ದುಬಾರಿ ಡ್ರೆಸ್​ ಮೇಲೆ ಜ್ಯೂಸ್​: ಸಾರಾ ಅಲಿಗೆ ವಿಮಾನ ಮಾರಲು ಮುಂದಾದ ಪೈಲೆಟ್​! ಚಿನ್ನ ಕೊಟ್ಟ ಗಗನಸಖಿ- ಏನಿದು?

Published : Jul 28, 2024, 02:11 PM IST
ದುಬಾರಿ ಡ್ರೆಸ್​ ಮೇಲೆ ಜ್ಯೂಸ್​: ಸಾರಾ ಅಲಿಗೆ ವಿಮಾನ ಮಾರಲು ಮುಂದಾದ ಪೈಲೆಟ್​! ಚಿನ್ನ ಕೊಟ್ಟ ಗಗನಸಖಿ- ಏನಿದು?

ಸಾರಾಂಶ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಟಿ ಸಾರಾ ಅಲಿ ಖಾನ್​ ಬಟ್ಟೆ ಮೇಲೆ ಅಚಾನಕ್​ ಜ್ಯೂಸ್​ ಬಿದ್ದ ಕಾರಣ, ಚಿನ್ನ ಕೊಟ್ಟ ಗಗನಸಖಿ, ವಿಮಾನ ಮಾರಲು ಮುಂದಾದ ಪೈಲೆಟ್​- ಏನಿದರ ಅಸಲಿಯತ್ತು?  

ವಿಮಾನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಬಾಲಿವುಡ್​​ ನಟಿ ಸಾರಾ ಅಲಿ ಖಾನ್​ ಅವರ ದುಬಾರಿ ಡ್ರೆಸ್​ ಮೇಲೆ ಆಕಸ್ಮಿಕವಾಗಿ  ಜ್ಯೂಸ್​ ಬೀಳುತ್ತದೆ. ಗಗನಸಖಿ ಅವರ ತಪ್ಪಿನಿಂದ ಈ ಅಚಾತುರ್ಯ ನಡೆದುಬಿಡುತ್ತದೆ. ಇದರಿಂದ ಸಾರಾ ಅಲಿ ಸಕತ್​ ಗರಂ ಆಗುತ್ತಾರೆ. ಸೆಲೆಬ್ರಿಟಿ ಎಂದ ಮೇಲೆ ಕೇಳಬೇಕೆ?  ದುಬಾರಿ ಡ್ರೆಸ್​ನಷ್ಟು ದುಡ್ಡು ಕೈಯಲ್ಲಿ ಇರದ ಕಾರಣ, ಪ್ರಾಯಶ್ಚಿತವಾಗಿ ತಾವು ಧರಿಸಿರುವ ಚಿನ್ನದ ಒಡವೆಯನ್ನು ನಟಿಗೆ ಕೊಡಲು ಗಗನಸಖಿಯರು ಮುಂದಾಗುತ್ತಾರೆ. ಪೈಲೆಟ್​ ವಿರುದ್ಧವೂ ನಟಿ ಸಿಟ್ಟಿಗೆದ್ದ ಕಾರಣ, ವಿಮಾನವನ್ನೇ ಮಾರಲು ಪೈಲೆಟ್​ ಮುಂದಾಗುತ್ತಾರೆ! ಹೌದು ಇಂಥದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ನಿನ್ನೆ ಸಾರಾ ಅಲಿ ಖಾನ್​ ಅವರು ಗರಂ ಆಗಿದ್ದ ವಿಡಿಯೋ ಮಾತ್ರ ವೈರಲ್​ ಆಗಿತ್ತು. ಅದರ ಮುಂದುವರೆದ ಭಾಗವಾಗಿ ಇಂದು ವಿಡಿಯೋ ರಿಲೀಸ್​ ಮಾಡಲಾಗಿದೆ.

ನಿನ್ನೆ ವೈರಲ್​ ಆಗಿರೋ ವಿಡಿಯೋದಲ್ಲಿ,  ಸಾರಾ ಅಲಿ ಖಾನ್ ಅವರ ವಿಮಾನದಲ್ಲಿ ಕುಳಿತಿರುವುದನ್ನು ಕಾಣಬಹುದು.   ಗುಂಗುರು ಕೂದಲಿನ ಸಾರಾ ಬಹು ದುಬಾರಿಯ ಪಿಂಕ್​ ಡ್ರೆಸ್​ ಧರಿಸಿರುವುದನ್ನು ನೋಡಬಹುದು. ಆದರೆ  ಸಾರಾ ಪೈಲಟ್ ಮತ್ತು ಏರ್ ಹೋಸ್ಟೆಸ್ ಅನ್ನು ಕೋಪದಿಂದ ನೋಡುತ್ತಿರುವುದನ್ನಷ್ಟೇ ಇದರಲ್ಲಿ ನೋಡಬಹುದಾಗಿದ್ದು,  ನಂತರ ನಟಿ ಎದ್ದು ಹೋಗಿರುವುದನ್ನು ಕಾಣಬಹುದಾಗಿತ್ತು.  ಗಗನಸಖಿ ಕ್ಷಮೆ ಕೋರಿದರೂ, ದುಬಾರಿ ಡ್ರೆಸ್​ ಮೇಲೆ ಜ್ಯೂಸ್​ ಬಿದ್ದುದರಿಂದ ಸಾರಾ ಕೆಂಡಾಮಂಡಲ ಆದರು.  ಸಾರಾ ಅವರ ಮುಖವು ಕೋಪದಿಂದ ಕೆಂಪಾಯಿತು.  ಪೈಲಟ್ ಮತ್ತು ಗಗನಸಖಿಯ ಇಬ್ಬರ ವಿರುದ್ಧವೂ ಗರಂ ಆದ ಸಾರಾ ಅಲ್ಲಿಂದ ಎದ್ದು ಹೋಗಿರುವುದನ್ನು ನೋಡಬಹುದಾಗಿತ್ತು.  ಆದರೆ ಇದೀಗ ಅವರು ಒಡವೆ ಕೊಡುವುದನ್ನು, ವಿಮಾನ ಮಾರಾಟಕ್ಕೆ ಮುಂದಾಗಿರುವುದನ್ನು ನೋಡಬಹುದು.

ಸ್ನಾನದ ವಿಡಿಯೋ ಲೀಕ್​ ಆಗಿದ್ದು ಹೇಗೆ? ಕೊನೆಗೂ ಮೌನ ಮುರಿದ ನಟಿ ಊರ್ವಶಿ ರೌಟೇಲಾ

ಒಂದು ಡ್ರೆಸ್​ಗೆ ಇಷ್ಟು ಬೆಲೆನಾ ಎಂದು ವಿಡಿಯೋ ನೋಡಿದವರು ಸುಸ್ತಾಗಬಹುದು. ಆದರೆ ಅಸಲಿಗೆ, ಸಾರಾ ಅಲಿ ಖಾನ್​ ಧರಿಸಿದ್ದ ಟಾಪ್​ ಬೆಲೆ 300 ರೂಪಾಯಿ, ಅವರ ಬಳಿ ಇದ್ದ ಬ್ಯಾಗ್​ ಬೆಲೆ 200 ರೂಪಾಯಿ, ಅವರು ಧರಿಸಿದ್ದ ಶೂಸ್​ ಬೆಲೆ 250 ರೂಪಾಯಿ! ಅಷ್ಟಕ್ಕೂ ಈ ವೈರಲ್​ ವಿಡಿಯೋದ ಹಿಂದಿರುವ ಸತ್ಯ ಏನೆಂದರೆ, ಇದು ಶಾಪ್ಸಿ ಎನ್ನುವ ಆ್ಯಪ್​ ಜಾಹೀರಾತು. ತಾವು ಧರಿಸಿರುವ ಬಟ್ಟೆ ದುಬಾರಿಯದ್ದಲ್ಲ, ಅದು ದುಬಾರಿ ರೀತಿ ಕಾಣಿಸುತ್ತದೆ ಅಷ್ಟೇ. ಶಾಪ್ಸಿಯಲ್ಲಿ ಖರೀದಿ ಮಾಡಿದರೆ ಇಂಥ ಬಟ್ಟೆ ಸಿಗುತ್ತದೆ ಎಂದು ವಿಡಿಯೋದಲ್ಲಿ ಕೊನೆಯಲ್ಲಿ ಸಾರಾ ಹೇಳಿದ್ದಾರೆ. ಅಬ್ಬಬ್ಬಾ! ಈ ರೀತಿಯೂ ಜಾಹೀರಾತು ಕೊಡಬಹುದೇ ಎಂದು ನೆಟ್ಟಿಗರು ಉಫ್​ ಎನ್ನುತ್ತಿದ್ದಾರೆ. 

 ಇನ್ನು ಸಾರಾ ಅಲಿ ಖಾನ್ ಸಿನಿಮಾದ ಕುರಿತು ಹೇಳುವುದಾದರೆ,  ಇತ್ತೀಚೆಗೆ ಹೋಮಿ ಅದಾಜಾನಿಯಾ ನಿರ್ದೇಶನದ ಮರ್ಡರ್ ಮುಬಾರಕ್‌ನಲ್ಲಿ ಬಿಡುಗಡೆಯಾಯಿತು. ಇದಕ್ಕಾಗಿ ಸಾರಾ ಅವರಿಗೆ ಬಹುದೊಡ್ಡ ಬ್ರೇಕ್​ ಕೂಡ ಸಿಕ್ಕಿದೆ. ಇದನ್ನು ಹೊರತುಪಡಿಸಿದರೆ ಯೇ ವತನ್ ಮೇರೆ ವತನ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಮೆಚ್ಚುಗೆ ಪಡೆದಿದ್ದಾರೆ. ಈ ಚಿತ್ರದಲ್ಲಿ, ಸ್ವಾತಂತ್ರ್ಯ ಪೂರ್ವದ ಯುಗದಲ್ಲಿ, ಸಾರಾ ಬಾಂಬೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಉಷಾ ಪಾತ್ರದಲ್ಲಿ ನಟಿಸಿದ್ದಾರೆ, ಅವರು ಭೂಗತ ರೇಡಿಯೊ ಕೇಂದ್ರವನ್ನು ಸ್ಥಾಪಿಸುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೆ, ಧರ್ಮ ಪ್ರೊಡಕ್ಷನ್ಸ್ ಮತ್ತು ಸಿಖ್ಯ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಆಕ್ಷನ್ ಕಾಮಿಡಿ ಚಿತ್ರದಲ್ಲಿ ಸಾರಾ ಅಲಿ ಖಾನ್ ಮೊದಲ ಬಾರಿಗೆ ಆಯುಷ್ಮಾನ್ ಖುರಾನಾ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಈ ಹೊಸ ಜೋಡಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಆದರೂ ಚಿತ್ರದ ಬಗ್ಗೆ ನಿರ್ದಿಷ್ಟ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಇದಲ್ಲದೇ ಅನುರಾಗ್ ಬಸು ನಿರ್ದೇಶನದ ಮೆಟ್ರೋ ಇನ್ ಡಿನೋ ಚಿತ್ರದಲ್ಲಿ ಸಾರಾ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ, ಅವರು ಆದಿತ್ಯ ರಾಯ್ ಕಪೂರ್, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್ ಮತ್ತು ನೀನಾ ಗುಪ್ತಾ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

ಬಿಗ್​ಬಾಸ್​ ಮನೆ ಸೆಕ್ಸ್​ ವಿಡಿಯೋ ವೈರಲ್​ ಬೆನ್ನಲ್ಲೇ ಅರ್ಮಾನ್​ ಪತ್ನಿ ಕೇಸ್ ದಾಖಲು? ನಿಮ್ಮ ಹೆಸ್ರೂ ಇದ್ಯಾ ನೋಡಿ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ