Asianet Suvarna News Asianet Suvarna News

ಹಾಲಿವುಡ್ ನಟ ಬ್ರೂಸ್ ವಿಲ್ಲೀಸ್‌ಗೆ Aphasia! ಏನೀ ಕಾಯಿಲೆ?

ಹಾಲಿವುಡ್ ಆಕ್ಷನ್ ಸಿನಿಮಾಪ್ರಿಯರ ಫೇವರಿಟ್ ನಟ ಬ್ರೂಸ್ ವಿಲ್ಲೀಸ್ ಅವರು ಒಂದು ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಾರೆ, ನಟನೆಯಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಈ ಕಾಯಿಲೆಯ ವಿವರ ತಿಳಿಯೋಣ ಬನ್ನಿ.

 

Hollywood Actor Bruce Willies diagnosed for Aphasia
Author
Bengaluru, First Published Mar 31, 2022, 5:19 PM IST

ನಟ ಬ್ರೂಸ್ ವಿಲ್ಲೀಸ್ (Bruce Willies) ಅವರನ್ನು ಹಾಲಿವುಡ್ (Hollywood) ಆಕ್ಷನ್ ಸಿನಿಮಾಗಳಲ್ಲಿ ನೋಡಿದವರು ಅವರ ಒನ್-ಲೈನರ್‌ಗಳು ಮತ್ತು ಆಕ್ಷನ್ ಸೀಕ್ವೆನ್ಸ್‌ಗಳನ್ನು ಇಷ್ಟಪಟ್ಟಿರಬಹುದು. ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಈಗ ಇವರೆಲ್ಲ ಶಾಕ್ ಆಗುವಥ ಸುದ್ದಿ ಏನೆಂದರೆ, ಬ್ರೂಸ್ ನಟನೆ ಬಿಟ್ಟುಬಿಡಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಅವರ ಮೆದುಳನ್ನು ಕಾಡುತ್ತಿರುವ ಒಂದು ಕಾಯಿಲೆ- ಅದರ ಹೆಸರು ಅಫೇಸಿಯಾ (Aphasia). 

ಇದೊಂದು ನರಗಳ ಕಾಯಿಲೆ- ನ್ಯೂರೋಲಾಜಿಕಲ್ ಡಿಸಾರ್ಡರ್. ಇದು ವ್ಯಕ್ತಿಯ ಭಾಷೆ ಮತ್ತು ಮಾತಿನ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಗೆ ಮಾಡಿದ ಡಯಾಗ್ನಾಸಿಸ್ ಪ್ರಕಾರ ಈ ಕಾಯಿಲೆ ಕಂಡುಬಂದಿದ್ದು, ಬ್ರೂಸ್‌ಗೆ ಅರಿವಿನ ಸಮಸ್ಯೆಗಳಿವೆ ಎಂದು ವಿಲ್ಲೀಸ್ ಕುಟುಂಬ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ. 

ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಮೆದುಳಿನ ಭಾಷಾ ಭಾಗಕ್ಕೆ, ಸಾಮಾನ್ಯವಾಗಿ ಎಡಭಾಗಕ್ಕೆ ಹಾನಿಯಾಗುವುದರಿಂದ ಈ ಅಸ್ವಸ್ಥತೆ ಉಂಟಾಗುತ್ತದೆ. ಆ ಹಾನಿಯು ಪಾರ್ಶ್ವವಾಯು (Stroke), ತಲೆಗೆ ಆಗುವ ಗಾಯ, ಮೆದುಳಿನ ಗೆಡ್ಡೆ (Brain Tumor), ಕೆಲವು ರೀತಿಯ ಸೋಂಕುಗಳ ಪರಿಣಾಮ ಆಗಿರಬಹುದು ಅಥವಾ ಆಟಿಸಂನ ಪರಿಣಾಮ ಆಗಿರಬಹುದು. ಇದರ ರೋಗಲಕ್ಷಣಗಳು- ಮಾತು ಮತ್ತು ಗ್ರಹಿಕೆಯಲ್ಲಿ ತೊಂದರೆ ಇರುತ್ತದೆ. 
ಅಫೇಸಿಯಾದಲ್ಲಿ ಸ್ಥೂಲವಾಗಿ ಎರಡು ವಿಧಗಳಿವೆ. ಇದನ್ನು ಫ್ಲುಯೆಂಟ್ (ನಿರರ್ಗಳ) ಮತ್ತು ನಾನ್‌ ಫ್ಲುಯೆಂಟ್ (ತೊದಲು). ಈ ಎರಡೂ ವಿಭಾಗಗಳಲ್ಲಿ ವಿವಿಧ ಬಗೆಯ ವೈವಿಧ್ಯಮಯ ಗುಂಪುಗಳಿರುತ್ತವೆ. ಮೆದುಳಿನಲ್ಲಿ ಹಾನಿಗೊಳಗಾದ ಪ್ರದೇಶ ಮತ್ತು ರೋಗಲಕ್ಷಣಗಳಿಗೆ ಅನುಸರಿಸಿ ಇವು ಪ್ರತ್ಯೇಕಿಸಲ್ಪಡುತ್ತವೆ. ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಸಾಮಾನ್ಯವಾಗಿ ಎಡಭಾಗದಲ್ಲಿರುವ ಮುಂಭಾಗದ ಹಾಲೆಯ ಒಂದು ಭಾಗವು ಹಾನಿಗೊಳಗಾದಾಗ ಸಂಭವಿಸುವ ಸಾಮಾನ್ಯ ವಿಧದ ನಾನ್-ಫ್ಲುಯೆಂಟ್ ಅಫೇಸಿಯಾವನ್ನು ಬ್ರೋಕಾ ಅಫೇಸಿಯಾ ಎಂದು ಕರೆಯಲಾಗುತ್ತದೆ. ಬ್ರೋಕಾ ಅಫೇಸಿಯಾದ ಲಕ್ಷಣಗಳು- ಇದನ್ನು ಅಭಿವ್ಯಕ್ತಿಶೀಲ ಅಫೇಸಿಯಾ ಎಂದೂ ಕರೆಯುತ್ತಾರೆ- ಭಾಷಣ ಸಮಸ್ಯೆಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ವ್ಯಕ್ತಿ ತಮ್ಮ ಮಾತಿನಲ್ಲಿ ಕೆಲವು ಪದಗಳನ್ನು ನುಂಗಿಕೊಳ್ಳುತ್ತಾರೆ ಮತ್ತು ಸಣ್ಣ ವಾಕ್ಯಗಳಲ್ಲಿ ಮಾತನಾಡುತ್ತಾರೆ. ಈ ಅಸ್ವಸ್ಥತೆಯಿರುವ ವ್ಯಕ್ತಿಯು ಸಾಮಾನ್ಯವಾಗಿ ಇತರರು ಏನು ಹೇಳುತ್ತಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಬ್ರೋಕಾ ಅಫೇಸಿಯಾ ಮೆದುಳಿನ ಮುಂಭಾಗಕ್ಕೆ ಹಾನಿ ಮಾಡುವುದರಿಂದ, ಅದು ಚಲನೆಗಳ ಮೇಲೆ ಪರಿಣಾಮ ಬೀರುತ್ತದೆ. ದೇಹದ ಬಲಭಾಗದಲ್ಲಿ ದೌರ್ಬಲ್ಯ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ನಿಮ್ಮ ಹತ್ರ ಡೇಂಜರಸ್‌ ಪುರುಷರಿದ್ರೆ ನನ್ನ ಹತ್ರ ಡೇಂಜರಸ್ ಮಹಿಳೆಯರಿದ್ದಾರೆ: ರಾಜಮೌಳಿಗೆ RGV ಟಾಂಗ್!

ಫ್ಲುಯೆಂಟ್ ಅಫೇಸಿಯಾದ ಅತ್ಯಂತ ಸಾಮಾನ್ಯ ವಿಧವಾದ ವೆರ್ನಿಕೆ ಅಫೇಸಿಯಾ ಹೊಂದಿದ ಪೇಷೆಂಟ್‌ಗಳ ಮೆದುಳಿನಲ್ಲಿ ಭಾಷೆಯನ್ನು ನಿರ್ವಹಿಸುವ ಭಾಗದ ವೆರ್ನಿಕೆ ಪ್ರದೇಶಕ್ಕೆ ಹಾನಿ ಆಗಿರುತ್ತದೆ. ಪದಗಳನ್ನು ಬಿಟ್ಟುಬಿಡುವ ಮತ್ತು ಸಣ್ಣ ವಾಕ್ಯಗಳಲ್ಲಿ ಮಾತನಾಡುವ ಬದಲು, ವೆರ್ನಿಕೆ ಅಫೇಸಿಯಾದ ವ್ಯಕ್ತಿ, ಸುದೀರ್ಘ ಮತ್ತು ಗೊಂದಲಮಯ ವಾಕ್ಯಗಳನ್ನು ಮಾತಾಡುತ್ತಾರೆ. ಅನಗತ್ಯ ಮತ್ತು ಅಸಂಬದ್ಧ, ಕಟ್ಟಿದ ಪದಗಳನ್ನು ಸೇರಿಸುತ್ತಾರೆ. ವರ್ನಿಕೆ ಅಫೇಸಿಯಾ ಹೊಂದಿರುವವರು, ಇತರರು ಏನು ಹೇಳುತ್ತಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಸ್ಯೆ ಹೊಂದಿರುತ್ತಾರೆ.
ಗ್ಲೋಬಲ್ ಅಫೇಸಿಯಾ ಎಂದು ಕರೆಯಲ್ಪಡುವ ಇನ್ನೊಂದು ಥರದ ಅಫೇಸಿಯಾ, ಮಿದುಳಿನ ಭಾಷೆ- ಪ್ರಾಬಲ್ಯದ ಪ್ರದೇಶದ ಹೆಚ್ಚಿನ ಭಾಗ ಹಾನಿಗೊಳಗಾದಾಗ ಸಂಭವಿಸುತ್ತದೆ. ಇದು ಭಾಷೆಯನ್ನು ಮಾತನಾಡಲು ಅಥವಾ ಗ್ರಹಿಸಲು ತೀವ್ರ ತೊಂದರೆಗೆ ಕಾರಣವಾಗಬಹುದು.

ಈ Bollywood ಸ್ಟಾರ್ಸ್‌ ನಡುವೆ ಇನ್ನೆಂದಿಗೂ ಫ್ರೆಂಡ್‌ಶಿಪ್‌ ಸಾಧ್ಯವಿಲ್ಲ

ಬ್ರೂಸ್ ವಿಲ್ಲೀಸ್‌ಗೆ ಈಗ 67 ವರ್ಷ. ಈ ವೈವಿಧ್ಯಮಯ ಕಾಯಿಲೆಗಳಲ್ಲಿ ವಿಲ್ಲೀಸ್‌ಗೆ ಯಾವ ರೀತಿಯ ರೋಗ ಡಯಾಗ್ನೋಸ್ ಆಗಿದೆ, ಅವರಿಗೆ ಅಫೇಸಿಯಾಕ್ಕೆ ಕಾರಣವಾದ ಪಾರ್ಶ್ವವಾಯು ಇತ್ತೇ ಎಂಬ ಬಗ್ಗೆ ಗೊತ್ತಾಗಿಲ್ಲ. ಸಾಮಾನ್ಯವಾಗಿ ಅಫೇಸಿಯಾ ಮಧ್ಯವಯಸ್ಸು ಅಥವಾ ನಂತರ ಕಾಣಿಸಿಕೊಳ್ಳುತ್ತದೆ. ಚಿಕ್ಕ ಮಕ್ಕಳಲ್ಲಿಯೂ ಅಪರೂಪಕ್ಕೆ ಸಂಭವಿಸಬಹುದು. ಅಮೆರಿಕದಲ್ಲಿ ಸುಮಾರು ೧೦ ಲಕ್ಷ ಮಂದಿ ಅಫೇಸಿಯಾವನ್ನು ಹೊಂದಿದ್ದಾರೆ. 

ಇದಕ್ಕೆ ಚಿಕಿತ್ಸೆಯೇನು? 
ಸ್ಪೀಚ್ ಥೆರಪಿ, ಚಿತ್ರಗಳು, ಸನ್ನೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ವ್ಯಕ್ತಿಯನ್ನು ಮಾತನಾಡಲು ಅನುವು ಮಾಡಿಕೊಡುವ ಸಂವಹನ ಸಾಧನಗಳನ್ನು ಬಳಸಲು ತರಬೇತಿಗಳು ಇದಕ್ಕೆ ಚಿಕಿತ್ಸೆಗಳು. ಈ ಕಾಯಿಲೆಯನ್ನು ಅರ್ಥ ಮಾಡಿಕೊಂಡ ಕುಟುಂಬಸ್ಥರು ಇದ್ದಾಗ ವ್ಯಕ್ತಿಯ ಬದುಕು ಹಗುರ. 

ಒಂದು Instagram ಪೋಸ್ಟ್‌ನಿಂದ ಇಷ್ಟೊಂದು ಸಂಪಾದನೆ ಮಾಡ್ತಾರಾ ನಟಿ Samantha
 

Follow Us:
Download App:
  • android
  • ios