'ಎಲ್ಲ ವಿಚಾರಗಳಲ್ಲಿಯೂ ತಾ ಮುಂದೆ ಎನ್ನುವ ನಟಿ' ಕಂಗನಾ ಯಾಕೆ ಹೀಗಾದ್ರು?

Published : Nov 19, 2020, 03:59 PM ISTUpdated : Nov 19, 2020, 06:40 PM IST
'ಎಲ್ಲ ವಿಚಾರಗಳಲ್ಲಿಯೂ ತಾ ಮುಂದೆ ಎನ್ನುವ ನಟಿ' ಕಂಗನಾ ಯಾಕೆ ಹೀಗಾದ್ರು?

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಅವತಾರ/ ಸುಶಾಂತ್ ಸಾವಿನ  ವಿಚಾರಿಂದ ಐಪಿಎಸ್ ಅಧಿಕಾರಿ ಟ್ವೀಟ್ ವರೆಗೆ/ ಬೇಕು-ಬೇಡವಾದ್ದಕ್ಕೆಲ್ಲ ಪ್ರತಿಕ್ರಿಯೆ/ ಕಂಗನಾ ರಣಾವತ್  ಯಾಕೆ ಹೀಗೆ ಮಾಡ್ತಿದ್ದಾರೆ

ಮುಂಬೈ( ನ. 19) ಸುಶಾಂತ್ ಸಿಂಗ್ ಸಾವಿನ ನಂತರ ಜೋರಾಗಿ ಮಾತನಾಡಿದ್ದ ನಟಿ ಕಂಗನಾ ರಣಾವತ್ ನಂತರ ಬಾಲಿವುಡ್ ಡ್ರಗ್ಸ್ ವಿಚಾರದಲ್ಲಿಯೂ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಇದೀಗ ಐಪಿಎಸ್ ಅಧಿಕಾರಿಯೊಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ಗೂ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡಿದ್ದ  ಕಂಗನಾಗೆ ಸೋಶಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಸಿಕ್ಕಿತ್ತು.  ಇದೆ ವರಸೆ ಮುಂದುವರಿಸಿರುವ ಕಂಗನಾ ಬೇಕು-ಬೇಡವಾದುದ್ದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಹಸಿರು ಪಟಾಕಿಯೂ ಸೇಫಲ್ಲ

ಪಟಾಕಿ ವಿಚಾರ ಮಾತನಾಡಿದ್ದ ಐಪಿಎಸ್ ಅಧಿಕಾರಿಯ ಬಗ್ಗೆ  ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ ಮತ್ತೊಮ್ಮೆ ಪ್ರಚಾರ ಪಡೆದುಕೊಳ್ಳುವ ಯತ್ನ ಮಾಡಿದ್ದಾರೆಯೇ?  ಮುಂಬೈನಲ್ಲಿ ಕಂಗನಾ ಅವರ ಕಚೇರಿ ಧ್ವಂಸ ಮಾಡಿದ್ದಾಗ ಸಿಕ್ಕ ಬೆಂಬಲವನ್ನೇ ಇಟ್ಟುಕೊಂಡು ತಮಗೆ ಬೇಕಾದ ರೀತಿ ವರ್ತನೆ ಮಾಡುತ್ತಿದ್ದಾರೆಯೇ? ಹೀಗೆ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಎದ್ದಿವೆ.

ದೀಪಾವಳಿಗೆ ಕಂಗನಾ ಮನೆಗೆ ಬಂದ ವಿಶೇಷ ಅತಿಥಿ

ಕಂಗನಾ ರಣಾವತ್ ಬಾಲಿವುಡ್ ಡ್ರಗ್ಸ್ ವಿಚಾರ, ಬಾಲಿವುಡ್ ಮಾಫಿಯಾದಬಗ್ಗೆ ದನಿ ಎತ್ತಿದಾಗ ಜನರು, ಅಭಿಮಾನಿಗಳು ಬೆಂಬಲಿಸಿದ್ದರು. ಇದನ್ನೇ ಕಂಗನಾ ಬಂಡವಾಳ ಮಾಡಿಕೊಂಡಿದ್ದಾರೆಯೇ? ಉತ್ತರ ಮಾತ್ರ ಗೊತ್ತಿಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!