ಅಮಿತಾಭ್​ @82: ಜಯಾ ಜೊತೆ ಮದುವೆಗೆ ಅಡ್ಡಿ ಬಂದಿತ್ತು ಜಾತಿ! ಹುಟ್ಟುಹಬ್ಬದಂದು ಕುತೂಹಲದ ವಿಷ್ಯ ರಿವೀಲ್​

By Suchethana D  |  First Published Oct 11, 2024, 11:41 AM IST


ಇಂದು ನಟ ಅಮಿತಾಭ್​ ಬಚ್ಚನ್​ 82ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಜಯಾ ಜೊತೆಗಿನ ಅವರ ಮದುವೆಯ ಕುತೂಹಲದ ವಿಷಯವೊಂದು ರಿವೀಲ್​ ಆಗಿದೆ.
 


ಇಂದು ನಟ ಅಮಿತಾಭ್​ ಬಚ್ಚನ್​ ಅವರ 82ನೇ ಹುಟ್ಟುಹಬ್ಬ. 11 October 1942ರಂದು ಹುಟ್ಟಿರುವ ಅಮಿತಾಭ್​ ಅವರು, ಇಂದಿಗೂ ಅದೆಷ್ಟು ಫಿಟ್​ ಆ್ಯಂಡ್​​ ಫೈನ್​ ಆಗಿದ್ದಾರೆ ಎನ್ನುವುದಕ್ಕೆ ಅವರನ್ನು ನೋಡಿದರೆ ತಿಳಿದುಬರುತ್ತದೆ. ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎನ್ನುವ ಮಾತಿಗೆ ಹೇಳಿಮಾಡಿಸಿದಂತಿದ್ದಾರೆ ಬಿಗ್​-ಬಿ. ನಟಿ ಜಯಾ ಬಾಧುರಿ ಜೊತೆಗೆ 51 ವರ್ಷಗಳ ದಾಂಪತ್ಯ ಜೀವನವನ್ನು ಪೂರೈಸಿರುವ ಅಮಿತಾಭ್​ ಅವರ ಪ್ರೀತಿ, ಮದುವೆಯ ಬಗ್ಗೆ ಹಲವು ವಿಷಯಗಳು ಇಂದಿಗೂ ಕುತೂಹಲಕಾರಿಯಾದದ್ದೇ. ಅಮಿತಾಭ್​ ಮತ್ತು ರೇಖಾ ನಡುವಿನ ಸಂಬಂಧ ಹೊಸತೇನಲ್ಲ. ಅಮಿತಾಭ್​ ಅವರನ್ನೇ ನೆನೆಯುತ್ತಾ ರೇಖಾ ಕೊನೆಗೂ ಅವಿವಾಹಿತರಾಗಿಯೇ ಉಳಿದದ್ದು ಕೂಡ ಇತಿಹಾಸ.

ಆದರೆ ಅದೇ ಇನ್ನೊಂದೆಡೆ, ಅಮಿತಾಭ್​ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮದುವೆಗೆ ಜಾತಿ ಅಡ್ಡ ಬಂದಿತ್ತು ಎಂಬ ಕುತೂಹಲದ ವಿಷಯವೊಂದು ರಿವೀಲ್​ ಆಗಿದೆ. ಕೆಲವು ವರ್ಷಗಳ ಸಂಬಂಧದ ನಂತರ 1973 ರಲ್ಲಿ ಇವರಿಬ್ಬರೂ ಗುಟ್ಟಾಗಿ  ಮದುವೆಯಾಗಿದ್ದರು. ಆ ಸಮಯದಲ್ಲಿ ಬಾಲಿವುಡ್​ನಲ್ಲಿ ಜಯಾ ಬಾಧುರಿ ಅವರು ದೊಡ್ಡ ಮಟ್ಟದ ಸ್ಟಾರ್​ ಆಗಿ ಮಿಂಚುತ್ತಿದ್ದರು. ಅದೆಷ್ಟು ಮಟ್ಟಿಗೆ ಎಂದರೆ ಅಮಿತಾಭ್​ ಅವರಿಗಿಂತಲೂ ಜಯಾ ದೊಡ್ಡ ಹೆಸರು ಮಾಡಿದ್ದರು. ಆದರೆ ಕೊನೆಯಲ್ಲಿ ‘ಜಂಜೀರ್’ ಅಮಿತಾಭ್​ ಅವರಿಗೆ ಯಶಸ್ಸು ತಂದುಕೊಟ್ಟು ಅವರೂ ದೊಡ್ಡ ಸ್ಟಾರ್​ ಪಟ್ಟಕ್ಕೇರಿ ಯಶಸ್ಸಿನ ಉತ್ತುಂಗ ತಲುಪುತ್ತಲೇ ಸಾಗಿದರು.  

Tap to resize

Latest Videos

undefined

ಧರ್ಮೇಂದ್ರ ಜೊತೆಗಿನ ಆ ದಿನಗಳ ನೆನೆದ ಜಯಾ! ಈ ವಯಸ್ಸಲ್ಲೂ ಅಮಿತಾಭ್​ ಪತ್ನಿಗೆ ಇದೆಂಥ ಆಸೆ ನೋಡಿ...

ಪತ್ರಕರ್ತರು ಮತ್ತು ಬರಹಗಾರರಾಗಿದ್ದ ಜಯ ಬಾಧುರಿ ಅವರ ತಂದೆ ತರುಣ್ ಕುಮಾರ್ ಅವರು ತಮ್ಮ ಮಗಳ ಮದುವೆ ಹಾಗೂ ಜಾತಿಯ ಬಗೆಗಿನ ವಿರೋಧದ ಬಗ್ಗೆ ಲೇಖನದ ಮೂಲಕ ತಿಳಿಸಿದ್ದಾರೆ.  ಕುತೂಹಲದ ವಿಷಯ ಏನೆಂದರೆ, ಜಯಾ ಬಂಗಾಳಿ ಬ್ರಾಹ್ಮಣರಾಗಿದ್ದರೆ, ಅಮಿತಾಭ್​ ಬಂಗಾಳಿಯೇತರರು ಆಗಿರುವ ಕಾರಣದಿಂದಾಗಿ ಇವರ ಮದುವೆಗೆ  ಬಂಗಾಳಿ ಪಾದ್ರಿ ಸಾಕಷ್ಟು ವಿರೋಧದಿಸಿದ್ದರಂತೆ! ಇವರಿಬ್ಬರು ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದು ಕುಇತುಕೊಂಡಿದ್ದರಂತೆ.  ಅಮಿತಾಭ್ ಅವರೊಂದಿಗಿನ ಜಯಾ ಅವರ ವಿವಾಹದ ಬಗ್ಗೆ ಅವರು ಸಾಕಷ್ಟು ಅತೃಪ್ತಿ ಹೊಂದಿದ್ದರು. ಆದರೆ ಅದಾಗಲೇ ಲವ್​ನಲ್ಲಿ ಬಿದ್ದಿದ್ದ ಜೋಡಿ ಮದುವೆಯಾಯಿತು. 

 ಅಮಿತಾಭ್ ಮತ್ತು ಜಯಾ ಅವರ ಜಾತಿಯಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಅವರನ್ನು ಮದುವೆಯಾಗುವ ಜವಾಬ್ದಾರಿಯನ್ನು ವಹಿಸಿದ ಬಂಗಾಳಿ ಪುರೋಹಿತರು ವಿರೋಧ ವ್ಯಕ್ತಪಡಿಸಿದ್ದರೂ ಅವರ ನಿರ್ಧಾರಕ್ಕೆ ಇಬ್ಬರ ಕುಟುಂಬಗಳು ವಿರೋಧ ವ್ಯಕ್ತಪಡಿಸಲಿಲ್ಲ ಎಂದು ತರುಣ್​ ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.   1989 ರಲ್ಲಿ ‘ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಪುಸ್ತಕದಲ್ಲಿ ಈ ವಿಷಯವನ್ನು ತರುಣ್​ ಅವರು ಬರೆದಿದ್ದಾರೆ.  ‘ ಜಯಾ ದೊಡ್ಡ ತಾರೆ ಎಂಬ ಕಾರಣಕ್ಕೆ ಅಮಿತಾಭ್​ ಆಕೆಯನ್ನು  ಮದುವೆಯಾದರು ಎಂದು ಹೇಳುವ ದುಷ್ಟರಿದ್ದಾರೆ. ಆದರೆ ಇದು ಸಂಪೂರ್ಣ ತಪ್ಪು. ‘ಜಂಜೀರ್’ ಚಿತ್ರದ ಯಶಸ್ಸಿಗಾಗಿ ಅಮಿತಾಭ್​ ಕಾಯುತ್ತಿದ್ದರು ಅಷ್ಟೇ. ಅದರಲ್ಲಿ ಅವರು ಯಶಸ್ಸು ಕಂಡರು ನಿಜ. ಆದರೆ ಒಂದು ವೇಳೆ ಅದರಲ್ಲಿ ಯಶಸ್ಸು ಸಿಗದಿದ್ದರೂ  ಜಯಾ ಅವರನ್ನು ಮದುವೆಯಾಗುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.

KBC 16: ಮದುವೆಯಾಗದ ಮಹಿಳೆಯರು ಸಂಸಾರಕ್ಕೆ ಭಾರ ಎಂದ ಸ್ಪರ್ಧಿಗೆ ಅಮಿತಾಭ್ ಬಚ್ಚನ್​ ಕ್ಲಾಸ್​! ​
 

click me!