ಪತಿ ಆದಿಲ್ ಖಾನ್ ಅವರನ್ನು ಜೈಲಿಗೆ ಕಳಿಸಿರುವ ನಟಿ ರಾಖಿ ಸಾವಂತ್, ದುಬೈನಿಂದ ಹಿಂದುರುಗಿದ್ದಾರೆ. ತಮ್ಮ ಪತಿ ಮತ್ತು ಮೃತಪಟ್ಟ ತಾಯಿಯನ್ನು ನೆನೆದು ಕಣ್ಣೀರು ಹಾಕಿದ ನಟಿ ಹೇಳಿದ್ದೇನು?
ರಾಖಿ ಸಾವಂತ್ Rakhi Sawant ಸದ್ಯ ಭಾರಿ ಚರ್ಚೆಯಲ್ಲಿರುವ ನಟಿ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ. ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಂತರ, ಮೈಸೂರು ಕೋರ್ಟ್‌ಗೆ (Mysore Court) ಹಾಜರಾಗಿ ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದರು. ಇವೆಲ್ಲಾ ಬೆಳವಣಿಗೆಯ ಬಳಿಕ ಮದುಮಗಳಂತೆ ಸಿಂಗರಿಸಿಕೊಂಡು ಮತ್ತೆ ಜೀವನದಲ್ಲಿ ಮದುವೆಯನ್ನೇ ಆಗುವುದಿಲ್ಲ ಎಂದು ಪಣತೊಟ್ಟಿದ್ದರು.
ನಂತರ ಕಳೆದ ತಿಂಗಳು ದುಬೈಗೆ (Dubai) ಹೋಗಿದ್ದ ಅವರು, ರಾಖಿ ಸಾವಂತ್ ಅಕಾಡೆಮಿ ಉದ್ಘಾಟನೆಗಾಗಿ ಹೋಗಿರುರುವುದಾಗಿ ತಿಳಿಸಿದ್ದರು. ಗಂಡನ ಬಗ್ಗೆ ಮಾತನಾಡಿದ್ದ ಅವರು, 'ನನ್ನಂಥ ಉತ್ತಮ ನಡತೆಯ ಹಾಟ್ ಅಗಿರುವ ಹೆಂಡತಿಯನ್ನು ಬಿಟ್ಟು ಓಡಿಹೋಗಿದ್ದಾನೆ.. ಪಾಪ' ಎಂದು ಕನಿಕರ ವ್ಯಕ್ತಪಡಿಸಿದರು. ವಿಚಿತ್ರ ಡ್ರೆಸ್ ತೊಟ್ಟಿದ್ದ ರಾಖಿ, ಪ್ರೀತಿ ಹಾಗೂ ಮದುವೆಯಲ್ಲಿ ಆಗಿರುವ ಮೋಸದ ಕಾರಣದಿಂದ ನಾನು ಸಾಕಷ್ಟು ಬದಲಾಗಿದ್ದೇನೆ. ನನ್ನ ಡ್ರೆಸಿಂಗ್ ಸೆನ್ಸ್‌ನಲ್ಲೂ ದೊಡ್ಡ ಮಟ್ಟದ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಬಾಬಯ ಬಹಳ ಸುಂದರವಾಗಿದ್ದೆ. ಈಗ ಕೂಡ ಸುಂದರವಾಗಿದ್ದೇನೆ. ನನ್ನ ಪತಿ ನನ್ನಂಥ ಉತ್ತಮ ಹಾಟ್ ಹೆಂಡತಿಯನ್ನು ಬಿಟ್ಟು ಓಡಿ ಹೋಗಿದ್ದಾನೆ ಎಂದಿದ್ದರು.
ಮದುಮಗಳ ಲುಕ್ನಲ್ಲಿ ಮಿಂಚಿಂಗ್! ಮೂರನೆ ಮದ್ವೆಯಾಗ್ತಿದ್ದಾರಾ Rakhi Sawant?
ಈಗ ದುಬೈಗೆ ಹೋಗಿ ಬಂದ ಮೇಲೆ ಕ್ಯಾಮೆರಾ (Camera) ಕಣ್ಣಿಗೆ ರಾಖಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಾಪರಾಜಿಗಳ ಕೈಗೆ ಪುನಃ ರಾಖಿ ಸಿಕ್ಕಿದ್ದಾರೆ. ದುಬೈನಲ್ಲಿರುವ ತಮ್ಮ ಹೊಸ ಮನೆಯ ಬಗ್ಗೆ ಪಾಪರಾಜಿಗಳಿಗೆ ತಿಳಿಸಿದ ರಾಖಿ, ಪತಿ ಆದಿಲ್ ಖಾನ್ ದುರಾನಿ ಮತ್ತು ನಿಧನರಾದ ತಮ್ಮ ತಾಯಿಯ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದರು. ದುಬೈನಲ್ಲಿ ಡ್ಯಾನ್ಸ್ ಅಕಾಡೆಮಿಯನ್ನು ತೆರೆದಿದ್ದೇನೆ. ಅದಕ್ಕಾಗಿ ಅಲ್ಲಿಲಗೆ ಹೋಗಿದ್ದೆ ಎಂದ ರಾಖಿ, ದುಬೈನಲ್ಲಿ ಹೊಸ ಮನೆ ಮತ್ತು ಕಾರನ್ನು ಖರೀದಿಸಿರುವುದಾಗಿ ಹೇಳಿದರು.
ನಂತರ ಅತ್ತ ಕೈ ಮಾಡುತ್ತಾ ಕಂಬನಿ ಮಿಡಿಯುತ್ತಾ, ಇದೇ ಸ್ಥಳದಲ್ಲಿ ನಾನು ಪತಿ ಆದಿಲ್ ಖಾನ್ ದುರಾನಿಯನ್ನು ಗುಲಾಬಿ ದಳಗಳೊಂದಿಗೆ ಸ್ವಾಗತಿಸಿದ್ದೆ ಎಂದರು. ಕಳೆದ ವರ್ಷ ಜುಲೈನಲ್ಲಿ ಆದಿಲ್‌ಗೆ ಗುಲಾಬಿ ದಳಗಳಿಂದ ಧಾರೆ ಎರೆದಿದ್ದ ಸ್ಥಳ ಇದೇ ಆಗಿದೆ ಎಂದು ಕಣ್ಣೀರಿಟ್ಟರು. ನಿಮಗೆ ನೆನಪಿದೆಯೇ, ನಾನು ಆದಿಲ್‌ಗೆ ಗುಲಾಬಿಗಳನ್ನು ಸುರಿಸಿ ಸ್ವಾಗತಿಸಿದೆ. ಮತ್ತು ಅವನು ತನ್ನ ಗೆಳತಿಯರಿಗೆ ಇದೆಲ್ಲವೂ ನಾಟಕ ಎಂದು ಹೇಳಿದ್ದ ಎನ್ನುತ್ತಾ ಕಣ್ಣೀರಾದರು. ಅಲ್ಲಿದ್ದವರು ಹೋಳಿ ಶುಭಾಶಯ ಹೇಳೀದಾಗ, ರಾಖಿ ತಮ್ಮ ಅಭಿಮಾನಿಗಳಿಗೆ ಅವರ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಬಣ್ಣಗಳನ್ನು ಹಾರೈಸಿದರು. “ಮೇರಿ ಜಿಂದಗಿ ಕಾ ರಂಗ್ ತೋ ಖತಮ್ ಹೋ ಚುಕಾ ಹೈ (ನನ್ನ ಜೀವನದ ಬಣ್ಣಗಳೆಲ್ಲಾ ಕಳೆದು ಹೋಗಿವೆ) ಇನ್ನು ನಿಮಗಾದರೂ ನಿಮ್ಮ ಜೀವನದ ಬಣ್ಣ ಸಿಗಲಿ ಎನ್ನುತ್ತಲೇ ಕಣ್ಣೀರು ಹಾಕುತ್ತಾ ಅಲ್ಲಿಂದ ತೆರಳಿದರು. ಇದನ್ನು ನೋಡಿದ ನೆಟ್ಟಿಗರು ಡ್ರಾಮಾ ಕ್ವೀನ್ (drama queen) ಎಂದು ಕಾಲೆಳೆಯುತ್ತಿದ್ದಾರೆ.