KGF 2 ಚಿತ್ರ ಸಕ್ಸಸ್ ಆಗಿದ್ದೇ ಯಶ್ ನ್ಯಾಶನಲ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಯಶ್ ರಾಧಿಕಾ ಪ್ರೇಮ (Yash - Radhika Love Story) ಕಹಾನಿಗೆ ಸಾಕ್ಷಿ ಅನ್ನೋ ಹಾಗೆ ಹಳೇ ಫೋಟೋ ಒಂದು ಸಿಕ್ಕಿದೆ. ಅದು ವೈರಲ್ ಆಗ್ತಿದೆ.
KGF 2 ಎಬ್ಬಿಸಿದ ಹವಾಗೆ ಸಾಟಿ ಇಲ್ಲ. ಇದರಲ್ಲಿ ರಾಕಿಂಗ್ ಭಾಯ್ ಯಶ್ (Rocking Star Yash) ಅವರ ಸ್ಟೈಲ್, ಆಟಿಟ್ಯೂಡ್, ಲುಕ್ ಗೆ ಮಾರು ಹೋಗದವರಿಲ್ಲ. ಯಶ್ ಅವರ ಇಷ್ಟೂ ವರ್ಷದ ಶ್ರಮಕ್ಕೆ ಕಳಶಪ್ರಾಯವಾಗಿ ಕೆಜಿಎಫ್ 2 ಅವರ ಕೈ ಹಿಡಿದಿದೆ. ಕನ್ನಡ ಮಾತ್ರವಲ್ಲ, ತೆಲುಗು, ಹಿಂದಿ, ತಮಿಳು ಸೇರಿದಂತೆ ಹೆಚ್ಚಿನೆಲ್ಲ ಭಾರತೀಯ ಭಾಷೆಗಳಲ್ಲಿ ಯಶ್ ಮಿಂಚಿದ್ದಾರೆ. ಇನ್ನೊಂದು ವಿಶೇಷ ಅಂದರೆ ತಲೈವಾ ರಜನೀಕಾಂತ್ ಅವರೂ ಸಹ ಕೆಜಿಎಫ್ 2 ಅನ್ನು ಕನ್ನಡದಲ್ಲೇ ನೋಡಿ ಯಶ್ ಅಭಿನಯಕ್ಕೆ ಹ್ಯಾಟ್ಸಾಪ್ ಅಂದಿದ್ದಾರೆ. ಬಾಲಿವುಡ್ ತಾರೆಯರು, ದಕ್ಷಿಣ ಭಾರತೀಯ ನಟ ನಟಿಯರು ಯಶ್ ಅಭಿನಯ, ಮ್ಯಾನರಿಸಂಗೆ ಶಭಾಷ್ ಅಂದಿದ್ದಾರೆ. ಕೆಜಿಎಫ್ ೨ನ ಯಶ್ ಅವರ ಆಂಗ್ರಿ ಯಂಗ್ ಮ್ಯಾನ್ ಲುಕ್ ನೋಡಿ ಸಾಕಷ್ಟು ಮಂದಿ ಲೇಡಿ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಹೆಚ್ಚಿನ ಹುಡುಗಿಯರು ಅವರ ಮೆರಿಟಲ್ ಸ್ಟಾಟಸ್ ನೋಡಿ ನಿರಾಶರಾದರೂ ಅವರ ಪ್ರೇಮ ಕಹಾನಿಯನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಅಂಥಾ ವಿಶೇಷತೆ ಏನಿದೆ ಯಶ್- ರಾಧಿಕಾ ಪ್ರೇಮ ಕಹಾನಿಯಲ್ಲಿ? ಅವರಿಬ್ಬರ ಪರಿಚಯ, ಪ್ರೇಮದ ಹಿನ್ನೆಲೆ ಏನು ಅನ್ನೋ ಡೀಟೇಲ್ ಇಲ್ಲಿದೆ.
ಯಶ್ ಮೈಸೂರಿನ ಹುಡುಗ. ಚಿಕ್ಕ ವಯಸ್ಸಲ್ಲೇ ಕುಟುಂಬವನ್ನು ಪೊರೆಯಬೇಕಾದ ಜವಾಬ್ದಾರಿ ಹೆಗಲ ಮೇಲೆ ಬಿದ್ದಿತ್ತು. ಆಗ ಅವರ ಹೆಸರೂ ಬೇರೆ ಇತ್ತು ಅನ್ನಿ. ಇಂದು ವಿದೇಶದಲ್ಲಿ ಓದಿ ಬಂದ ಸ್ಟಾರ್ ನಟರನ್ನೂ ನಾಚಿಸುವಂತೆ ಇಂಗ್ಲೀಷ್ ನಲ್ಲಿ ಮಾತನಾಡುವ ಯಶ್ ಓದಿದ್ದು ಕೇವಲ ಸೆಕೆಂಡ್ ಪಿಯುಸಿವರೆಗೆ, ಮೈಸೂರಿನ ಸಾಮಾನ್ಯ ಸ್ಕೂಲ್ ನಲ್ಲಿ. ಪಿಯುಸಿ ತನಕ ಓದಿದ ಮೇಲೆ ಕುಟುಂಬದ ಹೊಣೆಗಾರಿಕೆ ಕಾರಣದಿಂದ ಪ್ರಾವಿಜನ್ ಸ್ಟೋರ್ ಶುರು ಮಾಡ್ತಾರೆ. ಅದೂ ಸಕ್ಸಸ್ ಆಗಲ್ಲ. ಸ್ಕೂಲ್ ಡೇಸ್ ನಿಂದಲೂ ರಂಗಭೂಮಿ, ಡ್ಯಾನ್ಸ್, ಹಾಡುಗಳಲ್ಲೆಲ್ಲ ಮುಂದಿದ್ದ ಯಶ್ ಸ್ಕೂಲ್ ಬಿಟ್ಟರೂ ಕಲ್ಚರಲ್ ಆಕ್ಟಿವಿಟಿ ಮುಂದುವರಿಸುತ್ತಾರೆ. ಸ್ಕೂಲ್‌ನಲ್ಲಿ ಇವರ ಡ್ಯಾನ್ಸ್ ಹಾಡಿಗೆ ಅಭಿಮಾನಿಗಳಿದ್ದರು. ಹೀಗಾಗಿ ಸ್ಕೂಲ್ ಬಿಟ್ಟರೂ ಅಂಥಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆ ಬರುತ್ತಿತ್ತು. ಜೊತೆಗೆ ಯಶ್ ಆರ್ಕೆಸ್ಟ್ರಾದಲ್ಲೂ ಹಾಡು, ಡ್ಯಾನ್ಸ್ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು. ಇವರ ಆಕ್ಟಿಂಗ್ ಸ್ಕಿಲ್ ನೋಡಿ, 'ಈ ಹುಡುಗ ಒಂದಲ್ಲಾ ಒಂದು ದಿನ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಾನೆ' ಅಂತ ಅಂದಿನ ಸ್ಟಾರ್ ಉಪೇಂದ್ರ ಭವಿಷ್ಯ ನುಡಿದಿದ್ದರು. ಅಂದಿಂದು ನಿಜವಾಗಿದೆ.
KGF 2 Film Review: ನೆತ್ತರಲ್ಲಿ ಬರೆದ ಸುವರ್ಣ ಯುಗದ ಚರಿತ್ರೆ
ಇನ್ನೊಂದು ಕಡೆ ಮನರಂಜನಾ ಮಾಧ್ಯಮದಲ್ಲಿ ಭವಿಷ್ಯ ಅರಸಿ ಬೆಂಗಳೂರಿಗೆ ಬಂದ ಯಶ್ ಮೊದಲು ಹೋಗಿದ್ದು ರಂಗಭೂಮಿಗೆ. ಅಲ್ಲಿ ರಂಗದ ಹಿಂದೆ ಕೆಲಸ ಮಾಡಿದ್ದೇ ಹೆಚ್ಚು. ಈ ಸಮಯದಲ್ಲೇ ಅವರು ಸೀರಿಯಲ್‌ನಲ್ಲಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದರು. ಅಂಥಾ ಟೈಮಲ್ಲಿ ಸಿಕ್ಕ ಸೀರಿಯಲ್ 'ನಂದಗೋಕುಲ'. ಈ ಸೀರಿಯಲ್ ಅವರ ವೃತ್ತಿ ಬದುಕು ಮಾತ್ರ ಅಲ್ಲ, ವೈಯುಕ್ತಿಕ ಬದುಕಿನಲ್ಲೂ ಟರ್ನಿಂಗ್ ಪಾಯಿಂಟ್. ರಾಧಿಕಾ ಪಂಡಿತ್ ಎಂಬ ಚೆಲುವಾತಿ ಚೆಲುವೆಯ ಜೊತೆಗೆ ಪರಿಚಯ, ಸ್ನೇಹವಾಗಿದ್ದು ಅಲ್ಲೇ.
ಸೀರಿಯಲ್ ನಿಂದ ಮುಂದೆ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ಈ ಜೋಡಿ ಮತ್ತಷ್ಟು ಹತ್ತಿರವಾಗುತ್ತಾರೆ. ಈಗ ಈ ಸಮಯದ ಅವರ ಫೋಟೋ ಒಂದು ವೈರಲ್ ಆಗಿದೆ. ಅದರಲ್ಲಿ ಯಶ್ ಅವರ ಕೈಯನ್ನು ರಾಧಿಕಾ ಪಂಡಿತ್ ಹಿಡಿದುಕೊಂಡಿದ್ದಾರೆ. ಇಬ್ಬರ ಪರಸ್ಪರ ಒಬ್ಬರನ್ನೊಬ್ಬರು ಆರಾಧನಾ ಭಾವದಿಂದ ನೋಡುತ್ತಿದ್ದಾರೆ. ರಾಧಿಕಾ ನೋಟದಲ್ಲಿ ಪ್ರೀತಿಯ ಛಾಯೆ ಕಂಡರೆ ಯಶ್ ನಸು ನಾಚಿದಂತೆ ಕಾಣುತ್ತಾರೆ. ಇದು ಯಾವ ಕಾಲದ ಫೋಟೋ ಅನ್ನೋದಕ್ಕೆ ಸಾಕ್ಷಿಯಾಗಿ ಬೇಸಿಕ್ ಮೊಬೈಲ್ ಸೆಟ್ ರಾಧಿಕಾ ಪಂಡಿತ್ ಕೈಯಲ್ಲಿದೆ. ಅದು ನೋಕಿಯಾದ ಬೇಸಿಕ್ ಸೆಟ್ ಮೊಬೈಲ್. ಅಂದರೆ ಸುಮಾರು ೧೦ ರಿಂದ ೧೫ ವರ್ಷ ಹಳೆಯ ಫೋಟೋ ಇದು ಅನ್ನೋದು ಗೊತ್ತಾಗುತ್ತೆ. ಆಗಲೇ ಈ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು ಅನ್ನೋದಕ್ಕೆ ಈ ಫೋಟೋ ಸಾಕ್ಷಿಯಾಗುತ್ತದೆ.
KGF 2; 3ನೇ ದಿನವೂ ಹಿಂದಿಯಲ್ಲಿ ದಾಖಲೆ ಬರೆದ ರಾಕಿ ಭಾಯ್
ಹೀಗೆ ಚಿಗುರಿದ ಪ್ರೀತಿಯಲ್ಲಿ ಮೊದಲು ಯಶ್ ಪ್ರೊಪೋಸ್ ಮಾಡ್ತಾರೆ. ಟೈಮ್ ತಗೊಂಡು ರಾಧಿಕಾ ಒಪ್ಪಿಗೆ ಕೊಡುತ್ತಾರೆ. ಸುಮಾರು ಎಂಟು ವರ್ಷಗಳ ಕಾಲ ಪ್ರೇಮಿಗಳಾಗಿದ್ದ ಈ ಇಬ್ಬರೂ ಒಂದು ಶುಭ ಗಳಿಕೆಯಲ್ಲಿ ಮದುವೆ ಆಗುತ್ತಾರೆ. ಸದ್ಯ ಐರಾ, ಯಥರ್ವ್ ಎಂಬ ಮುದ್ದಾದ ಮಕ್ಕಳ ಪೋಷಕರಾಗಿದ್ದಾರೆ.
ಈಗ ಕೆಜಿಎಫ್ ೨ ಹವಾ ಎಲ್ಲೆಲ್ಲೂ ಇರುವಾಗ ಅವರ ಪ್ರೇಮ ಕಹಾನಿಯೂ ಭರ್ಜರಿ ಪ್ರಚಾರ ಪಡೆಯುತ್ತಿದೆ.
David Warner: ರಾಕಿ ಬಾಯ್ ಯಶ್ ಅವತಾರದಲ್ಲಿ ಧೂಳೆಬ್ಬಿಸಿದ ವಾರ್ನರ್