ಕಣ್ಣು ಮಿಟುಕಿಸದೆ ಮಗಳ ಯೋಗಾಭ್ಯಾಸ ನೋಡುತ್ತಾ ಕುಳಿತ ಅಲ್ಲು ಅರ್ಜುನ್; ಫೋಟೋ ವೈರಲ್

By Shruthi Krishna  |  First Published Mar 21, 2023, 2:13 PM IST

ಅಲ್ಲು ಅರ್ಜುನ್ ಕಣ್ಣು ಮಿಟುಕಿಸಿದೆ ಮಗಳ ಯೋಗಾಭ್ಯಾಸ ನೋಡುತ್ತಾ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  


ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಇಬ್ಬರು ಮಕ್ಕಳ ಪ್ರೀತಿಯ ತಂದೆ. ಅಯಾನ್ ಮತ್ತು ಅರ್ಹಾ ಎನ್ನುವ ಇಬ್ಬರೂ ಮಕ್ಕಳಿದ್ದಾರೆ. ಅಲ್ಲು ಅರ್ಜುನ್‌ಗೆ ಮಗಳು ಅರ್ಹಾ ಎಂದರೆ ತುಂಬಾ ಪ್ರೀತಿ. ಆಗಾಗ ಮಗಳ ಜೊತೆ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಪತ್ನಿ ಸ್ನೇಹಾ ಹಾಗೂ ಇಬ್ಬರೂ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳಿದ್ದ ಅಲ್ಲು ಅರ್ಜುನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಅಲ್ಲು ಅರ್ಜುನ್ ಮತ್ತು ಮಗಳು ಅರ್ಹಾ ಅವರ ಮತ್ತೊಂದು ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೌದು ಅಲ್ಲು ಅರ್ಜುನ್ ಪುತ್ರಿ ಅರ್ಹಾ ಯೋಗಾಭ್ಯಾಸಮಾಡುತ್ತಿರುವ ಮಾಡುತ್ತಿರುವ ಫೋಟೋ ಇದಾಗಿದೆ. ಮಗಳು ಯೋಗ ಮಾಡುತ್ತಿದ್ದರೆ ಅಲ್ಲು ಅರ್ಜುನ್  ಕಣ್ಣು ಮಿಟುಕಿಸಿದೆ ನೋಡುತ್ತಾ ಕುಳಿತಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಅಲ್ಲು ಅರ್ಜುನ್ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಹೈದರಾಬಾದ್‌ಗೆ ಮರಳಿರುವ ಅಲ್ಲು ಅರ್ಜುನ್ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದ ಚಿತ್ರೀಕರಣ ಪ್ರಾರಂಭಕ್ಕೂ ಮೊದಲು ಅಲ್ಲು ಅರ್ಜುನ್ ಕುಟುಂಬದ ಜೊತೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಅಲ್ಲು ಪುತ್ರಿ ಅರ್ಹಾ ಅದ್ಭುತವಾಗಿ ಯೋಗ ಮಾಡುತ್ತಾರೆ. ಮಗಳು ಯೋಗ ಮಾಡುತ್ತಿರುವುದನ್ನು ಅಲ್ಲು ಅಲ್ಲು ಅರ್ಜುನ್ ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ಫೋಟೋವನ್ನು ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾನ್ ಸ್ಟೋರಿಯಸ್‌ನಲ್ಲಿ ಅಲ್ಲು ಅರ್ಜುನ್ ಮಗಳ ಜೊತೆಗಿನ ಸುಂದರ ಪೋಟೋ ಶೇರ್ ಮಾಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ವ್ಯಕ್ತವಾಗುತ್ತಿದೆ. 

Allu Arjun: ತೆಲುಗು ಚಿತ್ರರಂಗದ ಅತ್ಯಂತ ದುಬಾರಿ ನಟ: ಪ್ರಭಾಸ್‌ರನ್ನ ಹಿಂದಿಕ್ಕಿದ ಅಲ್ಲು ಅರ್ಜುನ್!

Tap to resize

Latest Videos

ಅಲ್ಲು ಅರ್ಜುನ್ ಮಗಳಿಗೆ 6 ವರ್ಷ. ಅರ್ಹಾ ಮೊದಲ ಬಾರಿಗೆ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಹೌದು ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದಲ್ಲಿ ಅರ್ಹಾ ನಟಿಸಿದ್ದಾರೆ. ಸಮಂತಾ ಮಗಳಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಅರ್ಹಾ ಚಿತ್ರ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಅರ್ಹಾ ನೋಡಿ ಅಲ್ಲು ಫ್ಯಾನ್ಸ್ ಫುಲ್ ಖುಷ್ ಆಗಿದ್ದರು. ಇದೀಗ ಯೋಗ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 

ಅಲ್ಲು ಅರ್ಜುನ್ 'ಪುಷ್ಪ-2'ಗೂ ಬೆಂಗಳೂರಿಗೂ ಇದೆ ನಂಟು? ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ

ಇನ್ನೂ ಅಲ್ಲು ಅರ್ಜುನ್  ಸಿನಿಮಾ ಬಗ್ಗೆ ಬಹೇಳುವುದಾದರೆ ಸದ್ಯ ಪುಷ್ಪ-2 ಶೂಟಿಂಗ್‌ಗೆ ಸಜ್ಜಾಗಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು ಅಲ್ಲು ಅರ್ಜನ್ ಸದ್ಯದದಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಅಂದಹಾಗೆ ಪುಷ್ಪ-2 ಮುಂದಿನ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬೆಂಗಳೂರಿನ ಶೂಟಿಂಗ್‌ನಲ್ಲಿ ಅಲ್ಲು ಜೊತೆ ಮತ್ತೋರ್ವ ಖ್ಯಾತ ನಟ ಫಹಾದ್ ಫಾಸಿಲ್ ಕೂಡ ಭಾಗಿಯಾಗುತ್ತಿದ್ದಾರೆ.  ಸುಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಪುಷ್ಪ-2 ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ.    

click me!