋಡಿಗಳಲ್ಲಿ ರಾಮ್ ಚರಣ್-ಉಪಾಸನಾ; ನೆಟ್ ವರ್ತ್ ನೋಡಿದ್ರೆ ಅಚ್ಚರಿ ಪಡ್ತೀರಾ!

ಸಾರಾಂಶ

ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಭಾರತದ ಅತ್ಯಂತ ಪವರ್‌ಫುಲ್ ಕಪಲ್ ಆಗಿ ಹೊರಹೊಮ್ಮಿದ್ದಾರೆ. ಇಬ್ಬರ ನೆಟ್ ವರ್ತ್ ನೋಡಿದ್ರೆ ಅಚ್ಚರಿ ಪಡುತ್ತೀರಿ.

ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಈ ವರ್ಷ ತುಂಬಾ ಸ್ಪೆಷಲ್. ಆರ್ ಆರ್ ಆರ್ ಸಿನಿಮಾ ಪ್ರತಿಷ್ಠಿತ ಆಸ್ಕರ್‌ನ ಅಂತಿಮ ರೇಸ್ ನಲ್ಲಿದೆ. ಇನ್ನೂ ಈ ಸ್ಟಾರ್ ಜೋಡಿ ತಂದೆ-ತಾಯಿಯಾಗುತ್ತಿದ್ದಾರೆ. ಡಬಲ್ ಖುಷಿಯನ್ನು ಅನುಭವಿಸುತ್ತಿದ್ದಾರೆ ರಾಮ್ ಚರಣ್ ಜೋಡಿ. ಸದ್ಯ ಈ ಜೋಡಿ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿದ್ದಾರೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾಂಭಕ್ಕಾಗಿ ರಾಮ್ ಚರಣ್ ಜೋಡಿ ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದಾರೆ. ರಾಮ್ ಚರಣ್ ಸದ್ಯ ಅಮೆರಿಕಾದ ಟಿವಿ ಶೋ, ಪಾಡ್ ಕಾಸ್ಟ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ, ಸಂದರ್ಶನಗಳನ್ನು ನೀಡುತ್ತಿದ್ದಾರೆ. ರಾಮ್ ಚರಣ್‌ಗೆ ಗರ್ಭಿಣಿ ಪತ್ನಿ ಉಪಾಸನಾ ಕೂಡ ಸಾಥ್ ನೀಡುತ್ತಿದ್ದಾರೆ.  ಈ ಜೋಡಿ ಇದೀಗ ಭಾರತದಲ್ಲಿ ಹೊಸ ಪವರ್‌ಫುಲ್ ಜೋಡಿಯಾಗಿ ಹೊರಹೊಮ್ಮುತ್ತಿದ್ದಾರೆ.

ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಕೋಟಿ ಕೋಟಿ ಆಸ್ತಿಯ ಒಡೆಯರು. ಇಬ್ಬರ ಆದಾಯ ಕೇಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ರಾಮ್ ಚರಣ್ ಸ್ಟಾರ್ ನಟ ಮಾತ್ರವಲ್ಲದೇ ಉದ್ಯಮಿ ಕೂಡ ಹೌದು. ತೆಲುಗು ಸ್ಟಾರ್ ಚಿರಂಜೀವಿ ಅವರ ಪುತ್ರ. ಇನ್ನೂ ಪತ್ನಿ ಉಪಾಸನಾ ಕಾಮಿನೇನಿ ಕೂಡ ಅತ್ಯಂತ ಶ್ರೀವಂತ ಮಹಿಳೆ.
ಅಪೋಲೋ ಆಸ್ಪತ್ರೆಗಳ ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕ ಡಾಕ್ಟರ್ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು. URLifeನ ಸ್ಥಾಪಕಿ, CSR -ಅಪೋಲೋ ಆಸ್ಪತ್ರೆಯ ಉಪ ಅಧ್ಯಕ್ಷಿ,  ಫ್ಯಾಮಿಲಿ ಹೆಲ್ತ್ ಪ್ಲಾನ್ ಇನ್ಶೂರೆನ್ಸ್ ಟಿಪಿಎ ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. 

ನಟ-ಉದ್ಯಮಿ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಒಬ್ಬರಿಗೂ ಸದಾ ಬೆಂಬಲಿಸುವ ಕಪಲ್.  ಒಬ್ಬರ ಸಾಧನೆಗೆ ಮತ್ತೊಬ್ಬರು ಸಾಥ್ ನೀಡುತ್ತಾರೆ.  ಹಾಗಾದರೆ ಇವರ ನಿವ್ವಳ ಮೌಲ್ಯ ಎಷ್ಟು? ಅವರ ಕುಟುಂಬದ ಎಲ್ಲಾ ಆಸ್ತಿಗಳನ್ನು ಹೊರತುಪಡಿಸಿ, ರಾಮ್ ಚರಣ್ ಮತ್ತು ಉಪಾಸನಾ ಅವರ ಒಟ್ಟು ಆಸ್ತಿ 2500 ಕೋಟಿ ರೂಪಾಯಿ. ಈ ಮೂಲಕ ಈ ಜೋಡಿ ಭಾರತದ ಅತ್ಯಂತ ಯಶಸ್ವಿ ಸೆಲೆಬ್ರಿಟಿ ಜೋಡಿಗಳ ಪಟ್ಟಿಯಲ್ಲಿ ಸೇರಿದ್ದಾರೆ. 

ಶೀ‍ಘ್ರವೇ ರಾಮ್‌ಚರಣ್‌ ಹಾಲಿವುಡ್‌ ಎಂಟ್ರಿ? ಜೂಲಿಯಾ ರಾಬರ್ಟ್ಸ್ ಜೊತೆ ಕೆಲಸ ಮಾಡಬೇಕೆಂದ ಎಂದ ಸೌತ್‌ ನಟ

ರಾಮ್ ಚರಣ್ ಮತ್ತು ಉಪಾಸನಾ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರೂ ರಾಮ್ ಚರಣ್, ಉಪಾಸನಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು. ಇಬ್ಬರ ಮದುವೆಗೆ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದರು. ಇದೀಗ ಮದುವೆಯಾಗಿ 9 ವರ್ಷಗಳ ಬಳಿಕ ಇಬ್ಬರೂ ತಂದೆ-ತಾಯಿ ಆಗುತ್ತಿದ್ದಾರೆ. ಈ ವರ್ಷ ಉಪಾಸನಾ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. 

ವಾಂತಿ ಆದ್ರೆ ಹುಷಾರು; ವಿದೇಶ ಪ್ರಯಾಣ ಮಾಡುತ್ತಿರುವ ಉಪಾಸನಾ ರಾಮ್‌ ಚರಣ್‌ಗೆ ನೆಟ್ಟಿಗರ ಉಪದೇಶ

RRR ಸಿನಿಮಾ ಬಗ್ಗೆ 

ರಾಮ್ ಚರಣ್ ಸದ್ಯ ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಎತ್ತಿ ಹಿಡಿಯಲು ಕಾಯುತ್ತಿದ್ದಾರೆ. ಆಸ್ಕರ್ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು...ಹಾಡು ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಆಸ್ಕರ್‌ಗೆ ಗೆಲ್ಲಲು ಇನ್ನೇನು ಒಂದು ಮೆಟ್ಟಿಲು ಮಾತ್ರ ಹತ್ತಬೇಕಿದೆ. ಈಗಾಗಲೇ ಆರ್ ಆರ್ ಆರ್ ತಂಡ ಅಮೆರಿಕಾದಲ್ಲಿ ಬೀಡು ಬಿಟ್ಟಿದೆ. ರಾಮ್ ಚರಣ್ ಜೊತೆ ಆರ್ ಆರ್ ಆರ್ ಸಿನಿಮಾದ ಮತ್ತೋರ್ವ ಸ್ಟಾರ್ ಜೂ.ಎನ್ ಟಿ ಆರ್ ಲಾಸ್ ಏಂಜಲೀನ್ ನಲ್ಲಿದ್ದಾರೆ. ರಾಜಮೌಳಿ, ಎಂ ಎಂ ಕೀರವಾಣಿ ಸೇರಿದಂತೆ ಆರ್ ಆರ್ ಆರ್ ತಂಡ ಅಮೆರಿಕಾದಲ್ಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?