ಶಾರುಖ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಅವರಿಗೆ ಅವರದ್ದೇ ಕಾರ್ಯಕ್ರಮಕ್ಕೆ ಒಳಗೆ ಬಿಡದೇ ತಡೆದ ಪೊಲೀಸರು! ಅಷ್ಟಕ್ಕೂ ಆಗಿದ್ದೇನು?
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಬಾದ್ಶಾಹ್ ಎಂದೇ ಫೇಮಸ್ ಆಗಿರೋ ಶಾರುಖ್ ಖಾನ್ ಅವರನ್ನು ಬಲ್ಲದವರು ತೀರಾ ವಿರಳ ಎಂದೇ ಹೇಳಬಹುದು. ಸಿನಿಮಾ ಎಂದರೆ ಅಲರ್ಜಿ ಎನ್ನುವವರಿಗೂ, ಸಿನಿಮಾ ಪ್ರಪಂಚದಿಂದ ದೂರ ಇರುವವರಿಗೂ ಸಾಮಾನ್ಯವಾಗಿ ಇವರಿಬ್ಬರೂ ಗೊತ್ತಿರುತ್ತಾರೆ. ಆದರೆ, ಪೊಲೀಸ್ ಸಿಬ್ಬಂದಿಗೆ ಮಾತ್ರ ಈ ಇಬ್ಬರು ಯಾರೆಂದು ಅರಿವೇ ಇರಲಿಲ್ಲ. ಆದ್ದರಿಂದ ಈ ನಟರ ಕಾರ್ಯಕ್ರಮದಲ್ಲಿ ಒಳಗೆ ಬಿಡದೇ ನಟರು ಪೇಚಿಗೆ ಸಿಲುಕಿರುವ ಘಟನೆಯೊಂದು ನಡೆದಿದೆ. ಪೊಲೀಸ್ ಸಿಬ್ಬಂದಿಗೆ ನಟರ ಬಗ್ಗೆ ಗೊತ್ತಿರದೇ ಇರಲು ಸಾಧ್ಯವೇ ಇಲ್ಲ ಎಂದು ಅಂದುಕೊಳ್ಳಬಹುದು ಅಲ್ಲವೆ? ಆದರೆ ಈ ಘಟನೆ ನಡೆದಿರುವುದು ನಿಜ. ಇದನ್ನು ಖುದ್ದು ಅಮಿತಾಭ್ ಬಚ್ಚನ್ ಅವರೇ ಇದೀಗ ರಿವೀಲ್ ಮಾಡಿದ್ದಾರೆ!
ಕೌನ್ ಬನೇಗಾ ಕರೋರ್ಪತಿಯ ಇಂದಿನ ಸಂಚಿಕೆಯ ಈ ವಿಷಯವನ್ನು ಅಮಿತಾಭ್ ಬಚ್ಚನ್ ಶೇರ್ ಮಾಡಿಕೊಂಡಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ 16 ರಲ್ಲಿ ಸಂಗೀತಗಾರರಾದ ಶಂಕರ್ ಮಹಾದೇವನ್ ಮತ್ತು ಗುರುದಾಸ್ ಮಾನ್ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊಸ ವರ್ಷವನ್ನು ಸಂಗೀತದ ರಸದೌತಣ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರು ಕೆಲವೊಂದು ಮುಜುಗರದ ಕ್ಷಣಗಳನ್ನು ಹಂಚಿಕೊಂಡರು. ತಮ್ಮ ಜೀವನದ ಹಾಸ್ಯಮಯ ಹಾಗೂ ಮುಜುಗರದ ಸನ್ನಿವೇಶ ಇದಾಗಿತ್ತು ಎಂದಿರುವ ಅಮಿತಾಭ್ ಅವರು, ನಟ ಶಾರುಖ್ ಖಾನ್ ಅವರಿಗೆ ಆಗಿರುವ ಘಟನೆಯನ್ನೂ ಹಂಚಿಕೊಂಡರು.
ಶಾರುಖ್ ಕರ್ನಾಟಕದ ಮಗ! ಮಂಗಳೂರಿನ ಅಜ್ಜಿ ದತ್ತು ಪಡೆದ ಕುತೂಹಲದ ವಿಷ್ಯ ರಿವೀಲ್ ಮಾಡಿದ ನಟ
ಅಮಿತಾಭ್ ಬಚ್ಚನ್ ವಿಷಯಕ್ಕೆ ಬರುವುದಾದರೆ ಇದು ತುಂಬಾ ಹಳೆಯ ಘಟನೆ. 1980ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ಘಟನೆ ಇದಾಗಿದೆ. ಅಲ್ಲೊಂದು ಕಾರ್ಯಕ್ರಮದಲ್ಲಿ ಅಮಿತಾಭ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿ ಅವರು ಸಿನಿಮಾಕ್ಕೆ ಸಂಬಂಧಿಸಿದ ನೃತ್ಯ, ಡೈಲಾಗ್ಗಳಿಂದ ಜನರನ್ನು ಮೋಡಿ ಮಾಡುವಂತೆ ಹೇಳಲಾಗಿತ್ತು. ವೇದಿಕೆಯ ಮೇಲೆ ಅವರ ಆಗಮನ ಸ್ವಲ್ಪ ವಿಭಿನ್ನವಾಗಿ ಇರಲಿ ಎನ್ನುವ ಕಾರಣಕ್ಕೆ ನೇರವಾಗಿ ವೇದಿಕೆ ಹಿಂಭಾಗದಿಂದ ಬರದೇ ಜನರ ಮಧ್ಯೆಯಿಂದ ಬರುವಂತೆ ಆಯೋಜಕರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ವೇದಿಕೆ ಬಿಟ್ಟು ಹೊರಭಾಗಕ್ಕೆ ಹೋಗಿದ್ದು, ಅಲ್ಲಿಂದ ಒಳಗೆ ಜನರ ಮಧ್ಯೆಯಿಂದ ವೇದಿಕೆ ಏರಬೇಕಿತ್ತು. ಆದರೆ ಆರಂಭದಲ್ಲಿಯೇ ಭದ್ರತಾ ಸಿಬ್ಬಂದಿ ನನ್ನನ್ನು ತಡೆದುಬಿಟ್ಟರು. ನಾನು ಅಮಿತಾಭ್ ಬಚ್ಚನ್ ಎಂದು ಹೇಳಿದರೂ ಅದು ಅವರಿಗೆ ಗೊತ್ತಾಗಲಿಲ್ಲ. ಕೊನೆಗೆ ನನ್ನದೇ ಕಾರ್ಯಕ್ರಮ ಎಂದೆಲ್ಲಾ ಹೇಳಿ ಆಯೋಜಕರನ್ನು ಅಲ್ಲಿಗೆ ಕರೆಸುವವರೆಗೆ ಸುಸ್ತಾಗಿ ಹೋಗಿತ್ತು ಎಂದಿದ್ದಾರೆ.
ಅದೇ ರೀತಿ, ಶಾರುಖ್ ಖಾನ್ ಅವರಿಗೂ ಇದೇ ರೀತಿ ಆಗಿತ್ತು. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದರು. ಆದರೆ ಶಾರುಖ್ ಎಂದರೆ ಯಾರು ಎಂದು ಎಲ್ಲರಿಗೂ ತಿಳಿದಿದ್ದರೂ, ಅವರನ್ನು ನೇರಾನೇರ ಯಾರೂ ನೋಡಿರಲಿಲ್ಲ. ಆದ್ದರಿಂದ ಎಲ್ಲವೂ ಎಡವಟ್ಟಾಗಿತ್ತು. ಅವರು ಅತಿಥಿಯಾಗಿ ಆಗಮಿಸಿದ್ದರು. ಆದರೆ ಪೊಲೀಸರು ಅವರನ್ನು ದ್ವಾರದಲ್ಲಿಯೇ ತಡೆದುಬಿಟ್ಟರು. ಬಳಿಕ ಶಾರುಖ್, ನಾನು ಶಾರುಖ್ ಶಾರುಖ್ ಖಾನ್ ಎಂದು ಹೇಳಿದರೂ, ನೀವು ಯಾವುದೇ ಖಾನ್ ಆಗಿರಬಹುದು. ಅದು ನನಗೆ ಸಂಬಂಧವಿಲ್ಲ. ಇಲ್ಲಿ ಗಣ್ಯರ ಕಾರ್ಯಕ್ರಮ ನಡೆಯುತ್ತಿದೆ. ಯಾರನ್ನೂ ಒಳಗೆ ಬಿಡುವುದಿಲ್ಲ ಎಂದು ಶಾರುಖ್ರನ್ನು ಸುಸ್ತು ಮಾಡಿಬಿಟ್ಟರು. ನಟರಿಗೆ ಇಂಥ ಘಟನೆಗಳು ಆಗಾಗ್ಗೆ ಆಗುತ್ತಲೇ ಇರುತ್ತವೆ ಎಂದರು.
ಕೆಬಿಸಿ ಷೋನಲ್ಲಿ ಅಮಿತಾಭ್ ಟೇಕ್ವಾಂಡೋ ಕಿಕ್! 82ರ ನಟನ ಎನರ್ಜಿಗೆ ಪ್ರೇಕ್ಷಕರು ಬೆರಗು- ವಿಡಿಯೋ ವೈರಲ್