Amitabh Bachchan Health: ವಿಪರೀತ ನೋವಿನಲ್ಲಿ ಬಿಗ್ ಬಿ; ರಾತ್ರೋರಾತ್ರಿ ವೈದ್ಯರಿಗೆ ಕರೆ ಮಾಡಿದ ಹಿರಿಯ ನಟ

Published : Mar 20, 2023, 12:02 PM IST
Amitabh Bachchan Health: ವಿಪರೀತ ನೋವಿನಲ್ಲಿ ಬಿಗ್ ಬಿ; ರಾತ್ರೋರಾತ್ರಿ ವೈದ್ಯರಿಗೆ ಕರೆ ಮಾಡಿದ ಹಿರಿಯ ನಟ

ಸಾರಾಂಶ

ಶೂಟಿಂಗ್ ವೇಳೆ ಗಾಯಗೊಂಡಿದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಪರೀತ ನೋವಾಗುತ್ತಿದೆ ಎಂದು ಬಿಗ್ ಬಿಗ್ ಬಿ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ನೋವು ಜಾಸ್ತಿಯಾಗಿ ರಾತ್ರೋರಾತ್ರಿ ವೈದ್ಯರಿಗೆ ಕರೆ ಮಾಡಬೇಕಾಯಿತು ಎಂದು ಹೇಳಿದ್ದಾರೆ. 

ಶೂಟಿಂಗ್ ವೇಳೆ ಗಾಯಗೊಂಡಿದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಾಗ ತನ್ನ ಆರೋಗ್ಯದ ಬಗ್ಗೆ ಹಿರಿಯ ನಟ ಅಮಿತಾಭ್ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಬಿಗ್ ಬಿ ತನ್ನ ಬ್ಲಾಗ್ ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಅಮಿತಾಭ್ ತೀವ್ರ ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.  ಚಿತ್ರೀಕರಣ ವೇಳೆ ಪಕ್ಕೆಲುಬಿಗೆ ಗಾಯವಾಗಿ ಎರಡು ವಾರಗಳ ಬಳಿಕ ಅವರ ಕಾಲ್ಬೆರಳುಗಳ ಅಡಿಯಲ್ಲಿ ಗುಳ್ಳೆಗಳಾಗಿದ್ದು ಹಠಾತ್ ನೋವು ಕಾಣಿಸಿಕೊಂಡಿದೆ ತೀವ್ರ ನೋವಾಗುತ್ತಿದೆ ಎಂದು ಬ್ಲಾಗ್‌ನಲ್ಲಿ ಹೇಳಿದ್ದಾರೆ. ರಾತ್ರೋರಾತ್ರಿ ವೈದ್ಯರಿಗೆ ಕರೆ ಮಾಡಿ ಜಲ್ಸಾ ನಿವಾಸಕ್ಕೆ ಕರೆಸಿಕೊಂಡು ಚಿಕಿತ್ಸೆ ಪಡೆಯಲಾಯಿತು ಎಂದು ಹೇಳಿದ್ದಾರೆ. ಮನೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು ಆದರೆ ಯಾವುದೇ ಪ್ರಯೋಜನವಾಗಿಲ್ಲ ಬಳಿಕ ವೈದ್ಯರಿಗೆ ಕರೆ ಮಾಡಬೇಕಾಯಿತು ಎಂದಿದ್ದಾರೆ. 

ಅಮಿತಾಬ್ ತನ್ನ ಬ್ಲಾಗ್ ನಲ್ಲಿ 'ಪಕ್ಕೆಲುಬು ತನ್ನ ನೋವಿನ ಪಯಣದಲ್ಲಿ ಮುಂದುವರೆದಿದೆ. ಆದರೆ ಕಾಲ್ಬೆರಳಲ್ಲಿ ನೋವು ಹೆಚ್ಚಾಗಿದ್ದು ಪಕ್ಕೆಲುಬಿಗಿಂತ ಹೆಚ್ಚಿನ ಗಮನ ಸೆಳೆಯುತ್ತದೆ. ಆದ್ದರಿಂದ ಪಕ್ಕೆಲುಬಿಗಿಂತ ಗಮನವು ಕಾಲಿನ ಕಡೆಗೆ ತಿರುಗುತ್ತದೆ. ನಿರಂತರ ಬಳಲಿಕೆ. ಬೆಚ್ಚಗಿನ ಅಥವಾ ಬಿಸಿ ನೀರಿನಲ್ಲಿ ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಹೇಳಿದ್ದಾರೆ. ಕಾಲು ಬೆರಳುಗಳ ಅಡಿಯಲ್ಲಿ ನೋವು ಹೆಚ್ಚಾಗಿ ರಾತ್ರೋರಾತ್ರಿ ವೈದ್ಯರಿಗೆ ಬರುವಂತೆ ಕರೆ ಮಾಡಬೇಕಾಯಿತು. ಕಾಲು ಬೆರಳುಗಳ ಅಡಿಯಲ್ಲಿ ಒಂದು ಗುಳ್ಳೆಯಾಗಿದೆ. ವಿಚಿತ್ರ ಎನಿಸುತ್ತದೆ, ಹಿಂದೆಂದೂ ಕೇಳಿಲ್ಲ ಅಥವಾ ಅನುಭವಿಸಿಲ್ಲ, ಆದರೆ  ವಿಪರೀತ ನೋವು. ಆದ್ದರಿಂದ ಅದರ ಬಗ್ಗೆ ಗಮನ ನೀಡಲಾಗಿದೆ' ಎಂದು ಹೇಳಿದ್ದಾರೆ. 

Amitabh Bachchan: ಪಕ್ಕೆಲುಬಿನ ಕಾರ್ಟಿಲೆಜ್ ಮುರಿದು ನೋವಾಗ್ತಿದೆ: ಆರೋಗ್ಯದ ಬಗ್ಗೆ ಅಮಿತಾಭ್​ ಹೇಳಿದ್ದೇನು?

ಮತ್ತೊಂದು ಪೋಸ್ಟ್ ನಲ್ಲಿ ಬೇಗ ಗುಣಮುಖವಾಗಿ ಕೆಲಸಕ್ಕೆ ಮರಳುವುದಾಗಿ ಹೇಳಿದ್ದಾರೆ. 'ಕೆಲಸಕ್ಕೆ ಹಿಂದಿರುಗಿ ಮತ್ತೆ ಹಳೆಯ ದಿನಚರಿ ಮರಳಿ ಪಡೆಯಬೇಕು. ನಿಮ್ಮೆಲ್ಲರ ಪ್ರಾರ್ಥನೆಯೊಂದಿಗೆ ಆಶಾದಾಯಕವಾಗಿ ಶೀಘ್ರದಲ್ಲೇ ಸಂಭವಿಸಲಿದೆ' ಎಂದು ಹೇಳಿದ್ದಾರೆ. 

ಪತಿಯೆದುರೇ ಭಾಗ್ಯಶ್ರೀಯನ್ನು ಎತ್ತಿಕೊಂಡ ಸೈಫ್​, ಅಭಿಷೇಕ್​ : ಮುಂದೇನಾಯ್ತು?

ಹೈದರಾಬಾದ್ ಶೂಟಿಂಗ್‌ನಲ್ಲಿ ಗಾಯಗೊಂಡಿದ್ದ ಬಿಗ್ ಬಿ

ಬಾಲಿವುಡ್ ಬಿಗ್ ಬಿ ಹೈದರಾಬಾದ್‌ನಲ್ಲಿ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಪ್ರಭಾಸ್ ಮತ್ತು ದೀಪಿಕಾ ನಟನೆಯ ಪ್ರಾಜೆಕ್ಟ್ K ಸಿನಿಮಾದ ಶೂಟಿಂಗ್ ನಲ್ಲಿ ಇದ್ದರು. ಪ್ರಾಜೆಕ್ಟ್ K ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಅಮಿತಾಭ್ ಕೂಡ ಭಾಗಿಯಾಗಿದ್ದರು. ಚಿತ್ರೀಕರಣದ ಆಕ್ಷನ್ ದೃಶ್ಯದ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಅವರ ಪಕ್ಕೆಲುಬಿಗೆ ಏಟು ಬಿದ್ದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದರು. ಬಳಿಕ ಅವರನ್ನು ಹೈದರಾಬಾದ್‌ನಿಂದ ಮುಂಬೈನ ಜಲ್ಸಾ ನಿವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?