
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಫೇಮಸ್ ಶೋ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಲವ್ ಎಡ್ವೈಸ್ ಕೊಟ್ಟಿದ್ದಾರೆ. ತನ್ನ ಮತ್ತು ಜಯಾ ಬಚ್ಚನ್ ಪ್ರೇಮದ ದಿನಗಳನ್ನು ನೆನಪಿಸಿಕೊಂಡು ಶೋ ಕಂಟೆಸ್ಟೆಂಟ್‌ಗೆ ಸಲಹೆ ಕೊಟ್ಟಿದ್ದಾರೆ.
ಮದುವೆಯಾಗೋಕೂ ಮುಂಚೆ ಸಾಕಷ್ಟು ಲವ್ ಲೆಟರ್ ಬರಿತಾ ಇದ್ದೆ ಎಂದಿದ್ದಾರೆ ಅಮಿತಾಭ್. 1973ರಲ್ಲಿ ಬಾಲಿವುಡ್‌ನ ಈ ಜೋಡಿ ವಿವಾಹ ಬಂಧನದ ಮೂಲಕ ಒಂದಾದದರು.
ಕೋಟ್ಯಾಧಿಪತಿಯಾದ ಮೇಲೆ ಮತ್ತಷ್ಟು ಲಕ್ಕಿಯಾದ್ರು IPS ಮೋಹಿತಾ ಶರ್ಮಾ..!
ಎಪಿಸೋಡ್‌ನಲ್ಲಿ ಯೋಗೇಶ್ ಪಾಂಡೆ ಎಂಬ ಸ್ಪರ್ಧಿ ತನ್ನ ನಿಶ್ಚಿತಾರ್ಥದ ಮೇಲೆ ಕರೋನವೈರಸ್ ಲಾಕ್‌ಡೌನ್ ಹೇಗೆ ಪರಿಣಾಮ ಬೀರಿದೆ ಎಂದು ಹೇಳಿ ಬೇಸರಿಸಿಕೊಂಡರು. ಇದನ್ನು ಸಾಮಾಜಿಕ ಅಂತರದಿಂದಲೇ ನಡೆಸಬೇಕಾಗಿತ್ತು. ಈಗ ಭಾವೀ ಪತ್ನಿ ಜೊತೆ ಕದ್ದು ಮುಚ್ಚಿ ಮಾತಾಡಬೇಕಿದೆ ಎಂದಿದ್ದಾರೆ ಯೋಗೇಶ್.
ಇದಕ್ಕೆ ಉತ್ತರಿಸಿದ ಅಮಿತಾಭ್ ಅವರ ಪೋಷಕರು ಜಯಾ ಬಚ್ಚನ್ ಬಗ್ಗೆ ತಿಳಿಸಿದ್ದರು ಎಂದಿದ್ದಾರೆ. ನೀವು ಜಯಾಗೆ ಲೆಟರ್ ಕೊಟ್ಟಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿ, ಹೌದು, ಬಹಳಷ್ಟು ಪತ್ರಗಳನ್ನು ಬರಿಯುತ್ತಿದ್ದೆ ಎಂದಿದ್ದಾರೆ ಅಮಿತಾಭ್.
ಹೀಗಿತ್ತು ನಯನತಾರಾ ಬರ್ತ್‌ಡೇ ಪಾರ್ಟಿ..! ಫೋಟೋಸ್ ನೋಡಿ
ಮದುವೆಯಾಗದೆ ಜಯಾ ಜೊತೆ ವಿದೇಶಕ್ಕೆ ಪ್ರಯಾಣಿಸಲು ತಂದೆ ಹರಿವಂಶ ಬಚ್ಚನ್ ಸಮ್ಮತಿಸದಿದ್ದಾಗ ಮರುದಿನವೇ ಮದುವೆಯಾಗಿ ವಿದೇಶಕ್ಕೆ ಹಾರಿದ್ದರು ದಂಪತಿ. ಎಷ್ಟು ಕ್ಯೂಟ್ ಲವ್ ಸ್ಟೋರಿ ಅಲ್ವಾ..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.