ಆಲಿಯಾ- ರಣಬೀರ್ ಪುತ್ರಿ ರಾಹಾ ಕಪೂರ್ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಸ್ಟೈಲ್ನಲ್ಲಿ ಅಮ್ಮನನ್ನೇ ಮೀರಿಸ್ತಿರೋ ಪುಟಾಣಿ ನೋಡಿ ನೆಟ್ಟಿಗರು ಏನಂದ್ರು?
ಬಾಲಿವುಡ್ನ ಕ್ಯೂಟ್ ದಂಪತಿಯಲ್ಲಿ ಒಬ್ಬರು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt). 2022ರಲ್ಲಿ ಏಪ್ರಿಲ್ 14ರಂದು ನಟ ರಣಬೀರ್ ಕಪೂರ್ (Ranbeer Kapoor) ಅವರ ಜೊತೆ ಮದುವೆಯಾಗಿರುವ ಆಲಿಯಾ, ಮದುವೆಯಾದ ಏಳು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದರು. ಪುಟಾಣಿಗೆ ರಾಹಾ ಎಂದು ಹೆಸರು ಇಡಲಾಗಿದ್ದು, ಇದಕ್ಕೀಗ ಎರಡು ವರ್ಷ ಪೂರ್ಣಗೊಂಡಿದೆ. ಮದುವೆಗೂ ಮುನ್ನವೇ ಈಕೆ ಗರ್ಭಿಣಿಯಾಗಿರುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಇವೆಲ್ಲವನ್ನೂ ಸೀಕ್ರೇಟ್ ಆಗಿ ಇಟ್ಟಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಶೇರ್ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತಂತೆ. ಅದು ಚಿಗುರಿದ್ದು ಇಬ್ಬರೂ ಒಟ್ಟಾಗಿ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ನಟಿಸಿದಾಗ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ದಾಂಪತ್ಯಕ್ಕೆ ಕಾಲಿಸಿದರು. ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿತ್ತು. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಇದೀಗ ರಾಹಾ ನಡೆದಾಡಿಕೊಂಡು ಹೋಗುವ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಸಕತ್ ಸ್ಟೈಲ್ನಲ್ಲಿ ಪುಟಾಣಿ ಮಿಂಚಿದ್ದಾಳೆ. ಅಪ್ಪ ರಣಬೀರ್ ಹೊರಕ್ಕೆ ಬರುವುದನ್ನೇ ಈಕೆ ವೇಟ್ ಮಾಡುತ್ತಿದ್ದಾರೆ. ಅಪ್ಪ ಬಂದ ಮೇಲೆ ಅವರ ಜೊತೆ ಹೋಗುವ ವಿಡಿಯೋ ಇದಾಗಿದ್ದು, ಇದಕ್ಕೆ ಹಾರ್ಟ್ ಇಮೋಜಿಗಳಿಂದ ತುಂಬಿ ಹೋಗಿದೆ. ಎರಡು ವರ್ಷದ ಪುಟಾಣಿ ಈಗಲೇ ಅಮ್ಮನನ್ನು ಮೀರಿಸುವ ಸ್ಟೈಲ್ ಮಾಡುತ್ತಿದ್ದಾಳೆ ಎಂದು ಹಲವರು ಕಮೆಂಟ್ನಲ್ಲಿ ತಿಳಿಸುತ್ತಿದ್ದಾರೆ. ಅಷ್ಟಕ್ಕೂ, ರಾಹಾ ಹೆಸರಿನ ಅರ್ಥವು ಸಂಸ್ಕೃತ, ಬಂಗಾಳಿ, ಸ್ವಾಹಿಲಿ ಮತ್ತು ಅರೇಬಿಕ್ ಭಾಷೆಗಳಲ್ಲಿ ಅರ್ಥವನ್ನು ನೀಡುತ್ತದೆ ಎಂದು ಈ ಹಿಂದೆ ಆಲಿಯಾ ಹೇಳಿದ್ದರು. 'ರಾಹಾ' ಎಂಬ ಹೆಸರಿನ ಅರ್ಥ ಆನಂದ, ಸಂಸ್ಕೃತದಲ್ಲಿ ರಹಾ ಒಂದು ಕುಲ, ಬಂಗಾಳಿಯಲ್ಲಿ ಸೌಕರ್ಯ, ಸುಲಭ, ಪರಿಹಾರ, ಅರೇಬಿಕ್ ಶಾಂತಿ ಇದರ ಅರ್ಥ ಸಂತೋಷ, ಸ್ವಾತಂತ್ರ್ಯ ಮತ್ತು ಸಂತೋಷವೂ ಇದೆ.
ಸೋನಾಕ್ಷಿ ಕೂಲಿಂಗ್ ಗ್ಲಾಸ್ ತೆಗೆಸಿದ ಏರ್ಪೋರ್ಟ್ ಸಿಬ್ಬಂದಿ! ಇದಕ್ಕೂ ಮದ್ವೆಗೂ ಏನಪ್ಪಾ ಸಂಬಂಧ?
ಗರ್ಭಿಣಿಯಾಗಿದ್ದಾಗ ಮತ್ತು ಮಗಳು ಹುಟ್ಟಿದ ಮಗಳು ಹುಟ್ಟಿದ ಕೆಲ ಸಮಯದವರೆಗೆ ಸಿನಿಮಾದಿಂದ ದೂರವಿದ್ದ ಆಲಿಯಾ, ಮತ್ತೆ ತೂಕ ಇಳಿಸಿ ಆಲಿಯಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾಗಲೇ ಮಗಳು ರಾಹಾಳ ಫೋಟೋ ಹಲವು ಬಾರಿ ದಂಪತಿ ರಿವೀಲ್ ಮಾಡಿದ್ದಾರೆ. ಮಗಳ ಬಗ್ಗೆ ಹೇಳಿಕೊಂಡಿದ್ದ ಆಲಿಯಾ ಭಟ್, 'ರಾಹಾ (Raha Kapoor) ಸದಾ ಖುಷಿಯಾಗಿರುವ ಮಗು. ನಾವು ಆಕೆಯನ್ನು ನೋಡಿ ನಕ್ಕರೆ ಸಾಕು ಹೇಳದೆ ಕೇಳದೆ ತಿರುಗಿ ಹತ್ತಷ್ಟು ನಗು ವಾಪಸ್ ಕೊಡುತ್ತಾಳೆ. ಈಗಷ್ಟೇ ಸಣ್ಣ ಪುಟ್ಟ ಸೌಂಡ್ ಮಾಡಲು ಶುರು ಮಾಡಿದ್ದಾಳೆ.ಏನಾದರೂ ಹೇಳುವುದಕ್ಕೂ ಪ್ರಯತ್ನ ಪಟ್ಟಾಗ ಸೌಂಡ್ ಮಾಡುತ್ತಾಳೆ. ಅದನ್ನು ಕೇಳಿಸಿಕೊಂಡು ನಾವು ಆಕೆಗೆ ಚೀತಾ (ಚಿರತೆ) ಎಂದು ಕರೆಯುತ್ತೀವಿ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ಎಷ್ಟು ಸುಸ್ತಾಗಿರುತ್ತದೆ ಒಮ್ಮೆ ಆಕೆ ಮುಖ ನೋಡಿದರೆ ಎಲ್ಲವೂ ಮಾಯವಾಗುತ್ತದೆ. ಸಮಯ ಸಿಕ್ಕಾಗ ಆಕೆಯನ್ನು ನನ್ನ ಮಡಿಲಿನಲ್ಲಿ ಮಲಗಿಸಿಕೊಳ್ಳುವೆ ...ಏಕೆಂದರೆ ದೊಡ್ಡವರಾಗುತ್ತ ಓಡಾಡಬೇಕು ಒಂದು ಕಡೆ ಕೂರುವುದಿಲ್ಲ ಆಗ ನನ್ನ ಮಡಿಲಿನಲ್ಲಿ ಮಲಗಬೇಕು ಅಂದ್ರೆ ಒಪ್ಪಿಕೊಳ್ಳುವುದಿಲ್ಲ' ಎಂದು ಆಲಿಯಾ ಭಟ್ ಈಚೆಗೆ ವೋಗ್ ಸಂದರ್ಶನಲ್ಲಿ ಮಾತನಾಡಿದ್ದರು.
ಹೊಸ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗಿದ್ದ ವೇಳೆ ಆಲಿಯಾಗೆ ಮಗಳ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ನಟಿ, 'ನನ್ನ ಮಗಳನ್ನು ನಾನು ನಟಿಯಾಗಿ ನೋಡಲು ಬಯಸುತ್ತಿಲ್ಲ' ಎಂದಿದ್ದಾರೆ. ಮಗಳು ನನ್ನ ರೀತಿ ಚಿತ್ರರಂಗಕ್ಕೆ (Film Industry) ಬರೋದು ನನಗೆ ಇಷ್ಟವಿಲ್ಲ ಎಂದಿದ್ದಾರೆ ಆಲಿಯಾ. ನಾನು ನನ್ನ ಮಗಳನ್ನು ನೋಡಿದಾಗಲೆಲ್ಲಾ ನೀನು ವಿಜ್ಞಾನಿ ಆಗುತ್ತೀಯಾ ಎಂದು ಕೇಳುತ್ತೇನೆ. ಯಾಕೆಂದರೆ ನಾನು ವಿಜ್ಞಾನಿ ಆಗಬೇಕು ಎಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಅದನ್ನು ಮಗಳಲ್ಲಿ ನೋಡಲು ಬಯಸುತ್ತೇನೆ ಎಂದಿದ್ದಾರೆ ಆಲಿಯಾ. ಆಲಿಯಾ ಅವರ ಮಾತು ಸಕತ್ ವೈರಲ್ ಆಗಿದೆ. ಆಲಿಯಾ ಅವರನ್ನು ಸಿನಿಮಾಕ್ಕೆ ಪರಿಚಯಿಸಿದ್ದು ನಿರ್ಮಾಪಕ ಕರಣ್ ಜೋಹರ್. ಇದೇ ಕಾರಣಕ್ಕೆ ಈಗ ಆಲಿಯಾ ಅವರನ್ನು ಟ್ರೋಲ್ ಮಾಡುತ್ತಿರುವ ಹಲವು ನೆಟ್ಟಿಗರು, ನಿಮ್ಮ ಆಸೆ ಈಡೇರತ್ತೆ ಮೇಡಂ. ಕರಣ್ ಜೋಹರ್ ಅವರು ನಿಮ್ಮ ಮಗಳಿಗಾಗಿ ಸೈಂಟಿಸ್ಟ್ ಎನ್ನೋ ಸಿನಿಮಾ ಮಾಡ್ತಾರೆ ಬಿಡಿ ಎನ್ನುತ್ತಿದ್ದಾರೆ.
ದುಬಾರಿ ಡ್ರೆಸ್ ಮೇಲೆ ಜ್ಯೂಸ್: ಸಾರಾ ಅಲಿಗೆ ವಿಮಾನ ಮಾರಲು ಮುಂದಾದ ಪೈಲೆಟ್! ಚಿನ್ನ ಕೊಟ್ಟ ಗಗನಸಖಿ- ಏನಿದು?