
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೆಸರು ತಳುಕು ಹಾಕಿದ ಯೂಟ್ಯೂಬರ್ ಒಬ್ಬ ಈಗ ಸಂಕಟಕ್ಕೆ ಸಿಲುಕಿದ್ದಾನೆ. ಯೂಟ್ಯೂಬರ್ ವಿರುದ್ಧ ಅಕ್ಷಯ್ ಕುಮಾರ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
ಫೇಕ್ ನ್ಯೂಸ್ ಹರಡುವ ರಶೀದ್ ಸಿದ್ಧಿಕಿ ಎಂಬ ಯುವಕನ ವಿರುದ್ಧ ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು. ಆತನನನ್ನು ಪೊಲೀಶರು ಈ ಹಿಂದೆ ಅರೆಸ್ಟ್ ಮಾಡಿದ್ದರು. ಈಗ ಸುಶಾಂತ್ ಪ್ರಕರಣದಲ್ಲಿ ಇದೇ ಯುವಕ ಅಕ್ಷಯ್ ಹೆಸರು ತೆಗೆದಿದ್ದು, ನಟ ಅಕ್ಷಯ್ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಪ್ರಭಾಸ್ ಅಭಿನಯದ ಆದಿಪುರುಷ್ ರಿಲೀಸ್ ಡೇಟ್ ಫಿಕ್ಸ್..!
ಯೂಟ್ಯೂಬರ್ ರಶೀದ್ ಈ ಹಿಂದೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದ. ತನ್ನ ಯೂಟ್ಯೂಬ್ ಚಾನೆಲ್‌ನ ವಿಡಿಯೋದಲ್ಲಿ ರಶೀದ್ ಸುಶಾಂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ತಪ್ಪಿಸಿಕೊಳ್ಳೋಕೆ ಅಕ್ಷಯ್ ಕುಮಾರ್ ನೆರವಾಗಿದ್ದರು ಎಂದು ಹೇಳಿದ್ದ.
ರಿಯಾ ಕೆನಡಾಗೆ ತಪ್ಪಿಸಿಕೊಳ್ಳಲು ಅಕ್ಷಯ್ ನೆರವಾಗಿದ್ದಾರೆ ಎಂದು ರಶೀದ್ ವಿಡಿಯೋದಲ್ಲಿ ಹೇಳಿದ್ದಾರೆ. ಸುಶಾಂತ್‌ಗೆ ಎಂಎಸ್ ಧೋನಿ ಸಿನಿಮಾ ಸಿಕ್ಕಿದ್ದಕ್ಕೆ ಅಕ್ಷಯ್ ಕುಮಾರ್‌ಗೆ ಅಸೂಯೆಯಾಗಿತ್ತು ಎಂದು ಯೂಟ್ಯೂಬರ್ ತಿಳಿಸಿದ್ದಾನೆ.
ಶಾರುಖ್ ಖಾನ್ - ಹೃತಿಕ್ ರೋಶನ್: ಬಿಯರ್ಡ್ ಲುಕ್‌ನಲ್ಲಿ ಬಾಲಿವುಡ್ ಸ್ಟಾರ್ಸ್!
ಈ ವಿಡಿಯೋ ಮೂಲಕ ಸಿದ್ಧಿಕಿ 4 ತಿಂಗಳಲ್ಲಿ 15 ಲಕ್ಷ ಸಂಪಾದಿಸಿದ್ದಾನೆ ಎನ್ನಲಾಗಿದೆ. ಬಿಹಾರದ 25 ವರ್ಷದ ಸಿವಿಲ್ ಎಂಜಿನಿಯರ್ ಎಫ್‌ಫ್ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾನೆ. ಶಿವಸೇನೆಯ ಅಡ್ವೊಕೇಟ್ ಧರ್ಮೇಂದ್ರ ಮಿಶ್ರಾ ಈತನ ವಿರುದ್ಧ ಕೇಸು ದಾಖಲಿಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದರು.
ಸುಶಾಂತ್ ಸಾವಿನ ಪ್ರಕರಣವನ್ನು ಹಿಡಿದುಕೊಂಡು ಈತ ತನ್ನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸುವ ಕೆಲಸದಲ್ಲಿದ್ದ. ಕಳೆದ ತಿಂಗಳು ಈತನ ಯೂಟ್ಯೂಬ್ ಚಾನೆಲ್‌ನಲ್ಲಿ ಫಾಲೋವರ್ಸ್ ಸಂಖ್ಯೆ ಹಠಾತ್ತನೆ ಹೆಚ್ಚಾಗಿದೆ. 296 ರೂಪಾಯಿ ಸಂಪಾದಿಸುತ್ತಿದ್ದ ಈತನ ಯೂಟ್ಯೂಬ್ ಆದಾಯ ಸೆಪ್ಟೆಂಬರ್‌ನಲ್ಲಿ 6,50,898 ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.