ಹಾಲಿ ಗರ್ಲ್ ಫ್ರೆಂಡ್, ಮಾಜಿ ಪತ್ನಿ, ಆಕೆಯ ಬಾಯ್ ಫ್ರೆಂಡ್ ಜೊತೆ ದುಬೈನಲ್ಲಿ ಹೃತಿಕ್ ರೋಷನ್

By Pavna Das  |  First Published Dec 31, 2024, 8:53 PM IST

ಮಾಜಿ ಪತ್ನಿ ಸುಸ್ಸೇನ್ ಹಾಗೂ ಗರ್ಲ್ ಫ್ರೆಂಡ್ ಸಬಾ ಆಜಾದ್, ಸ್ನೇಹಿತರು ಮತ್ತು ಕುಟುಂಬದ  ಜೊತೆ ದುಬೈನಲ್ಲಿ ವೆಕೇಶನ್ ಮೂಡಲ್ಲಿ ಹೃತಿಕ್ ರೋಷನ್. 


ವರ್ಷವು ಕೊನೆಗೊಳ್ಳುತ್ತಿದ್ದಂತೆ ಬಾಲಿವುಡ್ ಸೆಲೆಬ್ರಿಟಿಗಳು ಪಾರ್ಟಿ ಮೂಡ್ ನಲ್ಲಿದ್ದಾರೆ. ಹೃತಿಕ್ ರೋಷನ್ ತಮ್ಮ ಬಿಡುವಿಲ್ಲದ ಶೆಡ್ಯೂಲ್ ಮಧ್ಯ ಸ್ವಲ್ಪ ಸಮಯವನ್ನು ತೆಗೆದುಕೊಂಡು ದುಬೈನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ರಜಾದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ನಟ ತನ್ನ ಗೆಳತಿ ಸಬಾ ಆಜಾದ್, ಮಾಜಿ ಪತ್ನಿ ಸುಸ್ಸೇನ್ ಖಾನ್, ಅವರ ಗೆಳೆಯ ಅರ್ಸ್ಲಾನ್ ಗೋನಿ ಮತ್ತು ಮಗ ಹೃದಾನ್ ಜೊತೆ ವೆಕೇಶನ್ ಎಂಜಾಯ್ ಮಾಡ್ತಿರೋದು ಕಂಡುಬಂದಿದೆ.

ಸೋಮವಾರ, ಸುಸ್ಸೇನ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಅರ್ಸ್ಲಾನ್, ಹೃತಿಕ್ ಮತ್ತು ಅವರ ಮಗ ಹೃದಾನ್ ಮತ್ತು ಉದಯ್ ಚೋಪ್ರಾ ಅವರೊಂದಿಗೆ ಪೋಸ್ ನೀಡಿದ ಚಿತ್ರವನ್ನು ಹಂಚಿಕೊಂಡಿದ್ದಾರೆ. ನರ್ಗಿಸ್ ಫಕ್ರಿ ಮತ್ತು ಅವರ ರೂಮರ್ಡ್ ಬಾಯ್ ಫ್ರೆಂಡ್ ಟೋನಿ ಬೇಗ್ ಕೂಡ ಹೃತಿಕ್ ಮತ್ತು ಸುಸ್ಸೇನ್ ಅವರೊಂದಿಗೆ ವೆಕೇಶನ್ ನಲ್ಲಿ ಸೇರಿಕೊಂಡಿದ್ದಾರೆ. ಈ ಫೋಟೊದಲ್ಲಿ ನರ್ಗಿಸ್ ಕಾಣಿಸಿಕೊಳ್ಳದಿದ್ದರೂ, ಸುಸ್ಸೇನ್ ನರ್ಗಿಸ್, ಟೋನಿ ಮತ್ತು ಅರ್ಸ್ಲಾನ್ ಅವರೊಂದಿಗೆ ಫೋಟೋವನ್ನು ಶೇರ್ ಮಾಡಿದ್ದಾರೆ. ಸುಸ್ಸೇನ್ ಅವರ ಸಹೋದರ ಮತ್ತು ನಟ ಜಾಯೆದ್ ಖಾನ್ ಕೂಡ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ.

Tap to resize

Latest Videos

ಉದಯ್ ಚೋಪ್ರಾ ಮತ್ತು ನರ್ಗಿಸ್ ಫಕ್ರಿ ಅವರು ಬ್ರೇಕಪ್ ಆಗುವ ಮೊದಲು ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ಹಾಗಾಗಿ ಇಬ್ಬರೂ ಒಂದೇ ಕಡೇ ಇರೋದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 

ಹೃತಿಕ್ ಸದ್ಯ ಸಬಾ ಆಜಾದ್ ಅವರೊಂದಿಗೆ ರಿಲೇಶನ್’ಶಿಪ್ ನಲ್ಲಿದ್ದಾರೆ, ಸುಸೇನ್ ಅರ್ಸ್ಲಾನ್ ಗೋನಿಯೊಂದಿಗೆ ಡೇಟ್ ಮಾಡುತ್ತಿದ್ದಾರೆ. ಈ ಮಾಜಿ ಜೋಡಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರರ ಪೋಸ್ಟ್‌ಗಳಲ್ಲಿ ಕಮೆಂಟ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಮಕ್ಕಳಿಗಾಗಿ ಇಬ್ಬರು ಜೊತೆಯಾಗಿ ವೆಕೇಶನ್ ಗೂ ಹೋಗುತ್ತಿರುತ್ತಾರೆ.

click me!